ಹೊಸ ವಿನ್ಯಾಸದ ಬಿಜಿನೆಸ್ ಜೆಟ್ ಅನಾವರಣಗೊಳಿಸಿದ ಡಸಾಲ್ಟ್ ಏವಿಯೇಷನ್

ಡಸಾಲ್ಟ್ ಏವಿಯೇಷನ್ ​​ಹೆಚ್ಚಿನ ದೂರ ಹಾರಬಲ್ಲ ಸಾಮರ್ಥ್ಯವಿರುವ ವೈಯಕ್ತಿಕ ಬಳಕೆಯ ವಿಮಾನವನ್ನು ಅನಾವರಣಗೊಳಿಸಿದೆ. ಈ ಹೊಸ ವಿಮಾನದ ವಿನ್ಯಾಸವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಹೊಸ ವಿನ್ಯಾಸದ ಬಿಜಿನೆಸ್ ಜೆಟ್ ಅನಾವರಣಗೊಳಿಸಿದ ಡಸಾಲ್ಟ್ ಏವಿಯೇಷನ್

ಡಸಾಲ್ಟ್ ಏವಿಯೇಷನ್ ಈ ವಿಮಾನದ ವಿನ್ಯಾಸ ಹಾಗೂ ವಿವರಗಳನ್ನು ಮಾರುಕಟ್ಟೆ ಸ್ಪರ್ಧೆಯನ್ನು ಗಮನದಲ್ಲಿಟ್ಟುಕೊಂಡು ಬಿಡುಗಡೆಗೊಳಿಸಿದೆ. ಫಾಲ್ಕನ್ 10 ಎಕ್ಸ್ ಎಂಬ ಹೆಸರಿನ ಈ ಹೊಸ ವಿಮಾನವು ದೊಡ್ಡ ಕ್ಯಾಬಿನ್ ಹಾಗೂ ದೀರ್ಘ ದೂರ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನವನ್ನು ಶ್ರೀಮಂತರ ನಿರೀಕ್ಷೆಗಳಿಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.

ಹೊಸ ವಿನ್ಯಾಸದ ಬಿಜಿನೆಸ್ ಜೆಟ್ ಅನಾವರಣಗೊಳಿಸಿದ ಡಸಾಲ್ಟ್ ಏವಿಯೇಷನ್

ಈ ಹೊಸ ಫಾಲ್ಕನ್ 10 ಎಕ್ಸ್ ವಿಮಾನವು ಎರಡು ರೋಲ್ಸ್ ರಾಯ್ಸ್ ಪರ್ಲ್ 10 ಎಕ್ಸ್ ಎಂಜಿನ್'ಗಳನ್ನು ಹೊಂದಿದೆ. ಈ ಎಂಜಿನ್ ಗರಿಷ್ಠ 18,000 ಪೌಂಡ್ ಒತ್ತಡವನ್ನು ನೀಡುತ್ತದೆ ಎಂದು ಹೇಳಲಾಗಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಹೊಸ ವಿನ್ಯಾಸದ ಬಿಜಿನೆಸ್ ಜೆಟ್ ಅನಾವರಣಗೊಳಿಸಿದ ಡಸಾಲ್ಟ್ ಏವಿಯೇಷನ್

ಈ ವಿಮಾನದಲ್ಲಿರುವ ಫ್ಯೂಯಲ್ ಟ್ಯಾಂಕ್'ನಲ್ಲಿ ಪೂರ್ತಿಯಾಗಿ ಇಂಧನ ತುಂಬಿದಾಗ ಈ ವಿಮಾನವು 13,900 ಕಿ.ಮೀಗಳವರೆಗೆ ಚಲಿಸಬಲ್ಲದು. ಉದಾಹರಣೆಗೆ ಫ್ರಾನ್ಸ್'ನ ಪ್ಯಾರಿಸ್'ನಿಂದ ವಾಯುವ್ಯ ಆಸ್ಟ್ರೇಲಿಯಾಗೆ 15 ಗಂಟೆಗಳಲ್ಲಿ ತಡೆರಹಿತವಾಗಿ ಚಲಿಸಬಲ್ಲದು.

