ಕರೋನಾ ವೈರಸ್ ಪರೀಕ್ಷೆಗೆ ಬಂತು ಡ್ರೈವ್-ಥ್ರೂ ಲ್ಯಾಬ್

ಕರೋನಾ ವೈರಸ್ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಎಲ್ಲ ದೇಶಗಳಿಗೂ ಅಪಾರ ಪ್ರಮಾಣದ ಹಾನಿಯನ್ನುಂಟು ಮಾಡಿದೆ. ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಈ ಮಾರಣಾಂತಿಕ ವೈರಸ್ ಗುಣಪಡಿಸಲು ಸಾಕಷ್ಟು ತೊಂದರೆ ಹಾಗೂ ಸವಾಲುಗಳಿವೆ.

ಕರೋನಾ ವೈರಸ್ ಪರೀಕ್ಷೆಗೆ ಬಂತು ಡ್ರೈವ್-ಥ್ರೂ ಲ್ಯಾಬ್

ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರೆದಿರುವ ದೇಶಗಳು ಸಹ ಈ ವೈರಸ್ ಗೆ ಪರಿಹಾರ ಕಂಡುಕೊಳ್ಳಲು ಹೆಣಗಾಡುತ್ತಿವೆ. ಈ ಕಾರಣಕ್ಕೆ ವಿಶ್ವದ ಅನೇಕ ದೇಶಗಳು ತಮ್ಮ ನಾಗರಿಕರಿಗೆ ಪ್ರತ್ಯೇಕವಾಗಿರುವಂತೆ, ಮನೆಯಿಂದ ಹೊರಬರದಂತೆ ಸಲಹೆ ನೀಡಿವೆ.

ಕರೋನಾ ವೈರಸ್ ಪರೀಕ್ಷೆಗೆ ಬಂತು ಡ್ರೈವ್-ಥ್ರೂ ಲ್ಯಾಬ್

ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ನಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರತದಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ. ಈ ವೈರಸ್ ವೇಗವಾಗಿ ಹರಡುತ್ತಿರುವ ಕಾರಣಕ್ಕೆ ಏಪ್ರಿಲ್ 14ರ ನಂತರವೂ ಲಾಕ್ ಡೌನ್ ವಿಸ್ತರಿಸುವ ಸಾಧ್ಯತೆಗಳಿವೆ.

ಕರೋನಾ ವೈರಸ್ ಪರೀಕ್ಷೆಗೆ ಬಂತು ಡ್ರೈವ್-ಥ್ರೂ ಲ್ಯಾಬ್

ಭಾರತದಲ್ಲಿರುವ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಕರೋನಾ ವೈರಸ್ ಸೋಂಕು ಇರುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಭಾರತದಂತಹ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಈಗ ಲಭ್ಯವಿರುವ ಸೌಲಭ್ಯಗಳು ಕಡಿಮೆಯಾಗಿವೆ.

ಕರೋನಾ ವೈರಸ್ ಪರೀಕ್ಷೆಗೆ ಬಂತು ಡ್ರೈವ್-ಥ್ರೂ ಲ್ಯಾಬ್

ಸದ್ಯದ ಪರಿಸ್ಥಿತಿಯನ್ನು ಎದುರಿಸಲು ಆಯಾ ರಾಜ್ಯಗಳು ಹೊಸ ಲ್ಯಾಬ್ ಗಳನ್ನು ರಚಿಸುತ್ತಿವೆ. ಟೆಸ್ಟ್ ಕಿಟ್ ಗಳನ್ನು ಆಮದು ಮಾಡಿಕೊಳ್ಳುವುದರ ಜೊತೆಗೆ, ಅಭಿವೃದ್ಧಿಪಡಿಸಲಾಗುತ್ತಿದೆ.

ಕರೋನಾ ವೈರಸ್ ಪರೀಕ್ಷೆಗೆ ಬಂತು ಡ್ರೈವ್-ಥ್ರೂ ಲ್ಯಾಬ್

ಡಾ. ಡ್ಯಾಂಗ್ಸ್ ಲ್ಯಾಬ್ ಎಂಬ ವೈದ್ಯಕೀಯ ಪ್ರಯೋಗಾಲಯವು ಕರೋನಾಗೆ ಡ್ರೈವ್-ಥ್ರೂ ಪ್ರಯೋಗಾಲಯವನ್ನು ಅಭಿವೃದ್ಧಿಪಡಿಸಿರುವ ಬಗ್ಗೆ ವರದಿಯಾಗಿದೆ. ಇದು ಕರೋನಾಗಾಗಿ ಅಭಿವೃಪಡಿಸಿರುವ ಭಾರತದ ಮೊದಲ ಡ್ರೈವ್-ಥ್ರೂ ಲ್ಯಾಬ್ ಆಗಿದೆ.

ಕರೋನಾ ವೈರಸ್ ಪರೀಕ್ಷೆಗೆ ಬಂತು ಡ್ರೈವ್-ಥ್ರೂ ಲ್ಯಾಬ್

ಎಎನ್‌ಐ ವೆಬ್ ಸೈಟ್ ನಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. ಜೊತೆಗೆ ಕಂಪನಿಯು ಮೊಬೈಲ್ ಲ್ಯಾಬ್ ಬಗ್ಗೆ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ತಪಾಸಣೆಗಾಗಿ ಬರುವವರ ಮಾದರಿಗಳನ್ನು ಕಾರಿನಲ್ಲಿಯೇ ಸಂಗ್ರಹಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಅವರು ಕಾರಿನಿಂದ ಕೆಳಕ್ಕಿಳಿಯುವ ಅವಶ್ಯಕತೆಯಿಲ್ಲ.

