ರಾಜ್ಯದ ಈ ನಗರಗಳಲ್ಲಿ ಡಬ್ಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‍ ಸೇವೆ: KSRTC ತೀರ್ಮಾನ!

ಡಬ್ಬಲ್ ಡೆಕ್ಕರ್ ಬಸ್‍ಗಳಲ್ಲಿ ಪ್ರಯಾಣಿಸಬೇಕು ಎಂಬ ಆಸೆಯೊಂದಿರುವವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಸಿಹಿಸುದ್ದಿ ನೀಡಲು ಮುಂದಾಗಿದ್ದು, ಶೀಘ್ರದಲ್ಲೇ ಎರಡು ಪ್ರಮುಖ ನಗರಗಳಲ್ಲಿ ಈ ಬಸ್‍ಗಳ ಸೇವೆ ಆರಂಭಿಸಲಿದೆ. ಬಹುತೇಕ ಈಗಿನ ಪೀಳಿಗೆಯ ಜನರಿಗೆ ಡಬ್ಬಲ್ ಡೆಕ್ಕರ್ ಬಸ್‍ಗಳ ಪ್ರಯಾಣದ ಅನುಭವ ಹೇಗಿರಲಿದೆ ಎಂಬುದೇ ತಿಳಿದಿಲ್ಲ.

ರಾಜ್ಯದಲ್ಲಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ತುಮಕೂರು ಹಾಗೂ ಮೈಸೂರು ನಗರಗಳಲ್ಲಿ ಸಂಚರಿಸಲು ಯೋಗ್ಯವಾಗಿರುವಂತೆ ಏರ್ ಕಂಡೀಶನ್ ಹೊಂದಿರುವ ಡಬ್ಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‍ಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಕರ್ನಾಟಕ ಸಾರಿಗೆ ನಿಗಮ ಯೋಜಿಸಿದೆ. ಎಲ್ಲವು ನಿರೀಕ್ಷೆಯಂತೆ ಜರುಗಿದರೆ, ಈ ವರ್ಷದ ಕೊಯೆಯಲ್ಲಿ ಡಬ್ಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‍ಗಳು ರಸ್ತೆಗಿಳಿಯಲಿದ್ದು, ಇವುಗಳು ಪ್ರಯಾಣಿಕರನ್ನು ಖಂಡಿತ ಆಕರ್ಷಿಸಲಿವೆ. ಜೊತೆಗೆ ಸುಗಮ ಸಂಚಾರವು ಸಾಧ್ಯವಾಗಲಿದ್ದು, ಸಾರಿಗೆ ನಿಗಮಕ್ಕೆ ದೊಡ್ಡ ಆದಾಯದ ಮೂಲವಾಗಬಹುದು.

ರಾಜ್ಯದ ಈ ನಗರಗಳಲ್ಲಿ ಡಬ್ಬಲ್ ಡೆಕ್ಕರ್ ಎಲೆಕ್ಟ್ರಿಕ್ ಬಸ್‍ ಸೇವೆ: KSRTC ತೀರ್ಮಾನ!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಆರ್‌ಟಿಸಿ ಎಂಡಿ ವಿ.ಅನ್ಬುಕುಮಾರ್ ಅವರು, 'ಮೈಸೂರು ಮತ್ತು ತುಮಕೂರು ನಗರಗಳಲ್ಲಿ ತಲಾ ಐದು ಡಬ್ಬಲ್ ಡೆಕ್ಕರ್ ಬಸ್‍ಗಳ ಪ್ರಾಯೋಗಿಕ ಸಂಚಾರ ಆರಂಭಿಸಲಿವೆ. ಇವೆರೆಡು ನಗರಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಲ್ಲದೆ, ಮೈಸೂರಿಗೆ ಬಹುತೇಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರನ್ನು ಗಮನದಲ್ಲಿಟ್ಟುಕೊಂಡು ಈ ಬಸ್ ಸೇವೆಯನ್ನು ಪ್ರಾರಂಭಿಸಲು ತೀರ್ಮಾನ ಮಾಡಿದ್ದು, ಈ ವರ್ಷದ ಕೊನೆಯಲ್ಲಿ ಅವು ಸಂಚಾರವನ್ನು ಶುರು ಮಾಡಲಿವೆ' ಎಂದು ಹೇಳಿದ್ದಾರೆ.

