ಭಾರತಕ್ಕೆ ಮೊದಲ ಬಾರಿಗೆ ಬಂದಿರುವ ಡೊನಾಲ್ಡ್ ಟ್ರಂಪ್ ಅಧಿಕೃತ ಕಾರಿನ ವಿಶೇಷತೆಯೇನು?

ವಿಶ್ವದ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ತಿಂಗಳ 24ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅವರ ಭೇಟಿಯ ಹಿನ್ನೆಲೆಯಲ್ಲಿ ಅವರ ಅಧಿಕೃತ ಲಿಮೊಸಿನ್ ಕಾರು ಈಗಾಗಲೇ ಭಾರತಕ್ಕೆ ಬಂದಿದೆ. ಈ ಕಾರ್ ಅನ್ನು ಬೀಸ್ಟ್ ಎಂದು ಕರೆಯಲಾಗುತ್ತದೆ.

ಭಾರತಕ್ಕೆ ಮೊದಲ ಬಾರಿಗೆ ಬಂದಿರುವ ಡೊನಾಲ್ಡ್ ಟ್ರಂಪ್ ಅಧಿಕೃತ ಕಾರಿನ ವಿಶೇಷತೆಯೇನು?

ಈ ಶಸ್ತ್ರಸಜ್ಜಿತ ಕಾರ್ ಅನ್ನು 2018ರಲ್ಲಿ ಸಿಕ್ರೆಟ್ ಸರ್ವಿಸ್‍‍ಗೆ ಸೇರಿಸಿಕೊಳ್ಳಲಾಯಿತು. ಈ ಅತ್ಯಾಧುನಿಕ ವಾಹನವನ್ನು ಸರ್ಕಾರದ ಮುಖ್ಯಸ್ಥರ ಸಂಚಾರಕ್ಕಾಗಿ ಬಳಸಲಾಗುತ್ತದೆ. 2009ರಿಂದ ಬಳಕೆಯಲ್ಲಿದ್ದ ಹಳೆಯ ಬೀಸ್ಟ್ ಕಾರಿನ ಬದಲಿಗೆ ಈ ಹೊಸ ಕಾರ್ ಅನ್ನು ಸೇರ್ಪಡೆಗೊಳಿಸಲಾಗಿದೆ. ಕ್ಯಾಡಿಲಾಕ್ ಸ್ಟೈಲಿಂಗ್ ಹೊಂದಿರುವ ಈ ವಿಶಿಷ್ಟ ವಾಹನವು ಕಸ್ಟಮ್ ಮಾಡಲಾದ ಮೀಡಿಯಂ ಟ್ರಕ್ ಫ್ರೇಮ್ ವಿನ್ಯಾಸವನ್ನು ಹೊಂದಿದೆ. ಇದು ಈ ರೀತಿ ತಯಾರಾಗಿರುವ ಪ್ರಪಂಚದ ಏಕೈಕ ಕಾರ್ ಆಗಿದೆ. ಬೀಸ್ಟ್ 2.0ವಿನ ವಿಶೇಷತೆಗಳನ್ನು ಈ ಲೇಖನದಲ್ಲಿ ನೋಡೋಣ.

ಭಾರತಕ್ಕೆ ಮೊದಲ ಬಾರಿಗೆ ಬಂದಿರುವ ಡೊನಾಲ್ಡ್ ಟ್ರಂಪ್ ಅಧಿಕೃತ ಕಾರಿನ ವಿಶೇಷತೆಯೇನು?

ಜನರಲ್ ಮೋಟರ್ಸ್ ಕಂಪನಿಯು ಎರಡು ಬೀಸ್ಟ್ ಗಳನ್ನು ಸಿಕ್ರೆಟ್ ಸರ್ವಿಸ್‍‍ಗಾಗಿ ನೀಡಿದೆ. ಈ ಎರಡು ಕಾರುಗಳನ್ನು ಬ್ಯಾಕ್ ಅಪ್ ಹಾಗೂ ಡೆಕಾಯ್‍‍ಗಾಗಿ ಬಳಸಲಾಗುತ್ತದೆ. ಅಮೇರಿಕಾ ಅಧ್ಯಕ್ಷರ ಬಳಿ ಈ ಎರಡೂ ಕಾರುಗಳನ್ನು ಕಾಣಬಹುದು.

ಭಾರತಕ್ಕೆ ಮೊದಲ ಬಾರಿಗೆ ಬಂದಿರುವ ಡೊನಾಲ್ಡ್ ಟ್ರಂಪ್ ಅಧಿಕೃತ ಕಾರಿನ ವಿಶೇಷತೆಯೇನು?

