ಲಾಂಗ್ ಡ್ರೈವ್‌ ವೇಳೆ ಟೈಟ್ ಜೀನ್ಸ್ ಧರಿಸಿದ ಕಾರಣಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಉದ್ಯಮಿ

ಹಲವಾರು ಜನರಿಗೆ ಆಗಾಗ್ಗೆ ಲಾಂಗ್ ಡ್ರೈವ್‌ಗಳಿಗೆ ತೆರಳುವ ಹವ್ಯಾಸವಿರುತ್ತದೆ. ಲಾಂಗ್ ಡ್ರೈವ್‌ಗಳಿಗೆ ತೆರಳುವವರು ಹಲವು ಸಿದ್ದತೆಗಳೊಂದಿಗೆ ತೆರಳುತ್ತಾರೆ. ಆದರೆ ಕೆಲವೊಮ್ಮೆ ಪ್ರವಾಸದಲ್ಲಿ ಆರಾಮದಾಯಕವಾದ ಬಟ್ಟೆಗಳನ್ನು ಧರಿಸಲು ಮರೆಯುತ್ತಾರೆ.

ಲಾಂಗ್ ಡ್ರೈವ್‌ ವೇಳೆ ಟೈಟ್ ಜೀನ್ಸ್ ಧರಿಸಿದ ಕಾರಣಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಉದ್ಯಮಿ

30 ವರ್ಷದ ಸೌರಭ್ ಶರ್ಮಾ ಎಂಬ ಉದ್ಯಮಿ ಹಲವು ಬಾರಿ ಲಾಂಗ್ ಡ್ರೈವ್‌ಗಳಿಗೆ ತೆರಳುತ್ತಿದ್ದರು. ಅವರು ಇತ್ತೀಚಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರಿಗೆ ಲಾಂಗ್ ಡ್ರೈವ್‌ಗಳಿಗೆ ತೆರಳುವಾಗ ಆರಾಮದಾಯಕ ಬಟ್ಟೆಗಳನ್ನು ಧರಿಸುವ ಪ್ರಾಮುಖ್ಯತೆ ಬಗ್ಗೆ ತಿಳಿದು ಬಂದಿದೆ.

ಲಾಂಗ್ ಡ್ರೈವ್‌ ವೇಳೆ ಟೈಟ್ ಜೀನ್ಸ್ ಧರಿಸಿದ ಕಾರಣಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಉದ್ಯಮಿ

ಸೌರಭ್ ಶರ್ಮಾ ದೆಹಲಿಯಿಂದ ಹೃಷಿಕೇಶ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅವರ ಕಾಲಿನ ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಡೀಪ್ ವೀನ್ ಥ್ರಂಬೋಸಿಸ್ (ಡಿವಿಟಿ) ಎಂದು ಕರೆಯಲಾಗುತ್ತದೆ.

ಲಾಂಗ್ ಡ್ರೈವ್‌ ವೇಳೆ ಟೈಟ್ ಜೀನ್ಸ್ ಧರಿಸಿದ ಕಾರಣಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಉದ್ಯಮಿ

ರಕ್ತನಾಳಗಳಲ್ಲಿನ ಹೆಪ್ಪುಗಟ್ಟುವಿಕೆಯು ರಕ್ತದ ಹರಿವಿನೊಂದಿಗೆ ಅವರ ಶ್ವಾಸಕೋಶಕ್ಕೆ ಚಲಿಸಿ ಶ್ವಾಸಕೋಶದ ಅಪಧಮನಿಗಳಲ್ಲಿ ಶ್ವಾಸಕೋಶದ ಎಂಬಾಲಿಸಮ್ ಅಥವಾ ಕ್ಲಾಟ್'ಗೆ ಕಾರಣವಾಗಿದೆ.

ಲಾಂಗ್ ಡ್ರೈವ್‌ ವೇಳೆ ಟೈಟ್ ಜೀನ್ಸ್ ಧರಿಸಿದ ಕಾರಣಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಉದ್ಯಮಿ

ಇದರಿಂದ ಹೃದಯ, ಮೆದುಳು ಸೇರಿದಂತೆ ಪ್ರಮುಖ ಅಂಗಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಸೌರಭ್ ಶರ್ಮಾರವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡು ಪ್ರಜ್ಞಾಹೀನರಾಗಿದ್ದಾರೆ. ಕುಸಿದುಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಲಾಂಗ್ ಡ್ರೈವ್‌ ವೇಳೆ ಟೈಟ್ ಜೀನ್ಸ್ ಧರಿಸಿದ ಕಾರಣಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಉದ್ಯಮಿ

ಅವರು ದಾಖಲಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದೊತ್ತಡ ಹಾಗೂ ಪಲ್ಸ್ ರೇಟ್ ಕಡಿಮೆಯಾಗಿರುವುದು ಕಂಡು ಬಂದಿದೆ. ಇದರಿಂದ ವೈದ್ಯರು ಹೃದಯ ಸ್ತಂಭನವಾಗಿರುವ ಬಗ್ಗೆ ಶಂಕೆ ವ್ಯಕ್ತ ಪಡಿಸಿದ್ದಾರೆ.

