ಬೈಕ್ ಟ್ಯಾಕ್ಸಿ ಶುರು ಮಾಡಿದ ವಿಶೇಷ ಚೇತನರು

ಯಾವುದೇ ಕೆಲಸ ದೊರಕದೇ ನಿರಾಶರಾಗಿದ್ದ, ತಮ್ಮ ಕುಟುಂಬದ ಮೇಲೆ ಅವಲಂಬಿತವಾಗಲು ಬಯಸದ ವಿಶೇಷ ಚೇತನರು ತಿರುಚಿಯಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಶುರುಮಾಡಿದ್ದಾರೆ. ಅಂದ ಹಾಗೆ, ಇಬ್ಬರು ಮಹಿಳೆಯರು ಸೇರಿದಂತೆ 20 ಜನರಿರುವ ಈ ಗುಂಪು, ವಿಶೇಷವಾಗಿ ತಯಾರಿಸಲಾಗಿರುವ 20 ತ್ರಿಚಕ್ರ ಸ್ಕೂಟರ್‍‍ಗಳನ್ನು ಹೊಂದಿದೆ.

ಬೈಕ್ ಟ್ಯಾಕ್ಸಿ ಶುರು ಮಾಡಿದ ವಿಶೇಷ ಚೇತನರು

ಈ ತಂಡದ ಸದಸ್ಯರು, ಪ್ರಯಾಣಿಕರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ಕಾರ್ಯ ನಿರ್ವಹಿಸಲಿದ್ದಾರೆ. ಮೊದಲಿಗೆ ಮೂರು ಜನ ವಿಶೇಷ ಚೇತನರು ಮಾ-ಊಲಾ ಎಂಬ ಹೆಸರಿನಲ್ಲಿ ಈ ಬೈಕ್ ಟ್ಯಾಕ್ಸಿ ಸೇವೆಯನ್ನು ಶುರು ಮಾಡಿದರು. ಆರಂಭವಾಗಿ 20 ತಿಂಗಳು ಕಳೆದಿರುವ ಈ ತಂಡದಲ್ಲಿ ಈಗ 20 ಜನ ಸದಸ್ಯರಿದ್ದಾರೆ.

ಬೈಕ್ ಟ್ಯಾಕ್ಸಿ ಶುರು ಮಾಡಿದ ವಿಶೇಷ ಚೇತನರು

ಹಳದಿ ಬಣ್ಣದ ಟಿ ಶರ್ಟ್ ಹಾಗೂ ಹೆಲ್ಮೆಟ್ ಧರಿಸುವ ಈ ತಂಡದ ಸದಸ್ಯರು, ತಿರುಚಿಯ ರೈಲ್ವೆ ಜಂಕ್ಷನ್ ಹಾಗೂ ಚಾತಿರಾಮ್ ಬಸ್ ನಿಲ್ದಾಣ ಸೇರಿದಂತೆ ತಿರುಚಿ ನಗರದ ಐದು ಕಡೆ ತಮ್ಮ ಸೇವೆಯನ್ನು ಶುರು ಮಾಡಿದ್ದಾರೆ.

ಬೈಕ್ ಟ್ಯಾಕ್ಸಿ ಶುರು ಮಾಡಿದ ವಿಶೇಷ ಚೇತನರು

99404 09926 ನಂಬರಿಗೆ ಕರೆ ಮಾಡಿ ತಿರುಚಿ ನಗರದಲ್ಲಿ ಈ ಸೇವೆಯನ್ನು ಪಡೆಯಬಹುದು. ಈ ಬಗ್ಗೆ ಮಾತನಾಡಿರುವ ಮಾ - ಊಲಾದ ಪ್ರತಿನಿಧಿ ಎನ್ ಅಶ್ರಫ್ ಅಲಿರವರು, ವಿಶೇಷ ಚೇತನರ ತಂಡವೊಂದು ಚೆನ್ನೈನಲ್ಲಿ ಬೈಕ್ ಟ್ಯಾಕ್ಸಿ ಆರಂಭಿಸಿರುವುದರಿಂದ ಪ್ರೇರಣೆಗೊಂಡು ನಾವು ಈ ಸೇವೆಯನ್ನು ಆರಂಭಿಸಿದ್ದೇವೆ.

ಬೈಕ್ ಟ್ಯಾಕ್ಸಿ ಶುರು ಮಾಡಿದ ವಿಶೇಷ ಚೇತನರು

ನಮಗೆ ಕರೆ ಬಂದ ನಂತರ ಹತ್ತಿರದಲ್ಲಿರುವ ನಮ್ಮ ತಂಡದ ಸದಸ್ಯರೊಬ್ಬರು ಗ್ರಾಹಕರನ್ನು ಸಂಪರ್ಕಿಸಿ ಅವರಿಗೆ ಸೇವೆ ನೀಡುತ್ತಾರೆ. ನಾವು ನಮ್ಮ ಸೇವೆಯನ್ನು ತಿರುಚಿ ನಗರದ್ಯಾಂತ ಹಾಗೂ ಹೊರವಲಯಕ್ಕೂ ನೀಡುತ್ತೇವೆ ಎಂದು ಹೇಳಿದರು.

