Just In
- 1 min ago ಬೈಕಿನಂತೆ ಮೈಲೇಜ್ ಕೊಡೋದ್ರಿಂದ ಈ ಹ್ಯುಂಡೈ ಕಾರಿನ ಮಾಲೀಕರು ಫುಲ್ ಖುಷ್
- 4 min ago ಮಹೀಂದ್ರಾ ಪ್ರೀಯರಿಗೆ ಭಾರೀ ಸಿಹಿಸುದ್ದಿ: ಗಲ್ಲಿಗಲ್ಲಿಯಲ್ಲಿ ಶುರುವಾಗುತ್ತಾ ಸ್ಕಾರ್ಪಿಯೋ ಹವಾ!
- 1 hr ago ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡುತ್ತವೆ!
- 3 hrs ago Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
Don't Miss!
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Movies ಹಳೇ ಟ್ವೀಟ್ ಹಾಕಿ ರಕ್ಷಿತ್ ಶೆಟ್ಟಿ ಹೇಳಿದ್ದೇನು? 'ರಿಚರ್ಡ್ ಆಂಟನಿ' ಕಥೆ ಏನಾಯ್ತು?
- News Kolar Lok Sabha elections: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 'ಸ್ಥಳೀಯ' V/s 'ಹೊರಗಿನವ' ಫೈಟ್!
- Finance bangalore royal challengers ತಂಡದಿಂದ ನಗರದ ಎರಡು ಕೆರೆಗಳ ಪುನರುಜ್ಜೀವನ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಡುರಸ್ತೆಯಲ್ಲೆ ಫಿಲ್ಮಿ ಸ್ಟೈಲ್ನಲ್ಲಿ ಬೈಕಿನ ಮೇಲೆ ಪ್ರೇಮಿಗಳ ಲವ್ವಿ-ಡವ್ವಿ
ಸಾಧಾರಣವಾಗಿ ಪ್ರೇಮಿಗಳ ಲವ್ವಿ ಡವ್ವಿ ಸೀನ್ಗಳನ್ನು ಪಾರ್ಕ್ಗಳಲ್ಲಿ, ಮತ್ತು ಕಾಲಿ ಇರುವ ಜಾಗದಲ್ಲಿ ಹಾಗು ಸಿನಿಮಾಗಳಲ್ಲಿ ಮಾತ್ರ ನೋಡುತ್ತಿರುತ್ತೆವೆ. ಆದ್ರೆ ದೆಹಲಿಯಲ್ಲಿನ ಈ ಪ್ರೇಮಿಗಳು ಮಾತ್ರ ಒಂದು ಸ್ಟೆಪ್ ಮುಂದಕ್ಕೆ ಹೋಗಿ ಬಾಲಿವುಡ್ ಫಿಲ್ಮಿ ಶೈಲಿಯಲ್ಲಿ ಇರುವ ಹಾಗೆ ಚಲಿಸುತ್ತಿರುವ ಬೈಕಿನ ಮೇಲೆಯೆ ಲವ್ವಿ ಡವ್ವಿ ಶುರು ಮಾಡಿದ್ದಾರೆ.
ಈ ಘಟನೆಯು ದೆಹಲಿಯಲ್ಲಿ ನಡೆದಿದ್ದು, ಟ್ರಾಫಿಕ್ ಭರಿತ ರಸ್ತೆಯಲ್ಲಿ ಬಜಾಜ್ ಪಲ್ಸರ್ ಬೈಕಿನ ಮೇಲೆ ಲವ್ವಿ ಡವ್ವಿ ಶುರು ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸಧ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋವನ್ನು ಗಮನಿಸಿದ್ದಲ್ಲಿ ಯುವಕ ಗಾಡಿ ಚಾಲನೆ ಮಾಡುತಿದ್ದು, ಯುವತಿಯು ಫ್ಯುಯಲ್ ಟ್ಯಾಂಕ್ನ ಮೇಲೆ ಕೂತು, ಆತನಿಗೆ ಮುಖ ಮಾದಿ ತಬ್ಬಿಕೊಂಡು ಕೂತಿರುವುದನ್ನು ನೀವು ನೋಡಬಹುದಾಗಿದೆ.
|
ಹಾಗೆಯೆ ಈ ದೃಷ್ಯವನ್ನು ಗಮನಿಸಿದ್ದಲ್ಲಿ, ಯುವತಿಯು ಕುಡಿದ ಅಮಲಿನಲ್ಲಿ ಆತನನ್ನು ಗಟ್ಟಿಯಾಗಿ ತಬ್ಬಿಕೊಂಡು, ಆ ಯುವಕನಿಗೆ ಚುಂಬಿಸುತ್ತಿದ್ದಳೆ ಎಂದು ಕೆಲವರ ಅಭಿಪ್ರಾಯ. ಇದಕ್ಕೆ ತಕ್ಕ ಹಾಗೆ ಯುವಕನು ಕೂಡಾ ಟ್ರಾಫಿಕ್ ಭರಿತ ರಸ್ತೆಯಲ್ಲಿ ವಾಹನ ಚಲಾಯಿಸುತ್ತಿದ್ದೇನೆ ಎಂದು ಅರಿಯದೆ ಇಷ್ಟ ಬಂದ ಹಾಗೆ ಬೈಕ್ ರೈಡಿಂಗ್ ಮಾಡುತ್ತಿದ್ದಾನೆ.
