ಸಕಾಲಕ್ಕೆ ಯೋಧರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಲಿದೆ ಈ ಬೈಕ್ ಆಂಬ್ಯುಲೆನ್ಸ್

ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಶೇಷವಾಗಿ ಅಭಿವೃದ್ಧಿಪಡಿಸಿರುವ ರಕ್ಷಿತಾ ಆಂಬ್ಯುಲೆನ್ಸ್ ಬೈಕ್ ಅನ್ನು ಬಿಡುಗಡೆಗೊಳಿಸಲಾಗಿದೆ.

ಸಕಾಲಕ್ಕೆ ಯೋಧರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಲಿದೆ ಈ ಬೈಕ್ ಆಂಬ್ಯುಲೆನ್ಸ್

ರಕ್ಷಿತಾ ಆಂಬ್ಯುಲೆನ್ಸ್ ಬೈಕ್ ಅನ್ನು ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ಸಾಗಿಸಲು ಬಳಸಲಾಗುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಆಂಬ್ಯುಲೆನ್ಸ್‌ಗಳನ್ನು ಸಿಆರ್‌ಪಿಎಫ್ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿ ಬಳಸಲಿದ್ದಾರೆ. ಸಿಆರ್‌ಪಿಎಫ್ ಯೋಧರು ಸುಕ್ಮಾ, ದಂತೇವಾಡ ಕಾಡುಗಳಲ್ಲಿ ನಕ್ಸಲರೊಂದಿಗೆ ಆಗಾಗ್ಗೆ ಮುಖಾಮುಖಿಯಾಗುತ್ತಿರುತ್ತಾರೆ.

ಸಕಾಲಕ್ಕೆ ಯೋಧರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಲಿದೆ ಈ ಬೈಕ್ ಆಂಬ್ಯುಲೆನ್ಸ್

ಕಾಡಿನಲ್ಲಿ ಸುಸಜ್ಜಿತ ರಸ್ತೆಗಳು ಇಲ್ಲದೇ ಇರುವ ಕಾರಣ ದೊಡ್ಡ ಆಂಬುಲೆನ್ಸ್ ಅನ್ನು ಸಾಗಿಸುವುದು ಕಷ್ಟದ ಕೆಲಸ. ಈ ಪರಿಸ್ಥಿತಿಯಲ್ಲಿ ಬೈಕ್ ಆಂಬ್ಯುಲೆನ್ಸ್ ಮೂಲಕ ಕಾಡಿನಲ್ಲಿರುವ ಘಟನಾ ಸ್ಥಳವನ್ನು ಸುಲಭವಾಗಿ ತಲುಪಬಹುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಸಕಾಲಕ್ಕೆ ಯೋಧರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಲಿದೆ ಈ ಬೈಕ್ ಆಂಬ್ಯುಲೆನ್ಸ್

ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪದ ಕಾರಣ ಗಾಯಗೊಂಡ ಯೋಧರು ಸಾವನ್ನಪ್ಪುತ್ತಿದ್ದಾರೆ ಎಂದು ಸಿಆರ್‌ಪಿಎಫ್ ಹೇಳಿದೆ. ಈ ದುರಂತವನ್ನು ತಪ್ಪಿಸಲು ಹಾಗೂ ಯೋಧರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಡಿಆರ್‌ಡಿಒ ಸಹಾಯದಿಂದ ಬೈಕ್ ಆಂಬ್ಯುಲೆನ್ಸ್ ಅನ್ನು ಸಿದ್ಧಪಡಿಸಲಾಗಿದೆ.

ಸಕಾಲಕ್ಕೆ ಯೋಧರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಲಿದೆ ಈ ಬೈಕ್ ಆಂಬ್ಯುಲೆನ್ಸ್

ರಕ್ಷಿತಾ ಬೈಕ್ ಆಂಬ್ಯುಲೆನ್ಸ್ ಅನ್ನು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನಿಂದ ನಿರ್ಮಿಸಲಾಗಿದೆ. ಬೈಕ್‌ನ ಹಿಂಭಾಗದಲ್ಲಿ ಗಾಯಗೊಂಡವರಿಗಾಗಿ ಮಡಿಚ ಬಹುದಾದ ಆರಾಮದಾಯಕ ಸೀಟುಗಳನ್ನು ಅಳವಡಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಸಕಾಲಕ್ಕೆ ಯೋಧರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಲಿದೆ ಈ ಬೈಕ್ ಆಂಬ್ಯುಲೆನ್ಸ್

