Just In
- 18 min ago Tata: 10 ಕೋಟಿ ಕಿ.ಮೀ ಮೈಲಿಗಲ್ಲು ದಾಟಿದ ಟಾಟಾ ಪವರ್ನ EV ಚಾರ್ಜಿಂಗ್ ನೆಟ್ವರ್ಕ್
- 50 min ago ಫ್ಯಾಮಿಲಿಯೊಂದಿಗೆ ಅರಾಮದಾಯಕ ಪ್ರಯಾಣಕ್ಕಾಗಿ ಇನ್ನೋವಾ ಹೈಕ್ರಾಸ್ ಹೊಸ ರೂಪಾಂತರ ಬಿಡುಗಡೆ
- 1 hr ago ಸೆಮಿಕಂಡಕ್ಟರ್ ಪೂರೈಸಲು ಟಾಟಾದೊಂದಿಗೆ ಟೆಸ್ಲಾ ಒಪ್ಪಂದ.. ಕೆಲವೇ ದಿನದಲ್ಲಿ ಮೊದಲ ಶೋರೂಂ ಆರಂಭ?
- 4 hrs ago ಹಣದ ವಿಚಾರವಾಗಿ ಜಗಳ: ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಕಾರಿಗೆ ಬೆಂಕಿಯಿಟ್ಟ ಸ್ನೇಹಿತರು
Don't Miss!
- Sports RCB: ಆರ್ಸಿಬಿ ಮಾಲೀಕತ್ವ ಬದಲಾವಣೆಯ ಅಗತ್ಯವಿದೆ; ಟೆನ್ನಿಸ್ ತಾರೆ ಮಹೇಶ್ ಭೂಪತಿ
- Lifestyle ಹಾವನ್ನು ಚಿಟಿಕೆ ಹೊಡೆದಂತೆ ಡಬ್ಬದಲ್ಲಿ ತುಂಬಿದ ವ್ಯಕ್ತಿಯ ಕೌಶಲ್ಯಕ್ಕೆ ಜನರು ಫಿದಾ: 17 ಮಿಲಿಯನ್ಗೂ ಅಧಿಕ ವ್ಯೂವ್ಸ್ ಪಡೆದ ವೀಡಿ
- Finance ಓಲಾ S1 X ಎಲೆಕ್ಟ್ರಿಕ್ ಸ್ಕೂಟರ್ಗಳ ಬೆಲೆ ಕಡಿತ, ಪ್ರಸ್ತುತ ದರ ಎಷ್ಟು ತಿಳಿಯಿರಿ
- Movies ಚಂದನವನದಲ್ಲಿ ತ್ರಿವಿಕ್ರಮನಾಗಿ ಬೆಳೆದ ಹುಣಸೂರಿನ ವಾಮನಮೂರ್ತಿ ದ್ವಾರಕೀಶ್
- News Gold and Silver price: ಏಪ್ರಿಲ್ 16ರಂದು ನಿಮ್ಮ ನಗರದಲ್ಲಿ ಬಂಗಾರ ದರ ಎಷ್ಟಿದೆ?-ಅಂಕಿಅಂಶಗಳ ವಿವರ ಹೀಗಿದೆ
- Technology ಇನ್ನು ಕೆಲವೇ ದಿನಗಳಲ್ಲಿ ವಾಟ್ಸಾಪ್ ಸೇರಲಿದೆ ಈ ಆಕರ್ಷಕ ಫೀಚರ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜಾಗೃತಿ ಮೂಡಿಸಲು ಬಂತು ಕರೋನಾ ವೈರಸ್ ಕಾರು
ಕರೋನಾ ವೈರಸ್ ವಿಶ್ವದಾದ್ಯಂತ ವೇಗವಾಗಿ ಹರಡುತ್ತಿದೆ. ಈ ಕಾರಣಕ್ಕೆ ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ವಿನಾ ಕಾರಣ ಮನೆ ಬಿಟ್ಟು ಹೊರಬರದಂತೆ ಹಾಗೂ ಪ್ರತ್ಯೇಕವಾಗಿರುವಂತೆ ಜನರಿಗೆ ಸೂಚಿಸಲಾಗಿದೆ.
ಆದರೂ ಜನರಿಗೆ ಇನ್ನೂ ಈ ವೈರಸ್ನ ಗಂಭೀರತೆ ಅರ್ಥವಾಗುತ್ತಿಲ್ಲ. ವಿನಾ ಕಾರಣ ಮನೆಯಿಂದ ಹೊರ ಬರುವ ಜನಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜಾಗೃತಿಯನ್ನು ಸಹ ವಿಭಿನ್ನ ರೀತಿಯಲ್ಲಿ ಮೂಡಿಸಲಾಗುತ್ತಿದೆ. ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ನಂತಹ ನಗರಗಳಲ್ಲಿ ಪೊಲೀಸರು ಕರೋನಾ ಹೆಲ್ಮೆಟ್ ಧರಿಸಿ ಜಾಗೃತಿ
ಮೂಡಿಸುತ್ತಿರುವುದನ್ನು ಕಾಣಬಹುದು.