ಅಸಲಿಗೆ ಈ ದೃಷ್ಯವು ಬಾಲಿವುಡ್ನ 'ಗುಲಾಮ್' ಎಂಬ ಸಿನಿಮಾದಲ್ಲಿ ಬರುವ 'ಜಾದು ಹೈ ಜಾದು' ಎಂಬ ಹಾಡಿನಲ್ಲಿ ಆಮಿರ್ ಖಾನ್ ಹಾಗು ರಾಣಿ ಮುಖರ್ಜಿ ಇಂತಹದ್ದೆ ದೃಷ್ಯವನ್ನು ಮಾಡಲಾಗಿದ್ದು, ಇದರಿಂದ ಈ ದೆಹಲಿಯ ಪ್ರೇಮಿಗಳು ಪ್ರೇರಣೆ ಹೊಂದ್ದಿದ್ದಾರೆಯೊ ಎಂದು ಕೆಲವರ ಅನುಮಾನ.
ವಿಡಿಯೋವನ್ನು ಗಮನಿಸಿದ್ದಲ್ಲಿ, ಯುವಕನ ಬೈಕ್ ರೈಡಿಂಗ್ ವೇಳೆ ಆತನ ಕಾಲುಗಳು ರಸ್ತೆಯನ್ನು ತಾಕುತಿದ್ದು, ಸುಮಾರು 30 ರಿಂದ 50ರ ವರೆಗಿನ ಸ್ಪೀಡ್ನಲ್ಲಿ ಚಲಿಸುತ್ತಿದ್ದಾರೆಂದು ಅರಿಯಬಹುದು. ಹಾಗೆಯೆ ಮತ್ತೊಂದು ಮುಖ್ಯವಾದ ವಿಶಾರ ಏನಪ್ಪಾ ಅಂದ್ರೆ ಅವರಿಬ್ಬರೂ ಸಹ ಹೆಲ್ಮೆಟ್ ಧರಿಸದೆಯೆ ಇರುವುದನು ನೀವು ನೋಡಬಹುದು.
ವೈರಲ್ ಆಗಿರುವ ಈ ವಿಡಿಯೋನಲ್ಲಿ ಕಂಡು ಬಂದ ಆ ಪ್ರೇಮಿಗಳನ್ನು ಕಂಡು ಹಿಡಿಯುವ ಕಾರ್ಯದಲ್ಲಿ ಪೊಲೀಸರಿದ್ದು, ನಡು ರಸ್ತೆಯಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾ ಹೀಗೆ ವರ್ತಿಸುವುದು ಸರಿಯಲ್ಲವೆಂದು ನಮ್ಮ ಭಾವನೆ. ಹಾಗೆಯೆ ಚಾಲಕನ ಡ್ರೈವಿಂಗ್ ಲೈಸೆನ್ಸ್ ಅನ್ನು ಸಹ ರದ್ದು ಮಾಡಲಾಗುವುದು ಎಂದು ಮಾಹಿತಿಗಳು ಹೇಳುತ್ತಿದೆ.
Source: HGS Dhaliwal IPS
ಈ ಹತ್ತು ಸಾಮಾನ್ಯ ಕಾರಣಗಳು ಒಂದು ದುರಂತಕ್ಕೆ ಕಾರಣವಾಗಬಲ್ಲವು...
ನಮ್ಮ ದೈನಂದಿನ ಜೀವನದ ಸವಾರಿಯಲ್ಲಿ ಸಮಯ ಪ್ರಜ್ಞೆ ಮೆರೆದರೆ ಸಾಧ್ಯವಾದಷ್ಟು ಅಪಘಾತಗಳನ್ನು ತಪ್ಪಿಸಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಬಹಳ ಏಕಾಗ್ರತೆಯಿಂದ ವಾಹನ ಚಾಲನೆ ಮಾಡಬೇಕಾಗುತ್ತದೆ. ಹಾಗಿದ್ದರೆ ಮಾನವನ ಎಡವಟ್ಟಿನಿಂದ ಪದೇ ಪದೇ ಆಗುವ ಬೈಕ್ ಅಪಘಾತಕ್ಕಿರುವ 10 ಸಾಮಾನ್ಯ ಕಾರಣಗಳು ಯಾವುವು? ಇಲ್ಲಿ ಚರ್ಚಿಸೋಣ..
