ಜನರಲ್ ಮೋಟಾರ್ಸ್ ಕಾರ್ಯವನ್ನು ಮೆಚ್ಚಿದ ಟ್ರಂಪ್

ಕರೋನಾ ವೈರಸ್ ಮಾನವಕುಲಕ್ಕೆ ದೊಡ್ಡ ಗಂಡಾಂತರವನ್ನು ತಂದಿದೆ. ಈ ವೈರಸ್ ಗೆ ಇದುವರೆಗೂ ವಿಶ್ವದಾದ್ಯಂತ 35,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. 7 ಲಕ್ಷಕ್ಕೂ ಹೆಚ್ಚು ಜನರಿಗೆ ಈ ವೈರಸ್ ಸೋಂಕು ತಗುಲಿದೆ.

ಜನರಲ್ ಮೋಟಾರ್ಸ್ ಕಾರ್ಯವನ್ನು ಮೆಚ್ಚಿದ ಟ್ರಂಪ್

ಮುಂಬರುವ ದಿನಗಳಲ್ಲಿ ಸಾವುನೋವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಕರೋನಾ ವೈರಸ್ ವೇಗವಾಗಿ ಹರಡುತ್ತಿದ್ದು, ವೈದ್ಯಕೀಯ ಸಲಕರಣೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಕರೋನಾ ವೈರಸ್ ಉಸಿರಾಟದ ಮೇಲೆ ಪರಿಣಾಮ ಬೀರುವುದರಿಂದ ವೆಂಟಿಲೇಟರ್‌ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ.

ಜನರಲ್ ಮೋಟಾರ್ಸ್ ಕಾರ್ಯವನ್ನು ಮೆಚ್ಚಿದ ಟ್ರಂಪ್

ಈ ಕಾರಣಕ್ಕೆ ವಿವಿಧ ದೇಶಗಳ ಸರ್ಕಾರಗಳು ವೆಂಟಿಲೇಟರ್‌ಗಳನ್ನು ಉತ್ಪಾದಿಸಲು ಆಟೋಮೊಬೈಲ್ ಕಂಪನಿಗಳ ಸಹಾಯವನ್ನು ಕೋರಿವೆ. ಅವುಗಳಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕಾ ಸಹ ಸೇರಿದೆ.

ಜನರಲ್ ಮೋಟಾರ್ಸ್ ಕಾರ್ಯವನ್ನು ಮೆಚ್ಚಿದ ಟ್ರಂಪ್

ಟೆಸ್ಲಾ, ಫೋರ್ಡ್ ಹಾಗೂ ಜನರಲ್ ಮೋಟಾರ್ಸ್ ಸೇರಿದಂತೆ ವಿವಿಧ ಆಟೋಮೊಬೈಲ್ ಕಂಪನಿಗಳಿಗೆ ವೆಂಟಿಲೇಟರ್ ತಯಾರಿಸಿ, ಸರಬರಾಜು ಮಾಡುವಂತೆ ಅಮೆರಿಕಾ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರವರು ಸೂಚಿಸಿದ್ದಾರೆ.

ಜನರಲ್ ಮೋಟಾರ್ಸ್ ಕಾರ್ಯವನ್ನು ಮೆಚ್ಚಿದ ಟ್ರಂಪ್

ಅಮೇರಿಕಾದಲ್ಲಿ ಕರೋನಾ ವೈರಸ್ ಹಾವಳಿಯು ವಿಪರೀತವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವೆಂಟಿಲೇಟರ್‌ಗಳನ್ನು ತ್ವರಿತವಾಗಿ ತಯಾರಿಸುವಂತೆ ಸೂಚಿಸಲಾಗಿದೆ. ವೆಂಟಿಲೇಟರ್‌ಗಳ ತಯಾರಿಕೆ ವಿಷಯದಲ್ಲಿ ಮೊದಲಿಗೆ ಜನರಲ್ ಮೋಟಾರ್ಸ್ ಕಂಪನಿಯನ್ನು ಟೀಕಿಸಿದ್ದ ಡೊನಾಲ್ಡ್ ಟ್ರಂಪ್ ರವರು ಈಗ ಹೊಗಳಿದ್ದಾರೆ.

