ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ದೇಶದ ಗಡಿಭಾಗಗಳಲ್ಲಿ ಹೆಚ್ಚುತ್ತಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ಸಮರ್ಥವಾಗಿ ಹಿಮ್ಮೆಟಿಸಲು ಸೇನೆಗೆ ಸುಧಾರಿತ ತಂತ್ರಜ್ಞಾನ ಪ್ರೇರಿತ ಶಸ್ತ್ರಾಸ್ತಗಳನ್ನು ಪೂರೈಸುತ್ತಿರುವ ಕೇಂದ್ರ ಸರ್ಕಾರವು ಈ ಬಾರಿ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದು, ಸಿಆರ್‌ಪಿ ಪಡೆಗಳಿಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳನ್ನು ಪೂರೈಸುವ ಹೊಸ ಯೋಜನೆಗೆ ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ಹೌದು, ಭಾರತೀಯ ಸೇನೆಯ ಬಹುದಿನಬೇಡಿಕೆಯಾಗಿದ್ದ ಬಾಂಬ್ ನಿರೋಧಕ ವಾಹನಗಳು, ಬುಲೆಟ್ ಪ್ರೂಫ್ ಜಾಕೆಟ್‌ಗಳು ಮತ್ತು ಸುಸಜ್ಜಿತ ವೈದ್ಯಕೀಯ ಸೌಲಭ್ಯವನ್ನು ಹೊಂದಿರುವ ಆಂಬ್ಯುಲೆನ್ಸ್‌ಗಳನ್ನು ಯೋಜನೆಗೆ ಒಪ್ಪಿಗೆ ಸೂಚಿಸಿರುವ ಕೇಂದ್ರ ಸರ್ಕಾರವು ಮಹತ್ವದ ಯೋಜನೆಗಾಗಾಗಿ ಬರೋಬ್ಬರಿ ರೂ.613 ಬಿಡುಗಡೆಗೆ ಮಾಡಿದ್ದು, ಗಡಿಭಾಗಗಳಲ್ಲಿ ಉಗ್ರ ಚಟುವಟಿಕೆಗಳನ್ನು ಮಟ್ಟ ಹಾಕುವುದಲ್ಲದೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಾರ್ಯಚರಣೆಗೂ ಈ ಹೊಸ ಯೋಜನೆಯು ಸಹಕಾರಿಯಾಗಿದೆ.

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ಇದರ ಜೊತೆಗೆ ಇದೇ ಮೊದಲ ಬಾರಿಗೆ ಎನ್‌ಎಸ್‌ಜಿ ಮತ್ತು ಆ್ಯಂಟಿ ಟೆರರ್ ಫೋರ್ಸ್‌ಗಳಿಗೆ ರಿಮೋಟ್ ಚಾಲಿತ ವಾಹನಗಳನ್ನ ಒದಗಿಸಲು ಒಪ್ಪಿಗೆ ಸೂಚಿಸಲಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯವನ್ನು ಹೊಂದಿರುವ 7 ವಾಹನಗಳ ಖರೀದಿಗಾಗಿ ರೂ.17 ಕೋಟಿ ಬಿಡುಗಡೆಗೊಳಿಸಿದೆ.

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ರಿಮೋಟ್ ಚಾಲಿತ ವಾಹನಗಳು ಎನ್ಎಸ್‌ಜಿ ಪಡೆಗಳಿಗೆ ಸಾಕಷ್ಟು ಸಹಕಾರಿಯಾಗಲಿದ್ದು, ತುರ್ತು ಸಂದರ್ಭಗಳಲ್ಲಿ ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳ ಬಳಿ ಕಣ್ಗಾವಲು ಇರಿಸಲು ರಿಮೋಟ್ ಚಾಲಿತ ವಾಹನಗಳು ಸಹಕಾರಿಯಾಗಲಿವೆ.

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ಇನ್ನು ಭಾರತೀಯ ಸೇನೆಯು ಈ ಹಿಂದೆಂಗಿಂತಲೂ ತಾಂತ್ರಿಕವಾಗಿ ಸಾಕಷ್ಟು ಬಲಿಷ್ಠವಾಗುತ್ತಿದ್ದು, ಸೇನಾ ಬತ್ತಳಿಕೆಯಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನ ಒದಗಿಸಲಾಗುತ್ತಿದೆ. ಸೇನಾ ಸೌಲಭ್ಯಗಳನ್ನು ನವೀಕರಣಗೊಳಿಸಲು ಕೇಂದ್ರ ಸರ್ಕಾರವು ಭಾರೀ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿದ್ದು, ಇದರ ಪರಿಣಾಮವೇ ಸೇನಾ ಪಡೆ ಇಂದು ಹತ್ತು ಹಲವು ವಿಶ್ವದರ್ಜೆ ಸವಲತ್ತುಗಳನ್ನು ಅಳವಡಿಸಿಕೊಳ್ಳುತ್ತಿದೆ.