10. 'ಯು' ತಿರುವು
ನಗರ ಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯವಾಗಿದೆ. ಎಲ್ಲಿ ಯು ತಿರುವು ನಿಷೇಧಿಸಲಾಗಿದೆಯೇ ಅಂತಹ ಪ್ರದೇಶಗಳಲ್ಲಿ ಅರಿತೋ ಅರಿಯದೆಯೋ ಬೈಕ್ ಸವಾರರು ಯು ಟರ್ನ್ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಪರಿಣಾಮ ತಾವೇ ಅಪಘಾತವನ್ನು ಕೈ ಬೀಸಿ ಕರೆಯುತ್ತಾರೆ.ಇದರಿಂದ ಇತರ ವಾಹನಗಳಿಗೂ ತೊಂದರೆ ಎದುರಾಗುತ್ತದೆ ಎಂಬುದನ್ನು ಮರೆಯಬಾರದು. ಹಾಗಾಗಿ ಸಂಚಾರ ಚಿಹ್ನೆಗಳನ್ನು ಅಚ್ಚುಕಟ್ಟಾಗಿ ಪಾಲಿಸಲು ಮರೆಯದಿರಿ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ಟ್ರಾಫಿಕ್ ನಿಯಮಗಳನ್ನು ವಾಹನ ಸುಗಮ ಸಂಚಾರಕ್ಕಾಗಿ ತಾನೇ ಮಾಡಿರೋದು?
09. ಮೊಬೈಲ್ ಸಂಭಾಷಣೆ
ಇನ್ನು ಕೆಲವು ಅತಿ ಬುದ್ಧಿವಂತ ಚಾಲಕರು ಒಂದು ಕೈಯಲ್ಲಿ ಮೊಬೈಲ್ ಹಿಡ್ಕೊಂಡು ಮಾತನಾಡುತ್ತಾ ಮಗದೊಂದು ಕೈಯಲ್ಲಿ ಹ್ಯಾಂಡಲ್ ಹಿಡಿದುಕೊಂಡು ಹಾಯಾಗಿ ಸಾಗುತ್ತಾರೆ. ಎಚ್ಚರ! ನಿಮ್ಮನ್ನು ನೀವೇ ಪರಿಣತ ಚಾಲಕರು ಎಂದು ಅಂದುಕೊಂಡಿದ್ದರೆ ಎಲ್ಲ ದಿನವೂ ರಸ್ತೆ ಪರಿಸ್ಥಿತಿ ಸಮಾನವಾಗಿರುವುದಿಲ್ಲ ಎಂಬುದನ್ನು ಮರೆಯಬೇಡಿ! ಇದು ಚಾಲನೆ ವೇಳೆ ಕಿವಿಗೆ ಹೆಡ್ ಫೋನ್ ಇಟ್ಟುಕೊಂಡು ಹಾಡು ಕೇಳುವ ಸವಾರರಿಗೂ ಅನ್ವಯವಾಗುತ್ತದೆ.
08. ಪರಿಸ್ಥಿತಿ ನಿರ್ಣಯಿಸಲು ವಿಫಲ
ಕೆಲವೊಮ್ಮೆ ಏನಾಗುತ್ತದೆಯೆಂದರೆ ತಿರುವು ಮುಂತಾದ ಪ್ರದೇಶವನ್ನು ತಲುಪಿದಾಗ ವಾಹನ ಸವಾರರು ಪರಿಸ್ಥಿತಿಯನ್ನು ನಿರ್ಣಯಿಸಲು ವಿಫಲವಾಗುತ್ತಾರೆ. ಉದಾಹರಣೆಗೆ ಕಡಿದಾದ ತಿರುವುಗಳಲ್ಲಿ ವೇಗವಾಗಿ ಚಲಿಸುವ ಬೈಕ್ ಸವಾರರು ಬೈಕ್ ನಿಯಂತ್ರಣ ಕಳೆದುಕೊಳ್ಳುತ್ತಾರೆ. ಅಷ್ಟಾಗುವಾಗ ಕಾಲ ಮಿಂಚಿ ಹೋಗಿರುತ್ತದೆ.
07. ಬಾಗುವಿಕೆ
ಬೈಕ್ ಸವಾರರು ನಡೆಸುವ ಚಿಕ್ಕ ಚಿಕ್ಕ ಎಡವಟ್ಟುಗಳಿಗೆ ಇದು ಒಂದು ಕಾರಣವಾಗಿದೆ. ಬೈಕ್ ಗಳನ್ನು ಕಡಿದಾಗಿ ಬಾಗಿಸುವುದರಿಂದ ಚಕ್ರವು ರಸ್ತೆ ಜೊತೆಗಿನ ಸೆಳೆತವನ್ನು ಕಳೆದುಕೊಳ್ಳುವ ಭೀತಿಯಿದ್ದು, ಇದರಿಂದಾಗಿ ಅಪಘಾತ ಸಂಭವಿಸಲಿದೆ.
