ಈ ತಪ್ಪುಗಳನ್ನು ಮಾಡಿದರೆ ಲೈಸೆನ್ಸ್ ಕಳೆದುಕೊಳ್ಳಬೇಕಾಗುತ್ತೆ..!

ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಬಳಿಕ ಭಾರೀ ಪ್ರಮಾಣದಲ್ಲಿ ದುಬಾರಿ ದಂಡವನ್ನು ವಿಧಿಸಿದ ಹಲವು ಪ್ರಕರಣಗಳು ವರದಿಯಾಗಿವೆ. ವಾಹನ ಚಾಲಕರಿಗೆ ದುಬಾರಿ ಮೊತ್ತದ ದಂಡ ದೊಡ್ಡ ಮಟ್ಟದಲ್ಲಿ ಬಿಸಿ ಮುಟ್ಟಿದೆ. ಹೊಸ ಎಂವಿ ಕಾಯ್ದೆಯ ಬಗ್ಗೆ ದೊಡ್ಡ ವಿರೋಧ ವ್ಯಕ್ತವಾಗಿದ್ದರೂ ಸಂಚಾರಿ ನಿಯಮ ಉಲ್ಲಂಘನೆ ಸಂಖ್ಯೆಯಲ್ಲಿ ಕಡಿಮೆಯಾಗಿದೆ.

ಈ ತಪ್ಪುಗಳನ್ನು ಮಾಡಿದರೆ ಲೈಸನ್ಸ್ ಕಳೆದುಕೊಳ್ಳಬೇಕಾಗುತ್ತೆ..!

ದುಬಾರಿ ಮೊತ್ತದ ದಂಡಕ್ಕೆ ಹೆದರಿ ದೇಶದಾದ್ಯಂತ ಲಕ್ಷಾಂತರ ಮಂದಿ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸಿದ್ದರು. ದೇಶಾದ್ಯಂತ ಸಂಚಾರಿ ನಿಯಮವನ್ನು ಉಲ್ಲಂಘಿಸಿದ ಲಕ್ಷಾಂತರ ಪ್ರಕರಣಗಳು ದಾಖಲಾಗಿವೆ. ಕೆಲವು ಪ್ರಕರಣಗಳಲ್ಲಿ ಹೊಸ ಎಂವಿ ಕಾಯ್ದೆ ಅಡಿಯಲ್ಲಿ ಟ್ರಾಫಿಕ್ ಪೊಲೀಸರು ಲೈಸೆನ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಹಾಗಾದರೆ ಯಾವುದೆಲ್ಲಾ ಸಂಚಾರಿ ನಿಯಮ ಉಲ್ಲಂಘಿಸಿದರೆ ಲೈಸನ್ಸ್ ಕಳೆದುಕೊಳ್ಳಬಹುದು ಎಂಬುವುದರ ಮಾಹಿತಿ ಇಲ್ಲಿವೆ.

ಈ ತಪ್ಪುಗಳನ್ನು ಮಾಡಿದರೆ ಲೈಸನ್ಸ್ ಕಳೆದುಕೊಳ್ಳಬೇಕಾಗುತ್ತೆ..!

