ಅಮೆರಿಕಾ ಅಧ್ಯಕ್ಷರ ಅಧಿಕೃತ ವಿಮಾನದ ವಿಶೇಷತೆಗಳೇನು ಗೊತ್ತಾ?

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍‍ರವರು ಫೆಬ್ರವರಿ 24 ಹಾಗೂ 25ರಂದು ಎರಡು ದಿನಗಳ ಕಾಲ ಭಾರತ ಪ್ರವಾಸದಲ್ಲಿರಲಿದ್ದಾರೆ. ಭಾರತವು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍‍ರವರನ್ನು ಸ್ವಾಗತಿಸಲು ಸಕಲ ರೀತಿಯಲ್ಲೂ ಸಜ್ಜಾಗಿದೆ.

ಅಮೆರಿಕಾ ಅಧ್ಯಕ್ಷರ ಅಧಿಕೃತ ವಿಮಾನದ ವಿಶೇಷತೆಗಳೇನು ಗೊತ್ತಾ?

ಅಮೆರಿಕಾ ಅಧ್ಯಕ್ಷರ ಭವ್ಯ ಸ್ವಾಗತಕ್ಕೆ ಅದ್ದೂರಿ ವೇದಿಕೆಯನ್ನು ನಿರ್ಮಿಸಲಾಗಿದೆ. ಅಂದ ಹಾಗೆ ಡೊನಾಲ್ಡ್ ಟ್ರಂಪ್‍‍ರವರು ಭಾರತ ಪ್ರವಾಸಕ್ಕೆ ವಿಶ್ವ ವಿಖ್ಯಾತ ಏರ್ ಫೋರ್ಸ್ ಒನ್ ವಿಮಾನದಲ್ಲಿ ಬರಲಿದ್ದಾರೆ. ಈ ವಿಮಾನವನ್ನು ಹಾರಾಡುವ ಅರಮನೆ ಎಂದು ಕರೆದರೆ ತಪ್ಪಲ್ಲ. ಈ ದೊಡ್ಡ ಏರ್‍‍ಕ್ರಾಫ್ಟ್ ಅನ್ನು ಬೋಯಿಂಗ್ ಕಂಪನಿಯು ತಯಾರಿಸಿದೆ.

ಅಮೆರಿಕಾ ಅಧ್ಯಕ್ಷರ ಅಧಿಕೃತ ವಿಮಾನದ ವಿಶೇಷತೆಗಳೇನು ಗೊತ್ತಾ?

ಈ ವಿಮಾನದಲ್ಲಿ ಅತ್ಯಾಧುನಿಕ ಸೌಲಭ್ಯಗಳಿಗೇನು ಕೊರತೆಯಿಲ್ಲ. ಈ ವಿಮಾನದಲ್ಲಿ ಅಮೆರಿಕಾ ಅಧ್ಯಕ್ಷರು ಪ್ರಯಾಣಕ್ಕೆ ಮಾತ್ರ ಬಳಸದೇ, ಕಚೇರಿಯ ಸಭೆಗಳನ್ನು ನಡೆಸಲು ಸಹ ಉಪಯೋಗಿಸುತ್ತಾರೆ. ಈ ವಿಮಾನವು ಅಧ್ಯಕ್ಷರ ಜೀವಕ್ಕೆ ಯಾವುದೇ ತೊಂದರೆಯಾಗದಂತೆ ಕಾಪಾಡುತ್ತದೆ. ಈ ಲೇಖನದಲ್ಲಿ ಏರ್ ಫೋರ್ಸ್ ಒನ್ ವಿಮಾನದ ಬಗೆಗಿನ ಆಸಕ್ತಿಕರ ವಿಷಯಗಳನ್ನು ನೋಡೋಣ.

ಅಮೆರಿಕಾ ಅಧ್ಯಕ್ಷರ ಅಧಿಕೃತ ವಿಮಾನದ ವಿಶೇಷತೆಗಳೇನು ಗೊತ್ತಾ?