ಲಾಂಗ್ ಡ್ರೈವ್‌ ವೇಳೆ ಟೈಟ್ ಜೀನ್ಸ್ ಧರಿಸಿದ ಕಾರಣಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಉದ್ಯಮಿ

ಹಲವು ಪರೀಕ್ಷೆಗಳನ್ನು ನಡೆಸಿದ ನಂತರ ಆಸ್ಪತ್ರೆಯ ವೈದ್ಯರಿಗೆ ಸೌರಭ್ ಶರ್ಮಾರವರಿಗೆ ಈ ಮೊದಲು ಯಾವುದೇ ಹೃದಯ ಸಂಬಂಧಿ ಕಾಯಿಲೆಗಳು ಇಲ್ಲದೇ ಇರುವುದು ಕಂಡು ಬಂದಿದೆ.

ಲಾಂಗ್ ಡ್ರೈವ್‌ ವೇಳೆ ಟೈಟ್ ಜೀನ್ಸ್ ಧರಿಸಿದ ಕಾರಣಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಉದ್ಯಮಿ

ಮತ್ತಷ್ಟು ಪರೀಕ್ಷೆಗಳ ನಂತರ ಸೌರಭ್ ಶರ್ಮಾ ಎಡಗಾಲಿನಲ್ಲಿ ಡಿವಿಟಿ ತೊಂದರೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಇದರಿಂದ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ವೈದ್ಯರು ಲಾಂಗ್ ಡ್ರೈವ್‌ನಿಂದಾಗಿ ಅವರು ಪಲ್ಮನರಿ ಎಂಬಾಲಿಸಮ್‌ನಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.

ಲಾಂಗ್ ಡ್ರೈವ್‌ ವೇಳೆ ಟೈಟ್ ಜೀನ್ಸ್ ಧರಿಸಿದ ಕಾರಣಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಉದ್ಯಮಿ

ಲಾಂಗ್ ಡ್ರೈವ್‌ಗೆ ತೆರಳಿದ್ದ ವೇಳೆ ಅವರು ಬಿಗಿಯಾದ ಜೀನ್ಸ್ ಪ್ಯಾಂಟ್ ಧರಿಸಿದ್ದರು ಇದರಿಂದ ಅವರ ಕಾಲಿನಲ್ಲಿ ಹೆಪ್ಪುಗಟ್ಟುವುದಕ್ಕೆ ಕಾರಣವಾಗಿರಬಹುದು ಎಂದು ಅವರನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.

ಲಾಂಗ್ ಡ್ರೈವ್‌ ವೇಳೆ ಟೈಟ್ ಜೀನ್ಸ್ ಧರಿಸಿದ ಕಾರಣಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಉದ್ಯಮಿ

ಲಾಂಗ್ ಡ್ರೈವ್‌ ವೇಳೆ ಸೌರಭ್ ಶರ್ಮಾ ಬಿಗಿಯಾದ ಜೀನ್ಸ್ ಧರಿಸಿ ಟಾಪ್ ಎಂಡ್ ಆಟೋಮ್ಯಾಟಿಕ್ ಕಾರನ್ನು ಚಾಲನೆ ಮಾಡುತ್ತಿದ್ದರು. ಆಟೋಮ್ಯಾಟಿಕ್ ಕಾರಿನಲ್ಲಿ ಅವರು ಹಲವು ಗಂಟೆಗಳ ಕಾಲ ಎಡಗಾಲನ್ನು ಹೆಚ್ಚು ಚಲಿಸದ ಕಾರಣ ಹಾಗೂ ಬಿಗಿಯಾದ ಜೀನ್ಸ್ ಧರಿಸಿದ್ದ ಕಾರಣಕ್ಕೆ ರಕ್ತ ಹೆಪ್ಪುಗಟ್ಟಲು ಕಾರಣವಾಗಿದೆ.

ಲಾಂಗ್ ಡ್ರೈವ್‌ ವೇಳೆ ಟೈಟ್ ಜೀನ್ಸ್ ಧರಿಸಿದ ಕಾರಣಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಉದ್ಯಮಿ

ಲಾಂಗ್ ಡ್ರೈವ್‌ ವೇಳೆ ಮಧ್ಯದಲ್ಲಿ ವಿಶ್ರಾಂತಿ ಪಡೆಯುವುದರಿಂದ ರಸ್ತೆಗಳ ಮೇಲೂ ಏಕಾಗ್ರತೆ ಮೂಡಲು ಸಾಧ್ಯವಾಗುತ್ತದೆ. ಜೊತೆಗೆ ಬಿಗಿಯಾದ ಬಟ್ಟೆಗಳನ್ನು ಧರಿಸುವ ಬದಲು ಆರಾಮದಾಯಕ ಬಟ್ಟೆಗಳನ್ನು ಧರಿಸುವುದರಿಂದ ರಕ್ತ ಚಲನೆಯೂ ಸುಲಭವಾಗುತ್ತದೆ.

Most Read Articles

Kannada
English summary
Don't wear tight jeans during long drive for these reasons. Read in Kannada.
Story first published: Thursday, July 29, 2021, 10:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X