ಕರ್ಕಶವಾಗಿ ಶಬ್ದ ಮಾಡಿದರೆ

ಮ್ಯೂಸಿಕ್ ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಮ್ಯೂಸಿಕ್ ಕೇಳುವುದು ಪ್ರತಿಯೊಬ್ಬರಿಗೊ ಇಷ್ಟವಾದ ವಿಷಯ. ನಿಮ್ಮ ವಾಹನಗಳಲ್ಲಿ ಮ್ಯೂಸಿಕ್ ಸಿಸ್ಟಂ ಅನ್ನು ಹೊಂದಿರುವುದು ಮತ್ತು ಮ್ಯೂಸಿಕ್ ಅನ್ನು ಹಾಕುವುದು ಅಪರಾಧವಲ್ಲ. ಆದರೆ ಇತರ ವಾಹನ ಪ್ರಯಾಣಿಕರಿಗೆ ಮತ್ತು ರಸ್ತೆಯಲ್ಲಿ ಸಂಚಾರಿಸುವ ಪಾದಚಾರಿಗಳಿಗೆ ಕಿರಿಕಿರಿ ಉಂಟುಮಾಡುವಂತೆ ದೊಡ್ಡ ಮಟ್ಟದ ಸೌಂಡ್‍‍ನಲ್ಲಿ ಅಥವಾ ಕರ್ಕಶವಾಗಿ ಮ್ಯೂಸಿಕ್ ಅನ್ನು ಹಾಕಿದಾಗ ಟ್ರಾಫಿಕ್ ಪೊಲೀಸರು ತಮ್ಮ ವಿವೇಚನೆಗೆ ಅನುಗುಣವಾಗಿ ಚಲನ್ ನೀಡಬಹುದು, ಕನಿಷ್ಠ ರೂ.100 ದಂಡವನ್ನು ವಿಧಿಸಬಹುದು. ಅಲ್ಲದೆ ಚಾಲಕನ ಲೈಸೆನ್ಸ್ (ಚಾಲನಾ ಪರವಾನಗಿ)ಯನ್ನು ಸಹ ವಶಪಡಿಸಿಕೊಳ್ಳಬಹುದು.

ಈ ತಪ್ಪುಗಳನ್ನು ಮಾಡಿದರೆ ಲೈಸನ್ಸ್ ಕಳೆದುಕೊಳ್ಳಬೇಕಾಗುತ್ತೆ..!

ರ್‍ಯಾಶ್ ಡ್ರೈವಿಂಗ್

ಸ್ಕೂಲ್ ಅಥವಾ ಕಾಲೇಜ್ ಸಮೀಪವಿರುವ ಪ್ರದೇಶಗಳನ್ನು ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ. ಇದೇ ಕಾರಣದಿಂದ ಶಾಲೆಗಳ ಬಳಿ ವಾಹನಗಳನ್ನು ವೇಗವಾಗಿ ಚಾಲನೆ ಮಾಡಬಾರದು ಮತ್ತು ಶಾಲಾ ಸಮೀಪದ ರಸ್ತೆಗಳಲ್ಲಿ ವೇಗದಲ್ಲಿ ಚಲಿಸಬಾರದು ಎಂಬ ಚಿಹ್ನೆಯನ್ನು ಸಾಮಾನ್ಯವಾಗಿ ಅಂತಹ ರಸ್ತೆಗಳಲ್ಲಿ ಅಳವಡಿಸಿರುತ್ತದೆ. ಬೋರ್ಡ್ ಇಲ್ಲದಿದ್ದರೂ ಸಹ ಗಂಟೆಗೆ 25 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಬಾರದು. ಒಂದು ವೇಳೆ ವೇಗವಾಗಿ ಚಲಾಯಿಸಿದ್ದರೆ ದಂಡವನ್ನು ವಿಧಿಸಬಹುದು ಅಥವಾ ಲೈಸೆನ್ಸ್ ಅನ್ನು ವಶಪಡಿಸಿಕೊಳ್ಳಬಹುದು.

ಈ ತಪ್ಪುಗಳನ್ನು ಮಾಡಿದರೆ ಲೈಸನ್ಸ್ ಕಳೆದುಕೊಳ್ಳಬೇಕಾಗುತ್ತೆ..!

