ನಂಬರ್ ಪ್ಲೇಟ್ ಮರೆ ಮಾಡುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು

ಇತರ ಬಿಡಿ ಭಾಗಗಳಂತೆ ನಂಬರ್ ಪ್ಲೇಟ್ ಗಳು ಸಹ ವಾಹನಗಳ ಪ್ರಮುಖ ಭಾಗಗಳಾಗಿವೆ. ನಂಬರ್ ಪ್ಲೇಟ್ ಗಳ ಆಧಾರದ ಮೇಲೆ ವಾಹನಗಳ ಮಾಲೀಕರನ್ನು ಪತ್ತೆ ಹಚ್ಚಲಾಗುತ್ತದೆ. ಮೋಟಾರು ವಾಹನ ಕಾಯ್ದೆ ಪ್ರಕಾರ ವಾಹನಗಳ ನಂಬರ್ ಪ್ಲೇಟ್ ಗಳು ಸ್ಪಷ್ಟವಾಗಿ ಕಾಣುವಂತಿರಬೇಕು. ನಂಬರ್ ಪ್ಲೇಟ್ ಗಳನ್ನು ಯಾವುದೇ ವಸ್ತುಗಳಿಂದ ಮರೆ ಮಾಡುವಂತಿಲ್ಲ.

ನಂಬರ್ ಪ್ಲೇಟ್ ಮರೆ ಮಾಡುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು

ವಾಹನಗಳ ನಂಬರ್ ಪ್ಲೇಟ್ ಗಳು ಇತರರಿಗೆ ಸ್ಪಷ್ಟವಾಗಿ ಗೋಚರಿಸುತ್ತವೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ. ದೆಹಲಿ ಪೊಲೀಸರು ಈ ನಿಟ್ಟಿನಲ್ಲಿ ಹೊಸ ಕಾರ್ಯಾಚರಣೆ ಆರಂಭಿಸಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಹೂವಿನ ಹಾರ, ದೃಷ್ಟಿ ದಾರ ಅಥವಾ ನಿಂಬೆಹಣ್ಣುಗಳಿಂದ ಮುಚ್ಚಲಾಗುತ್ತದೆ. ಇದರಿಂದ ನಂಬರ್ ಪ್ಲೇಟ್ ಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ.

ನಂಬರ್ ಪ್ಲೇಟ್ ಮರೆ ಮಾಡುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು

ದೆಹಲಿ ಪೊಲೀಸರು ವಾಹನಗಳ ನಂಬರ್ ಪ್ಲೇಟ್ ಗಳು ಸ್ಪಷ್ಟವಾಗಿ ಗೋಚರಿಸಲು ಅಡ್ಡಿ ಪಡಿಸುತ್ತಿರುವ ಹೂವಿನ ಹಾರ, ದೃಷ್ಟಿ ದಾರ ಹಾಗೂ ನಿಂಬೆ ಹಣ್ಣುಗಳನ್ನು ವಾಹನಗಳಿಂದ ತೆರವು ಗೊಳಿಸುತ್ತಿದ್ದಾರೆ. ಇದಕ್ಕಾಗಿಯೇ ದೆಹಲಿ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ವಸ್ತುಗಳಿಂದ ವಾಹನಗಳ ನಂಬರ್ ಪ್ಲೇಟ್ ಸ್ಪಷ್ಟವಾಗಿ ಗೋಚರಿಸದ ಹಿನ್ನೆಲೆಯಲ್ಲಿ ಮೂರು ದಿನಗಳಲ್ಲಿ ಸುಮಾರು 150 ಜನರಿಗೆ ದಂಡ ವಿಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ನಂಬರ್ ಪ್ಲೇಟ್ ಮರೆ ಮಾಡುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು

ಇದರಲ್ಲಿ ಬಹುತೇಕ ವಾಹನ ಸವಾರರು ತಮ್ಮ ವಾಹನಗಳ ನಂಬರ್ ಪ್ಲೇಟ್ ಅನ್ನು ಮರೆಮಾಡಲು ದೃಷ್ಟಿ ದಾರ, ನಿಂಬೆ ಹಣ್ಣು, ಮೆಣಸಿನಕಾಯಿ ಹಾಗೂ ಕಪ್ಪು ರಿಬ್ಬನ್‌ಗಳನ್ನು ವಾಹನಗಳಲ್ಲಿ ಕಟ್ಟಿದ್ದರು. ಇವರೆಲ್ಲರಿಗೂ ದೆಹಲಿ ಪೊಲೀಸರು ದಂಡ ವಿಧಿಸಿದ್ದಾರೆ. ಈ ಬಗ್ಗೆ ದೆಹಲಿ ವಿಶೇಷ ಪೊಲೀಸ್ ಆಯುಕ್ತರಾದ ಮುಕ್ತೇಶ್ ಚಂದರ್ ರವರು ತಮ್ಮ ಟ್ವಿಟರ್ ಖಾತೆಯ ಮೂಲಕ ಮಾಹಿತಿ ನೀಡಿದ್ದಾರೆ.

