1960ರ ದಶಕದಲ್ಲಿಯೇ ಕೋಲ್ಕತ್ತಾ - ಲಂಡನ್ ನಡುವೆ ಹಲವು ಬಾರಿ ಸಂಚರಿಸಿತ್ತು ಈ ಬಸ್

1960ರ ದಶಕದಲ್ಲಿ ಆಲ್ಬರ್ಟ್ ಎಂಬ ಡಬಲ್ ಡೆಕ್ಕರ್ ಬಸ್ ಭಾರತ ಹಾಗೂ ಬ್ರಿಟನ್ ನಡುವೆ 15 ಬಾರಿ ಪ್ರಯಾಣ ಬೆಳೆಸಿತ್ತು ಎಂದು ಹಲವಾರು ವರದಿಗಳು ಹೇಳಿವೆ. ಲಂಡನ್‌ನ ವಿಕ್ಟೋರಿಯಾ ಕೋಚ್ ನಿಲ್ದಾಣದಲ್ಲಿ ಪ್ರಯಾಣಿಕರಿರುವ ಚಿತ್ರ ಇಂಟರ್ ನೆಟ್'ನಲ್ಲಿ ಹರಿದಾಡುತ್ತಿದೆ.

1960ರ ದಶಕದಲ್ಲಿಯೇ ಕೋಲ್ಕತ್ತಾ - ಲಂಡನ್ ನಡುವೆ ಹಲವು ಬಾರಿ ಸಂಚರಿಸಿತ್ತು ಈ ಬಸ್

ಈ ಚಿತ್ರದಲ್ಲಿ ವಿಶ್ವದ ಅತಿ ಉದ್ದದ ಮಾರ್ಗದಲ್ಲಿ ಮೊದಲ ಬಾರಿಗೆ ಪ್ರಯಾಣಿಕರು ಲಂಡನ್ - ಕೋಲ್ಕತಾ ನಡುವೆ ಪ್ರಯಾಣಿಸುವುದನ್ನು ಕಾಣಬಹುದು. ಕೋಲ್ಕತಾ - ಲಂಡನ್ ನಡುವಿನ ಒಂದು ಕಡೆಯ ಪ್ರಯಾಣಕ್ಕೆ 85 ಪೌಂಡ್ ಅಂದರೆ ರೂ.7,889 ದರ ವಿಧಿಸಲಾಗಿತ್ತು. ಈ ದರ ಆಗಿನ ಕಾಲಕ್ಕೆ ದುಬಾರಿ ಎಂದೇ ಹೇಳಬಹುದು. ಮಾಧ್ಯಮ ವರದಿಗಳ ಪ್ರಕಾರ, 21 ವರ್ಷಗಳ ಸೇವೆ ಹಾಗೂ ಅಪಘಾತದ ನಂತರ ಈ ಬಸ್ ಅನ್ನು ಸಾರ್ವಜನಿಕ ಬಳಕೆಗೆ ಅನರ್ಹವೆಂದು ಘೋಷಿಸಲಾಯಿತು.

1960ರ ದಶಕದಲ್ಲಿಯೇ ಕೋಲ್ಕತ್ತಾ - ಲಂಡನ್ ನಡುವೆ ಹಲವು ಬಾರಿ ಸಂಚರಿಸಿತ್ತು ಈ ಬಸ್

ನಂತರ ಈ ಬಸ್ ಅನ್ನು 1968ರ ಮೇ ತಿಂಗಳಿನಲ್ಲಿ ಆಂಡಿ ಸ್ಟೀವರ್ಟ್ ಎಂಬ ಬ್ರಿಟಿಷ್ ಪ್ರಯಾಣಿಕ ಖರೀದಿಸಿದನು. ಸ್ಟೀವರ್ಟ್ ಈ ಬಸ್ ಅನ್ನು ಮೊಬೈಲ್ ಮನೆಯನ್ನಾಗಿ ಪರಿವರ್ತಿಸಿದನು. ಆಂಡಿ ಸ್ಟೀವರ್ಟ್ ಅದೇ ವರ್ಷ ಅಕ್ಟೋಬರ್‌ ತಿಂಗಳಿನಲ್ಲಿ ಈ ಬಸ್ ಮೂಲಕ ಸಿಡ್ನಿಯಿಂದ ಲಂಡನ್‌ಗೆ ಭಾರತದ ಮೂಲಕ 13 ಜನರೊಂದಿಗೆ 16,000 ಕಿ.ಮೀ ಪ್ರಯಾಣವನ್ನು ಆರಂಭಿಸಿದನು.

1960ರ ದಶಕದಲ್ಲಿಯೇ ಕೋಲ್ಕತ್ತಾ - ಲಂಡನ್ ನಡುವೆ ಹಲವು ಬಾರಿ ಸಂಚರಿಸಿತ್ತು ಈ ಬಸ್

1968ರ ಅಕ್ಟೋಬರ್ 8ರಂದು ಸಿಡ್ನಿಯ ಮಾರ್ಟಿನ್ ಪ್ಲೇಸ್‌ನಲ್ಲಿರುವ ಜಿಪಿಒ (ಜನರಲ್ ಪೋಸ್ಟ್ ಆಫೀಸ್)ದಲ್ಲಿ ಆಲ್ಬರ್ಟ್‌ ಬಸ್ಸಿನ ಮೊದಲ ಸಮುದ್ರಯಾನ ಆರಂಭವಾಯಿತು ಎಂದು ಹೈ ರೋಡ್ ಫಾರ್ ಓಜ್ ಹೇಳಿದೆ. ನಂತರ 132 ದಿನಗಳ ನಂತರ 1969ರ ಫೆಬ್ರವರಿ 17ರಂದು ಲಂಡನ್ ತಲುಪಿತು.

