Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಜಧಾನಿಯಲ್ಲಿ ಗಸ್ತು ನಿರ್ವಹಣೆಗಾಗಿ ನಿಯೋಜನೆಗೊಂಡ ಹೈ ಟೆಕ್ ಪೊಲೀಸ್ ಬಸ್..!
ದೇಶಾದ್ಯಂತ ಲೋಕಸಭಾ ಚುನಾವಣೆಯ ಕಾವು ರಂಗೇರುತ್ತಿದ್ದು, ಚುನಾವಣೆಯ ಹೊತ್ತಿನಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ಸಂಭವಿಸದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದೇ ಒಂದು ದೊಡ್ಡ ಸವಾಲಿನ ಕೆಲಸ ಅಂದ್ರೆ ತಪ್ಪಾಗುವುದಿಲ್ಲ. ಅದರಲ್ಲೂ ಪುಲ್ವಾಮಾ ದಾಳಿಯ ನಂತರ ದೇಶದ ಗಡಿಪ್ರದೇಶಗಳಲ್ಲಿ ಅಷ್ಟೇ ಅಲ್ಲದೇ ದೇಶದ ಪ್ರಮುಖ ನಗರಗಳಲ್ಲೂ ಬಿಗಿಭದ್ರತೆಯನ್ನು ಕೈಗೊಳ್ಳಲಾಗುತ್ತಿದ್ದು, ಉಗ್ರರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು ಇಡಲಾಗುತ್ತಿದೆ.

ಹೌದು, ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಉಗ್ರರ ದಾಳಿ ಭೀತಿಯಿಂದಾಗಿ ರಾಜಧಾನಿ ದೆಹಲಿ ಸುತ್ತಮತ್ತ ಭಾರೀ ಬಿಗಿ ಭದ್ರತೆ ನಿಯೋಜಿಸಲಾಗುತ್ತಿದೆ. ಹೊರ ರಾಜ್ಯಗಳಿಂದ ದೆಹಲಿ ಪ್ರವೇಶಿಸುವ ವಾಹನಗಳ ಮಾಹಿತಿ ಜೊತೆಗೆ ಪ್ರತಿ ಗಲ್ಲಿ ಗಲ್ಲಿಯ ಮಾಹಿತಿಯನ್ನು ಸಂಗ್ರಹಿಸುತ್ತಿರುವ ಪೊಲೀಸರು, ಉಗ್ರ ಚಟುವಟಿಕೆಗಳಿಗೆ ಯಾವುದೇ ರೀತಿಯ ಆಸ್ಪದ ನೀಡದಂತೆ ಮನ್ನೇಚ್ಚರಿಕೆ ವಹಿಸಿದ್ದಾರೆ. ಜೊತೆಗೆ ಉಗ್ರ ಚಟುವಟಿಕೆಗಳನ್ನು ಪತ್ತೆಹಚ್ಚಲು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದು, ಗಸ್ತು ನಿರ್ವಹಣೆಗಾಗಿ ಹೈ ಟೆಕ್ ಮೊಬೈಲ್ ಕಂಟ್ರೋಲ್ ರೂಂ ಸೌಲಭ್ಯದ ಬಸ್ಗಳನ್ನು ಬಳಕೆ ಮಾಡುತ್ತಿದ್ದಾರೆ.

ಒಂದು ನಿರ್ದಿಷ್ಟ ಪ್ರದೇಶದಲ್ಲಿ ಯಾವುದೇ ರೀತಿಯ ಉಗ್ರ ಚಟುವಟಿಕೆಗಳು ಕಂಡಬಂದಲ್ಲಿ ಮಾಹಿತಿ ಸಂಗ್ರಹಿಸಲು ಈ ವಾಹನವು ಸಾಕಷ್ಟು ಸಹಕಾರಿಯಾಗಲಿದ್ದು, ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಈ ಹೈ ಟೆಕ್ ಬಸ್ ಅನ್ನು ನಿಯೋಜಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಈ ಮೊಬೈಲ್ ಕಂಟ್ರೋಲ್ ರೂಂ ಬಸ್ನಲ್ಲಿ ಭದ್ರತಾ ಕಾರ್ಯಾಚರಣೆಗೆ ಸಹಾಯಕ್ಕಾಗಿ ಕಾನ್ಫರೆನ್ಸ್ ರೂಂ, ಆಪರೇಷನ್ ಸೆಂಟರ್ ಮತ್ತು ಸಂವಹನ ಮಾಧ್ಯಮ ವಿಭಾಗವನ್ನು ಹೊಂದಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ, ಗುಸ್ತುನಿರ್ವಹಣಾ ಸಿಬ್ಬಂದಿ ಮತ್ತು ಸೆಕ್ಯುರಿಟಿ ಎಜೆನ್ಸಿಗಳಿಂದ ಮಾಹಿತಿ ಸಂಗ್ರಹಿಸಲು ಸಹಕಾರಿಯಾಗಿದೆ.

