ರೇಸ್ ಕಾನ್ಸೆಪ್ಟ್‌ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಾರುತಿ ಜೆನ್ ಕಾರು

ಮಾರುತಿ ಸುಜುಕಿ ದೇಶಿಯ ಮಾರುಕಟ್ಟೆಯಲ್ಲಿ ಅತಿ ದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಮಾರುತಿ ಸುಜುಕಿ ಕಂಪನಿಯು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹಲವು ವಿಧದ ಮಾದರಿಗಳನ್ನು ಮಾರಾಟಗೊಳಿಸುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ಮಾದರಿಗಳು ಬಹುಜನಪ್ರಿಯತೆಯನ್ನು ಗಳಿಸಿದೆ.

ರೇಸ್ ಕಾನ್ಸೆಪ್ಟ್‌ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಾರುತಿ ಜೆನ್ ಕಾರು

ಮಾರುತಿ ಸುಜುಕಿಯು ಸಣ್ಣ ಜೆನ್ ಕಾರನ್ನು ಮಾರಾಟ ಮಾಡುತ್ತಿದ್ದರು. ಈ ಜೆನ್ ಫ್ಯಾಮಿಲಿ ಹ್ಯಾಚ್‌ಬ್ಯಾಕ್ ಅನ್ನು 1993 ರಲ್ಲಿ ಮೊದಲಿಗೆ ಬಿಡುಗಡೆಗೊಳಿಸಿದ್ದರು. ಮಾರುತಿ 800 ನಂತಹ ಕಾರುಗಳೊಂದಿಗೆ ಹೋಲಿಸಿದರೆ ಇದು ಹೆಚ್ಚು ಮಾರ್ಡನ್ ವಿನ್ಯಾಸವನ್ನು ಹೊಂದಿತ್ತು. ವರ್ಷಗಳಲ್ಲಿ ಮಾರುತಿ ಈ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದರು. ಮೊದಲ ಜನರೇಷನ್ ಮಾರುತಿ ಸುಜುಕಿ ಜೆನ್ ಉತ್ತಮ ಬೇಡಿಕೆಯೊಂದಿಗೆ ಮಾರಾಟವಾಗಿತ್ತು.

ರೇಸ್ ಕಾನ್ಸೆಪ್ಟ್‌ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಾರುತಿ ಜೆನ್ ಕಾರು

ಉತ್ತಮ ಕಾರ್ಯಕ್ಷಮತೆಗಾಗಿ ಅನೇಕರು ಅದನ್ನು ಖರೀದಿಸಿದ್ದಾರೆ. ಈ ಜನಪ್ರಿಯ ಮಾರುತಿ ಜೆನ್ ಕಾರು 130 ಬಿಎಚ್‌ಪಿ ಪವರ್ ಉತ್ಪಾದಿಸುವಂತೆ ಮಾಡಿಫೈಗೊಳಿಸಿದ ಉದಾಹರಣೆ ಇಲ್ಲಿದೆ. ಈ ಮಾಡಿಫೈ ಕಾರಿನ ವಿಡಿಯೋವನ್ನು ರೆವೊಕಿಡ್ ವ್ಲಾಗ್ಸ್ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ರೇಸ್ ಕಾನ್ಸೆಪ್ಟ್‌ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಾರುತಿ ಜೆನ್ ಕಾರು

ಈ ಜೆನ್ ಕಾರನ್ನು ರೇಸ್ ಕಾನ್ಸೆಪ್ಟ್‌ನಲ್ಲಿ ಮಾಡಿಫೈಗೊಳಿಸಿದ್ದಾರೆ. ಸಾಮಾನ್ಯ ಮಾರುತಿ ಸುಜುಕಿ ಜೆನ್ ಕಾರಿನಲ್ಲಿ ಪೆಟ್ರೋಲ್ 993 ಸಿಸಿ ಎಂಜಿನ್ ಅನ್ನು ಹೊಂದಿದೆ. ಈ ಮಾಡಿಫೈಗೊಂಡ 2002ರ ಜೆನ್ ಕಾರಿನಲ್ಲಿ 993 ಸಿಸಿ ಎಂಜಿನ್ ಅನ್ನು ಬದಲಾಯಿಸಿ 1.6 ಲೀಟರ್ ಜಿ16ಬಿ ಎಂಜಿನ್ ಅನ್ನು ಅಳವಡಿಸಲಾಗಿದೆ.