ಬೋಯಿಂಗ್ ಕಂಪನಿಯು ಎರಡು 747-200 ಬಿ ಸರಣಿಯ ಏರ್‍‍ಕ್ರಾಫ್ಟ್ ಗಳನ್ನು ಅಮೆರಿಕಗಾಗಿಯೇ ವಿಶೇಷವಾಗಿ ತಯಾರಿಸಿದೆ. ಈ ವಿಮಾನಗಳನ್ನೇ ಏರ್ ಫೋರ್ಸ್ ಒನ್ ಪ್ಲೇನ್‍‍ಗಳೆಂದು ಕರೆಯಲಾಗುತ್ತದೆ. ಈ ಎರಡೂ ವಿಮಾನಗಳು ನೋಡುವುದಕ್ಕೆ ಒಂದೇ ರೀತಿ ಕಾಣುತ್ತವೆ.

ಅಮೆರಿಕಾ ಅಧ್ಯಕ್ಷರ ಅಧಿಕೃತ ವಿಮಾನದ ವಿಶೇಷತೆಗಳೇನು ಗೊತ್ತಾ?

ಏರ್ ಫೋರ್ಸ್ ಒನ್ ವಿಮಾನಗಳು ಬಿಳಿ ಹಾಗೂ ನೀಲಿ ಬಣ್ಣವನ್ನು ಹೊಂದಿರುತ್ತವೆ. ಈ ವಿಮಾನಗಳ ಮೇಲೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಎಂಬ ಬರಹ ಹಾಗೂ ಅಮೇರಿಕಾದ ಬಾವುಟವನ್ನು ಅಳವಡಿಸಲಾಗಿರುತ್ತದೆ. ಜೊತೆಗೆ ಅಮೆರಿಕಾದ ಹಾಲಿ ಅಧ್ಯಕ್ಷರ ಫೋಟೊಗಳಿರುತ್ತವೆ.

ಅಮೆರಿಕಾ ಅಧ್ಯಕ್ಷರ ಅಧಿಕೃತ ವಿಮಾನದ ವಿಶೇಷತೆಗಳೇನು ಗೊತ್ತಾ?

ಬೇರೆ ಕಮರ್ಷಿಯಲ್ ವಿಮಾನಗಳು ಇಂಧನವನ್ನು ತುಂಬಿಸಿಕೊಳ್ಳಲು ಯಾವುದಾದರೂ ದೇಶದಲ್ಲಿ ಲ್ಯಾಂಡ್ ಮಾಡಬೇಕಾಗುತ್ತದೆ. ಆದರೆ ಏರ್ ಫೋರ್ಸ್ ಒನ್ ವಿಮಾನಗಳಿಗೆ ಈ ರೀತಿಯ ಸಮಸ್ಯೆಯಿಲ್ಲ. ಈ ವಿಮಾನಗಳು ಹಾರಾಡುತ್ತಿರುವಾಗಲೇ ಇಂಧನವನ್ನು ತುಂಬಿಸಿಕೊಳ್ಳುತ್ತವೆ.

ಅಮೆರಿಕಾ ಅಧ್ಯಕ್ಷರ ಅಧಿಕೃತ ವಿಮಾನದ ವಿಶೇಷತೆಗಳೇನು ಗೊತ್ತಾ?

ಏರ್ ಫೋರ್ಸ್ ಒನ್ ವಿಮಾನಗಳನ್ನು ಹಾರಾಡುವ ಅರಮನೆಗಳೆಂದು ಕರೆಯಲಾಗುತ್ತದೆ. ಇದರಲ್ಲಿ ಅಧ್ಯಕ್ಷರಿಗೆ ರಕ್ಷಣೆಯ ಭದ್ರಕೋಟೆಯನ್ನು ಒದಗಿಸಲಾಗುತ್ತದೆ. ಈ ವಿಮಾನವು ಅತ್ಯಾಧುನಿಕವಾದ ಸಂಪರ್ಕ ಸಾಧನಗಳನ್ನು ಹೊಂದಿದೆ.

ಅಮೆರಿಕಾ ಅಧ್ಯಕ್ಷರ ಅಧಿಕೃತ ವಿಮಾನದ ವಿಶೇಷತೆಗಳೇನು ಗೊತ್ತಾ?

