ಡಿಎಲ್, ಆರ್‌ಸಿ ಅವಧಿ ಮುಗಿದಿರುವವರಿಗೆ ಸಿಹಿ ಸುದ್ಧಿ ನೀಡಿದ ಕೇಂದ್ರ ಸರ್ಕಾರ

ಕರೋನಾ ವೈರಸ್‌ನಿಂದಾಗಿ ಇಡಿ ವಿಶ್ವವೇ ಆತಂಕದಲ್ಲಿದ್ದು, ಈ ಮಾರಣಾಂತಿಕ ವೈರಸ್ ಹರಡದಂತೆ ತಡೆಯಲು ಎಲ್ಲಾ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಹಾಮಾರಿ ಕರೋನಾ ವೈರಸ್ ಹಾವಳಿಯಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿಯು ದಿನದಿಂದ ದಿನಕ್ಕೆ ಕುಸಿಯುತ್ತಿದೆ.

ಡಿಎಲ್, ಆರ್ ಸಿ ಅವಧಿ ಮುಗಿದಿರುವವರಿಗೆ ಸಿಹಿ ಸುದ್ಧಿ ನೀಡಿದ ಕೇಂದ್ರ ಸರ್ಕಾರ

ಕರೋನಾದಿಂದ ಉಂಟಾಗಿರುವ ಸಮಸ್ಯೆಗಳನ್ನು ಮಾತಿನಲ್ಲಿ ಅಥವಾ ಪದಗಳಲ್ಲಿ ಹೇಳಿದರೆ ಸಾಕಾಗುವುದಿಲ್ಲ. ಕೂಲಿ ಕಾರ್ಮಿಕರು ಯಾವುದೇ ಆದಾಯವಿಲ್ಲದೆ ಸಂಕಷ್ಟದಲ್ಲಿದ್ದರೆ, ಉದ್ಯಮಗಳು ಹಾಗೂ ವಹಿವಾಟುಗಳು ಭಾರಿ ನಷ್ಟವನ್ನು ಅನುಭವಿಸುತ್ತಿವೆ. ಬಹುತೇಕ ಉದ್ಯೋಗಿಗಳ ಭವಿಷ್ಯವು ಅನಿಶ್ಚಿತತೆಯಲ್ಲಿದೆ.

ಡಿಎಲ್, ಆರ್ ಸಿ ಅವಧಿ ಮುಗಿದಿರುವವರಿಗೆ ಸಿಹಿ ಸುದ್ಧಿ ನೀಡಿದ ಕೇಂದ್ರ ಸರ್ಕಾರ

ಕರೋನಾ ವೈರಸ್ ಹರಡದಂತೆ ತಡೆಯಲು ಕೇಂದ್ರ ಸರ್ಕಾರವು ಲಾಕ್ ಡೌನ್ ಘೋಷಿಸಿದೆ. ಇದರಿಂದಾಗಿ ಜನರು ಮನೆಯಿಂದ ಹೊರಬರುತ್ತಿಲ್ಲ. ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಡಿಎಲ್, ಆರ್ ಸಿ ಅವಧಿ ಮುಗಿದಿರುವವರಿಗೆ ಸಿಹಿ ಸುದ್ಧಿ ನೀಡಿದ ಕೇಂದ್ರ ಸರ್ಕಾರ

ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅವಧಿ ಮುಕ್ತಾಯವಾಗಿರುವ ಡ್ರೈವಿಂಗ್ ಲೈಸೆನ್ಸ್, ಲರ್ನರ್ ಲೈಸೆನ್ಸ್ ಹಾಗೂ ಆರ್ ಸಿಗಳ ವ್ಯಾಲಿಡಿಟಿಯನ್ನು ಜೂನ್ 30ರವರೆಗೆ ವಿಸ್ತರಿಸಿದೆ.

ಡಿಎಲ್, ಆರ್ ಸಿ ಅವಧಿ ಮುಗಿದಿರುವವರಿಗೆ ಸಿಹಿ ಸುದ್ಧಿ ನೀಡಿದ ಕೇಂದ್ರ ಸರ್ಕಾರ

ಫೆಬ್ರವರಿ 1ಕ್ಕೆ ರಿಜಿಸ್ಟ್ರೇಶನ್ ಹಾಗೂ ಲೈಸೆನ್ಸ್ ಅವಧಿ ಮುಗಿದಿರುವ ಎಲ್ಲಾ ವಾಹನಗಳು ಜೂನ್ 30ರವರೆಗೆ ವ್ಯಾಲಿಡಿಟಿಯನ್ನು ಹೊಂದಿರಲಿವೆ. ತುರ್ತು ಸೇವೆಯ ವಾಹನಗಳು, ಟ್ರಕ್‌ಗಳು ಹಾಗೂ ಸರಕುಗಳನ್ನು ಸಾಗಿಸುವ ವಾಹನಗಳು ಯಾವುದೇ ತೊಂದರೆಯನ್ನು ಎದುರಿಸದೇ ಸಂಚರಿಸುವಂತಾಗಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿದೆ.

