ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವೆ ಇರುವ ವ್ಯತ್ಯಾಸಗಳಿವು

ಹೈಬ್ರಿಡ್ ಕಾರುಗಳು ಭಾರತದಲ್ಲಿ ನಿಧಾನವಾಗಿ ಜನಪ್ರಿಯವಾಗುತ್ತಿವೆ. ಆದರೆ ಜನರಿಗೆ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವೆ ಇರುವ ವ್ಯತ್ಯಾಸಗಳ ಬಗ್ಗೆ ಹಲವು ಗೊಂದಲಗಳಿವೆ. ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವೆ ಇರುವ ವ್ಯತ್ಯಾಸಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವೆ ಇರುವ ವ್ಯತ್ಯಾಸಗಳಿವು

ಹೈಬ್ರಿಡ್ ಕಾರುಗಳು 2 ಎಂಜಿನ್ ಹೊಂದಿರುತ್ತವೆ. ಇವುಗಳಲ್ಲಿ ಒಂದು ಪೆಟ್ರೋಲ್ ಎಂಜಿನ್ ಆಗಿದ್ದರೆ ಒಂದು ಎಲೆಕ್ಟ್ರಿಕ್ ಎಂಜಿನ್ ಹೊಂದಿರುತ್ತದೆ. ಈ ಎಂಜಿನ್'ಗಳು ವ್ಹೀಲ್'ಗಳು ಚಲಿಸಲು ಅಗತ್ಯವಿರುವ ಪವರ್ ಅನ್ನು ಒದಗಿಸುತ್ತವೆ. ಹೈಬ್ರಿಡ್ ಕಾರುಗಳು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದ್ದು, ಅಲ್ಪ ಪ್ರಮಾಣದ ಪೆಟ್ರೋಲ್ ಮಾತ್ರ ಬಳಸುತ್ತವೆ.

ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವೆ ಇರುವ ವ್ಯತ್ಯಾಸಗಳಿವು

ಹೈಬ್ರಿಡ್ ಕಾರುಗಳು ಕಡಿಮೆ ಮಾಲಿನ್ಯವನ್ನುಂಟು ಮಾಡುತ್ತವೆ. ಹೈಬ್ರಿಡ್ ಕಾರುಗಳಲ್ಲಿರುವ ಬ್ಯಾಟರಿಗಳು ಕಾರು ಚಾಲನೆಯಲ್ಲಿರುವಾಗಲೇ ರೀಚಾರ್ಜ್ ಆಗುತ್ತವೆ. ಆದರೆ ಎಲೆಕ್ಟ್ರಿಕ್ ಕಾರುಗಳಲ್ಲಿರುವ ಬ್ಯಾಟರಿಗಳನ್ನು ಪ್ರತ್ಯೇಕವಾಗಿ ರೀಚಾರ್ಜ್ ಮಾಡಬೇಕಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವೆ ಇರುವ ವ್ಯತ್ಯಾಸಗಳಿವು

ಹೈಬ್ರಿಡ್ ಕಾರುಗಳು ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಹೈಬ್ರಿಡ್ ಕಾರುಗಳು ಪೆಟ್ರೋಲ್ ಎಂಜಿನ್ ಹಾಗೂ ಎಲೆಕ್ಟ್ರಿಕ್ ಮೋಟರ್‌ ಅನ್ನು ಹೊಂದಿದ್ದರೆ, ಎಲೆಕ್ಟ್ರಿಕ್ ಕಾರುಗಳು ಒಂದು ಎಲೆಕ್ಟ್ರಿಕ್ ಮೋಟರ್ ಅನ್ನು ಮಾತ್ರ ಹೊಂದಿರುತ್ತವೆ.

ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವೆ ಇರುವ ವ್ಯತ್ಯಾಸಗಳಿವು

ಎಲೆಕ್ಟ್ರಿಕ್ ಮೋಟರ್‌ಗಳ ಸಂಖ್ಯೆ ಬದಲಾಗಬಹುದು. ಆದರೆ ಎಲೆಕ್ಟ್ರಿಕ್ ಕಾರುಗಳು ಎಲೆಕ್ಟ್ರಿಕ್ ಮೋಟರ್‌ಗಳಿಂದ ಮಾತ್ರ ಚಾಲನೆಯಾಗುತ್ತವೆ. ಅಂದರೆ ಎಲೆಕ್ಟ್ರಿಕ್ ಕಾರುಗಳು ಪೆಟ್ರೋಲ್ ಅಥವಾ ಡೀಸೆಲ್ ಎಂಜಿನ್ ಬದಲಿಗೆ ಎಲೆಕ್ಟ್ರಿಕ್ ಮೋಟರ್ ಅನ್ನು ಮಾತ್ರ ಹೊಂದಿರುತ್ತವೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವೆ ಇರುವ ವ್ಯತ್ಯಾಸಗಳಿವು