ಬೈಕ್ ಟ್ಯಾಕ್ಸಿ ಶುರು ಮಾಡಿದ ವಿಶೇಷ ಚೇತನರು

ಈ ಬೈಕ್ ಟ್ಯಾಕ್ಸಿ ತಂಡವು ಆಂಡ್ರಾಯಿಡ್ ಮೊಬೈಲ್ ಅಪ್ಲಿಕೇಷನ್ ಅನ್ನು ಹೊಂದಿದ್ದು, ಅದರ ಮೂಲಕವೂ ಟ್ಯಾಕ್ಸಿಯನ್ನು ಬುಕ್ ಮಾಡಬಹುದಾಗಿದೆ. ಈ ಸೇವೆಗಾಗಿ ಹಗಲು ವೇಳೆಯಲ್ಲಿ ಪ್ರತಿ ಕಿ.ಮೀಗೆ ರೂ.10 ಶುಲ್ಕ ವಿಧಿಸುವ ತಂಡವು, ರಾತ್ರಿ ವೇಳೆಯ ಸೇವೆಗಾಗಿ ರೂ.15 ಶುಲ್ಕ ವಿಧಿಸಲಿದೆ. ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 4 ಗಂಟೆಯವರೆಗೂ ಈ ಸೇವೆಯನ್ನುನೀಡಲಾಗುತ್ತದೆ.

ಬೈಕ್ ಟ್ಯಾಕ್ಸಿ ಶುರು ಮಾಡಿದ ವಿಶೇಷ ಚೇತನರು

ಮಾ - ಊಲಾ ಬೈಕ್ ಟ್ಯಾಕ್ಸಿ ತಂಡದ ಪ್ರಕಾರ ಲಾಭವನ್ನು ಗಳಿಸುವುದರ ಹೊರತಾಗಿ ಸ್ವಾವಲಂಬಿಯಾಗಿ ಬದುಕುವುದನ್ನು ಕಲಿಯಬಹುದು. ಇದರ ಜೊತೆಗೆ ಜನರು ಆಟೋ ರಿಕ್ಷಾ ಹಾಗೂ ಕ್ಯಾಬ್‍‍ಗಳಿಗೆ ಹೆಚ್ಚು ಹಣವನ್ನು ನೀಡುವ ಬದಲು ನಮ್ಮ ಸೇವೆಯನ್ನು ಕಡಿಮೆ ಬೆಲೆಯಲ್ಲಿ ಪಡೆಯಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬೈಕ್ ಟ್ಯಾಕ್ಸಿ ಶುರು ಮಾಡಿದ ವಿಶೇಷ ಚೇತನರು

ಕೆಲಸ ಸಿಗುತ್ತಿಲ್ಲ ಎಂದು ಕೊರಗುವ ಬದಲು ಈ ರೀತಿಯ ಸೇವೆಯನ್ನು ನೀಡುವುದರಿಂದ ಆತ್ಮ ವಿಶ್ವಾಸ ದೊರೆತು ಹೆಚ್ಚಿನ ಸಾಧನೆ ಮಾಡಬಹುದೆಂದು ಈ ತಂಡದ ಸದಸ್ಯರಲ್ಲಿ ಒಬ್ಬರಾದ ಕೆ ಶಿವರವರು ತಿಳಿಸಿದರು.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಬೈಕ್ ಟ್ಯಾಕ್ಸಿ ಶುರು ಮಾಡಿದ ವಿಶೇಷ ಚೇತನರು

ಈ ತಂಡದಲ್ಲಿರುವ ಎಲ್ಲಾ 20 ಸದಸ್ಯರು ಬಾಲ್ಯದಲ್ಲಿ ಪೊಲೀಯೊಗೆ ತುತ್ತಾದ ಕಾರಣ ಕೈಕಾಲುಗಳ ಸ್ವಾಧೀನವನ್ನು ಕಳೆದುಕೊಂಡಿದ್ದಾರೆ. ಆದರೆ ಇವರು ಮೂರು ಚಕ್ರದ ವಾಹನಗಳನ್ನು ಚಾಲನೆ ಮಾಡಬಹುದೆಂದು ಜಿಲ್ಲಾಡಳಿತವು ತಿಳಿಸಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಬೈಕ್ ಟ್ಯಾಕ್ಸಿ ಶುರು ಮಾಡಿದ ವಿಶೇಷ ಚೇತನರು

ಮಾ - ಊಲಾ ತಂಡವು ತಮ್ಮ ಸೇವೆಯನ್ನು ಪೂರ್ತಿ ತಿರುಚಿ ನಗರದ್ಯಾಂತ ವಿಸ್ತರಿಸಲು ಬಯಸಿದೆ. ಆದರೆ ಈ ತಂಡವು ಆಟೋ ರಿಕ್ಷಾದವರಿಂದ ಬೆದರಿಕೆಯನ್ನು ಎದುರಿಸುತ್ತಿದೆ. ಆಟೋ ರಿಕ್ಷಾದವರು ಈ ತಂಡವನ್ನು ತಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತದೆಂದು ಪರಿಗಣಿಸಿದ್ದಾರೆ. ಈ ಬೆದರಿಕೆಯ ವಿರುದ್ಧ ರಕ್ಷಣೆ ನೀಡುವಂತೆ ಮಾ - ಊಲಾ ತಂಡದ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಬೈಕ್ ಟ್ಯಾಕ್ಸಿ ಶುರು ಮಾಡಿದ ವಿಶೇಷ ಚೇತನರು

ಈ ಬಗ್ಗೆ ಮಾತನಾಡಿರುವ ತಿರುಚಿ ಜಿಲ್ಲೆಯ ವಿಶೇಷ ಚೇತನರ ಅಭಿವೃದ್ಧಿ ಅಧಿಕಾರಿ ಆರ್ ರವಿಚಂದ್ರನ್‍‍ರವರು ಜಿಲ್ಲಾಡಳಿತವು ಈ ಬೈಕ್ ಟ್ಯಾಕ್ಸಿ ಸೇವೆಗೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲಿದೆ ಎಂದು ಹೇಳಿದ್ದಾರೆ.

Image Courtesy: http://maaulaa.org/

Most Read Articles

Kannada
English summary
Disabled people launch bike taxis in Tirchy - Read in kannada
Story first published: Wednesday, September 18, 2019, 16:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X