ನಂಬರ್ ಪ್ಲೇಟ್ ಮರೆ ಮಾಡುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು

ವಿವಿಧ ರೀತಿಯಲ್ಲಿ ನಂಬರ್ ಪ್ಲೇಟ್ ಮುಚ್ಚಿಹಾಕಲು ಯತ್ನಿಸಿದ 150 ಕ್ಕೂ ಹೆಚ್ಚು ವಾಹನ ಸವಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಮ್ಮ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಕೆಲವರು ತಿಳಿಯದೆ ನಂಬರ್ ಪ್ಲೇಟ್ ಗಳನ್ನು ಕಪ್ಪು ಹಗ್ಗಗಳಿಂದ ಮುಚ್ಚುತ್ತಾರೆ. ಇನ್ನೂ ಕೆಲವರು ಅಪರಾಧವೆಸಗಿ ತಪ್ಪಿಸಿ ಕೊಳ್ಳುವ ಸಲುವಾಗಿ ನಂಬರ್ ಪ್ಲೇಟ್ ಗಳನ್ನು ಮರೆ ಮಾಡುತ್ತಾರೆ.

ನಂಬರ್ ಪ್ಲೇಟ್ ಮರೆ ಮಾಡುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು

ಅವರು ಉದ್ದೇಶಪೂರ್ವಕವಾಗಿಯೇ ನಂಬರ್ ಪ್ಲೇಟ್ ಗಳನ್ನು ಹಗ್ಗ ಕಟ್ಟಿ ಮುಚ್ಚಿರುತ್ತಾರೆ. ಇಲ್ಲವೇ ಟೇಪ್ ಸುತ್ತಿರುತ್ತಾರೆ. ಸೊನ್ನೆ ಅಕ್ಷರವನ್ನು 8 ಎಂದು, ಸಿ ಅಕ್ಷರವನ್ನು 0 ಎಂದು ಬದಲಾಯಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಂಬರ್ ಪ್ಲೇಟ್ ಗಳನ್ನು ಟ್ಯಾಂಪರ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ನಂಬರ್ ಪ್ಲೇಟ್ ಮರೆ ಮಾಡುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು

ಈ ಸಂದರ್ಭದಲ್ಲಿ ಮಾತನಾಡಿದ ದೆಹಲಿ ಪೊಲೀಸ್ ಆಯುಕ್ತ ಮುಕ್ತೇಶ್ ಚಂದರ್, ಕೆಲವರು ಪೊಲೀಸರ ಕಣ್ಣಿಗೆ ಮಣ್ಣೆರಚಿ ಕಾನೂನು ಕ್ರಮದಿಂದ ಪಾರಾಗಲು ಪ್ರಯತ್ನ ಪಡುತ್ತಿದ್ದಾರೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ನಗರದ ವಿವಿಧೆಡೆ ಅಳವಡಿಸಿರುವ ಕ್ಯಾಮರಾಗಳಿಂದ ತಪ್ಪಿಸಿಕೊಳ್ಳುವುದು ಇದರ ಹಿಂದಿನ ಉದ್ದೇಶ ಎಂದು ಹೇಳಿದರು.

ನಂಬರ್ ಪ್ಲೇಟ್ ಮರೆ ಮಾಡುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು

ಹೀಗೆ ನಂಬರ್ ಪ್ಲೇಟ್ ಗಳನ್ನು ಮರೆ ಮಾಡಿದಾಗ ವೇಗದ ಚಾಲನೆ ಸೇರಿದಂತೆ ಇತರ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆ ಆ ವಾಹನಗಳ ಮಾಲೀಕರನ್ನು ಹುಡುಕುವುದು ಕಷ್ಟವಾಗುತ್ತದೆ. ನಂಬರ್ ಪ್ಲೇಟ್ ಗಳನ್ನು ಕೆಲವು ವಸ್ತುಗಳೊಂದಿಗೆ ಅಸ್ಪಷ್ಟಗೊಳಿಸುವ ಪ್ರವೃತ್ತಿ ಹಲವು ದಿನಗಳಿಂದ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ದೋಷಪೂರಿತ ನಂಬರ್ ಪ್ಲೇಟ್ ಗಳನ್ನು ಹೊಂದಿರುವ ವಾಹನಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ಅವರು ಹೇಳಿದರು.