ಮೊಬೈಲ್ ಬಳಕೆ

ಚಾಲನೆ ಮಾಡುವಾಗ ನಿಮ್ಮ ಮೊಬೈಲ್ ಫೋನ್ ಬಳಸುವುದು ಸಂಚಾರಿ ನಿಯಮದ ಉಲ್ಲಂಘನೆಯಾಗಿದೆ. ಸಂಚಾರಿ ನಿಯಮದ ಪ್ರಕಾರ, ಚಾಲಕನು ನ್ಯಾವಿಗೇಷನ್ ಸೇವೆಗಳನ್ನು ಹೊರತುಪಡಿಸಿ ಯಾವುದಕ್ಕೂ ಮೊಬೈಲ್ ಫೋನ್ ಅನ್ನು ಬಳಸಬಾರದು. ಇದರ ಉದ್ದೇಶ ಚಾಲನೆ ಮಾಡುವಾಗ ಫೋನ್ ಬಳಕೆಯು ಚಾಲಕನ ಗಮನ ಇತರ ಕಡೆ ಸೆಳೆಯುತ್ತದೆ ಮತ್ತು ಇದು ಅಪಘಾತಕ್ಕೆ ಕಾರಣವಾಗಬಹುದು. ಚಾಲನೆ ಮಾಡುವಾಗ ನಿಮ್ಮ ಫೋನ್ ಬಳಸುವುದನ್ನು ಟ್ರಾಫಿಕ್ ಪೋಲೀಸರು ಗಮನಿಸಿದರೆ ನಿಮ್ಮ ಮೇಲೆ ದಂಡ ವಿಧಿಸಬಹುದು.

ಈ ತಪ್ಪುಗಳನ್ನು ಮಾಡಿದರೆ ಲೈಸನ್ಸ್ ಕಳೆದುಕೊಳ್ಳಬೇಕಾಗುತ್ತೆ..!

ಬ್ಲೂಟೂತ್ ಕನೆಕ್ಟ್ ಮಾಡಿ ಪೋನನಲ್ಲಿ ಮಾತನಾಡುವುದು

ಬಹುತೇಕ ಎಲ್ಲಾ ಆಧುನಿಕ ಕಾರುಗಳಲ್ಲಿ ಬ್ಲೂಟೂತ್ ಕನೆಕ್ಟ್ ಮಾಡಿ ಪೋನ್‍‍ನಲ್ಲಿ ಮಾತನಾಡುವ ವೈಶಿಷ್ಟ್ಯಗಳು ಹೊಂದಿದೆ. ಚಾಲನೆ ಮಾಡುವಾಗ ಫೋನ್‌ನಲ್ಲಿ ಮಾತನಾಡುವುದು ಸಂಚಾರಿ ನಿಯಮದ ಉಲ್ಲಂಘನೆಯಾಗಿದೆ, ಅದು ಹ್ಯಾಂಡ್‌ಸ್ಫ್ರೀ ಆಗಿರಲಿ ಅಥವಾ ಇಲ್ಲದಿರಲಿ ಅದು ಉಲ್ಲಂಘನೆಯಾಗಿದೆ. ಅದರ ಹಿಂದಿನ ಕಾರಣವೆಂದರೆ, ಕಾರನ್ನು ಚಾಲನೆ ಮಾಡುವಾಗ ಮಾತನಾಡಲು ಮೊಬೈಲ್ ಫೋನ್ ಬಳಸುವುದರಿಂದ ನಿಮ್ಮ ಗಮನವು ಬೇರೆ ಕಡೆ ಸೆಳೆಯುತ್ತದೆ. ಆದ್ದರಿಂದ ನಿಮ್ಮ ಕಾರು ಬ್ಲೂಟೂತ್‌ ವೈಶಿಷ್ಟ್ಯಗಳು ಇದ್ದರೂ ಸಹ ಫೋನ್ ಕರೆಯನ್ನು ಕಾರು ನಿಲ್ಲಿಸಿ ಕರೆಯನ್ನು ಸ್ವೀಕರಿಸಿ ಮಾತನಾಡಿ. ಇಲ್ಲದಿದ್ದರೆ ಟ್ರಾಫಿಕ್ ಪೊಲೀಸರು ದಂಡವನ್ನು ವಿಧಿಸಬಹುದು ಅಥವಾ ಲೈಸೆನ್ಸ್ ಅನ್ನು ವಶಪಡಿಸಿಕೊಳ್ಳಬಹುದು.