ತೆಲಂಗಾಣದಲ್ಲಿ ಇನ್ನೂ ವಿಭಿನ್ನವಾದ ಪ್ರಯತ್ನವನ್ನು ಮಾಡಲಾಗಿದೆ. ಕರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಕರೋನಾ ವೈರಸ್ ನಂತಿರುವ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಈ ಕರೋನಾ ಕಾರನ್ನು ಹೈದರಾಬಾದ್ನ ಬಾಗದುರಪುರದ ಸುಧಾ ಕಾರ್ಸ್ ಮ್ಯೂಸಿಯಂನ ಸುಧಾಕರ್ ಎಂಬುವವರು ವಿನ್ಯಾಸಗೊಳಿಸಿದ್ದಾರೆ.
ಸುಧಾ ಕಾರ್ಸ್ ಮ್ಯೂಸಿಯಂ, ತೆಲಂಗಾಣ ರಾಜ್ಯದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ಕಾರುಗಳನ್ನು ವಿನ್ಯಾಸಗೊಳಿಸುವುದಕ್ಕೆ ಬಹಳ ಜನಪ್ರಿಯವಾಗಿದೆ. ಇಲ್ಲಿ ವಿಭಿನ್ನವಾದ ಕಾರುಗಳಿವೆ. ಈ ಕಾರುಗಳನ್ನು ಸುಧಾಕರ್ ರವರೇ ವಿನ್ಯಾಸಗೊಳಿಸಿದ್ದಾರೆ.
ಶಾಲಾ ದಿನಗಳಿಂದಲೂ ಅವರು ಇದರ ಬಗ್ಗೆ ಆಸಕ್ತಿಯನ್ನು ಹೊಂದಿದ್ದಾರೆ. ಸುಧಾಕರ್ ರವರು 2010ರಲ್ಲಿ ಸುಧಾ ಕಾರ್ಸ್ ಮ್ಯೂಸಿಯಂ ಅನ್ನು ಅವರು ಆರಂಭಿಸಿದರು. ಈಗ ಕರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಈ ಕಾರನ್ನು ವಿನ್ಯಾಸಗೊಳಿಸಿದ್ದಾಗಿ ಹೇಳಿದ್ದಾರೆ.
ಕೋವಿಡ್ -19 ವೈರಸ್ ಹರಡುವುದನ್ನು ನಿಯಂತ್ರಿಸಬೇಕು. ಈ ಕಾರಣಕ್ಕೆ ಈ ಕಾರನ್ನು ಕರೋನಾ ವೈರಸ್ ನಂತೆ ವಿನ್ಯಾಸಗೊಳಿಸಿದ್ದೇನೆ. ಇದು ಜನರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಹೇಳಿದ್ದಾರೆ.
ಈ ಕರೋನಾ ಕಾರನಲ್ಲಿ 100 ಸಿಸಿ ಎಂಜಿನ್ ಅಳವಡಿಸಲಾಗಿದೆ. ಈ ಕಾರು ಕೇವಲ ಒಂದು ಸೀಟ್ ಅನ್ನು ಹೊಂದಿದೆ. ಈ ಕಾರು ಗಂಟೆಗೆ 40 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಈ ಕಾರನ್ನು 10 ದಿನಗಳಲ್ಲಿ ವಿನ್ಯಾಸಗೊಳಿಸಿದ್ದಾಗಿ ಸುಧಾಕರ್ ಹೇಳಿದರು.
ಸುಧಾ ಕಾರ್ಸ್ ಮ್ಯೂಸಿಯಂನಲ್ಲಿ, ಸುಧಾಕರ್ ಅವರು ಅನೇಕ ರೀತಿಯ ಕಾರುಗಳನ್ನು ವಿನ್ಯಾಸಗೊಳಿಸಿದ್ದಾರೆ. ಇವುಗಳಲ್ಲಿ ಹ್ಯಾಂಡ್ಬ್ಯಾಗ್ ಕಾರು, ಹೆಲ್ಮೆಟ್ ಕಾರು, ಕ್ಯಾಮೆರಾ ಕಾರು, ಟಾಯ್ಲೆಟ್ ಕಾರು ಹಾಗೂ ಬರ್ಗರ್ ಕಾರುಗಳು ಸೇರಿವೆ.
ಈ ಬಗ್ಗೆ ಮಾತನಾಡಿರುವ ಸುಧಾಕರ್ ರವರು, ಜನರಿಗೆ ನನ್ನ ಅಭಿಪ್ರಾಯವನ್ನು ಹೇಳಲು ವಿಭಿನ್ನ ಸಂದರ್ಭಗಳಲ್ಲಿ ವಿವಿಧ ಕಾರುಗಳನ್ನು ರಚಿಸಿದ್ದೇನೆ. ಈ ಸಮಯದಲ್ಲಿ ಮನೆಯಲ್ಲಿ ಸುರಕ್ಷಿತವಾಗಿರುವಂತೆ ಜನರಿಗೆ ಹೇಳುವುದು ಮುಖ್ಯ.
ಈ ಕರೋನಾ ವೈರಸ್ ಕಾರು ಜನರಿಗೆ ಮನೆಯಲ್ಲಿಯೇ ಇರುವಂತೆ ಸಂದೇಶವನ್ನು ನೀಡುತ್ತದೆ ಎಂದು ಹೇಳಿದರು. ಈ ಕರೋನಾ ವೈರಸ್ ಕಾರು ಸದ್ಯಕ್ಕೆ ಎಲ್ಲರ ಗಮನ ಸೆಳೆಯುತ್ತಿದೆ. ವಿಭಿನ್ನ ಪ್ರಯತ್ನಕ್ಕೆ ಕೈಹಾಕಿರುವ ಸುಧಾಕರ್ ರವರಿಗೆ ಅಭಿನಂದನೆಗಳು.