ಜಾಗೃತಿ ಮೂಡಿಸಲು ಬಂತು ಕರೋನಾ ವೈರಸ್ ಕಾರು

ಕರೋನಾ ವೈರಸ್ ವಿಶ್ವದಾದ್ಯಂತ ವೇಗವಾಗಿ ಹರಡುತ್ತಿದೆ. ಈ ಕಾರಣಕ್ಕೆ ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ವಿನಾ ಕಾರಣ ಮನೆ ಬಿಟ್ಟು ಹೊರಬರದಂತೆ ಹಾಗೂ ಪ್ರತ್ಯೇಕವಾಗಿರುವಂತೆ ಜನರಿಗೆ ಸೂಚಿಸಲಾಗಿದೆ.

ಜಾಗೃತಿ ಮೂಡಿಸಲು ಬಂತು ಕರೋನಾ ವೈರಸ್ ಕಾರು

ಆದರೂ ಜನರಿಗೆ ಇನ್ನೂ ಈ ವೈರಸ್‌ನ ಗಂಭೀರತೆ ಅರ್ಥವಾಗುತ್ತಿಲ್ಲ. ವಿನಾ ಕಾರಣ ಮನೆಯಿಂದ ಹೊರ ಬರುವ ಜನಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜಾಗೃತಿಯನ್ನು ಸಹ ವಿಭಿನ್ನ ರೀತಿಯಲ್ಲಿ ಮೂಡಿಸಲಾಗುತ್ತಿದೆ. ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ನಂತಹ ನಗರಗಳಲ್ಲಿ ಪೊಲೀಸರು ಕರೋನಾ ಹೆಲ್ಮೆಟ್ ಧರಿಸಿ ಜಾಗೃತಿ

ಮೂಡಿಸುತ್ತಿರುವುದನ್ನು ಕಾಣಬಹುದು.

ಜಾಗೃತಿ ಮೂಡಿಸಲು ಬಂತು ಕರೋನಾ ವೈರಸ್ ಕಾರು

ತೆಲಂಗಾಣದಲ್ಲಿ ಇನ್ನೂ ವಿಭಿನ್ನವಾದ ಪ್ರಯತ್ನವನ್ನು ಮಾಡಲಾಗಿದೆ. ಕರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಕರೋನಾ ವೈರಸ್ ನಂತಿರುವ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಈ ಕರೋನಾ ಕಾರನ್ನು ಹೈದರಾಬಾದ್‌ನ ಬಾಗದುರಪುರದ ಸುಧಾ ಕಾರ್ಸ್ ಮ್ಯೂಸಿಯಂನ ಸುಧಾಕರ್ ಎಂಬುವವರು ವಿನ್ಯಾಸಗೊಳಿಸಿದ್ದಾರೆ.

ಜಾಗೃತಿ ಮೂಡಿಸಲು ಬಂತು ಕರೋನಾ ವೈರಸ್ ಕಾರು

ಸುಧಾ ಕಾರ್ಸ್ ಮ್ಯೂಸಿಯಂ, ತೆಲಂಗಾಣ ರಾಜ್ಯದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಕಾರುಗಳನ್ನು ವಿನ್ಯಾಸಗೊಳಿಸುವುದಕ್ಕೆ ಬಹಳ ಜನಪ್ರಿಯವಾಗಿದೆ. ಇಲ್ಲಿ ವಿಭಿನ್ನವಾದ ಕಾರುಗಳಿವೆ. ಈ ಕಾರುಗಳನ್ನು ಸುಧಾಕರ್ ರವರೇ ವಿನ್ಯಾಸಗೊಳಿಸಿದ್ದಾರೆ.

ಜಾಗೃತಿ ಮೂಡಿಸಲು ಬಂತು ಕರೋನಾ ವೈರಸ್ ಕಾರು

ಶಾಲಾ ದಿನಗಳಿಂದಲೂ ಅವರು ಇದರ ಬಗ್ಗೆ ಆಸಕ್ತಿಯನ್ನು ಹೊಂದಿದ್ದಾರೆ. ಸುಧಾಕರ್ ರವರು 2010ರಲ್ಲಿ ಸುಧಾ ಕಾರ್ಸ್ ಮ್ಯೂಸಿಯಂ ಅನ್ನು ಅವರು ಆರಂಭಿಸಿದರು. ಈಗ ಕರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಈ ಕಾರನ್ನು ವಿನ್ಯಾಸಗೊಳಿಸಿದ್ದಾಗಿ ಹೇಳಿದ್ದಾರೆ.