ಈ ತಪ್ಪುಗಳನ್ನು ಮಾಡಿದರೆ ಲೈಸನ್ಸ್ ಕಳೆದುಕೊಳ್ಳಬೇಕಾಗುತ್ತೆ..!

ಜೀಬ್ರಾ ಕ್ರಾಸಿಂಗ್

ದೇಶಾದ್ಯಂತವಿರುವ ರಸ್ತೆಗಳಲ್ಲಿ ಜೀಬ್ರಾ ಕ್ರಾಸಿಂಗ್‌ಗಳು ಇರುತ್ತವೆ ಮತ್ತು ಇದನ್ನು ಪಾದಚಾರಿಗಳು ಬಳಿಸಿ ರಸ್ತೆಯನ್ನು ದಾಟುತ್ತಾರೆ. ಇದ್ದರಿಂದ ಜೀಬ್ರಾ ಲೈನ್ ದಾಟುವ ಮೊದಲು ಕಾರನ್ನು ನಿಲ್ಲಿಸುವುದು ಬಹಳ ಮುಖ್ಯವಾಗಿದೆ. ನೀವು ಜೀಬ್ರಾ ಕ್ರಾಸ್ ಲೈನ್ ದಾಟಿದರೆ ನಿಮಗೆ ದಂಡ ವಿಧಿಸಬಹುದು ಮತ್ತು ಮುಂದಿನ ಕೆಲವು ತಿಂಗಳುಗಳವರೆಗೆ ನಿಮ್ಮ ಚಾಲನಾ ಪರವಾನಗಿಯನ್ನು ರದ್ದುಗೊಳಿಸಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ತಪ್ಪುಗಳನ್ನು ಮಾಡಿದರೆ ಲೈಸನ್ಸ್ ಕಳೆದುಕೊಳ್ಳಬೇಕಾಗುತ್ತೆ..!

ಫುಟ್‌ಪಾತ್ ವಾಹನ ಸಂಚಾರ

ಫುಟ್‌ಪಾತ್‍ಗಳು ಪಾದಚಾರಿಗಳಿಗೆ ನಡೆದಾಡಲು ಇರುವ ಮಾರ್ಗವಾಗಿದೆ. ಆದರೆ ಕೆಲವು ದ್ವಿಚಕ್ರ ವಾಹನ ಸವಾರರು ಕಿಕ್ಕಿರಿದು ವಾಹನಗಳು ರಸ್ತೆಗಳು ತುಂಬಿಕೊಂಡು ಟ್ರಾಫಿಕ್ ಜಾಮ್ ಆದಾಗ ಇದನ್ನು ತಪ್ಪಿಸಲು ಫು‍‍ಟ್‍ಪಾತ್‍‍ನಲ್ಲಿ ರಾಜರೋಷವಾಗಿ ಸಂಚರಿಸುತ್ತಾರೆ. ಇದರಿಂದ ಪಾದಚಾರಿಗಳಿಗೆ ಕಿರಿಕಿರಿ ಉಂಟುಮಾಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಅಪಾಯವನ್ನು ಉಂಟು ಮಾಡುತ್ತದೆ. ಇದರಿಂದಾಗಿ ಹೀಗೆ ಫು‍‍ಟ್‍ಪಾತ್‍‍ನಲ್ಲಿ ಸಂಚಾರ ಮಾಡಿದ್ದರೆ ದಂಡವನ್ನು ವಿಧಿಸಬಹುದು ಅಥವಾ ಲೈಸನ್ಸ್ ಅನ್ನು ವಶಪಡಿಸಿಕೊಳ್ಳಬಹುದು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಈ ತಪ್ಪುಗಳನ್ನು ಮಾಡಿದರೆ ಲೈಸನ್ಸ್ ಕಳೆದುಕೊಳ್ಳಬೇಕಾಗುತ್ತೆ..!

