Just In
- 27 min ago ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- 39 min ago TVS iQube: ಲಕ್ಷಾಂತರ ಭಾರತೀಯರ ನೆಚ್ಚಿನ ಸ್ಕೂಟರ್ನ ಡೌನ್ಪೇಮೆಂಟ್, ಇಎಂಐ, ಲೋನ್ ವಿವರ!
- 43 min ago viral video: ಬೆಂಗಳೂರಿನಲ್ಲಿ ಮಾತ್ರ ಸಾಧ್ಯ: ಹೆಣ್ಮಗು.. ಹೆಣ್ಮಗು ಓಹ್.. ಎಂದ ನೆಟ್ಟಿಗರು!
- 58 min ago ಯುಗಾದಿ ಜಾತ್ರೆ: ಶ್ರೀಶೈಲ ಮಲ್ಲಿಕಾರ್ಜುನನ ಭಕ್ತರಿಗೆ ಸಿಹಿಸುದ್ದಿ.. NWKRTCಯಿಂದ ವಿಶೇಷ ಬಸ್ ಸೇವೆ
Don't Miss!
- Movies 'ರಾಮಾಯಣ'ದಲ್ಲಿ 'ಯಶ್' ಗೆ 'ಸಾಕ್ಷಿ ತನ್ವರ್' ನಾಯಕಿ ; 'ಬೇಡವೇ ಬೇಡ' ಎಂದ ಅಭಿಮಾನಿಗಳು..!
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಾಂಗ್ ಡ್ರೈವ್ ವೇಳೆ ಟೈಟ್ ಜೀನ್ಸ್ ಧರಿಸಿದ ಕಾರಣಕ್ಕೆ ಪ್ರಜ್ಞೆ ತಪ್ಪಿ ಬಿದ್ದ ಉದ್ಯಮಿ
ಹಲವಾರು ಜನರಿಗೆ ಆಗಾಗ್ಗೆ ಲಾಂಗ್ ಡ್ರೈವ್ಗಳಿಗೆ ತೆರಳುವ ಹವ್ಯಾಸವಿರುತ್ತದೆ. ಲಾಂಗ್ ಡ್ರೈವ್ಗಳಿಗೆ ತೆರಳುವವರು ಹಲವು ಸಿದ್ದತೆಗಳೊಂದಿಗೆ ತೆರಳುತ್ತಾರೆ. ಆದರೆ ಕೆಲವೊಮ್ಮೆ ಪ್ರವಾಸದಲ್ಲಿ ಆರಾಮದಾಯಕವಾದ ಬಟ್ಟೆಗಳನ್ನು ಧರಿಸಲು ಮರೆಯುತ್ತಾರೆ.
30 ವರ್ಷದ ಸೌರಭ್ ಶರ್ಮಾ ಎಂಬ ಉದ್ಯಮಿ ಹಲವು ಬಾರಿ ಲಾಂಗ್ ಡ್ರೈವ್ಗಳಿಗೆ ತೆರಳುತ್ತಿದ್ದರು. ಅವರು ಇತ್ತೀಚಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಅವರಿಗೆ ಲಾಂಗ್ ಡ್ರೈವ್ಗಳಿಗೆ ತೆರಳುವಾಗ ಆರಾಮದಾಯಕ ಬಟ್ಟೆಗಳನ್ನು ಧರಿಸುವ ಪ್ರಾಮುಖ್ಯತೆ ಬಗ್ಗೆ ತಿಳಿದು ಬಂದಿದೆ.
ಸೌರಭ್ ಶರ್ಮಾ ದೆಹಲಿಯಿಂದ ಹೃಷಿಕೇಶ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಅವರ ಕಾಲಿನ ರಕ್ತನಾಳಗಳಲ್ಲಿ ಹೆಪ್ಪುಗಟ್ಟಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಡೀಪ್ ವೀನ್ ಥ್ರಂಬೋಸಿಸ್ (ಡಿವಿಟಿ) ಎಂದು ಕರೆಯಲಾಗುತ್ತದೆ.
ರಕ್ತನಾಳಗಳಲ್ಲಿನ ಹೆಪ್ಪುಗಟ್ಟುವಿಕೆಯು ರಕ್ತದ ಹರಿವಿನೊಂದಿಗೆ ಅವರ ಶ್ವಾಸಕೋಶಕ್ಕೆ ಚಲಿಸಿ ಶ್ವಾಸಕೋಶದ ಅಪಧಮನಿಗಳಲ್ಲಿ ಶ್ವಾಸಕೋಶದ ಎಂಬಾಲಿಸಮ್ ಅಥವಾ ಕ್ಲಾಟ್'ಗೆ ಕಾರಣವಾಗಿದೆ.