ಹೊಸ ವಿನ್ಯಾಸದ ಬಿಜಿನೆಸ್ ಜೆಟ್ ಅನಾವರಣಗೊಳಿಸಿದ ಡಸಾಲ್ಟ್ ಏವಿಯೇಷನ್

ಕಮರ್ಷಿಯಲ್ ಜೆಟ್ ವಿಮಾನಗಳಿಗಾಗಿ ದೊಡ್ಡ ಕ್ಯಾಬಿನ್ ಸಾಮರ್ಥ್ಯದೊಂದಿಗೆ ವಿಮಾನವನ್ನು ನಿರ್ಮಿಸಲಾಗಿದೆ. ಈ ವಿಮಾನವು 9.1 ಅಡಿ ಅಗಲ ಹಾಗೂ 6.6 ಅಡಿ ಎತ್ತರದ ಕ್ಯಾಬಿನ್ ಅನ್ನು ಹೊಂದಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಹೊಸ ವಿನ್ಯಾಸದ ಬಿಜಿನೆಸ್ ಜೆಟ್ ಅನಾವರಣಗೊಳಿಸಿದ ಡಸಾಲ್ಟ್ ಏವಿಯೇಷನ್

ಗ್ರಾಹಕರು ಇಷ್ಟ ಪಡುವ ರೀತಿಯಲ್ಲಿ ಇಂಟಿರಿಯರ್ ಅನ್ನು ವಿವಿಧ ರೀತಿಯಲ್ಲಿ ಕಾನ್ಫಿಗರ್ ಮಾಡಬಹುದು. ಈ ವಿಮಾನದಲ್ಲಿ ಉತ್ತಮ ಗುಣಮಟ್ಟದ ಆರಾಮದಾಯಕ ಸೀಟ್ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲಾಗಿದೆ.

ಹೊಸ ವಿನ್ಯಾಸದ ಬಿಜಿನೆಸ್ ಜೆಟ್ ಅನಾವರಣಗೊಳಿಸಿದ ಡಸಾಲ್ಟ್ ಏವಿಯೇಷನ್

ವ್ಯವಹಾರದ ಸಲುವಾಗಿ ವಿದೇಶಗಳಿಗೆ ಸಂಚರಿಸುವ ಉದ್ಯಮಿಗಳಿಗೆ ಈ ಜೆಟ್ ಸೂಕ್ತವಾಗಿದೆ. ಈ ವಿಮಾನವನ್ನು ಕಡಿಮೆ ವೈಬ್ರೇಷನ್ ಮೂಲಕ ಹೆಚ್ಚು ಆರಾಮದಾಯಕ ಪ್ರಯಾಣದ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಡಸಾಲ್ಟ್ ಏವಿಯೇಷನ್ ​​ಹೇಳಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಹೊಸ ವಿನ್ಯಾಸದ ಬಿಜಿನೆಸ್ ಜೆಟ್ ಅನಾವರಣಗೊಳಿಸಿದ ಡಸಾಲ್ಟ್ ಏವಿಯೇಷನ್

ಈ ವಿಮಾನದಲ್ಲಿ 38 ಕಿಟಕಿಗಳನ್ನು ನೀಡಲಾಗಿದ್ದು, ಈಗಿರುವ ಫಾಲ್ಕನ್ 8 ಎಕ್ಸ್ ವಿಮಾನಕ್ಕಿಂತ 50%ನಷ್ಟು ದೊಡ್ಡದಾಗಿದೆ ಎಂದು ವರದಿಯಾಗಿದೆ. ಡಸಾಲ್ಟ್ ಏವಿಯೇಷನ್ ಪ್ರಕಾರ ಈ ವಿಮಾನವನ್ನು ಸಣ್ಣ ವಿಮಾನ ನಿಲ್ದಾಣಗಳಿಂದ ಕಾರ್ಯನಿರ್ವಹಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಹೊಸ ವಿನ್ಯಾಸದ ಬಿಜಿನೆಸ್ ಜೆಟ್ ಅನಾವರಣಗೊಳಿಸಿದ ಡಸಾಲ್ಟ್ ಏವಿಯೇಷನ್