ಜನರಲ್ ಮೋಟಾರ್ಸ್ ಕಾರ್ಯವನ್ನು ಮೆಚ್ಚಿದ ಟ್ರಂಪ್

ಜನರಲ್ ಮೋಟಾರ್ಸ್ ಉತ್ತಮವಾಗಿ ಕೆಲಸ ಮಾಡುತ್ತಿರುವ ಕಾರಣ ವೆಂಟಿಲೇಟರ್‌ ಉತ್ಪಾದನೆಯ ಬಗ್ಗೆ ಚಿಂತಿಸಬೇಕಾದ ಅವಶ್ಯಕತೆಯಿಲ್ಲವೆಂದು ಟ್ರಂಪ್ ರವರು ಹೇಳಿದ್ದಾರೆ.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಜನರಲ್ ಮೋಟಾರ್ಸ್ ಕಾರ್ಯವನ್ನು ಮೆಚ್ಚಿದ ಟ್ರಂಪ್

ಜನರಲ್ ಮೋಟಾರ್ಸ್ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದೆ ಎಂದು ಹೇಳಿರುವ ಡೊನಾಲ್ಡ್ ಟ್ರಂಪ್ ಈ ಮೊದಲು ಜನರಲ್ ಮೋಟಾರ್ಸ್ ನ ಬಗ್ಗೆ ಮಾತನಾಡುವುದು ವೇಸ್ಟ್ ಆಫ್ ಟೈಮ್ ಎಂದು ಹೇಳಿದ್ದರು.

MOST READ: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಜನರಲ್ ಮೋಟಾರ್ಸ್ ಕಾರ್ಯವನ್ನು ಮೆಚ್ಚಿದ ಟ್ರಂಪ್

ಜನರಲ್ ಮೋಟಾರ್ಸ್ ತನ್ನ ಕೊಕೊಮಾ ಇಂಡಿಯಾನಾ ಉತ್ಪಾದನಾ ಘಟಕದಲ್ಲಿ ವೆಂಟಿಲೇಟರ್‌ಗಳನ್ನು ತಯಾರಿಸುತ್ತಿರುವ ಫೋಟೋವನ್ನು ನಿನ್ನೆ ಪೋಸ್ಟ್ ಮಾಡಿದೆ. ಜನರಲ್ ಮೋಟಾರ್ಸ್ ತಿಂಗಳಿಗೆ 10 ಸಾವಿರ ವೆಂಟಿಲೇಟರ್‌ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ವರದಿಗಳು ತಿಳಿಸಿವೆ.

MOST READ:ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ಜನರಲ್ ಮೋಟಾರ್ಸ್ ಕಾರ್ಯವನ್ನು ಮೆಚ್ಚಿದ ಟ್ರಂಪ್

ಕರೋನಾ ವಿರುದ್ಧ ಹೋರಾಡಲು ವೆಂಟಿಲೇಟರ್‌ಗಳನ್ನು ವೇಗವಾಗಿ ಉತ್ಪಾದಿಸುವ ಅಗತ್ಯವಿದೆ. ಭಾರತದಲ್ಲಿ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ವೆಂಟಿಲೇಟರ್ ತಯಾರಿಸಲು ಮುಂದಾಗಿದೆ. ಮಹೀಂದ್ರಾ ಕೇವಲ 48 ಗಂಟೆಗಳಲ್ಲಿ ವೆಂಟಿಲೇಟರ್‌ನ ಮೂಲಮಾದರಿಯನ್ನು ಅಭಿವೃದ್ಧಿಪಡಿಸಿದೆ. ಕರೋನಾ ವಿರುದ್ಧದ ಹೋರಾಟದಲ್ಲಿ ವಾಹನ ತಯಾರಕ ಕಂಪನಿಗಳ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

Most Read Articles

Kannada
English summary
Donald Trump praises General Motors. Read in Kannada.
Story first published: Tuesday, March 31, 2020, 13:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X