ಗೋವಾ ಪ್ರವಾಸದಲ್ಲಿ ಎದುರಾಗಬಹುದಾದ ಅಪಾಯಗಳಿವು

ವಿಶ್ವದ್ಯಾಂತವಿರುವ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಗೋವಾ ಸಹ ಸೇರಿದೆ. ಭಾರತದ ಹಲವು ಯುವಕರು ಸಹ ಗೋವಾ ಪ್ರವಾಸಕ್ಕೆ ಹೋಗಲು ಬಯಸುತ್ತಾರೆ. ಜೀವನದಲ್ಲಿ ಒಮ್ಮೆಯಾದರೂ ಗೋವಾಗೆ ಪ್ರವಾಸಕ್ಕೆ ಹೋಗಬೇಕೆಂದು ಬಯಸುವ ಸಾಕಷ್ಟು ಜನರು ಇಲ್ಲಿದ್ದಾರೆ.

ಗೋವಾ ಪ್ರವಾಸದಲ್ಲಿ ಎದುರಾಗಬಹುದಾದ ಅಪಾಯಗಳಿವು

ಕರೋನಾ ವೈರಸ್ ಆರ್ಭಟದಿಂದಾಗಿ ಗೋವಾದ ಪ್ರವಾಸೋದ್ಯಮ ತತ್ತರಿಸಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ ಡೌನ್ ನಿಂದ ವಿನಾಯಿತಿ ನೀಡಿದ ನಂತರ ಗೋವಾದ ಪ್ರವಾಸೋದ್ಯಮ ಮತ್ತೆ ಗರಿಗೆದರಿ ಕೊಂಡಿದೆ. ಸಾಕಷ್ಟು ಜನರು ಗೋವಾ ಪ್ರವಾಸ ಕೈಗೊಳ್ಳಲು ಮುಂದಾಗುತ್ತಿದ್ದಾರೆ.

ಗೋವಾ ಪ್ರವಾಸದಲ್ಲಿ ಎದುರಾಗಬಹುದಾದ ಅಪಾಯಗಳಿವು

ಗೋವಾದಲ್ಲಿ ಭೇಟಿ ನೀಡಬೇಕಾದ ಸ್ಥಳಗಳು, ಕಡಲತೀರಗಳು ಹಾಗೂ ಪಾರ್ಟಿಗಳು ನಡೆಯುವ ಸ್ಥಳಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಜೊತೆಗೆ ಗೋವಾದಲ್ಲಿ ಅಪಾಯವನ್ನುಂಟು ಮಾಡುವ ಹಲವಾರು ಸಂಗತಿಗಳಿವೆ. ಆ ಅಪಾಯಗಳ ಬಗೆಗಿನ ಸಂಗತಿಗಳನ್ನು ಈ ಲೇಖನದಲ್ಲಿ ನೋಡೋಣ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಗೋವಾ ಪ್ರವಾಸದಲ್ಲಿ ಎದುರಾಗಬಹುದಾದ ಅಪಾಯಗಳಿವು

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಗೋವಾದಲ್ಲಿ ಪ್ರತಿ 1 ಲಕ್ಷ ಜನರಿಗೆ 217.7 ಅಪಘಾತಗಳು ಸಂಭವಿಸುತ್ತವೆ. ಗೋವಾದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ವಿವಿಧ ಕಾರಣಗಳಿವೆ.

ಗೋವಾ ಪ್ರವಾಸದಲ್ಲಿ ಎದುರಾಗಬಹುದಾದ ಅಪಾಯಗಳಿವು

ಪ್ರವಾಸಿಗರ ಮನಸ್ಥಿತಿ:

ಗೋವಾಕ್ಕೆ ಬಂದ ಕೂಡಲೇ ಜನರ ಮನಸ್ಥಿತಿಯೂ ಬಹುತೇಕ ಬದಲಾಗುತ್ತದೆ. ಅನೇಕ ಜನರು ಮಿತಿ ಮೀರಿ ಮಜಾ ಮಾಡಲು ಮುಂದಾಗುತ್ತಾರೆ. ಆದರೆ ನೆನಪಿಡ ಬೇಕಾದ ಸಂಗತಿಯೆಂದರೆ ಗೋವಾದ ಬಹುತೇಕ ರಸ್ತೆಗಳು ಕಿರಿದಾಗಿವೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಗೋವಾ ಪ್ರವಾಸದಲ್ಲಿ ಎದುರಾಗಬಹುದಾದ ಅಪಾಯಗಳಿವು

ಜೊತೆಗೆ ಸಾಕಷ್ಟು ರಸ್ತೆಗಳು ಅಂಕುಡೋಂಕಾಗಿವೆ. ಇವುಗಳ ಬಗ್ಗೆ ಅಂದಾಜು ಇರದ ಪ್ರವಾಸಿಗರು ರಸ್ತೆ ಅಪಘಾತಗಳಿಗೆ ಸಿಲುಕುವ ಸಾಧ್ಯತೆಗಳಿರುತ್ತವೆ.