ಪ್ರಮುಖವಾಗಿ ಚುನಾವಣಾ ರ್ಯಾಲಿಗಳು ಮತ್ತು ಬೃಹತ್ ಪ್ರತಿಭಟನೆಗಳ ಸಂದರ್ಭಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ವಹಿಸುವುದು ಒಂದು ಸವಾಲಿನ ವಿಚಾರವಾಗಿದ್ದು, ಮೊಬೈಲ್ ಕಂಟ್ರೊಲ್ ರೂಂ ಮೂಲಕ ಭದ್ರತೆಯನ್ನು ಸಮರ್ಥವಾಗಿ ನಿಭಾಯಿಸಬಹುದಾಗಿದೆ.
MOST READ: ಭದ್ರತೆಗಾಗಿ ಮತ್ತೊಂದು ದುಬಾರಿ ಕಾರು ಖರೀದಿಸಿದ ಉದ್ಯಮಿ ಮುಕೇಶ್ ಅಂಬಾನಿ..!

ಮೊಬೈಲ್ ಕಂಟ್ರೊಲ್ ರೂಂನಲ್ಲಿ ಸಿಸಿಟಿವಿ ದೃಶ್ಯಗಳನ್ನು ವಿಕ್ಷಿಸಲು ದೊಡ್ಡದಾದ ಸ್ಕ್ರೀನ್ಗಳನ್ನು ಹಾಕಲಾಗಿದ್ದು, ಜೊತೆಗೆ ಪೊಲೀಸ್ ಅಧಿಕಾರಿಗಳಿಗಾಗಿ ಕಾನ್ಪರೆನ್ಸ್ ರೂಂ ಮತ್ತು ತತಕ್ಷಣದ ಮಾಹಿತಿ ಸಂಗ್ರಹಿಸುವ ಆಧುನಿಕ ಸೌಲಭ್ಯಗಳು ಈ ವಾಹನದಲ್ಲಿ ಜೋಡಣೆ ಮಾಡಲಾಗಿದೆ.

ಸದ್ಯಕ್ಕೆ ದೆಹಲಿ ಪೊಲೀಸರು ಕೇವಲ ಒಂದು ಮೊಬೈಲ್ ಕಂಟ್ರೋಲ್ ರೂಂ ಬಸ್ ಮಾದರಿಯನ್ನು ಪರೀಕ್ಷಾರ್ಥವಾಗಿ ಬಳಕೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಂತಹ ಬಸ್ಗಳನ್ನು ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳುವುದಾಗಿ ದೆಹಲಿ ಪೊಲೀಸ್ ಕಮೀಷನರ್ ಅಮುಲ್ಯಾ ಪಾಟ್ನಾಯಿಕ್ ಮಾಹಿತಿ ನೀಡಿದ್ದಾರೆ.
MOST READ: ಬೆಂಕಿಯಲ್ಲಿ ಸುಟ್ಟು ಕರಕಲಾದವು ಸಾವಿರಾರು ಕೋಟಿ ಮೌಲ್ಯದ 2 ಸಾವಿರ ಐಷಾರಾಮಿ ಕಾರುಗಳು

ಇನ್ನೊಂದು ವಿಶೇಷ ಅಂದ್ರೆ, ಈ ಮೊಬೈಲ್ ಕಂಟ್ರೋಲ್ ರೂಂ ಬಸ್ ಮಾದರಿಯು ನಮ್ಮ ಬೆಂಗಳೂರಿನಲ್ಲೇ ಸಿದ್ದವಾಗಿದ್ದು, ಮಿಸ್ಟ್ರಾಲ್ ಎನ್ನುವ ಆಟೋಮೊಬೈಲ್ ಬಿಡಿಭಾಗ ಜೋಡಣಾ ಸಂಸ್ಥೆಯು ರೂ. 3.7 ಕೋಟಿಗೆ ಈ ವಾಹನವನ್ನು ಪೊಲೀಸ್ ಇಲಾಖೆಯ ಬೇಡಿಕೆಯೆಂತೆ ವಿನ್ಯಾಸ ಮಾಡಿದೆ.