Just In
- 1 hr ago
ಮೇಡ್ ಇನ್ ಇಂಡಿಯಾ ಯುದ್ಧ ವಾಹನಗಳ ಅಬ್ಬರ: ಮತ್ತಷ್ಟು ಬಲಿಷ್ಟಗೊಂಡ ಭಾರತೀಯ ಸೇನೆ!
- 2 hrs ago
ವಾರದ ಸುದ್ದಿಗಳು: ಎಕ್ಸ್ಯುವಿ700 ಮಾದರಿಗೆ ಸೇಫರ್ ಚಾಯ್ಸ್ ಪ್ರಶಸ್ತಿ, ಸುರಕ್ಷತೆಯಲ್ಲಿ ಮುಗ್ಗರಿಸಿದ ಕಿಯಾ ಕಾರೆನ್ಸ್..
- 17 hrs ago
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- 18 hrs ago
ಭಾರತದಲ್ಲಿ ಹೊಸ ಕವಾಸಕಿ ನಿಂಜಾ 400 ಸೂಪರ್ಸ್ಪೋರ್ಟ್ ಬೈಕ್ ಬಿಡುಗಡೆ
Don't Miss!
- News
ಉಪ ಚುನಾವಣೆ: 7 ವಿಧಾನಸಭೆ 3 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಿವರು
- Finance
ಜುಲೈ 1ರಿಂದ ಏನೆಲ್ಲಾ ಬದಲಾವಣೆ?, ವೈಯಕ್ತಿಕ ಹಣಕಾಸಿಗೆ ಏಟು
- Sports
IND vs IRE: ಮೊದಲ ಟಿ20 ಪಂದ್ಯಕ್ಕೂ ಮುನ್ನ ವಿಶ್ವಕಪ್ ಬಗ್ಗೆ ಹಾರ್ದಿಕ್ ಪಾಂಡ್ಯ ಮಹತ್ವದ ಹೇಳಿಕೆ
- Movies
ನವೀನ್ ಸಜ್ಜು ಮೈಸೂರು ಮನೆ ಹೇಗಿದೆ ಗೊತ್ತಾ?
- Technology
LED ಡಿಸ್ಪ್ಲೇ ಹೊಂದಿರುವ ಅತ್ಯುತ್ತಮ ಪವರ್ಬ್ಯಾಂಕ್ಗಳ ಲಿಸ್ಟ್ ಇಲ್ಲಿದೆ!
- Lifestyle
ಜೂನ್ 26 ರಿಂದ ಜುಲೈ 2ರ ವಾರ ಭವಿಷ್ಯ: ಈ ರಾಶಿಯ ವ್ಯಾಪಾರಿಗಳು ಜಾಗರೂಕತೆಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳಿ
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ವಾಹನಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದರೆ ಪೆಟ್ರೋಲ್ ಆವಿಯಾಗುತ್ತದಯೇ?: ಇಲ್ಲಿದೆ ಸಂಪೂರ್ಣ ಮಾಹಿತಿ...
ಭಾರತದ ಬಹುತೇಕ ಎಲ್ಲಾ ಭಾಗಗಳಲ್ಲಿ ಈ ವರ್ಷ ವಿಪರೀತ ಬಿಸಿಲು ದಾಖಲಾಗಿದೆ. ಬೇಸಿಗೆಯಲ್ಲಿ ವಾಹನಗಳನ್ನು ಬಳಸುವ ನಮ್ಮಲ್ಲಿನ ಹೆಚ್ಚಿನವರು ವಾಹನಗಳನ್ನು ನೆರಳಿನಲ್ಲಿ ನಿಲ್ಲಿಸಲು ಬಯಸುತ್ತಾರೆ. ಒಂದು ವೇಳೆ ನೆರಳು ಇಲ್ಲದಿದ್ದಾಗ ಅನಿವಾರ್ಯ ಎಂದಾಗ ಮಾತ್ರ ಬಿಸಿಲಿನಲ್ಲಿ ನಿಲ್ಲಿಸುತ್ತಾರೆ.