ರೇಸ್ ಕಾನ್ಸೆಪ್ಟ್‌ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಾರುತಿ ಜೆನ್ ಕಾರು

ಇದು ಹಳೆಯ ಮಾರುತಿ ಬಲೆನೊ ಸೆಡಾನ್‌ನಲ್ಲಿ ಕಂಡುಬರುವ ಎಂಜಿನ್ ಆಗಿದೆ. ರ್ಯಕ್ಷಮತೆಯನ್ನು ಸುಧಾರಿಸಲು ಇದು ಸಹಾಯ ಮಾಡುತ್ತದೆ. ಇದು ಹಂತ 3 ಹೆಡರ್ ಅಪ್‌ಗ್ರೇಡ್, ಅಪ್‌ಸೈಜ್ಡ್ ಥ್ರೊಟಲ್ ಬಾಡಿ, ಸೈಡ್ ಎಕ್ಸಿಟ್ ಎಕ್ಸಾಸ್ಟ್ ಸಿಸ್ಟಮ್, ಬಿಎಂಡಬ್ಲ್ಯು ಏರ್ ಇಂಟೆಕ್, ಲೈಟ್‌ವೈಟ್ ಫ್ಲೈ ವೀಲ್, ಅಪ್‌ಗ್ರೇಡ್ ಆಯಿಲ್ ಪಂಪ್, ಅಪ್‌ಸೈಜ್ಡ್ ಇಂಧನ ಪಂಪ್, ಎಕ್ಸಿಡಿ ಕ್ಲಚ್ ಅಪ್‌ಗ್ರೇಡ್ ಮತ್ತು ಇನ್ನೂ ಹೆಚ್ಚಿನದನ್ನು ಪಡೆಯುತ್ತದೆ.

ರೇಸ್ ಕಾನ್ಸೆಪ್ಟ್‌ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಾರುತಿ ಜೆನ್ ಕಾರು

ಇನ್ನು ಜಿ16ಬಿ ಇಸಿಯುನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಈ ಎಲ್ಲಾ ಮಾರ್ಪಾಡುಗಳ ನಂತರ, ಕಾರು 130 ಬಿಹೆಚ್‍ಪಿ ಗಿಂತ ಹೆಚ್ಚು ಪವರ್ ಉತ್ಪಾದಿಸುತ್ತದೆ. ವಾಹನದ ತೂಕವನ್ನು ಕಡಿಮೆ ಮಾಡಲುಮೂಲ ಲೋಹದ ಬಾನೆಟ್‌ನ್ನು ಕಡಿಮೆ ತೂಕದ ಫೈಬರ್ ಸಂಯೋಜಿತ ವಸ್ತುಗಳಿಂದ ತಯಾರಿಸಿದ ಕಸ್ಟಮ್ ಬಿಲ್ಡ್ ಯುನಿಟ್ ಗಳೊಂದಿಗೆ ಬದಲಾಯಿಸಲಾಗಿದೆ.

