ಡಿಸಿ ಡಿಸೈನ್ 10 ಅವಿಶ್ವಸನೀಯ ವಿನ್ಯಾಸಗಳು

By Nagaraja

ದೇಶದ ಅತಿ ದೊಡ್ಡ ಕಸ್ಟಮೈಸ್ಡ್ ವಿನ್ಯಾಸ ಸಂಸ್ಥೆ ಡಿಸಿ ಡಿಸೈನ್ ವಾಹನಗಳನ್ನು ಮಾರ್ಪಾಡುಗೊಳಿಸುವುದರಲ್ಲಿ ಹೆಸರು ಮಾಡಿದೆ. ಜನಪ್ರಿಯ ವಿನ್ಯಾಸಗಾರ ದಿಲೀಪ್ ಛಾಬ್ರಿಯಾ ಡಿಸಿ ಡಿಸೈನ್ ಸಂಸ್ಥೆಯ ಸೂತ್ರಧಾರಿಯಾಗಿದ್ದಾರೆ.

ಡಿಸಿ ಡಿಸೈನ್ ಗರಡಿಯಲ್ಲಿ ಪಳಗಿ ಬಂದ ಮಾರುತಿ ಸ್ವಿಫ್ಟ್‌ - ಮುಂದಕ್ಕೆ ಓದಿ

ದೇಶದ ಹಲವು ಜನಪ್ರಿಯ ಮಾದರಿಗಳ ಜೊತೆಗೆ ಸೆಲೆಬ್ರಿಟಿಗಳ ವಾಹನವನ್ನು ವಿನ್ಯಾಸಗೊಳಿಸಿರುವ ಡಿಸಿ ಡಿಸೈನ್ ಭಾರತದಲ್ಲಷ್ಟೇ ಅಲ್ಲದೆ ವಿದೇಶದಲ್ಲೂ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಪರ-ವಿರೋಧಗಳ ವಿಮರ್ಶೆಗಳ ನಡುವೆಯೂ ಡಿಸಿ ಡಿಸೈನ್ ತನ್ನ ಜೈತ್ರಯಾತ್ರೆಯನ್ನು ಮುಂದುವರಿಸಿದೆ. ಪ್ರಸ್ತುತ ಲೇಖನದಲ್ಲಿ ಡಿಸಿ ಡಿಸೈನ್ ವಿನ್ಯಾಸಗೊಳಿಸಿರುವ 10 ಅವಿಶ್ವಸನೀಯ ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

ಹಿಂದೂಸ್ತಾನ್ ಅಂಬಾಸಿಡರ್

ಹಿಂದೂಸ್ತಾನ್ ಅಂಬಾಸಿಡರ್

ಭಾರತೀಯ ರಸ್ತೆಗಳ ರಾಜ ಹಿಂದೂಸ್ತಾನ್ ಅಂಬಾಸಿಡರ್ ಕಾಲ ಕಳೆದು ಹೋಗಿದೆ ಅಂದರೆ ತಪ್ಪಾದಿತು. ಆಧುನಿಕ ಕಾರುಗಳ ವಿನ್ಯಾಸದ ಜೊತೆ ಸ್ಪರ್ಧಿಸಲು ಅಂಬಿಗೆ ಸಾಧ್ಯವಿಲ್ಲವೆಂಬ ಅಪವಾದವಿದೆ. ಹಾಗಿದ್ದರೆ ಈ ಚಿತ್ರವನ್ನೊಮ್ಮೆ ನೋಡಿದ ಮೇಲೆ ನಿಮ್ಮ ಊಹೆ ಸಂಪೂರ್ಣವಾಗಿ ಬದಲಾಯಿಸಬೇಕಾಗಿತ್ತು.

