ಹೋಳಿ ಹಿನ್ನೆಲೆ ನಿಯಮಗಳ ಜಾರಿಗೆ ಮುಂದಾದ ಪೊಲೀಸ್ ಇಲಾಖೆ

ಮಾರ್ಚ್ 10ರಂದು ಹೋಳಿ ಹಬ್ಬವನ್ನು ಆಚರಿಸಲಾಗುವುದು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಕೆಲವು ನಿಯಮಗಳನ್ನು ಜಾರಿಗೆ ತಂದಿದ್ದಾರೆ. ದೆಹಲಿ ಪೊಲೀಸರು ವಾಹನ ಚಾಲಕರಿಗೆ ಸುರಕ್ಷತೆಯ ದೃಷ್ಟಿಯಿಂದ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.

ಹೋಳಿ ಹಿನ್ನೆಲೆ ನಿಯಮಗಳ ಜಾರಿಗೆ ಮುಂದಾದ ಪೊಲೀಸ್ ಇಲಾಖೆ

ಹೋಳಿ ಹಬ್ಬದಂದು ವಾಹನ ಚಾಲಕರು ಸುರಕ್ಷತೆಯನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಇದಕ್ಕಾಗಿ ವಾಹನ ಚಾಲಕರ ಮೇಲೆ ನಿಗಾವಹಿಸಲಾಗುವುದು.

ಹೋಳಿ ಹಿನ್ನೆಲೆ ನಿಯಮಗಳ ಜಾರಿಗೆ ಮುಂದಾದ ಪೊಲೀಸ್ ಇಲಾಖೆ

ದ್ವಿಚಕ್ರ ವಾಹನ ಸವಾರರು ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದರೆ, ಅತಿಯಾದ ವೇಗ, ಅಜಾಗರೂಕ ಚಾಲನೆ, ಜಿಗ್-ಜಾಗ್ ಚಾಲನೆ, ಅಪಾಯಕಾರಿ ಚಾಲನೆ, ಸಿಗ್ನಲ್ ಜಂಪ್, ಟ್ರಿಪಲ್ ರೈಡಿಂಗ್, ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ, ಸ್ಟಂಟ್ ಮಾಡಿದರೆ ಭಾರಿ ಪ್ರಮಾಣದ ದಂಡ ವಿಧಿಸಲಾಗುವುದು.

ಹೋಳಿ ಹಿನ್ನೆಲೆ ನಿಯಮಗಳ ಜಾರಿಗೆ ಮುಂದಾದ ಪೊಲೀಸ್ ಇಲಾಖೆ

ಸಂಚಾರ ನಿಯಮಗಳನ್ನು ಯಾವುದೇ ರೀತಿಯಲ್ಲಿ ಉಲ್ಲಂಘಿಸದಂತೆ ತಡೆಯಲು ಮಾರ್ಚ್ 10ರ ಮಂಗಳವಾರದಂದು ದೆಹಲಿಯ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಆಲ್ಕೋಮೀಟರ್‌ಗಳನ್ನು ಹೊಂದಿರುವ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.

ಹೋಳಿ ಹಿನ್ನೆಲೆ ನಿಯಮಗಳ ಜಾರಿಗೆ ಮುಂದಾದ ಪೊಲೀಸ್ ಇಲಾಖೆ

ಇದರ ಜೊತೆಗೆ ದೆಹಲಿ ಸಂಚಾರ ಪೊಲೀಸರು ಹಾಗೂ ಸ್ಥಳೀಯ ಪೊಲೀಸರನ್ನು ಒಳಗೊಂಡ ವಿಶೇಷ ತಂಡಗಳನ್ನು ರಚಿಸಿ ದೆಹಲಿಯ ವಿವಿಧ ಸ್ಥಳಗಳಲ್ಲಿ ಗಸ್ತು ತಿರುಗಲು ಇಂಟರ್‌ಸೆಪ್ಟರ್ ವಾಹನ ಹಾಗೂ ಪಿಸಿಆರ್‍‍ಗಳನ್ನು ಅಳವಡಿಸಲಾಗುವುದು.

ಹೋಳಿ ಹಿನ್ನೆಲೆ ನಿಯಮಗಳ ಜಾರಿಗೆ ಮುಂದಾದ ಪೊಲೀಸ್ ಇಲಾಖೆ

ಕುಡಿದು ವಾಹನ ಚಾಲನೆ ಮಾಡಿದರೆ, ಸಿಗ್ನಲ್ ಜಂಪ್ ಮಾಡಿದರೆ, ವಾಹನ ಚಾಲನೆ ವೇಳೆ ಮೊಬೈಲ್‍‍ನಲ್ಲಿ ಮಾತನಾಡಿದರೆ, ಅಪಾಯಕಾರಿಯಾಗಿ ಹಾಗೂ ಅತಿ ವೇಗದಲ್ಲಿ ಚಾಲನೆ ಮಾಡಿದರೆ ಸುಪ್ರೀಂ ಕೋರ್ಟ್ ರೂಪಿಸಿರುವ ಸಂಚಾರ ನಿಯಮಗಳ ಆಧಾರದ ಮೇಲೆ ಕನಿಷ್ಠ ಮೂರು ತಿಂಗಳವರೆಗೆ ಡ್ರೈವಿಂಗ್ ಲೈಸೆನ್ಸ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ ಅಥವಾ ರದ್ದುಪಡಿಸಲಾಗುತ್ತದೆ.

ಹೋಳಿ ಹಿನ್ನೆಲೆ ನಿಯಮಗಳ ಜಾರಿಗೆ ಮುಂದಾದ ಪೊಲೀಸ್ ಇಲಾಖೆ

ಅಪ್ರಾಪ್ತ ವಯಸ್ಕ ಅಥವಾ ಅನಧಿಕೃತ ವ್ಯಕ್ತಿಯು ವಾಹನ ಚಾಲನೆ ಮಾಡಿದರೆ, ಸ್ಟಂಟ್ ಮಾಡಿದರೆ ಅಥವಾ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡುವಾಗ ಸಿಕ್ಕಿಬಿದ್ದರೆ, ವಾಹನವನ್ನು ಯಾರ ಹೆಸರಿನಲ್ಲಿ ನೋಂದಾಯಿಸಲಾಗಿದೆಯೋ ಆ ವ್ಯಕ್ತಿಯ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ.

Most Read Articles

Kannada
English summary
Delhi traffic police issues notice ahead of Holi. Read in Kannada.
Story first published: Monday, March 9, 2020, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X