ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ದೆಹಲಿ ಸರ್ಕಾರವು ಮಂಗಳವಾರ ಅಧಿಸೂಚನೆಯೊಂದನ್ನು ಹೊರಡಿಸಿ 2019ರ ಏಪ್ರಿಲ್ ಗೂ ಮುನ್ನ ಖರೀದಿಸಿದ ಎಲ್ಲಾ ವಾಹನಗಳು ಹೊಸ ನೋಂದಣಿ ನಿಯಮವನ್ನು ಪಾಲಿಸಬೇಕು ಎಂದು ಹೇಳಿದೆ.

ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಈ ಅಧಿಸೂಚನೆಯನ್ವಯ ವಾಹನಗಳು ಹೆಚ್ಚಿನ ಸುರಕ್ಷತೆಯ ನೋಂದಣಿ ಫಲಕ (ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ - ಹೆಚ್‌ಎಸ್‌ಆರ್‌ಪಿ) ಹಾಗೂ ಬಣ್ಣ ಸಂಕೇತವನ್ನು (ಕಲರ್ ಕೊಡಿಂಗ್) ಹೊಂದಿರಬೇಕು. ಎಲ್ಲಾ ವಾಹನಗಳು ತಕ್ಷಣವೇ ಈ ನಿಯಮವನ್ನು ಪಾಲಿಸಬೇಕು ಎಂದು ದೆಹಲಿ ರಾಜ್ಯ ಸಾರಿಗೆ ಇಲಾಖೆ ಹೇಳಿದೆ. ಹೀಗಾಗಿ ಜನರು ಹೊಸ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.

ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಹೆಚ್‌ಎಸ್‌ಆರ್‌ಪಿ ಕ್ರೋಮಿಯಂ ಹೊಲೊಗ್ರಾಮ್ ಆಧಾರಿತ ನಂಬರ್ ಪ್ಲೇಟ್ ಆಗಿದ್ದು, ಇದನ್ನು ಜಿಪ್ಪರ್ ವಿಧಾನದ ಮೂಲಕ ವಾಹನಗಳಲ್ಲಿ ಅಳವಡಿಸಲಾಗುತ್ತದೆ. ಈ ಕಾರಣಕ್ಕೆ ಹೆಚ್‌ಎಸ್‌ಆರ್‌ಪಿಗಳನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ನಕಲಿ ರಿಜಿಸ್ಟ್ರೇಷನ್ ಪ್ರಕರಣಗಳನ್ನು ತಡೆಗಟ್ಟಲು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ವಿಷಯದಲ್ಲಿ ಕೇಂದ್ರ ಸರ್ಕಾರವು ಗಂಭೀರ ಕ್ರಮ ಕೈಗೊಳ್ಳಲು ಮುಂದಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಇದರ ಜೊತೆಗೆ ಪ್ರತ್ಯೇಕ ಇಂಧನ ವಾಹನಗಳು ಪ್ರತ್ಯೇಕ ಬಣ್ಣದ ನಂಬರ್ ಪ್ಲೇಟ್ ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ವಾಹನಗಳಿಗೆ ಲೈಟ್ ಲಾಂಗ್ ನಂಬರ್ ಪ್ಲೇಟ್, ಡೀಸೆಲ್ ವಾಹನಗಳಿಗೆ ಆರೆಂಜ್ ನಂಬರ್ ಪ್ಲೇಟ್ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಗ್ರೀನ್ ನಂಬರ್ ಪ್ಲೇಟ್ ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ದೆಹಲಿಯಲ್ಲಿ ನೋಂದಣಿಯಾಗಿರುವ ಎಲ್ಲಾ ವಾಹನಗಳಿಗೆ ಹೊಸ ಆದೇಶ ಅನ್ವಯವಾಗಲಿದೆ. ಈ ಅಧಿಸೂಚನೆಯನ್ನು 1988ರ ಮೋಟಾರು ವಾಹನ ಕಾಯ್ದೆ ಹಾಗೂ ಕೇಂದ್ರ ಮೋಟಾರು ವಾಹನ ಕಾಯ್ದೆ 1989ರ ಅಡಿಯಲ್ಲಿ ಹೊರಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಕೇಂದ್ರ ಸರ್ಕಾರವು ಈಗಾಗಲೇ ಎಲ್ಲಾ ರಾಜ್ಯಗಳಿಗೆ ಹೆಚ್‌ಎಸ್‌ಆರ್‌ಪಿ ನಿಯಮವನ್ನು ಜಾರಿಗೆ ತರಲು ಆದೇಶಿಸಿದೆ. ಕೆಲವು ರಾಜ್ಯಗಳು ಈ ನಿಯಮವನ್ನು ಜಾರಿಗೊಳಿಸಲು ತಯಾರಿ ನಡೆಸಿವೆ. ಈಗ ದೆಹಲಿ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಮುಂದಾಗಿದೆ.

ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ದೆಹಲಿಯಲ್ಲಿರುವ 30 ಲಕ್ಷಕ್ಕೂ ಹೆಚ್ಚು ವಾಹನಗಳಿಗೆ ಹೊಸ ಎಚ್‌ಎಸ್‌ಆರ್‌ಪಿ ಹಾಗೂ ಕಲರ್ ಸ್ಟಿಕ್ಕರ್‌ಗಳನ್ನು ಜೋಡಿಸಬೇಕಾಗಿದೆ ಎಂದು ದೆಹಲಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇವುಗಳನ್ನು ಪೂರೈಸಲು 236 ಮಾರಾಟಗಾರರು ಮುಂದೆ ಬಂದಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಕೇಂದ್ರ ಸರ್ಕಾರವು ವಾಹನಗಳ ನಂಬರ್ ಪ್ಲೇಟ್ ಗಳ ದುರ್ಬಳಕೆಯನ್ನು ತಡೆಯಲು ಹೊಸ ಹೆಚ್‌ಎಸ್‌ಆರ್‌ಪಿ ಯೋಜನೆಯನ್ನು ಪರಿಚಯಿಸಿದೆ. ಹೆಚ್‌ಎಸ್‌ಆರ್‌ಪಿ ನಕಲಿ ನೋಂದಣಿಯನ್ನು ತಡೆಯುವುದು ಮಾತ್ರವಲ್ಲದೆ ವಾಹನ ಆಧಾರಿತ ಇತರ ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಡೆಯಲಿದೆ. ವಾಹನ ಕಳ್ಳತನದಂತಹ ಪ್ರಕರಣಗಳನ್ನು ಸಂಪೂರ್ಣವಾಗಿ ತಡೆಯಬಹುದು ಎಂದು ಹೇಳಲಾಗಿದೆ.

ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಹೆಚ್‌ಎಸ್‌ಆರ್‌ಪಿ ಬಗ್ಗೆ:

ಹೆಚ್‌ಎಸ್‌ಆರ್‌ಪಿ ಅಲ್ಯೂಮಿನಿಯಂ ಫಾಯಿಲ್ ನಿಂದ ಮಾಡಲಾದ ವಿಶೇಷ ಎಲೆಕ್ಟ್ರಾನಿಕ್ ನಂಬರ್ ಪ್ಲೇಟ್ ಆಗಿದೆ. ಇದರಲ್ಲಿ ಅಶೋಕ ಚಕ್ರದೊಂದಿಗೆ ಕೆತ್ತಿದ ಕ್ರೋಮಿಯಂ ಹೊಲೊಗ್ರಾಮ್ ಸ್ಟಿಕ್ಕರ್ ಅನ್ನು ಅಂಟಿಸಲಾಗುತ್ತದೆ. ಇದನ್ನು ಹರಿದು ಹಾಕಲು ಸಾಧ್ಯವಿಲ್ಲ. ಅದರ ಕೆಳಗೆ ನೀಲಿ ಬಣ್ಣದಲ್ಲಿರುವ ಇಂಗ್ಲಿಷ್ ಪದಗಳಲ್ಲಿ ಐಎನ್ ಡಿ ಅಂದರೆ ಇಂಡಿಯಾ ಎಂದು ಬರೆದಿರಲಾಗಿರುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಈ ಇಂಗ್ಲಿಷ್ ಪದದ ಕೆಳಗೆ ಪ್ರತಿ ಬೋರ್ಡ್‌ನಲ್ಲಿರುವ ವಿಶಿಷ್ಟ ಗುರುತುಗಳನ್ನು ಸ್ಟಿಕ್ಕರ್‌ನ ಬದಲು ಮುದ್ರಿಸಲಾಗುತ್ತದೆ. ಈ ಅಕ್ಷರಗಳು ಹಾಳಾದರೂ ಅದರ ಹಿನ್ನೆಲೆಯಲ್ಲಿರುವ ಪ್ರಿಂಟ್ ಹಾಗೇ ಇರುತ್ತದೆ. ನಂತರ ಕೇಂದ್ರ ಸರ್ಕಾರದ ವಾಹನ್ ವೆಬ್‌ಸೈಟ್‌ನಲ್ಲಿ ನಿಗದಿತ ವಾಹನದ ಮಾಲೀಕರು, ರಿಜಿಸ್ಟ್ರೇಷನ್ ನಂಬರ್, ವಿಶಿಷ್ಟ ನಂಬರ್ ಸೇರಿದಂತೆ ಎಲ್ಲಾ ವಿಷಯಗಳನ್ನು ರಿಜಿಸ್ಟರ್ ಮಾಡಲಾಗುತ್ತದೆ.

ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಜಿಪ್ಪರ್ ವಿಧಾನದಿಂದ ಈ ನಂಬರ್ ಪ್ಲೇಟ್ ಅನ್ನು ವಾಹನಗಳಿಗೆ ಅಳವಡಿಸಲಾಗುತ್ತದೆ. ಈ ಕಾರಣಕ್ಕೆ ವಾಹನಕ್ಕೆ ಅಂಟಿಸಲಾದ ನಂಬರ್ ಪ್ಲೇಟ್ ಅನ್ನು ಸುಲಭವಾಗಿ ತೆಗೆದು ಹಾಕಲು ಅಥವಾ ನಂಬರ್ ಪ್ಲೇಟ್‌ಗಳನ್ನು ನಕಲು ಮಾಡಲು ಸಾಧ್ಯವಿಲ್ಲ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಎಲ್ಲಾ ವಾಹನಗಳಿಗೂ ಹೆಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸಿದ ಸಾರಿಗೆ ಇಲಾಖೆ

ಈ ಹೊಸ ವ್ಯವಸ್ಥೆಯಿಂದ ನಕಲಿ ನಂಬರ್ ಪ್ಲೇಟ್‌ಗಳನ್ನು ಬಳಸಿ ನಡೆಯುವ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ. ಸರ್ಕಾರಿ ಅನುಮೋದಿತ ಕಂಪನಿಗಳು ಮಾತ್ರ ಈ ಹೆಚ್‌ಎಸ್‌ಆರ್‌ಪಿ ಫಲಕಗಳನ್ನು ತಯಾರಿಸುತ್ತವೆ ಎಂಬುದು ಗಮನಾರ್ಹ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Delhi transport department mandates HSRP and Color coded stickers for all vehicles. Read in Kannada.
Story first published: Wednesday, September 23, 2020, 19:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X