ಇದರಿಂದ ಹೃದಯ, ಮೆದುಳು ಸೇರಿದಂತೆ ಪ್ರಮುಖ ಅಂಗಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಸೌರಭ್ ಶರ್ಮಾರವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡು ಪ್ರಜ್ಞಾಹೀನರಾಗಿದ್ದಾರೆ. ಕುಸಿದುಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಅವರು ದಾಖಲಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದೊತ್ತಡ ಹಾಗೂ ಪಲ್ಸ್ ರೇಟ್ ಕಡಿಮೆಯಾಗಿರುವುದು ಕಂಡು ಬಂದಿದೆ. ಇದರಿಂದ ವೈದ್ಯರು ಹೃದಯ ಸ್ತಂಭನವಾಗಿರುವ ಬಗ್ಗೆ ಶಂಕೆ ವ್ಯಕ್ತ ಪಡಿಸಿದ್ದಾರೆ.
ಹಲವು ಪರೀಕ್ಷೆಗಳನ್ನು ನಡೆಸಿದ ನಂತರ ಆಸ್ಪತ್ರೆಯ ವೈದ್ಯರಿಗೆ ಸೌರಭ್ ಶರ್ಮಾರವರಿಗೆ ಈ ಮೊದಲು ಯಾವುದೇ ಹೃದಯ ಸಂಬಂಧಿ ಕಾಯಿಲೆಗಳು ಇಲ್ಲದೇ ಇರುವುದು ಕಂಡು ಬಂದಿದೆ.
ಮತ್ತಷ್ಟು ಪರೀಕ್ಷೆಗಳ ನಂತರ ಸೌರಭ್ ಶರ್ಮಾ ಎಡಗಾಲಿನಲ್ಲಿ ಡಿವಿಟಿ ತೊಂದರೆಯಿಂದ ಬಳಲುತ್ತಿರುವುದು ಕಂಡು ಬಂದಿದೆ. ಇದರಿಂದ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಸ್ಪತ್ರೆಯ ವೈದ್ಯರು ಲಾಂಗ್ ಡ್ರೈವ್ನಿಂದಾಗಿ ಅವರು ಪಲ್ಮನರಿ ಎಂಬಾಲಿಸಮ್ನಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.
ಲಾಂಗ್ ಡ್ರೈವ್ಗೆ ತೆರಳಿದ್ದ ವೇಳೆ ಅವರು ಬಿಗಿಯಾದ ಜೀನ್ಸ್ ಪ್ಯಾಂಟ್ ಧರಿಸಿದ್ದರು ಇದರಿಂದ ಅವರ ಕಾಲಿನಲ್ಲಿ ಹೆಪ್ಪುಗಟ್ಟುವುದಕ್ಕೆ ಕಾರಣವಾಗಿರಬಹುದು ಎಂದು ಅವರನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.
ಲಾಂಗ್ ಡ್ರೈವ್ ವೇಳೆ ಸೌರಭ್ ಶರ್ಮಾ ಬಿಗಿಯಾದ ಜೀನ್ಸ್ ಧರಿಸಿ ಟಾಪ್ ಎಂಡ್ ಆಟೋಮ್ಯಾಟಿಕ್ ಕಾರನ್ನು ಚಾಲನೆ ಮಾಡುತ್ತಿದ್ದರು. ಆಟೋಮ್ಯಾಟಿಕ್ ಕಾರಿನಲ್ಲಿ ಅವರು ಹಲವು ಗಂಟೆಗಳ ಕಾಲ ಎಡಗಾಲನ್ನು ಹೆಚ್ಚು ಚಲಿಸದ ಕಾರಣ ಹಾಗೂ ಬಿಗಿಯಾದ ಜೀನ್ಸ್ ಧರಿಸಿದ್ದ ಕಾರಣಕ್ಕೆ ರಕ್ತ ಹೆಪ್ಪುಗಟ್ಟಲು ಕಾರಣವಾಗಿದೆ.
ಲಾಂಗ್ ಡ್ರೈವ್ ವೇಳೆ ಮಧ್ಯದಲ್ಲಿ ವಿಶ್ರಾಂತಿ ಪಡೆಯುವುದರಿಂದ ರಸ್ತೆಗಳ ಮೇಲೂ ಏಕಾಗ್ರತೆ ಮೂಡಲು ಸಾಧ್ಯವಾಗುತ್ತದೆ. ಜೊತೆಗೆ ಬಿಗಿಯಾದ ಬಟ್ಟೆಗಳನ್ನು ಧರಿಸುವ ಬದಲು ಆರಾಮದಾಯಕ ಬಟ್ಟೆಗಳನ್ನು ಧರಿಸುವುದರಿಂದ ರಕ್ತ ಚಲನೆಯೂ ಸುಲಭವಾಗುತ್ತದೆ.