ಪೊಲೀಸರೊಂದಿಗೆ ವಾಗ್ವಾದ ನಡೆಸಿ ಜೈಲು ಸೇರಿದ ಡೆಲಿವರಿ ಗರ್ಲ್

ಕಳೆದ ವರ್ಷ ಮುಂಬೈ ಪೊಲೀಸರು ಜೊಮೊಟೊ ಕಂಪನಿಯ ಪ್ರಿಯಾಂಕಾ ಮೊಗ್ರೆ ಎಂಬ ಡೆಲಿವರಿ ಹುಡುಗಿಯನ್ನು ಬಂಧಿಸಿದ್ದರು. ಆಕೆ ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆಕೆಯನ್ನು ಬಂಧಿಸಲಾಗಿತ್ತು.

ಪೊಲೀಸರೊಂದಿಗೆ ವಾಗ್ವಾದ ನಡೆಸಿ ಜೈಲು ಸೇರಿದ ಡೆಲಿವರಿ ಗರ್ಲ್

ಆಕೆ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸುವುದರ ಜೊತೆಗೆ ಅಶ್ಲೀಲ ಪದಗಳನ್ನು ಬಳಸಿದ್ದಳು. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಮುಂಬೈನ ವಾಸಿ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಟ್ರಾಫಿಕ್ ಕಾನ್‌ಸ್ಟೆಬಲ್ ಮೋಹನ್ ಸರ್ಕಾರ್ ಆಕೆಯನ್ನು ಬಂಧಿಸಿದ್ದರು. ಆಗ ಬಂಧನಕ್ಕೊಳಗಾದ ಪ್ರಿಯಾಂಕಾ ಮೊಗ್ರೆ ಇನ್ನೂ ಜೈಲಿನಲ್ಲಿದ್ದಾಳೆ.

ಪೊಲೀಸರೊಂದಿಗೆ ವಾಗ್ವಾದ ನಡೆಸಿ ಜೈಲು ಸೇರಿದ ಡೆಲಿವರಿ ಗರ್ಲ್

ಈ ಬಗ್ಗೆ ವೈರ್ ಪತ್ರಿಕೆ ವರದಿ ಮಾಡಿದೆ. ಪ್ರಿಯಾಂಕಾ ಮೊಗ್ರೆ 2019ರ ಆಗಸ್ಟ್ 8ರಂದು ಫುಡ್ ಡೆಲಿವರಿ ಮಾಡಲು ತೆರಳುತ್ತಿದ್ದ ವೇಳೆ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಳು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪೊಲೀಸರೊಂದಿಗೆ ವಾಗ್ವಾದ ನಡೆಸಿ ಜೈಲು ಸೇರಿದ ಡೆಲಿವರಿ ಗರ್ಲ್

ಪ್ರಿಯಾಂಕಾ ಮೊಗ್ರೆ ತನ್ನ ದ್ವಿಚಕ್ರ ವಾಹನವನ್ನು ಸೆಕ್ಟರ್ 17 ಪ್ರದೇಶದಲ್ಲಿರುವ ನೋ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ್ದಳು. ಈ ಕಾರಣಕ್ಕೆ ಪ್ರಿಯಾಂಕಾ ಮೊಗ್ರೆ ಹಾಗೂ ಪೊಲೀಸರ ನಡುವೆ ವಾಗ್ವಾದ ಉಂಟಾಗಿತ್ತು. ಪೊಲೀಸರು, ಪ್ರಿಯಾಂಕಾ ಮೊಗ್ರೆ ತಮ್ಮೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ರೆಕಾರ್ಡ್ ಮಾಡಿಕೊಂಡಿದ್ದರು.

ಪೊಲೀಸರೊಂದಿಗೆ ವಾಗ್ವಾದ ನಡೆಸಿ ಜೈಲು ಸೇರಿದ ಡೆಲಿವರಿ ಗರ್ಲ್

ಪ್ರಿಯಾಂಕಾ ಮೊಗ್ರೆ ಪೊಲೀಸರಿಂದ ಮೊಬೈಲ್ ಫೋನ್ ಕಸಿದುಕೊಳ್ಳಲು ಯತ್ನಿಸಿದ್ದಳು ಎಂದು ಹೇಳಲಾಗಿದೆ. ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದ ಕಾರಣ, ಈ ಘಟನೆಯನ್ನು ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಕೂಡಲೇ ಪೊಲೀಸ್ ಇನ್ಸ್‌ಪೆಕ್ಟರ್ ಅನಿಲ್ ದೇಶ್ಮುಖ್ ಸ್ಥಳಕ್ಕೆ ಧಾವಿಸಿದ್ದರು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪೊಲೀಸರೊಂದಿಗೆ ವಾಗ್ವಾದ ನಡೆಸಿ ಜೈಲು ಸೇರಿದ ಡೆಲಿವರಿ ಗರ್ಲ್

ನಂತರವೂ ಪ್ರಿಯಾಂಕಾ ಮೊಗ್ರೆ ಪೋಲಿಸರೊಂದಿಗೆ ವಾಗ್ವಾದ ನಡೆಸಿದ್ದಳು. ಈ ಕಾರಣಕ್ಕೆ ವಾಸಿ ಪೊಲೀಸ್ ಠಾಣೆಯಲ್ಲಿ ಪ್ರಿಯಾಂಕಾ ಮೊಗ್ರೆ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಮುಂದಿನ ಚೆಕ್‌ಪೋಸ್ಟ್‌ನಲ್ಲಿ ಆಕೆಯನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆ ತರಲಾಯಿತು.