ಹೀಗೆ ಮಾಡಲು ಎರಡು ಕಾರಣಗಳಿವೆ, ಮೊದಲನೆಯದು ಸುಡುವ ಬಿಸಿಲಿಗೆ ಪೆಟ್ರೋಲ್ ಆವಿಯಾಗುತ್ತದೆ. ಎರಡನೆಯದು ಬಿಸಿಲಿನಿಂದ ಸೀಟು ಹೆಚ್ಚು ಶಾಖಗೊಳ್ಳುತ್ತದೆ. ಇಂತಹ ಸಂದರ್ಭಗಳಲ್ಲಿ ಚಾಲಕ ಬೈಕ್ ಅನ್ನು ನೆರಳಿಗೆ ಕೊಂಡೊಯ್ದು ಸೀಟ್ ತಣ್ಣಗಾದ ಮೇಲೆ ಕುಳಿತುಕೊಳ್ಳಬೇಕು ಇಲ್ಲವೇ ಸುಡುತ್ತಿದ್ದರೂ ಹಾಗೇಯೇ ಕುಳಿತು ಪ್ರಯಾಣಿಸಬೇಕು.

ಈ ಎರಡು ಕಾರಣಗಳಲ್ಲಿ ನಾವು ಈಗ ಮುಖ್ಯವಾಗಿ ಹೇಳಲು ಹೊರಟಿರುವ ವಿಷಯವೆಂದರೆ ಬೈಕ್‌ನಲ್ಲಿನ ಪೆಟ್ರೋಲ್ ಬಿಸಿಲಿಗೆ ಆವಿಯಾಗುತ್ತದೆಯೇ ಎಂಬುದರ ಬಗ್ಗೆ. ಇದಕ್ಕಾಗಿ MECHANICAL TECH HINDI ಎಂಬ YouTube ಚಾನಲ್‌ನ ವೀಡಿಯೋವೊಂದರ ಆಧಾರವಾಗಿ ಈ ವಿಷಯಗಳನ್ನು ನಿಮಗೆ ತಿಳಿಸುತ್ತಿದ್ದೇವೆ.

MECHANICAL TECH HINDI ಅವರು ಈ ಕುರಿತು ಮಾಡಿರುವ ಪ್ರಯೋಗದ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ವ್ಲೋಗರ್ ಗಾಜಿನ ಅಳತೆಯ ಲೋಟವೊಂದನ್ನು ತೆಗೆದುಕೊಂಡು ಅದರಲ್ಲಿ ಪೆಟ್ರೋಲ್ ತುಂಬುತ್ತಾನೆ. ನಿಖರವಾದ ಅಳತೆಯನ್ನು ತೆಗೆದುಕೊಂಡು 910 ಎಂಎಲ್ ಪೆಟ್ರೋಲ್ ಅನ್ನು ತುಂಬುತ್ತಾನೆ.

ಪ್ರಯೋಗವನ್ನು ನಡೆಸುವ ವೇಳೆ ತನ್ನ ಫೋನ್‌ನಲ್ಲಿ ಪ್ರದರ್ಶಿಸಲಾದ ತಾಪಮಾನವು ಸುಮಾರು 33 ಡಿಗ್ರಿ ಸೆಲ್ಸಿಯಸ್ ಇತ್ತು. ಒಂದು ಗಂಟೆಯ ನಂತರ ಪೆಟ್ರೋಲ್ ಖಂಡಿತವಾಗಿಯೂ ಆವಿಯಾಗುತ್ತಿದೆ ಎಂಬುದು ಸ್ಪಷ್ಟವಾಯಿತು. ನಂತರ ವ್ಲಾಗರ್ ತನ್ನ ಮೊಬೈಲ್ ಫೋನ್‌ನಲ್ಲಿ ಸ್ಟಾಪ್‌ವಾಚ್ ಅನ್ನು ಪ್ರಾರಂಭಿಸಿ 2 ಗಂಟೆಗಳ ಕಾಲ ಕಾಯುತ್ತಾನೆ.