ಹೊಸ ಕ್ಯಾಡಿಲಾಕ್ ಲಿಮೊ ಕಾರು, ಕ್ಯಾಡಿಲಾಕ್ ಎಸ್ಕಾಲಾ ಕಾನ್ಸೆಪ್ಟ್ ಕಾರಿನಲ್ಲಿರುವಂತಹ ಡಿಸೈನ್ ಲ್ಯಾಂಗ್ವೇಜ್‍‍ನೊಂದಿಗೆ ಅದೇ ರೀತಿಯ ಗ್ರಿಲ್ ಅನ್ನು ಹೊಂದಿದೆ. ಈ ಲಿಮೊ ಕಾರು ತನ್ನದೇ ಆದ ಏರೋಪ್ಲೇನ್ ಅನ್ನು ಹೊಂದಿದೆ. ಈ ಸಿ 17 ಗ್ಲೋಬ್‍‍ಮಾಸ್ಟರ್ ಕಾರ್ಗೊ ಪ್ಲೇನ್ ಅಮೇರಿಕಾ ಅಧ್ಯಕ್ಷರು ಹೋದ ದೇಶಗಳಿಗೆಲ್ಲಾ ಜೊತೆಯಲ್ಲಿಯೇ ಸಾಗುತ್ತದೆ.

ಭಾರತಕ್ಕೆ ಮೊದಲ ಬಾರಿಗೆ ಬಂದಿರುವ ಡೊನಾಲ್ಡ್ ಟ್ರಂಪ್ ಅಧಿಕೃತ ಕಾರಿನ ವಿಶೇಷತೆಯೇನು?

ಎಲ್ಲಾ ಲಿಮೊ ಕಾರುಗಳನ್ನು ಒಂದೇ ರೀತಿಯಲ್ಲಿ ತಯಾರಿಸಲಾಗಿದೆ. ಇವು ಹೆಚ್ಚಿನ ಪ್ರಮಾಣದ ಬುಲೆಟ್ ಪ್ರೂಫ್ ಹೊಂದಿವೆ. ಈ ಲಿಮೊ ಕಾರುಗಳು 5 ಇಂಚಿನ ದಪ್ಪ ಗ್ಲಾಸ್, 8 ಇಂಚಿನ ದಪ್ಪ ಡೋರ್‍‍ಗಳನ್ನು ಹೊಂದಿವೆ. ಈ ಕಾರುಗಳನ್ನು ಟಿಟಾನಿಯಂ, ಸೆರಾಮಿಕ್ಸ್, ಬಾಂಬ್‍‍ಪ್ಲೇಟ್‍‍ಗಳನ್ನು ಬಳಸಿ ತಯಾರಿಸಲಾಗಿದೆ.

ಭಾರತಕ್ಕೆ ಮೊದಲ ಬಾರಿಗೆ ಬಂದಿರುವ ಡೊನಾಲ್ಡ್ ಟ್ರಂಪ್ ಅಧಿಕೃತ ಕಾರಿನ ವಿಶೇಷತೆಯೇನು?

ಹಳೆಯ ಬೀಸ್ಟ್ ಕಾರಿನ ತೂಕವು 14,000ದಿಂದ 20,000 ಪೌಂಡ್‍‍ಗಳಾಗಿತ್ತು. ಹೊಸ ಬೀಸ್ಟ್ ಕಾರಿನ ತೂಕವು ಇದಕ್ಕಿಂತ ಕಡಿಮೆಯಾಗಿದೆ. ಈ ಕಾರಿನಲ್ಲಿ ಫ್ಲಾಟ್ ಟಯರ್, ನೈಟ್ ವಿಷನ್ ಗೇರ್ ಹಾಗೂ ತನ್ನದೇ ಆದ ಆಕ್ಸಿಜನ್ ಸಪ್ಲೈ‍‍ಗಳಿವೆ. ಇದರ ಜೊತೆಗೆ ಸ್ಯಾಟಲೈಟ್ ಫೋನ್, ನ್ಯೂಕ್ಲಿಯರ್ ಕೋಡ್‍‍ಗಳಿವೆ.

ಭಾರತಕ್ಕೆ ಮೊದಲ ಬಾರಿಗೆ ಬಂದಿರುವ ಡೊನಾಲ್ಡ್ ಟ್ರಂಪ್ ಅಧಿಕೃತ ಕಾರಿನ ವಿಶೇಷತೆಯೇನು?

