ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಭರ್ಜರಿ ಆಫರ್ ನೀಡಿದ ವಜ್ರದ ವ್ಯಾಪಾರಿ

ಭಾರತ ಮಹಿಳಾ ಹಾಕಿ ತಂಡದ ಪ್ರೋತ್ಸಾಹ ಹೆಚ್ಚಿಸಲು 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡ ಯಾವುದಾದರು ಪದಕ ಗೆದ್ದರೆ ಪ್ರತಿ ಆಟಗಾರರಿಗೆ ದುಬಾರಿ ಬಹುಮಾನ ನೀಡುವುದಾಗಿ ಗುಜರಾತ್‌ ಮೂಲದ ಉದ್ಯಮಿ ಸಾವ್ಜಿ ಧೋಲಾಕಿಯಾ ಘೋಷಿಸಿದ್ದಾರೆ.

ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಭರ್ಜರಿ ಆಫರ್ ನೀಡಿದ ವಜ್ರದ ವ್ಯಾಪಾರಿ

ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೆಮಿ ಫೈನಲ್ ಪ್ರವೇಶಿಸಿ ಭಾರತ ಮಹಿಳಾ ಹಾಕಿ ತಂಡ ಹೊಸ ಇತಿಹಾಸವನ್ನು ಬರೆದಿದ್ದಾರೆ. ಆದರೆ ಭಾರತ ಮಹಿಳಾ ಹಾಕಿ ತಂಡ ಪೈನಲ್ ಪ್ರವೇಶಿಸುವಲ್ಲಿ ವಿಫಲವಾಗಿದ್ದಾರೆ. ಭಾರತಕ್ಕೆ ಕಂಚಿನ ಪದಕ ಗೆಲ್ಲುವ ಅವಕಾಶವಿದೆ. ಇನ್ನೊಂದು ಸೆಮಿ ಫೈನಲ್ ನಲ್ಲಿ ಸೋತ ತಂಡದ ವಿರುದ್ದ ಮುಂದಿನ ಪಂದ್ಯವಿರುತ್ತದೆ. ಆ ಪಂದ್ಯದಲ್ಲಿ ಭಾರತ ಮಹಿಳಾ ಹಾಕಿ ತಂಡ ಗೆದ್ದರೆ ಕಂಚಿನ ಪದಕ ಮುಡಿಗೇರಿಕೊಳ್ಳಬಹುದು.

ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಭರ್ಜರಿ ಆಫರ್ ನೀಡಿದ ವಜ್ರದ ವ್ಯಾಪಾರಿ

ಇದರ ನಡುವೆ ದುಬಾರಿ ಬಹುಮಾನಗಳನ್ನು ನೀಡುವುದರಲ್ಲಿ ಫೇಮಸ್ ಆಗಿರುವ ಗುಜರಾತ್ ಮೂಲದ ವಜ್ರದ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಅವರು ಟೋಕಿಯಾ ಒಲಿಂಪಿಕ್ಸ್‌ನಲ್ಲಿ ಯಾವುದಾದರು ಪದಕ ಗೆದ್ದರೆ ಭಾರತ ಮಹಿಳಾ ಹಾಕಿ ತಂಡದ ಪ್ರತಿಯೊಬ್ಬ ಸದಸ್ಯರಿಗೂ ಕನಸಿನ ಮನೆಯನ್ನು ಕಟ್ಟಿಕೊಳ್ಳಲು ತಮ್ಮ ಕಂಪನಿ ಹರಿಕೃಷ್ಣ ಗ್ರೂಪ್ ವತಿಯಿಂದ 11 ಲಕ್ಷ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಭರ್ಜರಿ ಆಫರ್ ನೀಡಿದ ವಜ್ರದ ವ್ಯಾಪಾರಿ

ಈಗಾಗಲೇ ಸ್ವಂತ ಮನೆ ಹೊಂದಿರುವವರಿಗೆ 5 ಲಕ್ಷ ರೂಪಾಯಿ ಮೌಲ್ಯದ ಹೊಸ ಕಾರು ಕೊಡಿಸಲಾಗುವುದು ಎಂದು ಸಾವ್ಜಿ ಧೋಲಾಕಿಯಾ ಟ್ವೀಟ್ ಮಾಡಿ ಘೋಷಿಸಿದ್ದಾರೆ. ಇದರ ಮೂಲಕ ವಜ್ರದ ವ್ಯಾಪಾರಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಭರ್ಜರಿ ಆಫರ್ ನೀಡಿದ ವಜ್ರದ ವ್ಯಾಪಾರಿ

ವಜ್ರದ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಅವರು ದುಬಾರಿ ಬಹುಮಾನ ನೀಡಿ ಹಲವು ಬಾರಿ ಸುದ್ದಿಯಾಗಿದ್ದಾರೆ.ಹಲವು ವರ್ಷಗಳಿಂದ ಧೋಲಾಕಿಯಾ ತನ್ನ ಕಂಪನಿಯ ಉದ್ಯೋಗಿಗಳಿಗೆ ವಾಹನಗಳನ್ನು ಉಡುಗೊರೆಯಾಗಿ ನೀಡುತ್ತಿದ್ದಾನೆ. ಅವರು ದೀಪಾವಳಿ ಹಬ್ಬಕ್ಕೆ ಬೋನಸ್ ಆಗಿ ವಾಹನವನ್ನು ನೀಡುತ್ತಾರೆ. ಧೋಲಾಕಿಯಾ ತನ್ನ ಉದ್ಯೋಗಿಗಳಿಗೆ 1,000 ಕ್ಕೂ ಹೆಚ್ಚು ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಾರೆ.

ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಭರ್ಜರಿ ಆಫರ್ ನೀಡಿದ ವಜ್ರದ ವ್ಯಾಪಾರಿ

ಉದ್ಯೋಗಿಗಳು ಕಂಪನಿಗಯಲ್ಲಿ 25 ವರ್ಷಗಳ ಸೇವೆಯನ್ನು ಪೂರೈಸುತ್ತಿರುವಾಗ, ಧೋಲಾಕಿಯಾ ಅವರಿಗೆ ಉಡುಗೊರೆಗಳನ್ನು ನೀಡುತ್ತಾರೆ. ವಜ್ರದ ವ್ಯಾಪಾರಿಯು ತನ್ನ ಮೂವರು ಉದ್ಯೋಗಿಗಳಿಗೆ ಐಷಾರಾಮಿ ಮರ್ಸಿಡಿಸ್ ಬೆಂಝ್ ಎಸ್‍ಯುವಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಭರ್ಜರಿ ಆಫರ್ ನೀಡಿದ ವಜ್ರದ ವ್ಯಾಪಾರಿ

ಸಾವ್ಜಿ ಧೋಲಾಕಿಯಾ ಕಂಪನಿಯೊಂದಿಗೆ 25 ವರ್ಷಗಳನ್ನು ಪೂರೈಸಿದ ಮೂರು ಉದ್ಯೋಗಿಗಳಿಗೆ ಬ್ಲ್ಯಾಕ್ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ 350ಡಿ ಎಸ್‍ಯುವಿಗಳನ್ನು ಉಡುಗೊರೆಯಾಗಿ ನೀಡಿದರು. ಸೂರತ್ ನಲ್ಲಿ ನಡೆದ ಸಮಾರಂಭದಲ್ಲಿ ಎಲ್ಲಾ ಮೂರು ಎಸ್‍ಯುವಿಗಳನ್ನು ಇವರು ಉದ್ಯೋಗಿಗಳಿಗೆ ಹಸ್ತಾಂತರಿಸಲಾಯಿತು.

ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಭರ್ಜರಿ ಆಫರ್ ನೀಡಿದ ವಜ್ರದ ವ್ಯಾಪಾರಿ

ಸಾವ್ಜಿ ಧೋಲಾಕಿಯಾ ಅವರು ಉದ್ಯೋಗಿಗಳಿಗೆ ನೀಡಿದ ಕಾರು ಉಡುಗೊರೆಗಳು ವೈರಲ್ ಆದ ನಂತರ ಸುದ್ದಿಯಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ಈ ಹಿಂದೆ ಅವರು ಸುಮಾರು 500 ಫಿಯೆಟ್ ಕಾರುಗಳು, 1,260 ಮಾರುತಿ ಕಾರುಗಳು ಮತ್ತು 1,200 ಯುನಿಟ್ ದಟ್ಸನ್ ರೆಡಿ-ಗೋಗಳನ್ನು ತಮ್ಮ ಉದ್ಯೋಗಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಭರ್ಜರಿ ಆಫರ್ ನೀಡಿದ ವಜ್ರದ ವ್ಯಾಪಾರಿ

ಇನ್ನು ಟೋಕಿಯೋ ಒಲಿಂಪಿಕ್ಸ್​ ನಲ್ಲಿ ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ್ಕಾಗಿ ಜರ್ಮನಿ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ 4-5 ಗೋಲುಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ. ಈ ಮೂಲಕ 41 ವರ್ಷಗಳ ಬಳಿಕ ಟೋಕಿಯೋ ಒಲಿಂಪಿಕ್ಸ್​ ಮೂಲಕ ಮತ್ತೊಮ್ಮೆ ಭಾರತೀಯ ಹಾಕಿ ತಂಡ ಕಂಚಿನ ಪದಕವನ್ನು ಗೆದ್ದುಕೊಂಡಿದೆ.

ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಭರ್ಜರಿ ಆಫರ್ ನೀಡಿದ ವಜ್ರದ ವ್ಯಾಪಾರಿ

ಒಲಿಂಪಿಕ್ಸ್​ನಲ್ಲಿ ಭಾರತದ ಹಾಕಿ ತಂಡ 12 ಪದಕ ಗೆದ್ದುಕೊಂಡಿತು. ಇದರಲ್ಲಿ 8 ಚಿನ್ನ, 1, ಬೆಳ್ಳಿ, 3 ಕಂಚು ಪದಕವಿದೆ. ಇದು ಒಲಿಂಪಿಕ್ಸ್​ ಇತಿಹಾಸದಲ್ಲೇ ತಂಡವೊಂದರೆ ಸರ್ವಶ್ರೇಷ್ಠ ಸಾಧನೆಯಾಗಿದೆ. ಈ ಬಾರಿ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜರ್ಮನಿ ತಂಡವನ್ನು ಸೋಲಿಸುವ ಮೂಲಕ ಭಾರತದ ಹಾಕಿ ತಂಡ ಹೊಸ ದಾಖಲೆಯನು ನಿರ್ಮಿಸಿದೆ.

Most Read Articles

Kannada
English summary
Diamond merchant promises houses car for women hockey team if they win olympic medal details
Story first published: Thursday, August 5, 2021, 16:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X