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ಕಳೆದ ಕೆಲವು ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಸೇವಾ ವಾಹನಗಳ ವಿಭಾಗದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದು, ಸುಜುಕಿ ಜಿಪ್ಸಿ ಕಾರುಗಳ ಬದಲಾಗಿ ಉತ್ತಮ ಎಂಜಿನ್ ಸಾಮರ್ಥ್ಯದ 3 ಸಾವಿರ ಟಾಟಾ ಸ್ಟ್ರೋಮ್ ಕಾರುಗಳನ್ನು ಸೇನೆಗೆ ಹಸ್ತಾಂತರ ಮಾಡಿತ್ತು. ಅದಾದ ಬಳಿಕ ಎನ್ಎಸ್‌ಜಿ ಪಡೆಗಳಿಗಾಗಿ ರೆನಾಲ್ಟ್ ಸಂಸ್ಥೆಯ ಬಲಿಷ್ಠ ಎಂಜಿನ್ ಸಾಮರ್ಥ್ಯದ ಶೆರ್ಪಾ ಲೈಟ್ ಎಂಬ ಹೊಸ ವಾಹನಗಳನ್ನು ಸಹ ಖರೀದಿ ಮಾಡಿತ್ತು.

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ಇಷ್ಟು ದಿನಗಳ ಕಾಲ ಎನ್ಎಸ್‌ಜಿ ಕಮಾಂಡೊ ಪಡೆಗಳಲ್ಲಿ ಮಾತ್ರವೇ ಬಳಕೆಯಾಗುತ್ತಿದ್ದ ರೆನಾಲ್ಟ್ ಶೆರ್ಪಾ ಲೈಟ್ ವಾಹನಗಳು ಇದೀಗ ಸಿಐಎಸ್ಎಫ್ ಪಡೆಯಲ್ಲೂ ಸ್ಥಾನ ಪಡೆಯಲಿದ್ದು, ಇವು ನೆಲ ಬಾಂಬ್ ಕೃತ್ಯಗಳನ್ನು ಹಿಮ್ಮೆಟಿಸಬಲ್ಲವು.

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ನೋಡಲು ಟ್ರಕ್‌ಗಳಂತೆ ಕಂಡರೂ ಕಾರು ಮಾದರಿಯಾಗಳಲ್ಲಿ ಒಂದಾಗಿರುವ ರೆನಾಲ್ಟ್ ಶೆರ್ಪಾ ವಾಹನಗಳು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಬರೋಬ್ಬರಿ 2.2 ಟನ್ ತೂಕವನ್ನು ಹೊಂದಿರುವ ಶೆರ್ಪಾ ವಾಹನವು ಬರೋಬ್ಬರಿ 11 ಟನ್ ಭಾರವನ್ನು ಹೊತ್ತು ಸಾಗಬಲ್ಲ ಸಾಮರ್ಥ್ಯ ಹೊಂದಿದೆ ಅಂದ್ರೆ ನೀವು ನಂಬಲೇಬೇಕು.

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ಸದ್ಯ ವಿಶ್ವದ ಪ್ರಮುಖ ರಾಷ್ಟ್ರಗಳ ಸೇನಾಪಡೆಯಲ್ಲಿ ಮಾತ್ರವೇ ಸ್ಥಾನ ಪಡೆದಿರುವ ರೆನಾಲ್ಟ್ ಶೆರ್ಪಾ ವಾಹನಗಳು ಇದೇ ಮೊದಲು ಸಿಐಎಸ್ಎಫ್ ಪಡೆಗೆ ಸೇರಿಕೊಂಡಿದ್ದು, ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾಗುವ ಭದ್ರತಾ ಪಡೆಗಳಿಗೆ ಇದು ಮತ್ತಷ್ಟು ಬಲತುಂಬಲಿದೆ ಎನ್ನಬಹುದು.

MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ಶೆರ್ಪಾ ವಾಹನದ ಪ್ರತಿ ತಾಂತ್ರಿಕ ಅಂಶಗಳು ಗುಣಮಟ್ಟದಿಂದ ಕೂಡಿದ್ದು, ಬುಲೆಟ್ ಪ್ರೂಫ್ ಬಾಡಿ ಕಿಟ್, ಅತ್ಯುತ್ತಮ ಗ್ರೌಂಡ್ ಕ್ಲಿಯೆರೆನ್ಸ್, ಬುಲೆಟ್ ಪ್ರೊಫ್ ಗ್ಲಾಸ್‌ಗಳು, ಪಿಕ್ ಅಪ್ ಟ್ರಕ್ ಮಾದರಿಯಲ್ಲಿ ಹಿಂಭಾಗ ವಿನ್ಯಾಸವು ಈ ವಾಹನದ ಪ್ರಮುಖ ಆಕರ್ಷಣೆ ಎನ್ನಬಹುದು.