ಮುಂಭಾಗದ ಬಂಪರ್‍‍ನಲ್ಲಿ ಗ್ಯಾಸ್ ಕ್ಯಾನಿಸ್ಟರ್ ನೀಡಲಾಗಿದೆ. ಈ ಲಿಮೊ ಕಾರು 5.0 ಲೀಟರಿನ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಡೀಸೆಲ್‍‍ಗೆ ಬೆಂಕಿ ಬಿದ್ದರೆ ಹೆಚ್ಚಿನ ಪ್ರಮಾಣದ ಹಾನಿಯಾಗದಂತೆ ವಿನ್ಯಾಸಗೊಳಿಸಲಾಗಿದೆ. ಹಳೆಯ ಬೀಸ್ಟ್ ಕಾರು ಪ್ರತಿ ಲೀಟರಿಗೆ 3 ಕಿ.ಮೀ ಮೈಲೇಜ್ ನೀಡುತ್ತಿತ್ತು. ಹೊಸ ಕಾರು ಸಹ ಅಷ್ಟೇ ಮೈಲೇಜ್ ನೀಡುವ ಸಾಧ್ಯತೆಗಳಿವೆ.

ಭಾರತಕ್ಕೆ ಮೊದಲ ಬಾರಿಗೆ ಬಂದಿರುವ ಡೊನಾಲ್ಡ್ ಟ್ರಂಪ್ ಅಧಿಕೃತ ಕಾರಿನ ವಿಶೇಷತೆಯೇನು?

ಸಿಕ್ರೆಟ್ ಸರ್ವಿಸ್ ಈ ಲಿಮೊ ಕಾರಿಗಾಗಿ ರಹಸ್ಯ ಕೋಡ್ ಅನ್ನು ಹೊಂದಿದೆ. ಈ ಕಾರ್ ಅನ್ನು ಬೀಸ್ಟ್ ಎಂದು ಕರೆಯುವುದಿಲ್ಲ. ಬದಲಿಗೆ ಸ್ಟೇಜ್‍‍ಕೋಚ್ ಎಂದು ಕರೆಯಲಾಗುತ್ತದೆ. ಈ ಕಾರಿನಲ್ಲಿರುವ ಆಯುಧಗಳ ಬಗ್ಗೆ ಸಿಕ್ರೆಟ್ ಸರ್ವಿಸ್ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ ಡ್ರೈವರ್ ಬಳಿ ಶಾಟ್‍‍ಗನ್ ಇರುವುದಾಗಿ ತಿಳಿಸಿದೆ.

ಭಾರತಕ್ಕೆ ಮೊದಲ ಬಾರಿಗೆ ಬಂದಿರುವ ಡೊನಾಲ್ಡ್ ಟ್ರಂಪ್ ಅಧಿಕೃತ ಕಾರಿನ ವಿಶೇಷತೆಯೇನು?

ಈ ಕಾರು ಅಮೇರಿಕಾ ಅಧ್ಯಕ್ಷರ ರಕ್ತದ ಮಾದರಿಯ ರಕ್ತ, ಹಾರ್ಟ್ ಬೀಟ್ ಪರೀಕ್ಷಿಸುವ ಡಿಫಿಬ್ರಿಲಿಯೇಟರ್ ಹಾಗೂ ಎಮರ್ಜೆನ್ಸಿ ಗೇರ್‍‍ಗಳನ್ನು ಹೊಂದಿರುತ್ತದೆ. ಇವು ಸಾರ್ವಜನಿಕವಾಗಿ ಕಾಣಿಸುವ ಸಂಗತಿಗಳು. ಇನ್ನು ಕಾಣದಿರುವ ವಿಷಯಗಳು ದೇವರಿಗೆ, ಸಿಕ್ರೆಟ್ ಸರ್ವಿಸ್‍‍ಗೆ ಹಾಗೂ ಈ ಕಾರ್ ಅನ್ನು ಅಭಿವೃದ್ಧಿಪಡಿಸಿರುವ ಜನರಲ್ ಮೋಟಾರ್ಸ್ ಇಂಜಿನಿಯರ್‍‍ಗಳಿಗೆ ಮಾತ್ರ ಗೊತ್ತು.

Most Read Articles

Kannada
English summary
Things about Donald Trump's Limousine Car. Read in Kannada.
Story first published: Tuesday, February 18, 2020, 11:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X