ವೈರಸ್ ತಡೆಯಲು ಕಠಿಣಕ್ರಮ- ಮಾಸ್ಕ್ ಧರಿಸದವರಿಗೆ ಬೀಳುತ್ತೆ ದುಬಾರಿ ದಂಡ..

ದೇಶಾದ್ಯಂತ ಮಾಹಾಮಾರಿ ಕರೋನಾ ವೈರಸ್ ಸೋಂಕಿತರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ವೈರಸ್ ತಡೆಗಾಗಿ ಈಗಾಗಲೇ ಹಲವಾರು ಕಠಿಣ ಕ್ರಮಗಳೊಂದಿಗೆ ಲಾಕ್ ಡೌನ್ ಅನ್ನು ಕೂಡಾ ವಿಸ್ತರಣೆ ಮಾಡಲಾಗಿದೆ.

ವೈರಸ್ ತಡೆಯಲು ಕಠಿಣಕ್ರಮ- ಮಾಸ್ಕ್ ಧರಿಸದವರಿಗೆ ಬೀಳುತ್ತೆ ದುಬಾರಿ ದಂಡ..

ಲಾಕ್ ಡೌನ್ ನಡುವೆಯೂ ನಿಯಮ ಉಲ್ಲಂಘಿಸಿ ಹೊರಗೆ ಸುತ್ತಾಡುವ ಪ್ರಕರಣಗಳು ಹೆಚ್ಚುತ್ತಿದ್ದು, ಕೆಲವರು ಮುಂಜಾಗ್ರತ ಕ್ರಮಗಳನ್ನು ಸಹ ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಈ ಹಿನ್ನಲೆಯಲ್ಲಿ ವೈರಸ್ ಹೆಚ್ಚಿರುವ ರಾಜ್ಯಗಳಲ್ಲಿ ಲಾಕ್‍ ಡೌನ್ ಅನ್ನು ಮತ್ತಷ್ಟು ಬಿಗಿಗೊಳಿಸಲಾಗುತ್ತಿದ್ದು, ನಿಯಮ ಪಾಲನೆ ಮಾಡದ ವಾಹನ ಸವಾರರಿಗೆ ಮಾತ್ರವಲ್ಲ ಅನಗತ್ಯವಾಗಿ ಹೊರಗೆ ಓಡಾಡುವರಿಗೂ ದಂಡ ಹಾಕಲು ನಿರ್ಧರಿಸಲಾಗಿದೆ.

ವೈರಸ್ ತಡೆಯಲು ಕಠಿಣಕ್ರಮ- ಮಾಸ್ಕ್ ಧರಿಸದವರಿಗೆ ಬೀಳುತ್ತೆ ದುಬಾರಿ ದಂಡ..

ಹೌದು, ತಮಿಳುನಾಡಿನಲ್ಲಿ ಕೆಲವೇ ದಿನಗಳಲ್ಲಿ ಕರೋನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಆತಂಕದಲ್ಲಿರುವ ಚೆನ್ನೈ ಪೊಲೀಸರು ಲಾಕ್ ಡೌನ್ ಅನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ವೈರಸ್ ತಡೆಯಲು ಕಠಿಣಕ್ರಮ- ಮಾಸ್ಕ್ ಧರಿಸದವರಿಗೆ ಬೀಳುತ್ತೆ ದುಬಾರಿ ದಂಡ..

ಕಳೆದ ವಾರ ಲಾಕ್ ಡೌನ್ ಉಲ್ಲಂಘಿಸಿದ್ದ ಸಾವಿರಾರು ವಾಹನಗಳನ್ನು ಜಪ್ತಿ ಮಾಡುತ್ತಿದ್ದ ಚೆನ್ನೈ ಪೊಲೀಸರು ಇದೀಗ ಮಾಸ್ಕ್ ಧರಿಸದೇ ಹೊರಗೆ ಬರುವ ಜನರಿಗೂ ರೂ.500 ದಂಡ ವಿಧಿಸಲು ಮುಂದಾಗಿದ್ದು, ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ.

ವೈರಸ್ ತಡೆಯಲು ಕಠಿಣಕ್ರಮ- ಮಾಸ್ಕ್ ಧರಿಸದವರಿಗೆ ಬೀಳುತ್ತೆ ದುಬಾರಿ ದಂಡ..

ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲೂ ಹಲವು ಮುಂಜಾಗ್ರತ ಕ್ರಮಗಳ ಬಗೆಗೆ ಅರಿವು ಮೂಡಿಸುತ್ತಿರುವ ಚೆನ್ನೈ ಪೋಲಿಸರು ಸಾಮಾಜಿಕ ಅಂತರದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರೆ. ಇದರಿಂದ ಸೋಂಕು ಹರಡುವಿಕೆಯನ್ನು ಪರಿಣಾಮ ತಡೆಯಬಹುದು ಎನ್ನುವುದರ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದ್ದು, ಮಾಸ್ಕ್ ಧರಿಸದೇ ಹೊರಗೆ ಬರುವವರಿಗೆ ದಂಡ ಹಾಕಲು ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.

MOST READ: ಕರೋನಾ ವಿರುದ್ಧದ ಹೋರಾಟಕ್ಕಾಗಿ 60 ಬೈಕ್ ಆ್ಯಂಬುಲೆನ್ಸ್ ದೇಣಿಗೆ ನೀಡಿದ ಹೀರೋ

ವೈರಸ್ ತಡೆಯಲು ಕಠಿಣಕ್ರಮ- ಮಾಸ್ಕ್ ಧರಿಸದವರಿಗೆ ಬೀಳುತ್ತೆ ದುಬಾರಿ ದಂಡ..