ಏರ್ ಫೋರ್ಸ್ ಒನ್ ವಿಮಾನದ ಕ್ಯಾಬಿನ್ 3 ಹಂತದಲ್ಲಿದ್ದು, 4 ಸಾವಿರ ಚದುರ ಅಡಿಗಳಷ್ಟು ಫ್ಲೋರ್ ಸ್ಪೇಸ್ ಅನ್ನು ಹೊಂದಿದೆ. ಅಮೆರಿಕಾದ ಅಧ್ಯಕ್ಷರು ಈ ವಿಮಾನದಲ್ಲಿರುವ ದೊಡ್ಡ ಕಚೇರಿ ಹಾಗೂ ಕಾನ್ಪೆರೆನ್ಸ್ ರೂಂನಲ್ಲಿರುತ್ತಾರೆ.

ಅಮೆರಿಕಾ ಅಧ್ಯಕ್ಷರ ಅಧಿಕೃತ ವಿಮಾನದ ವಿಶೇಷತೆಗಳೇನು ಗೊತ್ತಾ?

ಅಧ್ಯಕ್ಷರ ಆರೋಗ್ಯ ತಪಾಸಣೆಗಾಗಿ ಖಾಯಂ ವೈದ್ಯರಿರುತ್ತಾರೆ. ತುರ್ತು ಸಂದರ್ಭಕ್ಕಾಗಿ ರಕ್ತವನ್ನು ಸಂಗ್ರಹಿಸಿ ಕಂಟೇನರ್‍‍ಗಳಲ್ಲಿಡಲಾಗಿರುತ್ತದೆ. ಈ ಏರ್ ಫೋಸ್ ಒನ್ ವಿಮಾನದಲ್ಲಿ ಒಂದು ಬಾರಿಗೆ 100 ಜನರು ಪ್ರಯಾಣಿಸಬಹುದಾಗಿದೆ.

ಅಮೆರಿಕಾ ಅಧ್ಯಕ್ಷರ ಅಧಿಕೃತ ವಿಮಾನದ ವಿಶೇಷತೆಗಳೇನು ಗೊತ್ತಾ?

ಏರ್ ಫೋಸ್ ಒನ್ ವಿಮಾನವು ಯಾವಾಗಲೂ ಒಂಟಿಯಾಗಿ ಹಾರಾಡುವುದಿಲ್ಲ. ಇದರ ಮುಂದೆ ಹಲವು ವಿಮಾನಗಳು ಹಾರಾಡುತ್ತಿರುತ್ತವೆ. ಈ ವಿಮಾನದಲ್ಲಿ ಅಧ್ಯಕ್ಷರ ಜೊತೆಗೆ ಪತ್ರಕರ್ತರು, ಹಿರಿಯ ಅಧಿಕಾರಿಗಳು ಹಾಗೂ ಇತರ ಗಣ್ಯರಿರುತ್ತಾರೆ. ಅವರಿಗೆ ಉಳಿದುಕೊಳ್ಳಲು ಈ ವಿಮಾನದಲ್ಲಿ ರೂಂಗಳಿರುತ್ತವೆ.

ಅಮೆರಿಕಾ ಅಧ್ಯಕ್ಷರ ಅಧಿಕೃತ ವಿಮಾನದ ವಿಶೇಷತೆಗಳೇನು ಗೊತ್ತಾ?

ಏರ್ ಫೋರ್ಸ್ ಒನ್ ಪ್ರಪಂಚದಲ್ಲಿಯೇ ಅತಿ ಹೆಚ್ಚು ಸುರಕ್ಷತೆಯನ್ನು ಹೊಂದಿರುವ ವಿಮಾನಗಳಲ್ಲಿ ಒಂದಾಗಿದೆ. ಅಮೆರಿಕಾ ಅಧ್ಯಕ್ಷರು ಪ್ರಪಂಚದ ಅತಿ ಗಣ್ಯ ವ್ಯಕ್ತಿಯಾದ ಕಾರಣ ಈ ವಿಮಾನವನ್ನು ವಿಭಿನ್ನವಾದ ಸುರಕ್ಷತಾ ಫೀಚರ್‍‍ಗಳಿಂದ ವಿನ್ಯಾಸಗೊಳಿಸಲಾಗಿದೆ.

Most Read Articles

Kannada
English summary
Interesting facts about US Presidents Air Force One plane. Read in Kannada.
Story first published: Saturday, February 22, 2020, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X