ಅಂಬಾಸಿಡರ್

ಅಂಬಾಸಿಡರ್

ಅಂಬಿರಾಡ್ ಎಂಬ ಅರ್ಬನ್ ಕಾರನ್ನು ಡಿಸಿ ಡಿಸೈನ್ ಪರಿಚಯಪಡಿಸುತ್ತಿದ್ದು, ಗರಿಷ್ಠ ಮಾರ್ಪಾಡುಗಳನ್ನು ತರಲಾಗಿದೆ. ಅಷ್ಟಕ್ಕೂ ಇದನ್ನು ನೋಡಿದ ಮೇಲಾದರೂ ಅಂಬಾಸಿಡರ್ ಪುನರ್ಜನ್ಮ ಸಾಧ್ಯವೇ ಎಂಬುದನ್ನು ಕಾದು ನೋಡಬೇಕಾಗಿದೆ.

ಅಂಬಾಸಿಡರ್

ಅಂಬಾಸಿಡರ್

ಅಂಬಾಸಿಡರ್ ಕಾರಿನಲ್ಲಿ ಭವಿಷ್ಯತ್ತಿನ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಕಾರಿನೊಳಗೆ ವಿಶೇಷ ವರ್ಣಮಯ ಬೆಳಕಿನ ಸೇವೆ ಹಾಗೂ ಗರಿಷ್ಠ ವೈಶಿಷ್ಟ್ಯಗಳನ್ನು ಕೊಡಲಾಗಿದೆ.

ವಿಐಪಿ ಅಂಬಿ

ವಿಐಪಿ ಅಂಬಿ

ಅಂಬಾಸಿಡರ್ ರಾಜಕಾರಣಿ ಮತ್ತು ಸರ್ಕಾರ ಪ್ರತಿನಿಧಿಗಳ ಪಾಲಿಗೆ ಈಗಲೂ ನೆಚ್ಚಿನ ಗಾಡಿಯೆನಿಸಿಕೊಂಡಿದೆ. ಇದನ್ನೆ ಗಮನದಲ್ಲಿಟ್ಟುಕೊಂಡಿರುವ ಡಿಸಿ ಡಿಸೈನ್, ವಿಐಪಿ ಅಂಬಾಸಿಡರ್ ಕಾರಿನ ಕಾನ್ಸೆಪ್ಟ್ ರಚಿಸಿದೆ.

ವಿಐಪಿ ಅಂಬಿ

ವಿಐಪಿ ಅಂಬಿ

ವಿಶೇಷ ಬಾಡಿ ಜೊತೆ ಐಕಾನಿಕ್ ಮಿನಿ ಕೂಪರ್ ಕಾರಿನ ಹೆಡ್ ಲ್ಯಾಂಪ್ ಮುಂತಾದ ವ್ಯವಸ್ಥೆಗಳನ್ನು ಕೊಡಲಾಗಿದೆ. ಕಾರಿನೊಳಗೆ ಮರ ಮತ್ತು ಲೆಥರ್ ಸ್ಪರ್ಶ ಮತ್ತು ಲ್ಯಾಪ್ ಟಾಪ್ ಗಳಿನ್ನಿಡಲು ಸ್ಥಳಾವಕಾಶ ಕೊಡಲಾಗಿದೆ.

ಮಾರುತಿ ಸ್ವಿಫ್ಟ್

ಮಾರುತಿ ಸ್ವಿಫ್ಟ್

ಆಗಲೇ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲಾಗಿದೆ. ಮುಂಭಾಗದಲ್ಲಿ ಎಲ್ ಇಡಿ ಲೈಟ್ ಕಾರಿಗೆ ಐಷಾರಾಮಿ ನೋಟವನ್ನು ಪ್ರದಾನ ಮಾಡುತ್ತದೆ.

ಸ್ವಿಫ್ಟ್

ಸ್ವಿಫ್ಟ್

ಪ್ರಸ್ತುತ ಸ್ವಿಫ್ಟ್ ಕಾರನ್ನು ನೋಡಿದಾಗ ಪ್ರೀಮಿಯಂ ಕಾರಿನಂತೆ ಭಾಸವಾಗಲಿದೆ. ಕಾರಿನೊಳಗೆ ಬಿಳಿ,ಕಪ್ಪು ಮತ್ತು ಕೆಂಪು ವರ್ಣಗಳ ಮಿಶ್ರಣವನ್ನು ಕಾಣಬಹುದಾಗಿದೆ.