ಹೆಚ್ಚಿನ ಶಬ್ದದ ಹಾರ್ನ್

ಶಬ್ದ ಮಾಲಿನ್ಯವು ನಮ್ಮ ರಸ್ತೆಗಳಲ್ಲಿನ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ ಮತ್ತು ಒತ್ತಡದ ಅಥಾವ ಹೆಚ್ಚಿನ ಶಬ್ದದ ಹಾರ್ನ್‍‍ಗಳನ್ನು ಬಳಸುವುದು ಮತ್ತಷ್ಟು ತೊಂದರೆ ಉಂಟಾಗುತ್ತದೆ. ಹೆಚ್ಚಿನ ಶಬ್ದದ ಹಾರ್ನ್ ಅನ್ನು ಬಳಸುವುದರಿಂದ ಶಬ್ದ ಮಾಲಿನ್ಯವಾಗುತ್ತದೆ ಮತ್ತು ಇದು ಪಾದಚಾರಿಗಳಿಗೆ ಕಿರಿಕಿರಿ ಮತ್ತು ಭಯ ಉಂಟು ಮಾಡುತ್ತದೆ, ಇದೇ ಕಾರಣದಿಂದ ಹೆಚ್ಚಿನ ಶಬ್ದದ ಹಾರ್ನ್ ಅನ್ನು ದೇಶಾದ್ಯಂತ ನಿಷೇಧಿಸಲಾಗಿದೆ. ಹೆಚ್ಚಿನ ಶಬ್ಡದ ಹಾರ್ನ್‍‍ಗಳನ್ನು ಬಳಸಿದರೆ ನಿಮ್ಮ ಪರವಾನಗಿಯನ್ನು ವಶಪಡಿಸಿಕೊಳ್ಳಬಹುದು ಮತ್ತು ಭಾರಿ ದಂಡ ವಿಧಿಸಬಹುದು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಈ ತಪ್ಪುಗಳನ್ನು ಮಾಡಿದರೆ ಲೈಸನ್ಸ್ ಕಳೆದುಕೊಳ್ಳಬೇಕಾಗುತ್ತೆ..!

ಲೇನ್‍ ಬದಲಾವಣೆ

ಲೇನ್ ಅನ್ನು ಬದಲಾಯಿಸುವುದು ಕೂಡ ಸಂಚಾರಿ ನಿಯಮದ ಉಲ್ಲಂಘನೆಯಾಗಿದೆ. 40 ಕಿ.ಮೀ ವೇಗದ ಮಿತಿಯನ್ನು ಹೊಂದಿರುವ ರಸ್ತೆಗಳಲ್ಲಿ ಮಾತ್ರ ರಸ್ತೆಯ ವಿಭಾಗಗಲಲ್ಲಿ ಮಾತ್ರ ಲೇನ್‍ ಅನ್ನು ಬದಲಾಯಿಸಬಹುದು. ಲೇನ್ ಅನ್ನು 40 ಕಿ.ಮೀ ವೇಗಗಿಂತ ಹೆಚ್ಚಿನ ವೇಗದ ರಸ್ತೆಯಲ್ಲಿ ಲೇನ್ ಅನ್ನು ಬದಲಾಯಿಸಿದ್ದರೆ ನಿಮಗೆ ದಂಡವನ್ನು ವಿಧಿಸಬಹುದು ಅಥವಾ ಲೈಸೆನ್ಸ್ ಅನ್ನು ವಶಪಡಿಸಿಕೊಳ್ಳಬಹುದು.

ಈ ತಪ್ಪುಗಳನ್ನು ಮಾಡಿದರೆ ಲೈಸನ್ಸ್ ಕಳೆದುಕೊಳ್ಳಬೇಕಾಗುತ್ತೆ..!

