ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ

ಸಂಚಾರಿ ನಿಯಮ ಉಲ್ಲಂಘನೆ ಮಾಡಿ, ಸಾವಿರಾರು ರೂಪಾಯಿ ದಂಡ ಬಾಕಿ ಉಳಿಸಿಕೊಂಡವರಿಗೆ ಕರ್ನಾಟಕ ಸರ್ಕಾರ ಸಿಹಿಸುದ್ದಿ ನೀಡಿದೆ. ರಾಜ್ಯ ಪೊಲೀಸ್ ಇಲಾಖೆ ವಿಧಿಸಿದ್ದ ಇ - ಚಲನ್ ದಂಡದ ಮೊತ್ತದಲ್ಲಿ ರಿಯಾಯಿತಿ ನೀಡಿ, ಆದೇಶ ಹೊರಡಿಸಿದೆ. ಆ ಕುರಿತಂತೆ ಹೆಚ್ಚಿನ ವಿವರವನ್ನು ತಿಳಿದುಕೊಳ್ಳೋಣ.

ರಾಜ್ಯ ಸಾರಿಗೆ ಹಾಗೂ ರಸ್ತೆ ಸುರಕ್ಷತೆ ಇಲಾಖೆಯ ಆಯುಕ್ತರು, ರಾಜ್ಯಾದ್ಯಂತ ಪೊಲೀಸ್ ಇಲಾಖೆಯು ಸಂಚಾರಿ ನಿಯಮ ಉಲ್ಲಂಘನೆಗಳ ವಿರುದ್ದ ದಾಖಲಿಸಿದ್ದ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡ 50% ರಿಯಾಯಿತಿಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದರಂತೆ ಹೈಕೋರ್ಟ್ ನ್ಯಾಯಾಧೀಶರು ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರ ಸಮ್ಮುಖದಲ್ಲಿ ಕಳೆದ ಜನವರಿ 27 ರಂದು ಸಭೆ ನಡೆಸಿ, ಈ ಕುರಿತು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿಸಿದ್ರೆ 50% ರಿಯಾಯಿತಿ: ರಾಜ್ಯ ಸರ್ಕಾರ ಆದೇಶ

ಫೆಬ್ರುವರಿ 11 ರ (ಮುಂದಿನ ಶನಿವಾರ) ಒಳಗಾಗಿ ಇತ್ಯರ್ಥವಾಗುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಒಂದು ಬಾರಿಯ ಕ್ರಮವಾಗಿ ಬಾಕಿ ಇರುವ ದಂಡದ ಮೊತ್ತದಲ್ಲಿ ಶೇಕಡ 50% ರಿಯಾಯಿತಿ ನೀಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ನಗರ ಸಂಚಾರಿ ವಿಶೇಷ ಪೊಲೀಸ್ ಕಮಿಷನರ್ ಎಂ.ಎ.ಸಲೀಂ ಅವರು, ಎಲ್ಲ ರೀತಿಯ ಸಂಚಾರ ನಿಯಮ ಉಲ್ಲಂಘನೆಗಳಿಗೂ ಈ ನಿಯಮ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.

ವಿಶ್ವದಲ್ಲೇ ಅತಿ ಹೆಚ್ಚು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬೆಂಗಳೂರು ನಗರವೊಂದರಲ್ಲೇ ದಾಖಲಾಗುತ್ತದೆ. ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಸುಮಾರು 4.2 ಲಕ್ಷ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಿ, ರೂ.23 ಕೋಟಿ ದಂಡವನ್ನು ಸಂಗ್ರಹಿಸಲಾಗಿತ್ತು. ರಾಜ್ಯಾದ್ಯಂತ ಸಂಚಾರ ನಿಯಮ ಉಲ್ಲಂಘಿಸುವವರಿಂದ ಸುಮಾರು ರೂ.530 ಕೋಟಿ ದಂಡ ಬಾಕಿ ಇದ್ದು, ಇದರಲ್ಲಿ ಬೆಂಗಳೂರು ನಗರದಿಂದಲೇ 500 ಕೋಟಿ ದಂಡ ಬಾಕಿ ಉಳಿದಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಂಡ ಪಾವತಿ ಹೇಗೆ?
ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವವರೂ ಇ-ಚಲನ್ ಪ್ರಕರಣಗಳಿಗೆ ದಂಡ ಕಟ್ಟಲು ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಿಗೆ ಅಥವಾ ನಗರದ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ಗೆ ಭೇಟಿ ನೀಡಬಹುದು. ಇಷ್ಟೇಅಲ್ಲದೆ, ಪೇಟಿಎಂ ಅಥವಾ ಕರ್ನಾಟಕ ಒನ್ ಮೂಲಕವು ದಂಡವನ್ನು ಪಾವತಿಸಬಹುದು. ಇತ್ತೀಚೆಗೆ ಪಕ್ಕದ ತೆಲಂಗಾಣ ಕೂಡ ಸಾಲವೇಳೆದ ರೀತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ರಿಯಾಯಿತಿ ವೇಳೆ ಆಯೋಜಿಸಿತ್ತು.