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಇಕೊಸ್ಪೋರ್ಟ್ ಹೀಗೂ ಪರಿವರ್ತನೆಯಾಗುತ್ತಾ ? ಎಂಬುದು ಡಿಸಿ ಡಿಸೈನ್ ವಿನ್ಯಾಸದ ಬಳಿಕವಷ್ಟೇ ಬಯಲಾಗಿದೆ. ಆಫ್ ರೋಡ್ ದೈತ್ಯ ವಾಹನಕ್ಕೆ ತಾನೇನೂ ಕಮ್ಮಿಯೇನಲ್ಲ ಎಂಬುದನ್ನು ನಿರೂಪಿಸುವ ರಸ್ತೆ ಸಾನಿಧ್ಯವನ್ನು ಕೊಡಲಾಗಿದೆ.

ಇಕೊಸ್ಪೋರ್ಟ್

ಇಕೊಸ್ಪೋರ್ಟ್

ಹೊರಗಡೆ ಎಲ್ ಇಡಿ ಬೆಳಕಿನ ಸೇವೆ, ಬೃಹತ್ ಗ್ರಿಲ್ ಮತ್ತು ಕಾರಿನೊಳಗೆ ಡ್ಯುಯಲ್ ಟೋನ್ ಹೋದಿಕೆಗಳು ಮತ್ತು ಲೈಟಿಂಗ್ಸ್ ಪ್ರಮುಖ ಆಕರ್ಷಣೆಯಾಗಿದೆ.

ರೆನೊ ಡಸ್ಟರ್

ರೆನೊ ಡಸ್ಟರ್

ನಿಮಗೆ ನೈಜ ಡಸ್ಟರ್ ಇಷ್ಟವಾಗಿಲ್ಲವಾದರೆ ಡಿಸಿ ಡಿಸೈನ್ ವಿನ್ಯಾಸಿತ ಡಸ್ಟರ್ ಕಾರಿಗೆ ಮೊರೆ ಹೋಗಬಹುದಾಗಿದೆ. ಇದು ಕಾರಿಗೆ ಎಕ್ಸ್ ಕ್ಲೂಟಿವ್ ನಿಲುವನ್ನು ನೀಡುತ್ತಿದೆ.

ಡಸ್ಟರ್

ಡಸ್ಟರ್

ರೆನೊ ಡಸ್ಟರ್ ಗ್ರಿಲ್ ಬದಿಯಲ್ಲಿಯೇ ಎಲ್ ಇಡಿ ಬೆಳಕಿನ ಸೇವೆ, ಕೆಳಗಡೆ ಚತುರ್ಭುಜ ಆಕೃತಿಯೊಳಗೆ ಫಾಗ್ ಲ್ಯಾಂಪ್ ಮತ್ತು ಇಂಡಿಕೇಟರ್ ಗಳನ್ನು ಕೊಡಲಾಗಿದೆ. ಕಾರಿನೊಳಗೆ ಐಷಾರಾಮಿ ಸೀಟುಗಳು ಆರಾಮದಾಯಕ ಪ್ರಯಾಣವನ್ನು ಖಾತ್ರಿಪಡಿಸಲಿದೆ.

ಫೋಕ್ಸ್ ವ್ಯಾಗನ್ ಪೊಲೊ ಮಿಡ್ ನೈಟ್

ಫೋಕ್ಸ್ ವ್ಯಾಗನ್ ಪೊಲೊ ಮಿಡ್ ನೈಟ್

ಮೊದಲ ನೋಟಕ್ಕೆ ಇದು ಫೋಕ್ಸ್ ವ್ಯಾಗನ್ ಪೊಲೊ ಕಾರು ಹೌದೇ ಎಂದು ಸಂದೇಹ ಮೂಡಿಸುವ ರೀತಿಯಲ್ಲಿ ಇದರ ವಿನ್ಯಾಸವನ್ನು ರಚಿಸಲಾಗಿದೆ. ಇಲ್ಲಿ ಪೊಲೊ ಮಿಡ್ ನೈಟ್ ಕಾರಿಗೆ ಶಕ್ತಿಶಾಲಿ ವಿನ್ಯಾಸ ಕೊಡಲಾಗಿದೆ.

