ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಮೋಟಾರು ವಾಹನಗಳ ಇಲಾಖೆಯನ್ನು 1988ರ ಮೋಟಾರು ವಾಹನ ಕಾಯ್ದೆಯಡಿ ಸ್ಥಾಪಿಸಲಾಗಿದೆ. ಈ ಇಲಾಖೆಯು ಭಾರತದ ಎಲ್ಲಾ ಸಾರಿಗೆ ನಿಯಮ ಹಾಗೂ ನಿಬಂಧನೆಗಳನ್ನು ಸ್ಥಾಪಿಸುವ ಜವಾಬ್ದಾರಿಯನ್ನು ಹೊಂದಿದೆ.

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ದೇಶದ ಪ್ರತಿಯೊಂದು ರಾಜ್ಯವು ತನ್ನದೇ ಆದ ಪ್ರಾದೇಶಿಕ ಸಾರಿಗೆ ಕಚೇರಿ ಅಂದರೆ ಆರ್‌ಟಿಒಗಳನ್ನು ಹೊಂದಿದೆ. ಆರ್‌ಟಿಒಗಳು ಸಾರಿಗೆ ನಿಯಮಗಳನ್ನು ಜಾರಿಗೊಳಿಸುತ್ತವೆ. ಆರ್‌ಟಿಒಗಳು ಡ್ರೈವಿಂಗ್ ಲೈಸೆನ್ಸ್ ನೀಡುವುದರ ಜೊತೆಗೆ, ವಾಹನ ನೋಂದಣಿ, ವಾಹನಗಳ ತೆರಿಗೆ ಸಂಗ್ರಹ, ವಾಹನ ವಿಮೆಯನ್ನು ಮೌಲ್ಯೀಕರಣ, ಮಾಲಿನ್ಯ ತಪಾಸಣೆ ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸುತ್ತವೆ.

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ಉಪಯೋಗಿಸಿದ ವಾಹನಗಳ ಮಾರಾಟದಲ್ಲಿಯೂ ಆರ್‌ಟಿಒ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆರ್‌ಟಿಒ ಪರಿಶೀಲನೆ ಇಲ್ಲದೆ ಯಾವುದೇ ವಾಹನಗಳ ಮಾರಾಟವನ್ನು ನ್ಯಾಯಸಮ್ಮತವೆಂದು ಪರಿಗಣಿಸಲಾಗುವುದಿಲ್ಲ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ಉಪಯೋಗಿಸಿದ ವಾಹನಗಳನ್ನು ಮಾರಾಟ ಮಾಡಲು ನಿರ್ದಿಷ್ಟ ಪ್ರಕ್ರಿಯೆಗಳಿವೆ. ಅವುಗಳನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸಬೇಕು. ಇದಕ್ಕಾಗಿ ಸಂಬಂಧಪಟ್ಟ ಎಲ್ಲಾ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕು.

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ಈ ಅರ್ಜಿಗಳಲ್ಲಿ ಫಾರಂ 28, ಫಾರಂ 29, ಫಾರಂ 30 ಹಾಗೂ ಫಾರಂ 35ಗಳು ಸೇರಿವೆ. ಈ ಅರ್ಜಿಗಳು ಯಾವುವು. ಅವುಗಳಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ಫಾರಂ 28

ಆರ್‌ಟಿಒದಿಂದ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (ಎನ್‌ಒಸಿ) ಪಡೆಯಲು ಫಾರಂ 28 ಭರ್ತಿ ಮಾಡಬೇಕು. ವಾಹನದ ಮೇಲೆ ಯಾವುದೇ ರೀತಿಯ ತೆರಿಗೆಗಳು, ದಂಡ, ಕ್ರಿಮಿನಲ್ ದಾಖಲೆಗಳು ಬಾಕಿ ಉಳಿದಿಲ್ಲವೆಂಬುದನ್ನು ಈ ಫಾರಂ ಖಚಿತಪಡಿಸುತ್ತದೆ. ಆರ್‌ಟಿಒ ಕಚೇರಿಯಲ್ಲಿ ಈ ಫಾರಂನ 3 ಪ್ರತಿಗಳನ್ನು ಸಲ್ಲಿಸಬೇಕಾಗುತ್ತದೆ.

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ಫಾರಂ 29

ವಾಹನವನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದಾಗ ಅದರ ಬಗ್ಗೆ ಆರಂಭದಲ್ಲಿ ನೋಂದಾಯಿಸಿದ ಆರ್‌ಟಿಒ ಕಚೇರಿಗೆ ವರದಿ ಮಾಡಬೇಕು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ಇದಕ್ಕಾಗಿ ಫಾರಂ 29 ಸಹಾಯ ಮಾಡುತ್ತದೆ. ಆರ್‌ಟಿಒ ಕಚೇರಿಗೆ ಫಾರಂ 29ರ 2 ಪ್ರತಿಗಳನ್ನು ಸಲ್ಲಿಸಬೇಕಾಗುತ್ತದೆ.