06. ಓವರ್ ಸ್ಪೀಡ್
ನಿಮಗೆಲ್ಲರಿಗೂ ತಿಳಿದಿರುವಂತೆಯೇ ಬೆಲ್ಲು ಬ್ರೇಕ್ ಇಲ್ಲದೆ ಅನಿಯಮಿತ ವೇಗದಲ್ಲಿ ಚಲಿಸುವುದರಿಂದಲೂ ಅಪಘಾತ ಘಟಿಸಬಹುದು.
05. ಆಯಾಸ, ಮಾನಸಿಕ ಖಿನ್ನತೆ
ಆಯಾಸ ಅಥವಾ ಮಾನಸಿಕ ಖಿನ್ನತೆಯಲ್ಲಿ ಸಾಧ್ಯವಾದಷ್ಟು ಬೈಕ್ ಸವಾರಿಯನ್ನು ತಪ್ಪಿಸಿದರೆ ಒಳಿತು. ಇದರಿಂದ ನಿಮ್ಮ ಏಕಾಗ್ರತೆಗೆ ಭಂಗವುಂಟಾಗಲಿದ್ದು, ಅಪಘಾತ ಪರಿಸ್ಥಿತಿ ಎದುರಾಗಲಿದೆ.
04. ಸ್ಟಂಟ್, ವೀಲಿಂಗ್ ಶೋ
ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಅಥವಾ ವೀಲಿಂಗ್ ನಡೆಸುವ ಪೋಲಿ ಹುಡುಗರಿಂದಲೂ ಅಪಘಾತ ಘಟಿಸಲಿದೆ.
MOST READ:ಲಾರಿ ಗುದ್ದಿದ ನಂತರ ಟಾಟಾ ಹ್ಯಾರಿಯರ್ ಕಾರಿನ ಪರಿಸ್ಥಿತಿ ಏನಾಗಿದೆ ನೀವೆ ನೋಡಿ..
03. ಡ್ರಿಂಕ್ ಆ್ಯಂಡ್ ಡ್ರೈವ್
ಪಾನಮತ್ತರಾಗಿ ವಾಹನ ಚಲಾಯಿಸುವುದು ಅತಿ ಸಾಮಾನ್ಯ ಅಪಘಾತ ಕಾರಣಗಳಲ್ಲಿ ಒಂದಾಗಿದೆ. ಸಮಾಜದ ಒಂದು ವಿಭಾಗದ ಪ್ರಜ್ಞಾವಂತ ವರ್ಗವೇ ಇದನ್ನು ಮಾಡುತ್ತಿರುವುದು ಖೇದಕರ ಸಂಗತಿ.
02. ನಿರ್ವಹಣೆ ಕೊರತೆ
ನಿಮ್ಮ ಗಾಡಿಯ ನಿರ್ವಹಣೆಯನ್ನು ಸರಿಯಾಗಿಟ್ಟುಕೊಳ್ಳುವುದು ನಿಮ್ಮ ಕರ್ತವ್ಯ. ಉದಾಹರಣೆಗೆ ಇಂಡಿಕೇಟರ್, ಲೈಟ್ಸ್, ಚಕ್ರ, ಹೆಡ್ ಲ್ಯಾಂಪ್, ಎಂಜಿನ್ ಆಯಿಲ್, ಗಾಳಿ ಒತ್ತಡ, ಕೂಲಂಡ್, ಬ್ರೇಕ್, ಹಾರ್ನ್ ಮುಂತಾದ ಭಾಗಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಎಂಬುದನ್ನು ನೋಡಿಕೊಳ್ಳಬೇಕಾಗುತ್ತದೆ.
MOST READ: ಟಾಟಾ ನೆಕ್ಸಾನ್ ಕಾರು ಚಾಲಕನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು
01. ಇತರೆ ಕಾರಣಗಳು
ಇತರೆ ಹಲವಾರು ಕಾರಣಗಳಿಂದಾಗಿ ಅಪಘಾತಗಳು ಸಂಭವಿಸಬಹುದು. ಮಣ್ಣಿನ ರಸ್ತೆ ಅಥವಾ ಮಳೆಯಿಂದಾಗಿ ಒದ್ದೆಯಾದ ರಸ್ತೆಗಳಲ್ಲಿ ವೇಗವಾಗಿ ಚಲಿಸುವುದರಿಂದಲೂ ಬೈಕ್ ಸ್ಕಿಡ್ ಆಗುವ ಸಂಭವ ಜಾಸ್ತಿಯಿರುತ್ತದೆ.