ಚಾಲನೆ ಮಾಡುವಾಗ ಅವಧಿ ಮುಗಿದ ಪರವಾನಗಿಯನ್ನು ಹೊಂದುವುದು. ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು. ಪರವಾನಗಿ ಇಲ್ಲದವರಿಗೆ ವಾಹನವನ್ನು ಓಡಿಸಲು ಕೊಡುವುದು. ವಿಮೆ, ಫಿಟ್‌ನೆಸ್ ಹೊಂದಿಲ್ಲದ ವಾಹನ ಚಲಾಯಿಸುವುದು. ವೇಗದಲ್ಲಿ ಅಜಾಗರೂಕತೆಯಿಂದ ಚಾಲನೆ ಮಾಡುವುದು, ಮದ್ಯ ಸೇವಿಸಿ ವಾಹನ ಚಲಾಯಿಸುವುದು. ಒನ್ ವೇಯಲ್ಲಿ ಸಂಚರಿಸುವುದು, ಹೈಲ್ಮೆಟ್ ಧರಿಸಿದೇ ಇರುವುದು, ಟ್ರಾಫಿಕ್ ಸಿಗ್ನಲ್ ನಲ್ಲಿ ನಿಲುಗಡೆ ರೇಖೆಯನ್ನು ದಾಟುವುದು, ಹೆಡ್‌ಲೈಟ್‌ಗಳನ್ನು ಬೇಕಾಬಿಟ್ಟಿ ಬಳಕೆ ಮಾಡುವುದು, ಖಾಸಗಿ ವಾಹನವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವುದು ಪ್ರಮುಖ ಸಂಚಾರಿ ನಿಯಮ ಉಲ್ಲಂಘನೆಯ ಅಪರಾಧಗಳಾಗಿವೆ.

ನಿಮ್ಮ ಜವಾಬ್ದಾರಿಗಳೇನು?
ವಾಹನವನ್ನು ನೋಂದಣಿ ಮಾಡಿಸಿರಬೇಕು. ನೋಂದಣಿ ಸಂಖ್ಯೆಯು ವಾಹನದ ಹಿಂಭಾಗ ಮತ್ತು ಮುಂಭಾಗ ಸರಿಯಾಗಿ ಪ್ರದರ್ಶಿಸಬೇಕು. ವಾಹನದ ವಿಮೆ ಮಾಡಿಸಿರಬೇಕು. ಫಿಟ್‌ನೆಸ್ ಹೊಂದಿರುವ ವಾಹನಗಳನ್ನು ಚಲಾಯಿಸಬೇಕು (ಇಲ್ಲದಿದ್ದರೆ ನಿಮ್ಮ ಹಾಗೂ ಇತರರ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಾಹನ ಚಲಾಯಿಸುವಾಗ ಮದ್ಯ ಸೇವನೆ ಮಾಡಿರಬಾರದು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು. ಸಂಚಾರಿ ನಿಯಮ ಉಲ್ಲಂಘನೆ ಮಾಡಬಾರದು. ದೈಹಿಕ ಹಾಗೂ ಮಾನಸಿಕವಾಗಿ ನೀವು ಹೆಚ್ಚು ಬಲವಾಗಿರಬೇಕು.

ಒಟ್ಟಾರೆಯಾಗಿ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರು ವಾಹನ ಚಲಾಯಿಸಿದರೆ, ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸುವುದಿಲ್ಲ. ಪ್ರತಿಯೊಬ್ಬರು ಈ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕು. ಜೊತೆಗೆ ನಮ್ಮನ್ನೇ ನಂಬಿಕೊಂಡಿರುವ ಕುಟುಂಬದ ಪರಿಸ್ಥಿತಿ ಏನೆಂಬುದನ್ನು ಒಂದು ಕ್ಷಣ ಯೋಚಿಸಬೇಕು. ಅಲ್ಲದೆ, ಯಾವುದೇ ರೀತಿ ಮದ್ಯ ಸೇವಿಸಿದೇ ವಾಹನ ಚಲಾಯಿಸುವ ಮೂಲಕ ದೊಡ್ಡಮಟ್ಟದ ಅಪಘಾತವಾಗುವುದನ್ನು ತಡೆಯಬಹುದು. ಸುರಕ್ಷತೆಯಿಂದ ಸಂಚಾರಿ ನಿಯಮ ಪಾಲಿಸಿಕೊಂಡು ವಾಹನ ಚಲಾಯಿಸಲು ಸಂಕಲ್ಪ ಮಾಡೋಣ.

Most Read Articles

Kannada
English summary
Discount on fine for traffic violation state government order details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X