ಹೈಬ್ರಿಡ್ ಕಾರುಗಳಂತೆಯೇ, ಎಲೆಕ್ಟ್ರಿಕ್ ಕಾರುಗಳನ್ನು ಸಹ ಪರಿಸರ ಸ್ನೇಹಿಯಾಗಿ ನೋಡಲಾಗುತ್ತದೆ. ಹೈಬ್ರಿಡ್ ಕಾರುಗಳು ಕಡಿಮೆ ಮಾಲಿನ್ಯ ಹೊರಸೂಸುವಿಕೆ ವರ್ಗಕ್ಕೆ ಸೇರುತ್ತವೆ. ಅಂದರೆ ಈ ಕಾರುಗಳು ಕಡಿಮೆ ಪ್ರಮಾಣದಲ್ಲಿ ಮಾಲಿನ್ಯವನ್ನು ಹೊರಸೂಸುತ್ತವೆ. ಇದೇ ವೇಳೆ ಎಲೆಕ್ಟ್ರಿಕ್ ಕಾರುಗಳು ಶೂನ್ಯ ಮಾಲಿನ್ಯ ಹೊರಸೂಸುವಿಕೆ ವರ್ಗಕ್ಕೆ ಸೇರುತ್ತವೆ.

ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವೆ ಇರುವ ವ್ಯತ್ಯಾಸಗಳಿವು

ಅಂದರೆ ಎಲೆಕ್ಟ್ರಿಕ್ ಕಾರುಗಳು ಯಾವುದೇ ರೀತಿಯ ಮಾಲಿನ್ಯವನ್ನು ಉಂಟು ಮಾಡುವುದಿಲ್ಲ. ಇಂಧನದ ಮೇಲೆ ಯಾವುದೇ ವೆಚ್ಚ ಮಾಡದ ಕಾರಣಕ್ಕೆ ಎಲೆಕ್ಟ್ರಿಕ್ ಕಾರುಗಳನ್ನು ಚಾಲನೆ ಮಾಡುವ ವೆಚ್ಚವು ತುಂಬಾ ಕಡಿಮೆಯಾಗಿದೆ. ಎಲೆಕ್ಟ್ರಿಕ್ ಕಾರುಗಳಿಗೆ ಹೋಲಿಸಿದರೆ, ಹೈಬ್ರಿಡ್ ಕಾರುಗಳ ನಿರ್ವಹಣೆ ತುಸು ದುಬಾರಿಯಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವೆ ಇರುವ ವ್ಯತ್ಯಾಸಗಳಿವು

ವಿಶ್ವಾದ್ಯಂತವಿರುವ ಕೆಲವು ಜನಪ್ರಿಯ ಹೈಬ್ರಿಡ್ ಕಾರುಗಳಿವು:

ಟೊಯೋಟಾ ಪ್ರಿಯಸ್

ಫೋರ್ಡ್ ಫ್ಯೂಷನ್ ಹೈಬ್ರಿಡ್

ಟೊಯೋಟಾ ಕ್ಯಾಮ್ರಿ

ಹೋಂಡಾ ಅಕಾರ್ಡ್

ಬಿಎಂಡಬ್ಲ್ಯು ಐ 8

ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಕಾರುಗಳ ನಡುವೆ ಇರುವ ವ್ಯತ್ಯಾಸಗಳಿವು

ದೇಶಿಯ ಮಾರುಕಟ್ಟೆಯಲ್ಲಿರುವ ಕೆಲವು ಜನಪ್ರಿಯ ಎಲೆಕ್ಟ್ರಿಕ್ ಕಾರುಗಳಿವು

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‌ಯುವಿ

ಎಂಜಿ ಝಡ್ಎಸ್ ಎಲೆಕ್ಟ್ರಿಕ್ ಎಸ್‌ಯುವಿ

ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಎಸ್‌ಯುವಿ

Most Read Articles

Kannada
English summary
Difference between hybrid cars and electric cars. Read in Kannada.
Story first published: Thursday, April 15, 2021, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X