ಆಂಬ್ಯುಲೆನ್ಸ್‌ಗಳಿಗೆ ದಾರಿ ಬಿಡದೆ ಇರುವುದು

ಆಂಬ್ಯುಲೆನ್ಸ್‌ಗಳಿಗೆ ದಾರಿ ಬಿಡದೆ ಇರುವುದು ಸಂಚಾರಿ ನಿಯಮದ ಉಲ್ಲಂಘನೆಯಾಗಿದೆ. ಆಂಬ್ಯುಲೆನ್ಸ್‌ ಸೈರಾನ್ ಅನ್ನು ಹಾಕಿಕೊಂಡಿದ್ದಾಗ ಕಡ್ಡಾಯವಾಗಿ ಆಂಬ್ಯುಲೆನ್ಸ್‌ ಗಳಿಗೆ ದಾರಿ ಬಿಡಬೇಕಾಗುತ್ತದೆ. ಆಂಬ್ಯುಲೆನ್ಸ್‌ ಗಳಿಗೆ ದಾರಿ ಬಿಡಬೇಕಾಗಿರುವುದು ಮಾನವೀಯತೆ ಗುಣವಾಗಿದೆ, ಯಾಕೆಂದರೆ ಅದರಲ್ಲಿ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಸಾಗಿಸುತ್ತಾರೆ. ಒಂದು ಜೀವದ ಪ್ರಶ್ನೆಯಾಗಿರುವುದರಿಂದ ಇದು ಗಂಭೀರವಾದ ಪ್ರಕರಣವಾಗಿದೆ. ಹೊಸ ಆಂಬ್ಯುಲೆನ್ಸ್‌ಗಳಲ್ಲಿ ಡ್ಯಾಶ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಅದು ಮುಂದೆ ಚಲಿಸುವ ವಾಹನಗಳ ದೃಶ್ಯಗಳನ್ನು ಸೆರೆ ಹಿಡಿಯುತ್ತದೆ. ಆಂಬ್ಯುಲೆನ್ಸ್‌ಗಳಿಗೆ ದಾರಿ ಬಿಡದ ಪ್ರಕರಣದಲ್ಲಿ ದಂಡವನ್ನು ವಿಧಿಸಬಹುದು ಅಥವಾ ಲೈಸೆನ್ಸ್ ಅನ್ನು ವಶಪಡಿಸಿಕೊಳ್ಳಬಹುದು.

ಈ ತಪ್ಪುಗಳನ್ನು ಮಾಡಿದರೆ ಲೈಸನ್ಸ್ ಕಳೆದುಕೊಳ್ಳಬೇಕಾಗುತ್ತೆ..!

ಓವರ್ ಸ್ಪೀಡ್

ರಸ್ತೆಗಳ ವೇಗದ ಮಿತಿಯನ್ನು ಮೀರಿ ಓವರ್ ಸ್ಪೀಡ್‍ನಲ್ಲಿ ಸಂಚಾರಿ ನಿಯಮದ ಉಲ್ಲಂಘನೆಯಾಗಿದೆ ಮತ್ತು ಅದು ತುಂಬಾನೆ ಅಪಾಯಕಾರಿಯಾಗಿದೆ. ಓವರ್ ಸ್ಪೀ‍ಡ್‍ನಲ್ಲಿ ಚಲಿಸಿದರೆ ಅದು ಅಪಘಾತಕ್ಕೆ ಕಾರಣವಾಗುತ್ತದೆ. ಸಾರ್ವಜನಿಕ ರಸ್ತೆಗಳಲ್ಲಿ ರೇಸಿಂಗ್ ಅಥವಾ ವಿಲ್ಹಿಂಗ್ ಮಾಡಿದರೆ ದುಬಾರಿ ದಂಡವನ್ನು ವಿಧಿಸಬಹುದು ಅಥವಾ ಲೈಸೆನ್ಸ್ ಅನ್ನು ವಶಪಡಿಸಿಕೊಳ್ಳಬಹುದು.

Most Read Articles

Kannada
English summary
which you can LOSE your car/motorcycle driving licence - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more