ಫೇಸ್ ಮಾಸ್ಕ್ ಧರಿಸದೇ ಲೇಡಿ ಕಾನ್‌ಸ್ಟೆಬಲ್ ಜೊತೆಗೆ ವಾಗ್ವಾದಕ್ಕಿಳಿದ ಕ್ರಿಕೆಟಿಗ

ಸದ್ಯದ ಪರಿಸ್ಥಿತಿಯಲ್ಲಿ ಪ್ರಪಂಚದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕೆಲವೆಡೆ ಕಾರಿನಲ್ಲಿ ಒಬ್ಬಂಟಿಯಾಗಿ ಓಡಾಡುವವರು ಸಹ ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದ್ದು, ಫೇಸ್ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ.

ಫೇಸ್ ಮಾಸ್ಕ್ ಧರಿಸದೇ ಲೇಡಿ ಕಾನ್‌ಸ್ಟೆಬಲ್ ಜೊತೆಗೆ ವಾಗ್ವಾದಕ್ಕಿಳಿದ ಕ್ರಿಕೆಟಿಗ

ಕ್ರಿಕೆಟಿಗ ರವೀಂದ್ರ ಜಡೇಜಾ ಅವರು ತಮ್ಮ ಪತ್ನಿ ರಿವಾಬಾ ಅವರೊಂದಿಗೆ ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಸೋನಾಲ್ ಗೋಸಾಯಿ ಎಂಬ ಹೆಡ್ ಕಾನ್‌ಸ್ಟೆಬಲ್ ಅವರನ್ನು ತಡೆದಿದ್ದಾರೆ. ಲೈಸೆನ್ಸ್ ಹೊಂದಿಲ್ಲದ ಕಾರಣಕ್ಕೆ ಹಾಗೂ ಫೇಸ್ ಮಾಸ್ಕ್ ಧರಿಸದ ಕಾರಣಕ್ಕೆ ದಂಡ ಪಾವತಿಸುವಂತೆ ಹೇಳಿದ್ದಾರೆ.

ಫೇಸ್ ಮಾಸ್ಕ್ ಧರಿಸದೇ ಲೇಡಿ ಕಾನ್‌ಸ್ಟೆಬಲ್ ಜೊತೆಗೆ ವಾಗ್ವಾದಕ್ಕಿಳಿದ ಕ್ರಿಕೆಟಿಗ

ಮಾಧ್ಯಮ ಮೂಲಗಳ ಪ್ರಕಾರ, ರವೀಂದ್ರ ಜಡೇಜಾ ಅವರು ಲೇಡಿ ಕಾನ್‌ಸ್ಟೆಬಲ್ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ. ಜೊತೆಗೆ ಮಹಿಳಾ ಕಾನ್‌ಸ್ಟೆಬಲ್‌ನ ವಿರುದ್ಧ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಫೇಸ್ ಮಾಸ್ಕ್ ಧರಿಸದೇ ಲೇಡಿ ಕಾನ್‌ಸ್ಟೆಬಲ್ ಜೊತೆಗೆ ವಾಗ್ವಾದಕ್ಕಿಳಿದ ಕ್ರಿಕೆಟಿಗ

ಇದಾದ ನಂತರ ಆ ಮಹಿಳಾ ಕಾನ್‌ಸ್ಟೆಬಲ್‌ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ರವೀಂದ್ರ ಜಡೇಜಾರವರ ಜೊತೆಗೆ ನಡೆಸಿದ ಮಾತಿನ ಚಕಮಕಿಯ ಕಾರಣಕ್ಕೆ ಉಂಟಾದ ಒತ್ತಡದಿಂದ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ರವೀಂದ್ರ ಜಡೇಜಾ ಹಾಗೂ ಲೇಡಿ ಕಾನ್‌ಸ್ಟೆಬಲ್ ಪರಸ್ಪರರ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಅಲ್ಲಿನ ಡಿಸಿಪಿ ಹೇಳಿದ್ದಾರೆ.