ಸೀಟುಗಳನ್ನು ಪೂರ್ತಿಯಾಗಿ ಬೈಕಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಅಳವಡಿಸಲಾಗಿದೆ. ಇದರಿಂದ ಬೈಕ್ ಅನ್ನು ಬ್ಯಾಲೆನ್ಸ್ ಮಾಡಲು ಸಾಧ್ಯವಾಗಲಿದೆ. ಈ ಬೈಕಿನಲ್ಲಿ ಆಕ್ಸಿಜನ್ ಸಿಲಿಂಡರ್ ಹಾಗೂ ತುರ್ತು ಪರಿಸ್ಥಿತಿಯನ್ನು ಎದುರಿಸಲು ಫಸ್ಟ್ ಏಡ್ ಬಾಕ್ಸ್ ಸಹ ನೀಡಲಾಗಿದೆ.

ಸಕಾಲಕ್ಕೆ ಯೋಧರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಲಿದೆ ಈ ಬೈಕ್ ಆಂಬ್ಯುಲೆನ್ಸ್

ರೋಗಿಯ ರಕ್ತದೊತ್ತಡವನ್ನು ಅಳೆಯಲು ಈ ಬೈಕ್ ಆಂಬ್ಯುಲೆನ್ಸ್‌ನಲ್ಲಿ ಡಿಜಿಟಲ್ ಮೀಟರ್ ನೀಡಲಾಗಿದೆ. ಈ ಬೈಕಿನ ಹಿಂಭಾಗದಲ್ಲಿ ಸೀಟ್ ಇದ್ದರೂ ಸಹ ಸವಾರನು ಆರಾಮವಾಗಿ ಕುಳಿತುಕೊಳ್ಳಬಹುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸಕಾಲಕ್ಕೆ ಯೋಧರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಲಿದೆ ಈ ಬೈಕ್ ಆಂಬ್ಯುಲೆನ್ಸ್

ಹೃದಯ ಬಡಿತವನ್ನು ಅಳೆಯಲು ಬೈಕ್‌ನ ಹೆಡ್‌ಲೈಟ್ ಮೇಲೆ ಡಿಜಿಟಲ್ ಮೀಟರ್ ಅನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಈ ಬೈಕ್ ಆಂಬ್ಯುಲೆನ್ಸ್‌ನಲ್ಲಿ ಸೈರನ್ ಹಾಗೂ ಲೈಟ್ ಸಹ ಅಳವಡಿಸಲಾಗಿದೆ.

ಸಕಾಲಕ್ಕೆ ಯೋಧರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಲಿದೆ ಈ ಬೈಕ್ ಆಂಬ್ಯುಲೆನ್ಸ್

ಈ ಬೈಕಿನಲ್ಲಿರುವ ಸೀಟ್ ಅನ್ನು ಅಗತ್ಯಕ್ಕೆ ತಕ್ಕಂತೆ ಸರಿಹೊಂದಿಸಬಹುದು. ಜೊತೆಗೆ ಸ್ಲೈಡಿಂಗ್ ಫೀಚರ್ ನೀಡಲಾಗಿದ್ದು, ರೋಗಿಯು ಸುಲಭವಾಗಿ ಕುಳಿತುಕೊಳ್ಳಲು ಹಾಗೂ ಹೊರಹೋಗಲು ಸಾಧ್ಯವಾಗಲಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಸಕಾಲಕ್ಕೆ ಯೋಧರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಲಿದೆ ಈ ಬೈಕ್ ಆಂಬ್ಯುಲೆನ್ಸ್

ಈ ಬೈಕ್ ಆಂಬ್ಯುಲೆನ್ಸ್'ನ ಡೆಮೊ ನೀಡಿರುವ ಸಿಆರ್‌ಪಿಎಫ್ ಹಲವು ವರ್ಷಗಳಿಂದ ಈ ರೀತಿಯ ಬೈಕಿನ ಕೊರತೆಯಿತ್ತು ಎಂದು ಹೇಳಿದೆ. ಇದರಿಂದಾಗಿ ಎನ್ ಕೌಂಟರ್'ನಲ್ಲಿ ಗಾಯಗೊಳ್ಳುವ ಯೋಧರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಲಿದೆ ಎಂದು ಸಿಆರ್‌ಪಿಎಫ್ ತಿಳಿಸಿದೆ.

Most Read Articles

Kannada
English summary
CRPF and DRDO jointly develops Rakshita bike ambulance for CRPF soldiers. Read in Kannada.
Story first published: Monday, January 18, 2021, 20:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X