1960ರ ದಶಕದಲ್ಲಿಯೇ ಕೋಲ್ಕತ್ತಾ - ಲಂಡನ್ ನಡುವೆ ಹಲವು ಬಾರಿ ಸಂಚರಿಸಿತ್ತು ಈ ಬಸ್

ವರದಿಗಳ ಪ್ರಕಾರ ಲಂಡನ್, ಕೋಲ್ಕತಾ, ಸಿಡ್ನಿ ನಡುವೆ ಆಲ್ಬರ್ಟ್ ಟೂರ್ಸ್ ಎಂಬ ನಿಯಮಿತ ಸೇವೆಗಾಗಿ ಒಂದು ವರ್ಷದ ವೇಳಾಪಟ್ಟಿಯನ್ನು ರಚಿಸಲಾಗಿತ್ತು. ಹೈ ರೋಡ್ ಫಾರ್ ಓಜ್ ಪ್ರಕಾರ, 4, 5, 6, 7, 8 ಹಾಗೂ 9 ಸಂಖ್ಯೆಯ ಎಲ್ಲಾ ಪ್ರಯಾಣಗಳು ಸಿಡ್ನಿಯ ಮೂಲಕ ಹಾದು ಹೋದರೆ, ಟ್ರಿಪ್ ಸಂಖ್ಯೆ 12, 13, 14 ಹಾಗೂ 15 ಲಂಡನ್ - ಕೋಲ್ಕತಾ ನಡುವೆ ಕಾರ್ಯನಿರ್ವಹಿಸುತ್ತಿದ್ದವು.

1960ರ ದಶಕದಲ್ಲಿಯೇ ಕೋಲ್ಕತ್ತಾ - ಲಂಡನ್ ನಡುವೆ ಹಲವು ಬಾರಿ ಸಂಚರಿಸಿತ್ತು ಈ ಬಸ್

ಭಾರತಕ್ಕೆ ಆಗಮಿಸಿದಾಗ ಆಲ್ಬರ್ಟ್‌ ಬಸ್ ದೆಹಲಿ, ಆಗ್ರಾ, ಬನಾರಸ್ ಹಾಗೂ ಕೋಲ್ಕತ್ತಾಗಳಲ್ಲಿ ನಿಲ್ಲುತ್ತಿತ್ತು. ಈ ವೇಳಾಪಟ್ಟಿಯ ಪ್ರಕಾರ, 1972ರ ಜುಲೈ 25 ರಂದು ಲಂಡನ್‌ನಿಂದ ಹೊರಟ ಪ್ರಯಾಣಿಕರು 1972ರ 11ರಂದು ಕೋಲ್ಕತಾ ತಲುಪಿದರು. ಆ ಸಮಯದಲ್ಲಿ ಈ ಪ್ರಯಾಣವು 49 ದಿನಗಳನ್ನು ತೆಗೆದುಕೊಂಡಿತ್ತು.

1960ರ ದಶಕದಲ್ಲಿಯೇ ಕೋಲ್ಕತ್ತಾ - ಲಂಡನ್ ನಡುವೆ ಹಲವು ಬಾರಿ ಸಂಚರಿಸಿತ್ತು ಈ ಬಸ್

ಈ ದೀರ್ಘ ಪ್ರಯಾಣವು ಪ್ರಯಾಣಿಕರಿಗೆ ಮೋಜಿನ ಪ್ರಯಾಣವಾಗಿತ್ತು. ಲೋವರ್ ಡೆಕ್‌ನಲ್ಲಿ ಡೈನಿಂಗ್ ಹಾಲ್, ಪ್ರತ್ಯೇಕ ಸ್ಲೀಪಿಂಗ್ ಬಂಕ್‌, ಪ್ರಯಾಣಿಕರನ್ನು ಬೆಚ್ಚಗಿಡಲು ಫ್ಯಾನ್ ಹೀಟರ್‌ಗಳಂತಹ ಕೆಲವು ಐಷಾರಾಮಿ ಸೌಲಭ್ಯಗಳನ್ನು ಈ ಬಸ್ ಹೊಂದಿತ್ತು. ಸುದೀರ್ಘ ಪ್ರಯಾಣದಲ್ಲಿ ಈ ಬಸ್ ಮನೆಯಂತೆಯೇ ಇತ್ತು.

ಚಿತ್ರಕೃಪೆ: ಡಾ.ರೋಹಿತ್ ಕೆ ದಾಸ್‌ಗುಪ್ತಾ / ಟ್ವಿಟರ್

Most Read Articles

Kannada
English summary
Double decker bus traveled between Kolkata to London in 1960s. Read in Kannada.
Story first published: Wednesday, June 16, 2021, 17:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X