ಫೋಕ್ಸ್ ವ್ಯಾಗನ್ ಪೊಲೊ ಮಿಡ್ ನೈಟ್

ಫೋಕ್ಸ್ ವ್ಯಾಗನ್ ಪೊಲೊ ಮಿಡ್ ನೈಟ್

ಹಿಂಭಾಗದ ವಿನ್ಯಾಸವು ಮತ್ತಷ್ಟು ಕುತೂಹಲದಾಯಕವೆನಿಸುತ್ತಿದೆ. ವಿಂಡ್ ಶೀಲ್ಡ್ ಕೆಳಗಡೆಯಿರುವ ಫೋಕ್ಸ್ ವ್ಯಾಗನ್ ಲಾಂಛನದ ಎರಡು ಬದಿಗಳಿಂದ ಉದ್ದವಾಗಿ ಹಾದು ಹೋಗುವ ಟೈಲ್ ಲ್ಯಾಂಪ್ ಗಳು ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ. ಅಲ್ಲದೆ ಎರಡು ಎಕ್ಸಾಸ್ಟ್ ಕೊಳವೆಗಳನ್ನು ಕಾಣಬಹುದಾಗಿದೆ.

 ಟೊಯೊಟಾ ಇನ್ನೋವಾ

ಟೊಯೊಟಾ ಇನ್ನೋವಾ

ಭಾರತದ ಮಗದೊಂದು ಜನಪ್ರಿಯ ಕಾರು ಇನ್ನೋವಾ ಮೇಲೂ ಡಿಸಿ ಡಿಸೈನ್ ತನ್ನ ಜಾದೂ ಮೆರೆದಿದೆ. ಇಲ್ಲಿ ಹೆಚ್ಚಿನ ಬದಲಾವಣೆಗಳಿಗೂ ಮುಂದಾಗದಿದ್ದರೂ ಹೆಚ್ಚಿನ ಕ್ರೋಮ್ ಸ್ಪರ್ಶವನ್ನು ಕಾಣಬಹುದಾಗಿದೆ.

ಇನ್ನೋವಾ

ಇನ್ನೋವಾ

ಆದರೆ ಕಾರಿನೊಳಗೊಮ್ಮೆ ಇಣುಕಿ ನೋಡಿದಾಗ ಸಂಪೂರ್ಣವಾಗಿಯೂ ಐಷಾರಾಮಿ ಕಾರಿನಂತೆ ಭಾಸವಾಗಲಿದೆ. ಇಲ್ಲಿ ಡಿಸಿ ಡಿಸೈನ್ ಪ್ರಯತ್ನವನ್ನು ಮೆಚ್ಚಲೇಬೇಕು.

ಮಹೀಂದ್ರ ಥಾರ್

ಮಹೀಂದ್ರ ಥಾರ್

ದೃಢಕಾಯದ ಮಹೀಂದ್ರ ಥಾರ್ ವಿಂಟೇಜ್ ಕಾರಿನ ಲುಕ್ ಪಡೆದ್ದಲ್ಲಿ ಹೇಗಿರಬಹುದು? ಉದ್ದವಾದ ಮೂಗಿನಂತಿರುವ ಮುಂಭಾಗ ಮತ್ತು ತೆರೆದ ಮೇಲ್ಚಾವಣಿ ಮತ್ತು ಹೆಚ್ಚಿನ ಕ್ರೋಮ್ ಆಯ್ಕೆಗಳನ್ನು ಕೊಡಲಾಗಿದೆ.