ಗಾಜಿನ ಅಳತೆಯ ಲೋಟದಲ್ಲಿ ಒಂದು ಗಂಟೆಯಲ್ಲಿ ಆವಿಯಾಗುವಿಕೆಯ ಪ್ರಮಾಣವು ತುಂಬಾ ಹೆಚ್ಚಾಗಿತ್ತು. ವೀಡಿಯೊದ ಟೈಮ್‌ಲ್ಯಾಪ್ಸ್ ವಿಭಾಗದಲ್ಲಿ, ಕಪ್‌ನಲ್ಲಿನ ಪೆಟ್ರೋಲ್ ಮಟ್ಟವು ಕಡಿಮೆಯಾಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಎರಡು ಗಂಟೆಗಳ ನಂತರ, vlogger ಹಿಂತಿರುಗಿ ಕಪ್‌ನಲ್ಲಿ ಉಳಿದಿರುವ ಪೆಟ್ರೋಲ್ ಪ್ರಮಾಣವನ್ನು ಪರಿಶೀಲಿಸುತ್ತಾನೆ.

2 ಗಂಟೆಗಳ ನಂತರ ಕೇವಲ 560 ಮಿ.ಲೀ ಇಂಧನದೊಂದಿಗೆ ಉಳಿದಿದೆ. ಎರಡು ಗಂಟೆಗಳಲ್ಲಿ ಸುಮಾರು 350 ಮಿ.ಲೀ ಪೆಟ್ರೋಲ್ ತೆಳುವಾದ ಗಾಳಿಯಲ್ಲಿ ಆವಿಯಾಗಿತ್ತು. ಬಿಸಿಲಿನಿಂದಾಗಿಯೇ ಪೆಟ್ರೋಲ್ ಆವಿಯಾಯಿತಾ? ಇಲ್ಲ. ಸೂರ್ಯನನ್ನು ಹೊರತುಪಡಿಸಿ ಹಲವಾರು ಅಂಶಗಳಿವೆ.

ಉದಾಹರಣೆಗೆ ಗಾಳಿಯ ವೇಗ, ಆರ್ದ್ರತೆ ಕೂಡ ಪೆಟ್ರೋಲ್ ಆವಿಯಾಗಲು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಪ್ರಯೋಗದಲ್ಲಿ ಗಮನಿಸಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ ವ್ಲೋಗರ್ ಅದನ್ನು ಒಂದು ಕಪ್‌ನಲ್ಲಿ ಪರೀಕ್ಷಿಸುವ ವೇಳೆ ಬಿಸಿಲಿನಲ್ಲಿರುವಾಗ ಅದನ್ನು ಮುಚ್ಚಿರಲಿಲ್ಲ. ಇದೇ ಕಾರಣಕ್ಕೆ ಪೆಟ್ರೋಲ್ ಅಷ್ಟು ವೇಗದಲ್ಲಿ ಆವಿಯಾಗಿತ್ತು.

ಬೈಕ್‌ಗೆ ಇಂಧನವನ್ನು ಸುರಿಯುವ ರಂಧ್ರವು ತುಂಬಾ ಚಿಕ್ಕದಾಗಿರುತ್ತದೆ. ಅಲ್ಲದೇ ನಾವು ಇಂಧನ ತುಂಬಿದ ಬಳಿಕ ಮುಚ್ಚಳವನ್ನು ಗಾಳಿ ಹೋಗದಂತೆ ಬಿಗಿಯಾಗಿ ಮುಚ್ಚುತ್ತೇವೆ. ಆದರೆ ಈ ಪ್ರಯೋಗದಲ್ಲಿ ನಾವು ಗಮನಿಸುವುದಾದರೆ ಸುಮಾರು ಎರಡು ಗಂಟೆಗಳ ಕಾಲ ತೆರೆದ ಗಾಜಿನ ಲೋಟ ಅದರಲ್ಲೂ ದೊಡ್ಡದಾದ ರಂಧ್ರವಿದ್ದ ಕಾರಣ ಪೆಟ್ರೋಲ್ ಬೇಗನೇ ಆವಿಯಾಗಿದೆ.

