ಒಂದು ಕೆ.ಜಿ ಮಾಂಸ ಖರೀದಿಸುವವರಿಗೆ ಸಿಗಲಿದೆ ಒಂದು ಲೀಟರ್ ಉಚಿತ ಪೆಟ್ರೋಲ್

ಮಧುರೈ ಜಿಲ್ಲೆಯ ತಿರುಮಂಗಲಂನಲ್ಲಿ ಮಖಿಲ್ವಿಟ್ಟು ಮಖಿಲ್ ಎಂಬ ಮಾಂಸದಂಗಡಿ ಇದೆ. ಈ ಅಂಗಡಿಯಲ್ಲಿ ಒಂದು ಕೆ.ಜಿ ಮಾಂಸ ಖರೀದಿಸಿದರೆ ಒಂದು ಲೀಟರ್ ಪೆಟ್ರೋಲ್ ಅನ್ನು ಉಚಿತವಾಗಿ ನೀಡಲಾಗುತ್ತದೆ.

ಒಂದು ಕೆ.ಜಿ ಮಾಂಸ ಖರೀದಿಸುವವರಿಗೆ ಸಿಗಲಿದೆ ಒಂದು ಲೀಟರ್ ಉಚಿತ ಪೆಟ್ರೋಲ್

ಈ ಕೊಡುಗೆಯನ್ನು ಜುಲೈ ತಿಂಗಳ ವಿಶೇಷ ಕೊಡುಗೆಯಾಗಿ ಘೋಷಿಸಲಾಗಿದೆ. ಇಲ್ಲಿ ಒಂದು ಕೆ.ಜಿ ಮಾಂಸವನ್ನು ಖರೀದಿಸುವವರಿಗೆ ಟೋಕನ್ ನೀಡಲಾಗುತ್ತದೆ. ಪೆಟ್ರೋಲ್ ಬಂಕ್'ನಲ್ಲಿ ಆ ಟೋಕನ್ ನೀಡುವ ಮೂಲಕ ಒಂದು ಲೀಟರ್ ಪೆಟ್ರೋಲ್ ಖರೀದಿಸಬಹುದು. ಈ ತಿಂಗಳ ಕೊನೆಯವರೆಗೂ ಈ ಅಂಗಡಿಯ ಗ್ರಾಹಕರು ಈ ಕೊಡುಗೆಯನ್ನು ಪಡೆಯಬಹುದು ಎಂದು ಹೇಳಲಾಗಿದೆ.

ಒಂದು ಕೆ.ಜಿ ಮಾಂಸ ಖರೀದಿಸುವವರಿಗೆ ಸಿಗಲಿದೆ ಒಂದು ಲೀಟರ್ ಉಚಿತ ಪೆಟ್ರೋಲ್

ಈ ಕೊಡುಗೆಗೆ ಗ್ರಾಹಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಬಗ್ಗೆ ನ್ಯೂಸ್ 18 ತಮಿಳು ವರದಿ ಮಾಡಿದೆ. ಭಾರತದಲ್ಲಿ ಈ ರೀತಿ ಉಚಿತವಾಗಿ ಪೆಟ್ರೋಲ್ ಕೊಡುಗೆ ನೀಡುತ್ತಿರುವುದು ಇದೇ ಮೊದಲಲ್ಲ.

ಒಂದು ಕೆ.ಜಿ ಮಾಂಸ ಖರೀದಿಸುವವರಿಗೆ ಸಿಗಲಿದೆ ಒಂದು ಲೀಟರ್ ಉಚಿತ ಪೆಟ್ರೋಲ್

ಈ ಹಿಂದೆ ಒಂದು ಕೆ.ಜಿ ಕೇಕ್ ಖರೀದಿಸಿದರೆ ಒಂದು ಲೀಟರ್ ಪೆಟ್ರೋಲ್ ಉಚಿತವೆಂದು, ಬಿರಿಯಾನಿ ಖರೀದಿಸಿದರೆ ಒಂದು ಲೀಟರ್ ಪೆಟ್ರೋಲ್ ಉಚಿತವೆಂಬ ಹಲವಾರು ಕೊಡುಗೆಗಳನ್ನು ಘೋಷಿಸಲಾಗಿತ್ತು.

ಒಂದು ಕೆ.ಜಿ ಮಾಂಸ ಖರೀದಿಸುವವರಿಗೆ ಸಿಗಲಿದೆ ಒಂದು ಲೀಟರ್ ಉಚಿತ ಪೆಟ್ರೋಲ್

ಇದರ ಜೊತೆಗೆ ಮದುವೆ ಸಮಾರಂಭಗಳಲ್ಲಿ ವಧು, ವರರಿಗೆ ಹಲವು ಬಾರಿ ಪೆಟ್ರೋಲ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಭಾರತದಲ್ಲಿ ಈಗಾಗಲೇ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 100 ರ ಗಡಿ ದಾಟಿದೆ.