ಈ ವಿಮಾನದ ತೂಕವು ಕಾರ್ಬನ್ ಕಾಂಪೋಸಿಟ್ ಕಾಂಪೋನೆಂಟ್'ಗಳಿಂದ ಕಡಿಮೆಯಾಗಿದೆ. ಈ ವಿಮಾನದ ಕಾಕ್‌ಪಿಟ್ ಅನ್ನು ಆಧುನಿಕ ತಾಂತ್ರಿಕ ವೈಶಿಷ್ಟ್ಯಗಳೊಂದಿಗೆ ನಿರ್ಮಿಸಲಾಗಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಹೊಸ ವಿನ್ಯಾಸದ ಬಿಜಿನೆಸ್ ಜೆಟ್ ಅನಾವರಣಗೊಳಿಸಿದ ಡಸಾಲ್ಟ್ ಏವಿಯೇಷನ್

ಪೈಲಟ್‌ಗಳು ಈ ವಿಮಾನವನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು. ಪೈಲಟ್ ಸೀಟ್'ಗಳನ್ನು ಹಾಸಿಗೆಗಳಂತೆ ಸುಲಭವಾಗಿ ಬದಲಿಸಬಹುದು. ಒಬ್ಬ ಪೈಲಟ್ ವಿಮಾನವನ್ನು ಆಪರೇಟ್ ಮಾಡುವಾಗ ಮತ್ತೊಬ್ಬ ಪೈಲಟ್ ವಿಶ್ರಾಂತಿ ಪಡೆಯಬಹುದು.

ಹೊಸ ವಿನ್ಯಾಸದ ಬಿಜಿನೆಸ್ ಜೆಟ್ ಅನಾವರಣಗೊಳಿಸಿದ ಡಸಾಲ್ಟ್ ಏವಿಯೇಷನ್

ಈ ವಿಮಾನವು ಮಿಲಿಟರಿ ವಿಮಾನಗಳಲ್ಲಿರುವಂತೆ ಎರಡೂ ಎಂಜಿನ್‌ಗಳನ್ನು ಒಂದೇ ಥ್ರೊಟಲ್ ನಿಯಂತ್ರಣದೊಂದಿಗೆ ನಿರ್ವಹಿಸುವ ತಂತ್ರಜ್ಞಾನವನ್ನು ಹೊಂದಿದೆ. ಈ ವಿಮಾನದ ಎಂಜಿನ್'ಗಳು ಹಾಗೂ ಕಂಟ್ರೋಲ್ ಯುನಿಟ್ ಸೆಟ್ ಕೀಗೆ ಆಟೋಮ್ಯಾಟಿಕ್ ಆಗಿ ಅಡ್ಜಸ್ಟ್ ಆಗುತ್ತವೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಹೊಸ ವಿನ್ಯಾಸದ ಬಿಜಿನೆಸ್ ಜೆಟ್ ಅನಾವರಣಗೊಳಿಸಿದ ಡಸಾಲ್ಟ್ ಏವಿಯೇಷನ್

ಈ ವಿಮಾನವು ಅತ್ಯುತ್ತಮವಾದ ಸುರಕ್ಷತಾ ತಂತ್ರಜ್ಞಾನಗಳನ್ನು ಹೊಂದಿದೆ. ಇದರಿಂದ ವಿಮಾನವು ತುರ್ತು ಸಂದರ್ಭದಲ್ಲಿ ಸುಲಭವಾಗಿ ಲ್ಯಾಂಡಿಂಗ್ಮಾಡಬಹುದು. ಈ ವಿಮಾನವು 2025ರಿಂದ ಮಾರಾಟಕ್ಕೆ ಬರಲಿದೆ.

Most Read Articles

Kannada
English summary
Dassault Aviation unveils new business jet with new design. Read in Kannada.
Story first published: Wednesday, May 12, 2021, 12:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X