ಈ ಪ್ರಯೋಗದಿಂದ ನಾವು ತಿಳಿದುಕೊಳ್ಳಬೇಕಾದುದು ಏನೆಂದರೆ ಪೆಟ್ರೋಲ್ ಬೈಕ್ ಟ್ಯಾಂಕ್‌ನಲ್ಲಿದ್ದರೂ ಖಂಡಿತವಾಗಿಯೂ ಆವಿಯಾಗುತ್ತದೆ. ಆದರೆ, ಆವಿಯಾಗುವಿಕೆಯ ಪ್ರಮಾಣವು ವೀಡಿಯೊದಲ್ಲಿ ತೋರಿಸಿರುವಷ್ಟು ಅಲ್ಲ. ವ್ಲಾಗರ್ ಬೈಕು ಬಳಸಿ ಅದೇ ಪ್ರಯೋಗವನ್ನು ನಡೆಸಿದ್ದರೆ ಅಥವಾ ಮುಚ್ಚಳವನ್ನು ಹೊಂದಿರುವ ಟಂಬ್ಲರ್ ಅನ್ನು ಬಳಸಿದ್ದರೆ ಅದರ ಫಲಿತಾಂಶ ಇನ್ನೂ ಸ್ಪಷ್ಟವಾಗಿ ತಿಳಿಯುತ್ತಿತ್ತು.

ವಾಹನದಲ್ಲಿನ ಇಂಧನ ಹಾಗೂ ತೆರೆದ ಗಾಳಿಯಲ್ಲಿ ತುಂಬಿದ ಕಪ್ನಲ್ಲಿನ ಪೆಟ್ರೋಲ್ ನಡುವೆ ಅನೇಕ ವ್ಯತ್ಯಾಸಗಳಿವೆ ಎಂದು ನಾವು ಅರಿತುಕೊಳ್ಳಬೇಕು. ವಾಹನಗಳಿಂದ ಪೆಟ್ರೋಲ್ ಆವಿಯಾಗುವುದನ್ನು ತಪ್ಪಿಸಲು ಇಂಧನ ಟ್ಯಾಂಕ್‌ಗಳನ್ನು ತಯಾರಕರು ವಿಶೇಷವಾಗಿ ವಿನ್ಯಾಸಗೊಳಿಸುತ್ತಾರೆ. ತೀವ್ರವಾದ ಶಾಖದಲ್ಲೂ ಅವು ಸಾಕಷ್ಟು ಪ್ರಮಾಣದಲ್ಲಿ ಆವಿಯಾಗುವುದನ್ನು ತಪ್ಪಿಸುತ್ತವೆ.

ಬಿಸಿಲು ಮಾತ್ರವಲ್ಲದೇ ಗಾಳಿಯ ವೇಗ ಮತ್ತು ಗಾಳಿಯಲ್ಲಿನ ತೇವಾಂಶವನ್ನು ಅವಲಂಬಿಸಿ ಇಂಧನ ಆವಿಯಾಗುತ್ತದೆ ಎಂಬುದು ಈ ವಿಡಿಯೋ ಮೂಲಕ ಬಹಿರಂಗವಾಗಿದೆ. ಇಂಧನವು ತೆರೆದ ಸ್ಥಿತಿಯಲ್ಲಿದ್ದಾಗ ಮಾತ್ರ ಇದರ ಪ್ರಭಾವ ಹೆಚ್ಚಾಗಿರುತ್ತದೆ.