ಒಂದು ಕೆ.ಜಿ ಮಾಂಸ ಖರೀದಿಸುವವರಿಗೆ ಸಿಗಲಿದೆ ಒಂದು ಲೀಟರ್ ಉಚಿತ ಪೆಟ್ರೋಲ್

ವಿಶ್ವದಲ್ಲೇ ಪೆಟ್ರೋಲ್ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುವ ದೇಶಗಳಲ್ಲಿ ಭಾರತವೂ ಒಂದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುವ ಹೆಚ್ಚು ತೆರಿಗೆಯಿಂದಾಗಿ ಭಾರತದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ.

ಒಂದು ಕೆ.ಜಿ ಮಾಂಸ ಖರೀದಿಸುವವರಿಗೆ ಸಿಗಲಿದೆ ಒಂದು ಲೀಟರ್ ಉಚಿತ ಪೆಟ್ರೋಲ್

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಆಗಿದ್ದರೂ ಭಾರತದಲ್ಲಿ ಅದರ ಲಾಭ ವಾಹನ ಸವಾರರಿಗೆ ದೊರೆಯುತ್ತಿಲ್ಲ. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವಂತೆ ವಾಹನ ಸವಾರರು ಸರ್ಕಾರಗಳನ್ನು ಒತ್ತಾಯಿಸುತ್ತಿದ್ದಾರೆ.

ಒಂದು ಕೆ.ಜಿ ಮಾಂಸ ಖರೀದಿಸುವವರಿಗೆ ಸಿಗಲಿದೆ ಒಂದು ಲೀಟರ್ ಉಚಿತ ಪೆಟ್ರೋಲ್

ಪೆಟ್ರೋಲ್, ಡೀಸೆಲ್ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಯೊಳಗೆ ತರುವಂತೆ ವಾಹನ ಸವಾರರು ಒತ್ತಾಯಿಸುತ್ತಿದ್ದಾರೆ. ಆದರೆ ವಿವಿಧ ರಾಜ್ಯ ಸರ್ಕಾರಗಳು ಪೆಟ್ರೋಲ್ಹಾಗೂ ಡೀಸೆಲ್ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಯೊಳಗೆ ತರಲು ನಿರಾಕರಿಸುತ್ತಿವೆ.

ಒಂದು ಕೆ.ಜಿ ಮಾಂಸ ಖರೀದಿಸುವವರಿಗೆ ಸಿಗಲಿದೆ ಒಂದು ಲೀಟರ್ ಉಚಿತ ಪೆಟ್ರೋಲ್

ಪೆಟ್ರೋಲ್, ಡೀಸೆಲ್ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಯೊಳಗೆ ತರುವುದರಿಂದ ಆದಾಯ ಕುಸಿಯುತ್ತದೆ ಎಂಬುದು ಸರ್ಕಾರಗಳ ಆತಂಕಕ್ಕೆ ಕಾರಣವಾಗಿದೆ. ತೆರಿಗೆ ಕಡಿಮೆಯಾಗದ ಕಾರಣ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಪಾರಾಗಲು ವಾಹನ ಸವಾರರು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಒಲವು ತೋರುತ್ತಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಹಲವು ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ವಿವಿಧ ಕೊಡುಗೆಗಳನ್ನು ನೀಡುತ್ತಿವೆ.

ಒಂದು ಕೆ.ಜಿ ಮಾಂಸ ಖರೀದಿಸುವವರಿಗೆ ಸಿಗಲಿದೆ ಒಂದು ಲೀಟರ್ ಉಚಿತ ಪೆಟ್ರೋಲ್

ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ, ರಸ್ತೆ ತೆರಿಗೆಯಿಂದ ವಿನಾಯಿತಿ ಹಾಗೂ ನೋಂದಣಿ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತಿದೆ. ಇದರಿಂದ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುವ ನಿರೀಕ್ಷೆಗಳಿವೆ.

ಮೊದಲ ನಾಲ್ಕು ಚಿತ್ರಗಳ ಕೃಪೆ: ನ್ಯೂಸ್ 18 ತಮಿಳು, ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Customers will get one liter free petrol if they buy one kg meat. Read in Kannada.
Story first published: Thursday, July 29, 2021, 14:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X