ಸದ್ಯ ಅರಮನೆ ನಗರಿ ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC)ದ 'ಅಂಬಾರಿ' ಹೆಸರಿನ ಡಬ್ಬಲ್ ಡೆಕ್ಕರ್ ಬಸ್‍ ವಿವಿಧ ಮಾರ್ಗದಲ್ಲಿ ಸಂಚಾರ ನಡೆಸುತ್ತಿದೆ. ಇದು ಓಪನ್ - ಟಾಪ್ ಬಸ್ ಆಗಿದ್ದು, ಪ್ರತಿದಿನ ಮೂರು ಟ್ರಿಪ್ ಓಡಾಟ ನಡೆಸುತ್ತಿದ್ದು, ಒಬ್ಬರಿಗೆ ರೂ.250 ಟಿಕೆಟ್ ದರವನ್ನು ಹೊಂದಿದೆ. ಇದು ಕೇವಲ ಪ್ರವಾಸಿಗರು ಮಾತ್ರ ಬಳಕೆ ಮಾಡಬಹುದಾಗಿದೆ. ಆದರೆ, ಮೈಸೂರಿನ ನಗರದ ನಡುವೆ ವಿವಿಧ ಬಡಾವಣೆಗಳಿಗೆ ಸಂಚರಿಸಲು ಯಾವುದೇ ಡಬ್ಬಲ್ ಡೆಕ್ಕರ್ ಬಸ್‍ಗಳಿಲ್ಲ. ಇದೀಗ ಕೆಎಸ್‌ಆರ್‌ಟಿಸಿ ಈ ಸೇವೆ ಆರಂಭಿಸಲು ತೀರ್ಮಾನ ಮಾಡಿದೆ.

ಅಲ್ಲದೆ, ತುಮಕೂರು ಕರ್ನಾಟಕದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ರಾಜಧಾನಿ ಬೆಂಗಳೂರಿನ ಸಮೀಪದಲ್ಲಿದ್ದು, ವಿವಿಧ ಕೈಗಾರಿಕಾ ಪ್ರದೇಶಗಳನ್ನು ಹೊಂದಿದೆ. ಜೊತೆಗೆ ಹಲವು ಶಿಕ್ಷಣ ಸಂಸ್ಥೆಗಳಿರುವುದರಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು, ಸುತ್ತಮುತ್ತಲಿನ ಊರುಗಳಿಂದ ನಗರಕ್ಕೆ ಬಂದು ಹೋಗುತ್ತಾರೆ. ಜೊತೆಗೆ ನಗರವು ವಿಸ್ತರಣೆಗೊಂಡಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ಕೆಎಸ್‌ಆರ್‌ಟಿಸಿ ಅದರಲ್ಲೂ ಇಲ್ಲಿನ ವಿದ್ಯಾರ್ಥಿಗಳ ದೊಡ್ಡ ಸಂಖ್ಯೆಯನ್ನು ಆಧರಿಸಿ, ಡಬ್ಬಲ್ ಡೆಕ್ಕರ್ ಬಸ್ ಬಿಡಲು ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ.

ರಾಜ್ಯದಲ್ಲಿ ಡಬ್ಬಲ್ ಡೆಕ್ಕರ್ ಬಸ್‍ಗಳು ಸಂಚರಿಸುತ್ತಿದ್ದ ಏಕೈಕ ನಗರ ಬೆಂಗಳೂರು ಆಗಿತ್ತು. ಕಾಲಾನಂತರ 1990ರ ದಶಕದಲ್ಲಿ ಈ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಗರ ಭೂ ಸಾರಿಗೆ ಇಲಾಖೆ (DULT)ಯಿಂದ ಅನುದಾನ ಪಡೆದುಕೊಂಡಿದ್ದು, ಇದೇ ತಿಂಗಳ ಆರಂಭದಲ್ಲಿ ಐದು ಎಲೆಕ್ಟ್ರಿಕ್ ಡಬ್ಬಲ್ ಡೆಕ್ಕರ್ ಬಸ್‍ಗಳನ್ನು ಖರೀದಿಸಲು ಬಿಡ್ ಆಹ್ವಾನಿಸಿದೆ. ಜುಲೈ ವೇಳೆಗೆ ನಗರದಲ್ಲಿ ಈ ಬಸ್‍ಗಳು ಓಡಾಟ ನಡೆಸಲಿದ್ದು, ಇವು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರಲಿವೆ.