ರೇಸ್ ಕಾನ್ಸೆಪ್ಟ್‌ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಾರುತಿ ಜೆನ್ ಕಾರು

ಎರಡು ಹುಡ್ ಲ್ಯಾಚ್‌ಗಳನ್ನು ಬಳಸಿ ಹುಡ್ ಅನ್ನು ಲಾಕ್ ಮಾಡಲಾಗಿದೆ. ಇನ್ನು ಹೊರಭಾಗದಲ್ಲಿ, ಕಾರು ಮೂಲ ಬಂಪರ್, ಹೆಡ್‌ಲ್ಯಾಂಪ್‌ಗಳು ಮತ್ತು ಗ್ರಿಲ್ ಅನ್ನು ಉಳಿಸಿಕೊಂಡಿದೆ. ಇದು ಮರೂನ್ ಮತ್ತು ಬ್ಲ್ಯಾಕ್ ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿದೆ.

ರೇಸ್ ಕಾನ್ಸೆಪ್ಟ್‌ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಾರುತಿ ಜೆನ್ ಕಾರು

ಈ ಕಾರಿನ ಸೈಡ್ ಪ್ರೊಫೈಲ್‌ಗೆ ನಲ್ಲಿ 14 ಇಂಚು ಅಗಲದ ಆಫ್ಟರ್ ಮಾರ್ಕೆಟ್ ಅಲಾಯ್ ವೀಲ್ಸ್ ಟೈರ್‌ಗಳಲ್ಲಿದೆ. ಅಗಲವಾದ ಟೈರ್‌ಗಳಿಗೆ ಅನುಗುಣವಾಗಿ ಫೆಂಡರ್‌ಗಳನ್ನು ಸ್ವಲ್ಪ ಕಸ್ಟಮೈಸ್ ಮಾಡಲಾಗಿದೆ. ಕಾರು ಈಗ ಸ್ಟಾಕ್ ಆವೃತ್ತಿಗಿಂತ ಸಾಕಷ್ಟು ಕಡಿಮೆಯಾಗಿದೆ.

ಈಗ ರೇಸ್ ಕಾನ್ಸೆಪ್ಟ್‌ಗಳಿಂದ ಹೊಂದಾಣಿಕೆ ಮಾಡಬಹುದಾದ ಕಾಯಿಲ್‌ಓವರ್‌ಗಳನ್ನು ಬಳಸಲಾಗಿದೆ. ಈ ಮಾಡಿಫೈ ಜೆನ್ ಕಾರಿನ ಬ್ರೇಕ್‌ಗಳನ್ನು ಸಹ ನವೀಕರಿಸಲಾಗಿದೆ. ತೂಕ ಇಳಿಸುವಿಕೆಯ ಭಾಗವಾಗಿ, ಹಿಂದಿನ ಸೀಟುಗಳನ್ನು ತೆಗೆದುಹಾಕಲಾಗಿದೆ ಮತ್ತು ಎಸಿಯನ್ನು ಸಹ ತೆಗೆದುಹಾಕಲಾಗಿದೆ.

ರೇಸ್ ಕಾನ್ಸೆಪ್ಟ್‌ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಾರುತಿ ಜೆನ್ ಕಾರು

ಕಾರಿನ ಡ್ಯಾಶ್‌ಬೋರ್ಡ್ ಸ್ಟಾಕ್‌ನಂತೆಯೇ ಉಳಿದಿದೆ. ಇದು ಈಗ ಕಸ್ಟಮ್ ಸ್ಟೀಯರಿಂಗ್ ವ್ಹೀಲ್ ಮತ್ತು ಟ್ಯಾಕೋಮೀಟರ್ ಪಡೆಯುತ್ತದೆ. ಜೆನ್ ಕಾರನ್ನು ಮಾಡಿಫೈಗೊಳಿಸಲು 9 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದಿದ್ದಾರೆ. ಬಹುಶಃ ಇದು ದೇಶದ ಅತಿ ವೇಗದ ಮಾರುತಿ ಜೆನ್ ಕಾರು ಆಗಿರಬಹುದು.

Image Courtesy: Revokid Vlogs

Most Read Articles

Kannada
English summary
This modified Maruti Suzuki Zen Producing Over 130 Bhp. Read In Kannada.
Story first published: Monday, July 19, 2021, 17:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X