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ಎಂಜಿನ್ ಸಾಮರ್ಥ್ಯ

4.76-ಲೀಟರ್, 4-ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ರೆನಾಲ್ಟ್ ಶೆರ್ಪಾ ವಾಹನವು 215-ಬಿಎಚ್‌ಪಿ ಮತ್ತು 800-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಗಂಟೆಗೆ 110 ಕಿ.ಮಿ ಗರಿಷ್ಠ ವೇಗದಲ್ಲಿ ಚಲಿಸಬಲ್ಲವು.

MOST READ: ನ್ಯಾನೋ ಬರುವುದಕ್ಕೂ ಮುನ್ನ ಬಂದು ಹೋದ 'ಮೀರಾ' ಕಾರಿನ ಕಥೆ ಗೊತ್ತಾ?

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ಜೊತೆಗೆ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಫ್ಯೂಲ್ ಟ್ಯಾಂಕ್ ತುಂಬಿದ್ದಲ್ಲಿ 1 ಸಾವಿರ ಕಿ.ಮಿ ಮೈಲೇಜ್ ಹಿಂದಿರುಗಿಸುವ ಗುಣ ಹೊಂದಿದ್ದು, ಬಲಿಷ್ಠ ಎಂಜಿನ್ ಹೊಂದಿರುವ ಹಿನ್ನೆಲೆಯಲ್ಲಿ ಇದರ ವಾಹನವು ಪ್ರತಿ ಲೀಟರ್‌ಗೆ 5ರಿಂದ 6 ಕಿ.ಮೀ ಮಾತ್ರವೇ ಮೈಲೇಜ್ ನೀಡಬಲ್ಲವು.

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ರೆನಾಲ್ಟ್ ಶೆರ್ಪಾ ವಾಹನಗಳು ನಿಶ್ಶಸ್ತ್ರವಾದ ಮತ್ತು ಶಸ್ತ್ರಸಜ್ಜಿತ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಬೆಂಗಾವಲು ವಾಹನಗಳಾಗಿ ಇಲ್ಲವೇ ಸೇನಾ ಕಾರ್ಯಾಚರಣೆಯ ಸಹಾಯಕ ವಾಹನಗಳಾಗಿ ಬಳಕೆ ಮಾಡಬಹುದಾಗಿದೆ.

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ರೆನಾಲ್ಟ್ ಶೆರ್ಪಾ ವಾಹನಗಳು ಈ ಹಿಂದೆ 2006ರಲ್ಲೇ ಮೊದಲ ಬಾರಿಗೆ ಬಿಡುಗಡೆಯಾಗಿದ್ದು, 2012ರಲ್ಲಿ ಇಂಡಿಯನ್ ಡಿಫೆನ್ಸ್ ಎಕ್ಸ್‌ಪೋ ಈ ವಾಹನವನ್ನ ಪ್ರದರ್ಶನ ಮಾಡಲಾಗಿತ್ತು. ಆದಾದ ಬಳಿಕ ಎನ್ಎಸ್‌ಜಿ ಕಮಾಂಡೊ ಬಳಿ ಮಾತ್ರವೇ ಇದ್ದ ರೆನಾಲ್ಟ್ ಶೆರ್ಪಾ ವಾಹನಗಳನ್ನು ಇದೀಗ ಸಿಐಎಸ್ಎಫ್ ಪಡೆಗೂ ನೀಡಿರುವುದು ಭದ್ರತೆಗೆ ಮತ್ತಷ್ಟು ಬಲ ಬಂದಿದೆ.

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ- ಸೇನೆಗೆ ಶೀಘ್ರದಲ್ಲೇ ಬಾಂಬ್ ನಿರೋಧಕ ವಾಹನಗಳು..!

ಬರೋಬ್ಬರಿ 10 ಜನ ಕುಳಿತುಕೊಳ್ಳಬಹುದಾದ ಈ ವಾಹನದಲ್ಲಿ ಒಂದು ವಾರಕ್ಕೆ ಬೇಕಾಗುವ ಎಲ್ಲಾ ಸರಕು ಸರಂಜಾಮು ಜೊತೆ ತೆರಳುವಂತೆ ಸಿದ್ದಗೊಳಿಸಲಾಗಿದ್ದು, 4x4 ಡ್ರೈವ್ ಸೌಲಭ್ಯದಿಂದಾಗಿ ಎಷ್ಟೇ ಕಠಿಣ ಭೂ ಪ್ರದೇಶಗಳಲ್ಲೂ ಸರಾಗವಾಗಿ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ.

Most Read Articles

Kannada
English summary
CRPF, BSF To Get Bomb Proof Vehicles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X