ಜಾಗೃತಿ ಮೂಡಿಸಲು ಬಂತು ಕರೋನಾ ವೈರಸ್ ಕಾರು

ಕೋವಿಡ್ -19 ವೈರಸ್ ಹರಡುವುದನ್ನು ನಿಯಂತ್ರಿಸಬೇಕು. ಈ ಕಾರಣಕ್ಕೆ ಈ ಕಾರನ್ನು ಕರೋನಾ ವೈರಸ್ ನಂತೆ ವಿನ್ಯಾಸಗೊಳಿಸಿದ್ದೇನೆ. ಇದು ಜನರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಹೇಳಿದ್ದಾರೆ.

ಜಾಗೃತಿ ಮೂಡಿಸಲು ಬಂತು ಕರೋನಾ ವೈರಸ್ ಕಾರು

ಈ ಕರೋನಾ ಕಾರನಲ್ಲಿ 100 ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಕಾರು ಕೇವಲ ಒಂದು ಸೀಟ್ ಅನ್ನು ಹೊಂದಿದೆ. ಈ ಕಾರು ಗಂಟೆಗೆ 40 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಕಾರನ್ನು 10 ದಿನಗಳಲ್ಲಿ ವಿನ್ಯಾಸಗೊಳಿಸಿದ್ದಾಗಿ ಸುಧಾಕರ್ ಹೇಳಿದರು.

ಜಾಗೃತಿ ಮೂಡಿಸಲು ಬಂತು ಕರೋನಾ ವೈರಸ್ ಕಾರು

ಸುಧಾ ಕಾರ್ಸ್ ಮ್ಯೂಸಿಯಂನಲ್ಲಿ, ಸುಧಾಕರ್ ಅವರು ಅನೇಕ ರೀತಿಯ ಕಾರುಗಳನ್ನು ವಿನ್ಯಾಸಗೊಳಿಸಿದ್ದಾರೆ. ಇವುಗಳಲ್ಲಿ ಹ್ಯಾಂಡ್‌ಬ್ಯಾಗ್ ಕಾರು, ಹೆಲ್ಮೆಟ್ ಕಾರು, ಕ್ಯಾಮೆರಾ ಕಾರು, ಟಾಯ್ಲೆಟ್ ಕಾರು ಹಾಗೂ ಬರ್ಗರ್ ಕಾರುಗಳು ಸೇರಿವೆ.

ಈ ಬಗ್ಗೆ ಮಾತನಾಡಿರುವ ಸುಧಾಕರ್ ರವರು, ಜನರಿಗೆ ನನ್ನ ಅಭಿಪ್ರಾಯವನ್ನು ಹೇಳಲು ವಿಭಿನ್ನ ಸಂದರ್ಭಗಳಲ್ಲಿ ವಿವಿಧ ಕಾರುಗಳನ್ನು ರಚಿಸಿದ್ದೇನೆ. ಈ ಸಮಯದಲ್ಲಿ ಮನೆಯಲ್ಲಿ ಸುರಕ್ಷಿತವಾಗಿರುವಂತೆ ಜನರಿಗೆ ಹೇಳುವುದು ಮುಖ್ಯ.

ಜಾಗೃತಿ ಮೂಡಿಸಲು ಬಂತು ಕರೋನಾ ವೈರಸ್ ಕಾರು

ಈ ಕರೋನಾ ವೈರಸ್ ಕಾರು ಜನರಿಗೆ ಮನೆಯಲ್ಲಿಯೇ ಇರುವಂತೆ ಸಂದೇಶವನ್ನು ನೀಡುತ್ತದೆ ಎಂದು ಹೇಳಿದರು. ಈ ಕರೋನಾ ವೈರಸ್ ಕಾರು ಸದ್ಯಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ವಿಭಿನ್ನ ಪ್ರಯತ್ನಕ್ಕೆ ಕೈಹಾಕಿರುವ ಸುಧಾಕರ್ ರವರಿಗೆ ಅಭಿನಂದನೆಗಳು.

Most Read Articles

Kannada
English summary
Car designed like Corona Virus to create awareness. Read in Kannada.
Story first published: Wednesday, April 8, 2020, 16:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X