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ಈ ಫಾರಂನಲ್ಲಿ ಮಾಲಿನ್ಯ ನಿಯಂತ್ರಣ (ಪಿಯುಸಿ), ನೋಂದಣಿ ಪ್ರಮಾಣಪತ್ರ (ಆರ್‌ಸಿ) ಹಾಗೂ ಇನ್ಶ್ಯೂರೆನ್ಸ್'ನಂತಹ ಎಲ್ಲಾ ದಾಖಲೆಗಳನ್ನು ಮಾರಾಟದ ಸಮಯದಲ್ಲಿ ಖರೀದಿದಾರರಿಗೆ ಹೇಗೆ ಸಲ್ಲಿಸಲಾಗಿದೆ ಎಂಬುದನ್ನು ವಿವರಿಸಬೇಕು.

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ಫಾರಂ 30

ಫಾರಂ 29 ಅನ್ನು ಆರ್‌ಟಿಒಗೆ ಸಲ್ಲಿಸಿದ ನಂತರ ಫಾರಂ 30 ಸಲ್ಲಿಸಬೇಕು. ಫಾರಂ 30ರಲ್ಲಿ ವಾಹನವನ್ನು ಬೇರೆಯವರಿಗೆ ಮಾರಾಟ ಮಾಡಲಾಗಿದೆ ಎಂದು ಆರ್‌ಟಿಒಗೆ ವರದಿ ಮಾಡಲಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ನಂತರ ಸಂಬಂಧಿಸಿದ ಆರ್‌ಟಿಒ ವಾಹನ ಖರೀದಿಸಿದವರ ಹೆಸರಿಗೆ ವಾಹನದ ಮಾಲೀಕತ್ವವನ್ನು ವರ್ಗಾಯಿಸುತ್ತದೆ.

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ಹಾಗೆಯೇ ವಾಹನಕ್ಕೆ ಸಂಬಂಧಿಸಿದ ಎಲ್ಲಾ ಕಾನೂನುಬದ್ಧತೆಗಳನ್ನು ಹೊಸ ಖರೀದಿದಾರರಿಗೆ ವರ್ಗಾಯಿಸಬೇಕು ಎಂಬುದನ್ನು ಈ ಫಾರಂ ತಿಳಿಸುತ್ತದೆ.

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ಫಾರಂ 30ಯನ್ನು ಸಂಬಂಧಿಸಿದ ಆರ್‌ಟಿಒಗೆ ವಾಹನವನ್ನು ಮಾರಾಟ ಮಾಡಿದ 14 ದಿನಗಳೊಳಗೆ ಸಲ್ಲಿಸಬೇಕು. ಆರ್‌ಟಿಒ ಕಚೇರಿಗೆ ಫಾರಂ 30ರ 2 ಪ್ರತಿಗಳನ್ನು ಸಲ್ಲಿಸಬೇಕಾಗುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ಫಾರಂ 35

ಫಾರಂ 28 ಆರ್‌ಟಿಒದ ಎನ್‌ಒಸಿಯಾಗಿ ಕಾರ್ಯನಿರ್ವಹಿಸಿದರೆ, ಫಾರಂ 35 ವಾಹನ ಖರೀದಿಸಲು ಹಣಕಾಸು ಒದಗಿಸುವ ಬ್ಯಾಂಕಿನ ಎನ್‌ಒಸಿಯಾಗಿ ಕಾರ್ಯನಿರ್ವಹಿಸುತ್ತದೆ.

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ಬ್ಯಾಂಕ್ ಸಾಲದ ಸಹಾಯದಿಂದ ವಾಹನವನ್ನು ಖರೀದಿಸಿದ್ದರೆ, ಮಾರಾಟ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಫಾರಂ ಕಡ್ಡಾಯವಾಗಿದೆ.

ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಫಾರಂಗಳಿವು

ಫಾರಂ 35 ಅನ್ನು ಭರ್ತಿ ಮಾಡಿ ಸಂಬಂಧಪಟ್ಟ ಆರ್‌ಟಿಒಗೆ ಸಲ್ಲಿಸಿದ ನಂತರ ಆರ್‌ಸಿ ಬುಕ್'ನಲ್ಲಿರುವ ಹೈಪೋಥೆಕೇಶನ್ ಎಂಬ ಅಂಶವನ್ನು ತೆಗೆದುಹಾಕಲಾಗುತ್ತದೆ.

Most Read Articles

Kannada
English summary
Details about form 28, 29, 30 and 35 used in RTO offices. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X