ನಂಬರ್ ಪ್ಲೇಟ್ ಮರೆ ಮಾಡುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು

ಸಂಚಾರಿ ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಲು ರಾಷ್ಟ್ರ ರಾಜಧಾನಿಯಾದ್ಯಂತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರನ್ನು ಪ್ರತಿ ಬಾರಿಯೂ ಈ ಕ್ಯಾಮೆರಾಗಳು ಸೆರೆಹಿಡಿಯುತ್ತವೆ. ನಂತರ ಆ ವಾಹನದ ಸಂಖ್ಯೆ ಹಾಗೂ ಸಂಚಾರಿ ನಿಯಮ ಉಲ್ಲಂಘನೆಯ ವಿವರಗಳನ್ನು ಪೊಲೀಸ್ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.

ನಂಬರ್ ಪ್ಲೇಟ್ ಮರೆ ಮಾಡುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು

ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಅವುಗಳನ್ನು ಪರಿಶೀಲಿಸಿ, ಇಮೇಲ್ ಅಥವಾ ಎಸ್‌ಎಂಎಸ್ ಮೂಲಕ ಸಂಬಂಧಪಟ್ಟ ವಾಹನ ಮಾಲೀಕರಿಗೆ ಚಲನ್ ಕಳುಹಿಸುತ್ತಾರೆ. ದೆಹಲಿ ಪೊಲೀಸರು ನಿಯಮಿತವಾಗಿ ವಾಹನಗಳ ತಪಾಸಣೆ ನಡೆಸುತ್ತಲೇ ಇರುತ್ತಾರೆ. ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಸ್ಥಳದಲ್ಲಿಯೇ ದಂಡವನ್ನು ಸಹ ವಿಧಿಸುತ್ತಾರೆ.

ನಂಬರ್ ಪ್ಲೇಟ್ ಮರೆ ಮಾಡುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು

ನಂಬರ್ ಪ್ಲೇಟ್ ಗಳನ್ನು ಮರೆ ಮಾಡಿದ್ದರೂ, ಪೊಲೀಸರು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ವಾಹನದ ನಂಬರ್ ಪ್ಲೇಟ್ ಅನ್ನು ಸೆರೆಹಿಡಿದು ಪೊಲೀಸರ ಗಮನಕ್ಕೆ ತರುತ್ತವೆ. ಅಂತಹ ನಂಬರ್ ಪ್ಲೇಟ್ ಗಳನ್ನು ಪೊಲೀಸರು ತಮ್ಮದೇ ಆದ ವಿಧಾನಗಳ ಮೂಲಕ ಪತ್ತೆ ಹಚ್ಚುತಾರೆ. ಅವುಗಳ ಆಧಾರದ ಮೇಲೆ ವಾಹನ ಮಾಲೀಕರನ್ನು ಪತ್ತೆ ಹಚ್ಚಿ ಚಲನ್ ಕಳುಹಿಸಲಾಗುತ್ತದೆ.

ನಂಬರ್ ಪ್ಲೇಟ್ ಮರೆ ಮಾಡುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು

ಈ ಕಾರಣಕ್ಕೆ ವಾಹನ ಸವಾರರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸುವುದು ಒಳ್ಳೆಯದು. ಆದಷ್ಟು ನಂಬರ್ ಪ್ಲೇಟ್ ಅಡಗಿಸದೇ ಪ್ರಯಾಣಿಸಿ. ಈಗ ದೆಹಲಿಯಲ್ಲಿ ನಡೆಯುತ್ತಿರುವ ಈ ಕಾರ್ಯಾಚರಣೆ ಮುಂಬರುವ ದಿನಗಳಲ್ಲಿ ನಮ್ಮ ಊರುಗಳಲ್ಲೂ ನಡೆಯಬಹುದು.

ನಂಬರ್ ಪ್ಲೇಟ್ ಮರೆ ಮಾಡುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿದ ಪೊಲೀಸರು

ಇತ್ತೀಚಿಗೆ ಕೆಲವರು ವಾಹನಗಳಲ್ಲಿ ಬಗೆ ಬಗೆಯ ಸ್ಟಂಟ್ ಮಾಡಿ ಅವುಗಳ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ಈ ವೀಡಿಯೊಗಳು ವೈರಲ್ ಆಗಿ ಪೊಲೀಸರ ಗಮನಕ್ಕೂ ಬರುತ್ತವೆ. ತಮ್ಮ ಗಮನಕ್ಕೆ ಬಂದ ತಕ್ಷಣವೇ ಪೊಲೀಸರು ಆ ವಾಹನಗಳ ನಂಬರ್ ಪ್ಲೇಟ್ ಗಳ ಆಧಾರದ ಮೇಲೆ ವಾಹನ ಮಾಲೀಕರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

Most Read Articles

Kannada
English summary
Delhi police starts new operation against vehicles hiding number plates details
Story first published: Saturday, September 18, 2021, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X