ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಕರೋನಾ ವೈರಸ್ ಇಡೀ ದೇಶವನ್ನು ಆವರಿಸಿದೆ. ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವೈರಸ್ ತಡೆಗಟ್ಟಲು ಜನರು ಸೋಷಿಯಲ್ ಡಿಸ್‌ಟೆನ್ಸ್‌ನಂತಹ ಮೂಲ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.

ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಆಸ್ಪತ್ರೆಗಳಲ್ಲಿ ಕರೋನಾ ವೈರಸ್ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಕೆಲವು ವೈದ್ಯರು ಕರ್ತವ್ಯ ಮುಗಿದ ನಂತರ ಮನೆಯಿಂದ ದೂರವಿರುತ್ತಿದ್ದಾರೆ. ಇನ್ನೂ ಕೆಲವರು ಮನೆಗೆ ಹೋಗುವಾಗ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದ್ದಾರೆ.

ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಇದರಲ್ಲಿ ತಮ್ಮ ಕುಟುಂಬವನ್ನು ಸೋಂಕಿನಿಂದ ರಕ್ಷಿಸಲು ಕರ್ತವ್ಯ ಮುಗಿದ ನಂತರ ಮನೆಗೆ ಹೋಗುವ ಬದಲು ತಮ್ಮ ಕಾರುಗಳಲ್ಲಿಯೇ ಉಳಿದುಕೊಂಡಿರುವ ವೈದ್ಯರೂ ಸೇರಿದ್ದಾರೆ. ಚಿಕಿತ್ಸೆಯ ಸಮಯದಲ್ಲಿ ಅವರು ಕಾರನ್ನೇ ತಮ್ಮ ಮನೆಯನ್ನಾಗಿಸಿ ಕೊಂಡಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಲ್ಲಿ ಸೋಂಕಿನ ಅಪಾಯವು ಹಲವು ಪಟ್ಟು ಹೆಚ್ಚಾಗಿರುತ್ತದೆ. ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಸಚಿನ್ ನಾಯಕ್‌ರವರು ತಮ್ಮ ಕಾರನ್ನೇ ಮನೆಯನ್ನಾಗಿಸಿ ಕೊಂಡಿದ್ದಾರೆ.

ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಅವರು ಆಸ್ಪತ್ರೆಯಲ್ಲಿ ಪ್ರತಿದಿನ ಕರೋನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದರಿಂದಾಗಿ ಅವರು ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಮನೆಗೆ ಹೋದರೆ, ಅವರ ಕುಟುಂಬಕ್ಕೆ ಸಹ ಸೋಂಕು ತಗುಲಲಿದೆ.

MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಮುನ್ನೆಚ್ಚರಿಕೆ ಕಾರಣಕ್ಕಾಗಿ ಅವರು ತಮ್ಮ ಕುಟುಂಬದಿಂದ ದೂರವಿದ್ದು, ಮಾರುತಿ ಇಗ್ನಿಸ್ ಕಾರಿನಲ್ಲಿ ವಾಸಿಸುತ್ತಿದ್ದಾರೆ. ತಮಗೆ ಅಗತ್ಯವಿರುವ ವಸ್ತುಗಳನ್ನು ಕಾರಿನಲ್ಲಿ ಇಟ್ಟುಕೊಂಡಿದ್ದಾರೆ.

ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಹಲವಾರು ದಿನಗಳಿಂದ ತಮ್ಮ ಮನೆಗೆ ಹೋಗಿಲ್ಲವೆಂದು ಸಚಿನ್ ನಾಯಕ್‌ರವರು ಹೇಳಿದ್ದಾರೆ. ಈ ಬಿಕ್ಕಟ್ಟಿನ ಸಮಯದಲ್ಲಿ ಕಾರಿನಲ್ಲಿ ಪ್ರತ್ಯೇಕವಾಗಿರುವುದು ಸರಿಯೆಂದು ಅವರು ಭಾವಿಸಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..!

ಕುಟುಂಬದವರ ಜೊತೆ ಮಾತನಾಡಬೇಕೇನಿಸಿದಾಗ ಮೊಬೈಲ್‌ನಲ್ಲಿ ವಾಯ್ಸ್ ಕಾಲ್ ಅಥವಾ ವೀಡಿಯೊ ಕಾಲ್ ಮೂಲಕ ಮಾತನಾಡುತ್ತಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‌ರವರು ಸಚಿನ್ ಅವರ ನಡೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಶ್ಲಾಘಿಸಿದ್ದಾರೆ.

Most Read Articles

Kannada
English summary
Doctor uses his car to sleep to stop spreading of Covid 19. Read in Kannada.
Story first published: Saturday, April 11, 2020, 18:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X