ಬಿಎಂಟಿಸಿ ಖರೀದಿ ಮಾಡಲಿರುವ ಎಲೆಕ್ಟ್ರಿಕ್ ಡಬ್ಬಲ್ ಡೆಕ್ಕರ್ ಬಸ್‍ಗಳು ಐದು ಮೀಟರ್ ಎತ್ತರವಿರಲಿದ್ದು, ಬರೋಬ್ಬರಿ 70 ಮಂದಿ ಆರಾಮದಾಯಕವಾಗಿ ಪ್ರಯಾಣಿಬಹುಗಾಗಿದ್ದು, ಈ ಬಸ್‍ಗಳು ಸಂಪೂರ್ಣ ಚಾರ್ಜ್ ನಲ್ಲಿ ಬರೋಬ್ಬರಿ 150 km ರೇಂಜ್ ನೀಡುವ ಸಾಮರ್ಥ್ಯ ಹೊಂದಿರಲಿವೆ ಎಂದು ವರದಿಯಾಗಿದ್ದು, ಕೆಎಸ್‌ಆರ್‌ಟಿಸಿ ಡಬ್ಬಲ್ ಡೆಕ್ಕರ್ ಬಸ್‍ಗಳು ಇದೇ ರೀತಿಯ ಕಾರ್ಯಕ್ಷಮತೆಯನ್ನು ಪಡೆದಿರಲಿವೆ. ಅವು ರಸ್ತೆಗೆ ಬಂದ ಮೇಲೆ ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಬಹುದು ಎಂದು ಹೇಳಲಾಗಿದೆ.

'ಮೊದಲು ಬಿಎಂಟಿಸಿ ಡಬ್ಬಲ್ ಡೆಕ್ಕರ್ ಬಸ್‍ಗಳ ಸೇವೆಯನ್ನು ಪ್ರಾರಂಭ ಮಾಡಲಿ. ಅವು ಬೆಂಗಳೂರಿನ ರಸ್ತೆಗೆ ಬಂದ ಕೆಲವೇ ತಿಂಗಳಲ್ಲಿ ಕೆಎಸ್‌ಆರ್‌ಟಿಸಿಯಿಂದಲ್ಲೂ ಟೆಂಡರ್ ಕರೆಯಲಾಗುವುದು. ತುಮಕೂರು ಹಾಗೂ ಮೈಸೂರು ನಗರಗಳಲ್ಲಿ ಆರಂಭಿಸುವ ಈ ಪ್ರಾಯೋಗಿಕ ಸಂಚಾರ ಯಶಸ್ವಿಯಾದರೆ, ಮುಂಬರುವ ದಿನಗಳಲ್ಲಿ ಡಬ್ಬಲ್ ಡೆಕ್ಕರ್ ಬಸ್‍ ಸಂಚಾರವನ್ನು ರಾಜ್ಯದ ಇತರೆ ನಗರಗಳಲ್ಲಿಯೂ ಶುರು ಮಾಡಲಾಗುವುದು. ಅವುಗಳಲ್ಲಿ ಪ್ರಮುಖವಾಗಿ ದಾವಣಗೆರೆ ಹಾಗೂ ಶಿವಮೊಗ್ಗ ನಗರಗಳು ಸೇರಿವೆ' ಎಂದು ಅನ್ಬುಕುಮಾರ್ ಹೇಳಿದ್ದಾರೆ.

Most Read Articles

Kannada
English summary
Double decker electric bus service in these cities details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X