ಇನ್ನು ಸೋಂಕು ಹರಡುವುದನ್ನ ತಡೆಯಲು ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಗಳು ಪ್ರಾಣದ ಹಂಗು ತೊರೆದು ಲಾಕ್ ಡೌನ್ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಶ್ರಮಿಸುತ್ತಿದ್ದರೆ ಸೋಂಕಿತರ ಪ್ರಾಣ ರಕ್ಷಣೆಗೆ ವೈದ್ಯರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಯು ಹಗಲಿರಳು ದುಡಿಯುತ್ತಿದ್ದಾರೆ.

ವೈರಸ್ ತಡೆಯಲು ಕಠಿಣಕ್ರಮ- ಮಾಸ್ಕ್ ಧರಿಸದವರಿಗೆ ಬೀಳುತ್ತೆ ದುಬಾರಿ ದಂಡ..

ಹೀಗಿರುವಾಗ ಲಾಕ್ ಡೌನ್ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳೊಂದಿಗೆ ಲಾಠಿ ರುಚಿ ಸಹ ತೋರಿಸುತ್ತಿದ್ದಾರೆ.

MOST READ: ಅತಿ ಕಡಿಮೆ ಬೆಲೆಯ 'ಏರ್ 100' ವೆಂಟಿಲೆಟರ್ ಪರಿಚಯಿಸಿದ ಮಹೀಂದ್ರಾ

ವೈರಸ್ ತಡೆಯಲು ಕಠಿಣಕ್ರಮ- ಮಾಸ್ಕ್ ಧರಿಸದವರಿಗೆ ಬೀಳುತ್ತೆ ದುಬಾರಿ ದಂಡ..

ಇದರ ಜೊತೆಗೆ ಸಾರ್ವಜನಿಕರಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಪೊಲೀಸ್ ಸಿಬ್ಬಂದಿಯು ಅನಾವಶ್ಯಕವಾಗಿ ಹೊರಗೆ ತಿರುಗುವವರ ವಿರುದ್ಧದ ಕೇಸ್ ದಾಖಲಿಸುತ್ತಿರುವುದಲ್ಲದೇ ವೈರಸ್ ಹರಡದಂತೆ ಏನೆಲ್ಲಾ ಮುನ್ನಚ್ಚೆರಿಕೆ ವಹಿಸಬೇಕೆಂಬುವುದನ್ನು ಅಚ್ಚುಕಟ್ಟಾಗಾಗಿ ಸಾರ್ವಜನಿಕರಿಗೆ ತಿಳಿಹೇಳುತ್ತಿದ್ದಾರೆ.

ವೈರಸ್ ತಡೆಯಲು ಕಠಿಣಕ್ರಮ- ಮಾಸ್ಕ್ ಧರಿಸದವರಿಗೆ ಬೀಳುತ್ತೆ ದುಬಾರಿ ದಂಡ..

ಈ ನಡುವೆ ರಾಜಧಾನಿ ದೆಹಲಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಪೊಲೀಸ್ ಇಲಾಖೆಯು ಲಾಕ್ ಡೌನ್ ಯಶಸ್ವಿಗೊಳಿಸಲು ಪ್ರತ್ಯೇಕ ಪ್ಯಾಟ್ರೋಲ್ ವಾಹನಗಳೊಂದಿಗೆ ಗಸ್ತು ನಿರ್ವಹಣೆ ಮಾಡುತ್ತಿದ್ದು, ವೈರಸ್ ಕುರಿತು ಜಾಗೃತಿಯೊಂದಿಗೆ ಲಾಕ್ ಡೌನ್ ನಿಯಮ ಉಲ್ಲಂಘಿಸುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಶುರುಮಾಡಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ವೈರಸ್ ತಡೆಯಲು ಕಠಿಣಕ್ರಮ- ಮಾಸ್ಕ್ ಧರಿಸದವರಿಗೆ ಬೀಳುತ್ತೆ ದುಬಾರಿ ದಂಡ..

ವಲಯವಾರು ಕಾರ್ಯಾಚರಣೆ ನಡೆಸಿರುವ ದೆಹಲಿ ಪೊಲೀಸರು ಲಾಕ್ ಡೌನ್ ಉಲ್ಲಂಘಿಸಿ ತಿರುಗುವವರ ವಿರುದ್ಧ ಕಠಿಣ ಕ್ರಮ ಜರಗಿಸುತ್ತಿದ್ದು, ಈಗಾಗಲೇ ಸಾವಿರಾರು ವಾಹನಗಳನ್ನು ಜಪ್ತಿಗೊಳಿಸಲಾಗಿದೆ.

ವೈರಸ್ ತಡೆಯಲು ಕಠಿಣಕ್ರಮ- ಮಾಸ್ಕ್ ಧರಿಸದವರಿಗೆ ಬೀಳುತ್ತೆ ದುಬಾರಿ ದಂಡ..

ಆದರೆ ವೈರಸ್ ಹೆಚ್ಚಾಗಿರುವ ಹಿನ್ನಲೆಯಲ್ಲಿ ಜಾರಿಗೆ ತರಲಾಗಿರುವ ಲಾಕ್ ಡೌನ್ ಅನ್ನು ಉಲ್ಲಂಘಿಸಿ ಹೊರಗೆ ತಿರುಗುವ ಮೂಲಕ ಅಪಾಯವನ್ನು ತಮಗೆ ತಾವೇ ತಂದುಕೊಳ್ಳುತ್ತಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿರುವ ಸಾರ್ವಜನಿಕರು ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ಮನೆಯಲ್ಲೇ ಸುರಕ್ಷಿತವಾಗಿ ಇರಬೇಕಿದೆ.

Most Read Articles

Kannada
Read more on ಪೊಲೀಸ್ police
English summary
Covid-19 Pandemic: Pay Rs.500 Fine If You Don’t Wear Face Masks In Chennai. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X