ಕರೋನಾ ವೈರಸ್ ಪರೀಕ್ಷೆಗೆ ಬಂತು ಡ್ರೈವ್-ಥ್ರೂ ಲ್ಯಾಬ್

ಡ್ರೈವ್-ಥ್ರೂ ಅಂದರೆ ಏನು ಎಂಬ ಪ್ರಶ್ನೆ ಎದುರಾಗಬಹುದು. ಕಾರಿನಲ್ಲಿ ಬಂದು ಮಾದರಿಗಳನ್ನು ನೀಡಿ ಹೋಗುವುದೇ ಈ ಡ್ರೈವ್-ಥ್ರೂ. ಈ ರೀತಿಯ ಲ್ಯಾಬ್ ಗಳು ವಿದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ. ಈ ಲ್ಯಾಬ್ ದೆಹಲಿಯಲ್ಲಿರುವ ಏಕೈಕ ಡ್ರೈವ್-ಥ್ರೂ ಲ್ಯಾಬ್.

ಕರೋನಾ ವೈರಸ್ ಪರೀಕ್ಷೆಗೆ ಬಂತು ಡ್ರೈವ್-ಥ್ರೂ ಲ್ಯಾಬ್

ಡಾ. ಡ್ಯಾಂಗ್ಸ್ ಲ್ಯಾಬ್‌ ಒಂದು ಲ್ಯಾಬ್‌ಗೆ ಬೇಕಾಗಿರುವ ಎಲ್ಲಾ ಉಪಕರಣಗಳನ್ನು ಈ ಪ್ರಯೋಗಾಲಯದಲ್ಲಿ ಹೊಂದಿದೆ. ಇದನ್ನು ಸಣ್ಣ ಟೆಂಟ್‌ನಂತೆ ವಿನ್ಯಾಸಗೊಳಿಸಲಾಗಿದೆ. ಮಾದರಿಗಳನ್ನು ನೀಡಿದ ನಂತರ ರಶೀದಿಗಾಗಿ ಕಾಯುವ ಅಗತ್ಯವಿಲ್ಲ. ಮಾದರಿಗಳ ವರದಿಯನ್ನು ತೆಗೆದುಕೊಳ್ಳಲು ಲ್ಯಾಬ್‌ಗೆ ಬರುವ ಅಗತ್ಯವಿಲ್ಲ.

ಕರೋನಾ ವೈರಸ್ ಪರೀಕ್ಷೆಗೆ ಬಂತು ಡ್ರೈವ್-ಥ್ರೂ ಲ್ಯಾಬ್

ವರದಿಗಳನ್ನು ಇಮೇಲ್ ಹಾಗೂ ಎಸ್‌ಎಂಎಸ್ ಮೂಲಕ ಕಳುಹಿಸಲಾಗುತ್ತದೆ. ಈ ವಿಶೇಷ ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೈರಸ್ ಹರಡದಂತೆ ಸಾಕಷ್ಟು ಭದ್ರತೆ ಒದಗಿಸಲಾಗಿದೆ. ಇಲ್ಲಿನ ಸಿಬ್ಬಂದಿಗೆ ರಕ್ಷಣಾತ್ಮಕ ಉಡುಪು, ಉಪಕರಣ ಹಾಗೂ ಸೋಂಕುನಿವಾರಕಗಳನ್ನು ನೀಡಲಾಗಿದೆ.

ಡಾ. ಡ್ಯಾಂಗ್ಸ್ ಲ್ಯಾಬ್‌ನ ಈ ಸೇವೆ ಪಡೆಯಲು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನಂತರ ಕರೆ ಮಾಡಿ ಅಪಾಯಿಂಟ್ಮೆಂಟ್ ನೀಡಲಾಗುತ್ತದೆ.

ಕರೋನಾ ವೈರಸ್ ಪರೀಕ್ಷೆಗೆ ಬಂತು ಡ್ರೈವ್-ಥ್ರೂ ಲ್ಯಾಬ್

ಕರೋನಾ ವೈರಸ್ ವಿರುದ್ಧ ಹೋರಾಡಲು ಹಲವು ಕಂಪನಿಗಳು ಹಲವು ರೀತಿಯಲ್ಲಿ ಸಹಾಯ ಮಾಡಲು ಮುಂದಾಗಿವೆ. ಡಾ ಡ್ಯಾಂಗ್ಸ್ ಲ್ಯಾಬ್ ಸಹ ಡ್ರೈವ್-ಥ್ರೂ ಟೆಸ್ಟಿಂಗ್ ಲ್ಯಾಬ್ ಮೂಲಕ ನೆರವಾಗುತ್ತಿದೆ.

Most Read Articles

Kannada
English summary
Dr Dangs lab started Drive Through sample collection service for Covid 19. Read in Kannada.
Story first published: Tuesday, April 7, 2020, 13:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X