ಫೇಸ್ ಮಾಸ್ಕ್ ಧರಿಸದೇ ಲೇಡಿ ಕಾನ್‌ಸ್ಟೆಬಲ್ ಜೊತೆಗೆ ವಾಗ್ವಾದಕ್ಕಿಳಿದ ಕ್ರಿಕೆಟಿಗ

ಆದರೆ ಇಬ್ಬರೂ ಸಹ ಅಧಿಕೃತವಾಗಿ ಯಾವುದೇ ದೂರನ್ನು ದಾಖಲಿಸಿಲ್ಲ. ನಮಗೆ ಬಂದಿರುವ ಮಾಹಿತಿಯಂತೆ ಜಡೇಜಾರವರು ಫೇಸ್ ಮಾಸ್ಕ್ ಧರಿಸಿದ್ದರು. ಅವರ ಪತ್ನಿ ಫೇಸ್ ಮಾಸ್ಕ್ ಧರಿಸಿದ್ದರೋ ಇಲ್ಲವೋ ಎಂಬುದರ ಕುರಿತು ತನಿಖೆ ನಡೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಫೇಸ್ ಮಾಸ್ಕ್ ಧರಿಸದೇ ಲೇಡಿ ಕಾನ್‌ಸ್ಟೆಬಲ್ ಜೊತೆಗೆ ವಾಗ್ವಾದಕ್ಕಿಳಿದ ಕ್ರಿಕೆಟಿಗ

ಕೋವಿಡ್ -19 ವೈರಸ್ ಹರಡುವುದನ್ನು ತಡೆಯಲು ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯ. ಆದರೆ ಕಾರಿನಲ್ಲಿರುವವರನ್ನು ಫೇಸ್ ಮಾಸ್ಕ್ ಧರಿಸುವಂತೆ ಒತ್ತಾಯಿಸುವುದು ಸರಿಯಲ್ಲ. ದಬ್ಬಾಳಿಕೆಯಿಂದ ಜಾರಿಗೊಳಿಸುವ ನಿಯಮಗಳನ್ನು ಜನರು ಪಾಲಿಸುವುದಿಲ್ಲ.

ಫೇಸ್ ಮಾಸ್ಕ್ ಧರಿಸದೇ ಲೇಡಿ ಕಾನ್‌ಸ್ಟೆಬಲ್ ಜೊತೆಗೆ ವಾಗ್ವಾದಕ್ಕಿಳಿದ ಕ್ರಿಕೆಟಿಗ

ಈ ಪ್ರಕರಣದಲ್ಲಿ ಇಬ್ಬರೂ ಸಹ ಪರಸ್ಪರ ಆರೋಪ ಮಾಡುತ್ತಿದ್ದು, ನಿಖರವಾದ ತನಿಖೆಯ ನಂತರವಷ್ಟೇ ಸತ್ಯ ತಿಳಿಯುತ್ತದೆ. ಈ ಪ್ರಕರಣದಲ್ಲಿ ಪೊಲೀಸರು ಯಾವುದೇ ದೂರು ದಾಖಲಿಸಿಲ್ಲ ಹಾಗೂ ಎರಡೂ ಕಡೆಯಿಂದ ಯಾವುದೇ ಹೇಳಿಕೆಗಳನ್ನು ಪಡೆದಿಲ್ಲ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಫೇಸ್ ಮಾಸ್ಕ್ ಧರಿಸದೇ ಲೇಡಿ ಕಾನ್‌ಸ್ಟೆಬಲ್ ಜೊತೆಗೆ ವಾಗ್ವಾದಕ್ಕಿಳಿದ ಕ್ರಿಕೆಟಿಗ

ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್‌ ಸಡಿಲಿಸಲಾಗಿದ್ದು, ಜನರಿಗೆ ಮನೆಯಿಂದ ಹೊರ ಬರಲು ಅವಕಾಶ ನೀಡಲಾಗಿದೆ. ಇತ್ತೀಚೆಗಷ್ಟೇ ಕ್ರಿಕೆಟಿಗ ಸುರೇಶ್ ರೈನಾ ಅವರು ತಮ್ಮ ಪತ್ನಿ ಹಾಗೂ ಹೆಣ್ಣು ಮಗುವಿನ ಜೊತೆಗೆ ಕಾರಿನಿಂದ ಹೊರಗಿಳಿದು ಮಳೆಯಲ್ಲಿ ನೆನೆಯುತ್ತಿದ್ದ ವೀಡಿಯೊ ವೈರಲ್ ಆಗಿತ್ತು.

Most Read Articles

Kannada
English summary
Cricketer Ravindra Jadeja argues with woman constable about face mask. Read in Kannada.
Story first published: Tuesday, August 11, 2020, 18:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X