ಪೊಲೀಸರೊಂದಿಗೆ ವಾಗ್ವಾದ ನಡೆಸಿ ಜೈಲು ಸೇರಿದ ಡೆಲಿವರಿ ಗರ್ಲ್

353, 393, 294, 506, 504 ಸೆಕ್ಷನ್‌ಗಳಡಿಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಜಾಮೀನು ಸಿಗದ ಕಾರಣಕ್ಕೆ ಆಕೆ ಇನ್ನೂ ಜೈಲಿನಲ್ಲಿದ್ದಾಳೆ ಎಂದು ಹೇಳಲಾಗಿದೆ. ಆಕೆಯ ವಿರುದ್ಧ ಜಾಮೀನು ಸಿಗದ ಪ್ರಕರಣಗಳನ್ನು ದಾಖಲಿಸಲಾಗಿತ್ತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪೊಲೀಸರೊಂದಿಗೆ ವಾಗ್ವಾದ ನಡೆಸಿ ಜೈಲು ಸೇರಿದ ಡೆಲಿವರಿ ಗರ್ಲ್

ನ್ಯಾಯಾಲಯವು ಆಕೆಗೆ ಶಿಕ್ಷೆ ವಿಧಿಸಿದೆಯೇ ಎಂಬುದು ಖಚಿತವಾಗಿಲ್ಲ. ಪೊಲೀಸರು ಆಕೆ ತಮ್ಮೊಂದಿಗೆ ವಾಗ್ವಾದದಲ್ಲಿ ತೊಡಗಿದ್ದ ವೀಡಿಯೊವನ್ನು ಪ್ರಮುಖ ಸಾಕ್ಷಿಯಾಗಿ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸರೊಂದಿಗೆ ವಾಗ್ವಾದ ನಡೆಸಿ ಜೈಲು ಸೇರಿದ ಡೆಲಿವರಿ ಗರ್ಲ್

ಈ ಹಿಂದೆಯೂ ಸಹ ಪ್ರಿಯಾಂಕಾ ಮೊಗ್ರೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಳು ಎಂದು ಹೇಳಲಾಗಿದೆ. ಆಕೆಯ ಬಂಧನಕ್ಕೆ ಇದು ಸಹ ಪ್ರಮುಖ ಕಾರಣ ಎಂದು ಹೇಳಲಾಗಿದೆ. ದಿ ಹಿಂದೂ ಪತ್ರಿಕೆ ಈ ಬಗ್ಗೆ ಕಳೆದ ವರ್ಷ ವರದಿ ಮಾಡಿತ್ತು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಈ ಬಗ್ಗೆ ಮಾತನಾಡಿದ್ದ ಪೊಲೀಸ್ ಅಧಿಕಾರಿಗಳು, ಬಂಧನಕ್ಕೆ ಕೆಲ ತಿಂಗಳ ಮೊದಲು, ಪ್ರಿಯಾಂಕಾ ಮೊಗ್ರೆ ಮೇಲೆ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ ಆರೋಪವಿದೆ. ಜೊತೆಗೆ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನವನ್ನು ಚಾಲನೆ ಮಾಡಿದ, ಸರಿಯಾದ ದಾಖಲೆಗಳನ್ನು ಹೊಂದಿರದ ಕಾರಣಕ್ಕಾಗಿಯೂ ಆಕೆಗೆ ದಂಡ ವಿಧಿಸಲಾಗಿತ್ತು. ಆಕೆಯ ವಿರುದ್ಧ ದಾಖಲಾದ ಹಿಂದಿನ ಪ್ರಕರಣಗಳ ವಿವರಗಳನ್ನು ನಾವು ಸಂಗ್ರಹಿಸುತ್ತಿದ್ದೇವೆ ಎಂದು ಹೇಳಿದ್ದರು.

ಪೊಲೀಸರೊಂದಿಗೆ ವಾಗ್ವಾದ ನಡೆಸಿ ಜೈಲು ಸೇರಿದ ಡೆಲಿವರಿ ಗರ್ಲ್

ಪ್ರಿಯಾಂಕಾ ಮೊಗ್ರೆ ಇನ್ನೂ ಜೈಲಿನಲ್ಲಿರಲು ಈ ಪ್ರಕರಣಗಳು ಸಹ ಕಾರಣವಾಗಿರಬಹುದು. ಟ್ರಾಫಿಕ್ ನಿಯಮಗಳ ಉಲ್ಲಂಘನೆಯು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ರಸ್ತೆ ಅಪಘಾತಗಳಿಗೆ ಕಾರಣವಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರೆ ಏನಾಗುತ್ತದೆ ಎಂಬುದನ್ನು ಜನರು ಈ ಘಟನೆಯ ಮೂಲಕ ಅರಿತು ಕೊಳ್ಳಬೇಕು.

Most Read Articles

Kannada
English summary
Delivery girl sent to jail for using abuse word with Mumbai traffic police. Read in Kannada.
Story first published: Tuesday, September 29, 2020, 11:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X