ಥಾರ್

ಥಾರ್

ಪರಿಪೂರ್ಣ ಆಫ್ ರೋಡ್ ವಾಹನದ ರೂಪದಲ್ಲಿ ಥಾರ್ ವಿನ್ಯಾಸಗೊಳಿಸಲಾಗಿದೆ. ಹಿಂಭಾಗದಲ್ಲಿ ಹೆಚ್ಚುವರಿ ಚಕ್ರವನ್ನು ಕೊಡಲಾಗಿದೆ.

 ಮಾರುತಿ ಎರ್ಟಿಗಾ

ಮಾರುತಿ ಎರ್ಟಿಗಾ

ಸುಜುಕಿ ಆರ್3 ಎಂಬುದಾಗಿಯೂ ಅರಿಯಲ್ಪಡುವ ಮಾರುತಿ ಎರ್ಟಿಗಾ ಕಾರಿನಲ್ಲಿ ಪಾರದರ್ಶಕ ರೂಫ್ ಗಳಿಗೆ ಆದ್ಯತೆ ಕೊಡಲಾಗಿದೆ. ಅಲ್ಲದೆ ಹೊರಮೈಯಲ್ಲಿ ವಿಶೇಷ ಬಣ್ಣವನ್ನು ಬಳಿಯಲಾಗಿದೆ.

ಎರ್ಟಿಗಾ

ಎರ್ಟಿಗಾ

ಕಾರಿನೊಳಗೆ ವಿಶೇಷ ಲೈಟಿಂಗ್ಸ್, ಲೆಥರ್ ಹೋದಿಕೆ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳು ಕಂಡುಬರಲಿದೆ.

ಟೊಯೊಟಾ ಫಾರ್ಚ್ಯುನರ್

ಟೊಯೊಟಾ ಫಾರ್ಚ್ಯುನರ್

ಟೊಯೊಟಾ ಫಾರ್ಚ್ಯುನರ್ ಕ್ರೀಡಾ ಬಳಕೆಯ ವಾಹನದಲ್ಲೂ ತನ್ನಿ ಸಿಗ್ನೇಚರ್ ಶೈಲಿಯ ವಿನ್ಯಾಸವನ್ನು ಡಿಸಿ ಡಿಸೈನ್ ಕಾಪಾಡಿಕೊಂಡಿದೆ. ಮುಂಭಾಗದಲ್ಲಿ ತೆರೆದಂತಹ ಫ್ರಂಟ್ ಗ್ರಿಲ್, ರೂಫ್ ರೈಲ್ ಮತ್ತು ಬದಿಯಲ್ಲಿ ದಪ್ಪವಾದ ವೀಲ್ ಆರ್ಚ್ ಕಂಡುಬರಲಿದೆ.

ಫಾರ್ಚ್ಯುನರ್

ಫಾರ್ಚ್ಯುನರ್

ಹೆಚ್ಚು ಪ್ರಕಾಶಮಾನವಾದ ನೀಲಿ ವರ್ಣದ ಒಳಮೈ ಮತ್ತು ಗರಿಷ್ಠ ತಂತ್ರಜ್ಞಾನಗಳ ಸೇವೆಯೂ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮುಖಾಂತರ ಕೋಟಿ ಬೆಲೆ ಬಾಳುವ ಕಾರಿಗೆ ಸಮವಾಗಿ ಬೆಳೆದು ನಿಂತಿದೆ.

ಇವನ್ನೂ ಓದಿ...

ಕಿಂಗ್ ಖಾನ್ ಪಾಲಾಯ್ತು ಬಾಲಿವುಡ್‌ನ ದುಬಾರಿ ವ್ಯಾನಿಟಿ ಬಸ್

ಇವನ್ನೂ ಓದಿ...

ದೇಶದ ಚೊಚ್ಚಲ ಕ್ರೀಡಾ ಕಾರಿನ ಬಗ್ಗೆ ನಿಮಗೆ ಗೊತ್ತಿರದ 10 ಸತ್ಯಗಳು!

Most Read Articles

Kannada
English summary
Some Of These DC Modified Cars Will Take Your Breath Away
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X