ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಡ್ರೈವಿಂಗ್ ಲೈಸೆನ್ಸ್ ಹಕ್ಕಲ್ಲ, ಒಂದು ಸವಲತ್ತು. ಯಾವುದೇ ಡ್ರೈವರ್ ರಸ್ತೆಯಲ್ಲಿ ಸಂಚರಿಸುವ ಬಳಕೆದಾರರ / ಪ್ರಯಾಣಿಕರ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತಾನೆ ಎಂಬ ಸಣ್ಣ ಸಂದೇಹ ಬಂದರೂ ಸಂಬಂಧಪಟ್ಟ ಅಧಿಕಾರಿಗಳು ಈ ಸವಲತ್ತನ್ನು ವಾಪಸ್ ಪಡೆಯಬಹುದು.

ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಕೇರಳದ ಬಸ್ ಡ್ರೈವರ್ ಒಬ್ಬರಿಗೆ ಇದರ ಅನುಭವವಾಗಿದೆ. ಕೇರಳದ ಆರ್‌ಟಿಒ ಅಧಿಕಾರಿಗಳು ಆತನ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸಿದ್ದಾರೆ. ಆತನು ತಾನು ಚಾಲನೆ ಮಾಡುತ್ತಿದ್ದ ಬಸ್‌ನ ಗೇರ್‌ಗಳನ್ನು ಬದಲಾಯಿಸಲು ಹುಡುಗಿಯರಿಗೆ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಆತನ ಡ್ರೈವಿಂಗ್ ಲೈಸೆನ್ಸ್ ಅಮಾನತುಪಡಿಸಲಾಗಿದೆ.

ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಬಿಗ್‍‍ನ್ಯೂಸ್ ಲೈವ್ ಪ್ರಕಾರ, ಕೇರಳ-ಗೋವಾ ರಸ್ತೆ ಪ್ರವಾಸದಲ್ಲಿ ಚಾಲಕನು ಕಾಲೇಜು ವಿದ್ಯಾರ್ಥಿಗಳನ್ನು ಟ್ರಿಪ್‍‍ಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಈ ಘಟನೆಯ ವೀಡಿಯೊ ವೈರಲ್ ಆಗಿದೆ.

ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ವೀಡಿಯೊದಲ್ಲಿ ಕಾಣುವಂತೆ ಬಸ್ ಚಾಲಕನು ತಾನು ಚಾಲನೆ ಮಾಡುತ್ತಿರುವ ಬಸ್‌ನ ಗೇರ್‌ಗಳನ್ನು ಬದಲಿಸಲು ಬಸ್ಸಿನಲ್ಲಿರುವ ಹುಡುಗಿಯರಿಗೆ ಅನುಮತಿ ನೀಡುತ್ತಾನೆ. ಟ್ರಾಫಿಕ್ ಆಧಾರದ ಮೇಲೆ ಯಾವಾಗ ಗೇರ್‍‍ಗಳನ್ನು ಬದಲಿಸಬೇಕೆಂದು ಡ್ರೈವರ್ ಹುಡುಗಿಯರಿಗೆ ಹೇಳುತ್ತಿರುವುದನ್ನು ಕಾಣಬಹುದು.

ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಈ ಘಟನೆಯ ವೀಡಿಯೋ ವೈರಲ್ ಆದ ನಂತರ, ಆರ್‌ಟಿಒ ಅಧಿಕಾರಿಗಳು ಆ ಚಾಲಕನ ಪರವಾನಗಿಯನ್ನು 6 ತಿಂಗಳವರೆಗೆ ಅಮಾನತುಗೊಳಿಸಿದ್ದಾರೆ. ವಯನಾಡಿನ ಎಂ. ಶಾಜಿ ಎಂಬ ಬಸ್ ಚಾಲಕನೇ ಡ್ರೈವಿಂಗ್ ಲೈಸೆನ್ಸ್ ಅಮಾನತು ಪಡಿಸಿಕೊಂಡ ವ್ಯಕ್ತಿ.

ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಅವರನ್ನು ಕಲ್ಪೆಟ್ಟಾದ ಪ್ರಾದೇಶಿಕ ಸಾರಿಗೆ ಕಚೇರಿಗೆ ಸಮನ್ಸ್ ನೀಡಿ ಕರೆಸಲಾಯಿತು. ವಿಚಾರಣೆ ನಡೆಸಿದ ಬಳಿಕ ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದ ಹಿನ್ನೆಲೆಯಲ್ಲಿ ಆರು ತಿಂಗಳ ಕಾಲ ಆತನ ಡ್ರೈವಿಂಗ್ ಲೈಸೆನ್ಸ್ ಅನ್ನು ಅಮಾನತುಗೊಳಿಸಲಾಗಿದೆ.

ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಬಸ್ಸಿನಲ್ಲಿರುವ ಇತರ ಸಹ ಪ್ರಯಾಣಿಕರಿಗೆ ವಾಹನದ ನಿಯಂತ್ರಣಗಳನ್ನು ನಿರ್ವಹಿಸಲು ಅವಕಾಶ ನೀಡುವುದರಿಂದ ವಾಹನವನ್ನು ನಿಯಂತ್ರಿಸುವುದು ಕಷ್ಟವಾಗಲಿದೆ. ತುರ್ತು ಸಂದರ್ಭ ಎದುರಾದರೆ ಚಾಲಕನಿಗೆ ತೊಂದರೆಯಾಗಲಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಯಾವುದೇ ಚಾಲಕನಾಗಿರಲಿ ಸ್ಟೀಯರಿಂಗ್, ಬ್ರೇಕ್, ಗೇರ್ ಶಿಫ್ಟರ್, ಕ್ಲಚ್ ಹಾಗೂ ಆಕ್ಸಿಲರೇಟರ್ ಸೇರಿದಂತೆ ವಾಹನದಲ್ಲಿರುವ ಎಲ್ಲಾ ನಿಯಂತ್ರಣಗಳ ಮೇಲೆ ಸಂಪೂರ್ಣ ಹಿಡಿತವನ್ನು ಹೊಂದಿರಬೇಕಾಗುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಬಸ್‌ನಂತಹ ಹೆಚ್ಚು ತೂಕವಿರುವ ವಾಹನದಲ್ಲಿ, ಸಹ-ಪ್ರಯಾಣಿಕರಿಗೆ ನಿಯಂತ್ರಣಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವುದು ಇನ್ನಷ್ಟು ಅಪಾಯಕಾರಿ, ಏಕೆಂದರೆ ಭಾರೀ ವಾಹನಗಳನ್ನು ಸುಲಭವಾಗಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇವುಗಳ ಮೇಲಿನ ನಿಯಂತ್ರಣವು ಸುಲಭವಾಗಿ ತಪ್ಪಲಿದೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಬಸ್‍‍ನಿಂದ ಯಾವುದಾದರೂ ಅಪಘಾತವು ಸಂಭವಿಸಿದರೆ ಭಾರೀ ಪ್ರಮಾಣದ ಜೀವಹಾನಿಯಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಬಸ್ ಚಾಲಕನಿಗೆ ಬಸ್ಸಿನ ಮೇಲೆ ನಿಯಂತ್ರಣವು ಸಾಧ್ಯವಾಗದೇ ಹೋಗುತ್ತದೆ. ತುರ್ತು ಸಂದರ್ಭಗಳಲ್ಲಿ ಪ್ರತಿಯೊಂದು ಕ್ಷಣವು ಅಮೂಲ್ಯವಾಗಿದೆ. ಭಾರತದ ರಸ್ತೆಗಳಲ್ಲಿ ಯಾವಾಗ ಏನು ಸಂಭವಿಸುತ್ತವೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಸಾಮಾನ್ಯ ಚಾಲನೆಯ ಸಂದಭಗಳಲ್ಲಿಯೇ ತುರ್ತು ಪರಿಸ್ಥಿತಿ ಎದುರಾಗುತ್ತದೆ. ಈ ಎಲ್ಲಾ ಕಾರಣಗಳನ್ನು ಮನದಲ್ಲಿಟ್ಟುಕೊಂಡು ಕೇರಳದ ಆರ್‍‍ಟಿ‍ಒ ಆ ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಆರ್‌ಟಿಒದ ಈ ಕ್ರಮವು ಬೇರೆ ಚಾಲಕರಿಗೆ ಪಾಠವಾಗಲಿದೆ.

Most Read Articles

Kannada
English summary
Driver loses license after allowed to college girls to change gears - Read in Kannada
Story first published: Monday, November 18, 2019, 13:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X