ಗೋವಾ ಪ್ರವಾಸದಲ್ಲಿ ಎದುರಾಗಬಹುದಾದ ಅಪಾಯಗಳಿವು

ಬಾಡಿಗೆ ವಾಹನಗಳು:

ಕಾರು, ದ್ವಿಚಕ್ರ ವಾಹನ ಸೇರಿದಂತೆ ಹಲವಾರು ವಾಹನಗಳು ಗೋವಾದಲ್ಲಿ ಸುಲಭವಾಗಿ ಬಾಡಿಗೆಗೆ ದೊರೆಯುತ್ತವೆ. ಆದರೆ ಬಹುತೇಕ ವಾಹನಗಳನ್ನು ಸರಿಯಾಗಿ ನಿರ್ವಹಿಸುವುದಿಲ್ಲ ಎಂಬ ಆರೋಪಗಳಿವೆ. ಈ ವಾಹನಗಳನ್ನು ಎಚ್ಚರಿಕೆಯಿಂದ ಚಾಲನೆ ಮಾಡಬೇಕು. ಆದರೆ ಸಾಕಷ್ಟು ಅನುಭವವಿಲ್ಲದ ಹಾಗೂ ತರಬೇತಿ ಇಲ್ಲದ ಜನರು ಈ ವಾಹನಗಳನ್ನು ಚಾಲನೆ ಮಾಡುತ್ತಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕಿಕ್ಕಿರಿದ ನಗರ ರಸ್ತೆಗಳಲ್ಲಿ ಹಲವು ವರ್ಷಗಳ ಕಾಲ ನಿರಂತರವಾಗಿ ಕಾರುಗಳನ್ನು ಚಾಲನೆ ಮಾಡುತ್ತಿದ್ದರೂ ಗೋವಾಗೆ ಬಂದ ನಂತರ ವಿಪರೀತವಾಗಿ ಕುಡಿದು ವಾಹನ ಚಾಲನೆ ಮಾಡುವುದರಿಂದ ಇತರರ ಪ್ರಾಣಕ್ಕೂ ಸಂಚಕಾರ ಬರುತ್ತದೆ.

ಸ್ಥಳೀಯರೊಂದಿಗೆ ಸ್ಪರ್ಧೆ ಸಲ್ಲ:

ಗೋವಾದಲ್ಲಿ ಯಾರಾದರೂ ನಿಮ್ಮ ವಾಹನವನ್ನು ಓವರ್ ಟೇಕ್ ಮಾಡಿದರೆ, ತಕ್ಷಣ ಅವರನ್ನು ಹಿಂದಿಕ್ಕಲು ರೇಸಿಂಗ್ ಮನಸ್ಥಿತಿಗೆ ಹೋಗಬೇಡಿ. ಅವರು ಸ್ಥಳೀಯರಾದ ಕಾರಣ ಅವರಿಗೆ ಅಲ್ಲಿನ ರಸ್ತೆಗಳ ಬಗ್ಗೆ ಹೆಚ್ಚು ಅರಿವಿರುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಇದನ್ನು ಅರಿತುಕೊಳ್ಳದೆ, ಕೆಲವು ಪ್ರವಾಸಿಗರು ಸ್ಥಳೀಯರೊಂದಿಗೆ ಸ್ಪ್ರರ್ಧೆಗಿಳಿಯುತ್ತಿದ್ದಾರೆ. ಇದರಲ್ಲಿರುವ ಅಪಾಯವನ್ನು ಅರಿತುಕೊಳ್ಳದಿದ್ದರೆ ಅಪಘಾತಗಳಿಗೆ ಸಿಲುಕುವ ಸಾಧ್ಯತೆಗಳು ಹೆಚ್ಚು.

ಕೆಟ್ಟ ರಸ್ತೆಗಳು:

ಗೋವಾದ ರಸ್ತೆಗಳು ಸಾಮಾನ್ಯವಾಗಿ ಉತ್ತಮವಾಗಿವೆ. ಆದರೆ ದೇಶದ ಇತರ ಭಾಗಗಳಂತೆ, ಗೋವಾದಲ್ಲಿಯೂ ಕೆಟ್ಟ ರಸ್ತೆಗಳಿವೆ. ಹೆಚ್ಚಿನ ಪ್ರವಾಸಿಗರಿಗೆ ಅಂತಹ ರಸ್ತೆಗಳ ಬಗ್ಗೆ ತಿಳಿದಿಲ್ಲವಾದ ಕಾರಣ ಕುಡಿದು ವಾಹನ ಚಾಲನೆ ಮಾಡಿ, ಅಪಘಾತಕ್ಕೀಡಾಗುತ್ತಿದ್ದಾರೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಗೋವಾ ಪ್ರವಾಸದಲ್ಲಿ ಎದುರಾಗಬಹುದಾದ ಅಪಾಯಗಳಿವು

ಗೋವಾದ ಕೆಲವು ಸ್ಥಳಗಳಲ್ಲಿ ಮರದ ಕೊಂಬೆಗಳು ಮುರಿದುಕೊಂಡು ರಸ್ತೆಯ ಮೇಲೆ ಬೀಳುವ ಸಾಧ್ಯತೆಗಳು ಹೆಚ್ಚು. ಇವುಗಳ ಬಗ್ಗೆ ಗಮನ ಹರಿಸದೆ ಮದ್ಯದ ಅಮಲಿನಲ್ಲಿ ಅತಿ ವೇಗವಾಗಿ ಪ್ರಯಾಣಿಸುವುದು ಅಪಾಯಕಾರಿ. ಕಾರ್ ಟಾಕ್ ವರದಿ.

Most Read Articles

Kannada
English summary
Dangerous things that can happen in Goa tour. Read in Kannada.
Story first published: Thursday, October 1, 2020, 12:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X