ಡಿಎಲ್, ಆರ್ ಸಿ ಅವಧಿ ಮುಗಿದಿರುವವರಿಗೆ ಸಿಹಿ ಸುದ್ಧಿ ನೀಡಿದ ಕೇಂದ್ರ ಸರ್ಕಾರ

ಎಲ್ಲಾ ರಾಜ್ಯ ಸರ್ಕಾರಗಳು ಈ ಆದೇಶವನ್ನು ಪಾಲಿಸುವಂತೆ ಕೇಂದ್ರ ಸರ್ಕಾರವು ಸೂಚನೆ ನೀಡಿದೆ. ಡ್ರೈವಿಂಗ್ ಲೈಸೆನ್ಸ್ ಹಾಗೂ ರಿಜಿಸ್ಟ್ರೇಶನ್ ಗಳ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲು ಆದೇಶಿಸಿದೆ.

ಡಿಎಲ್, ಆರ್ ಸಿ ಅವಧಿ ಮುಗಿದಿರುವವರಿಗೆ ಸಿಹಿ ಸುದ್ಧಿ ನೀಡಿದ ಕೇಂದ್ರ ಸರ್ಕಾರ

ಲಾಕ್‌ಡೌನ್ ಹಿನ್ನೆಲೆಯಲ್ಲಿ, ಎಲ್ಲಾ ಆರ್‌ಟಿಒ ಹಾಗೂ ರಿಜಿಸ್ಟ್ರೇಶನ್ ಕಚೇರಿಗಳನ್ನು ಏಪ್ರಿಲ್ 14ರವರೆಗೆ ಮುಚ್ಚಲಾಗಿದೆ. ಇದರಿಂದಾಗಿ ಹೊಸ ವಾಹನಗಳ ನೋಂದಣಿ ಹಾಗೂ ಹಳೆ ವಾಹನಗಳ ನವೀಕರಣವನ್ನು ಸ್ಥಗಿತಗೊಳಿಸಲಾಗಿದೆ.

ಡಿಎಲ್, ಆರ್ ಸಿ ಅವಧಿ ಮುಗಿದಿರುವವರಿಗೆ ಸಿಹಿ ಸುದ್ಧಿ ನೀಡಿದ ಕೇಂದ್ರ ಸರ್ಕಾರ

ಫೆಬ್ರವರಿ 1ಕ್ಕೆ ನೋಂದಣಿ ಹಾಗೂ ಪರವಾನಗಿ ಅವಧಿ ಮುಗಿದಿರುವ ಎಲ್ಲಾ ವಾಹನಗಳ ವ್ಯಾಲಿಡಿಟಿಯನ್ನು ಮುಂದುವರೆಸುವಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಡಿಎಲ್, ಆರ್ ಸಿ ಅವಧಿ ಮುಗಿದಿರುವವರಿಗೆ ಸಿಹಿ ಸುದ್ಧಿ ನೀಡಿದ ಕೇಂದ್ರ ಸರ್ಕಾರ

ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಬರುವ ಫಿಟ್‌ನೆಸ್ ಸರ್ಟಿಫಿಕೇಟ್, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಹಾಗೂ ಇತರ ದಾಖಲೆಗಳು ಇವುಗಳಲ್ಲಿ ಸೇರಿವೆ. ಈ ಹೊಸ ನಿಯಮವನ್ನು ತಕ್ಷಣದಿಂದ ಜಾರಿಗೊಳಿಸಬೇಕೆಂದು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದೆ.

ಬಿಎಸ್-4 ವಾಹನಗಳ ಮಾರಾಟ ಅವಧಿ ವಿಸ್ತರಣೆಯ ಜೊತೆ ಹಲವು ಷರತ್ತು ವಿಧಿಸಿದ ಸುಪ್ರೀಂ

ಬಿಎಸ್-4 ವಾಹನಗಳ ಮಾರಾಟಕ್ಕೂ ಅವಧಿ ವಿಸ್ತರಣೆ

ದೇಶಾದ್ಯಂತ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿ ಪ್ರಕ್ರಿಯೆಯನ್ನು ಬ್ಯಾನ್ ಮಾಡಿದ್ದ ಸುಪ್ರೀಂಕೋರ್ಟ್ ಕೊನೆಯ ಕ್ಷಣದಲ್ಲಿ ಬ್ಯಾನ್ ಅಸ್ತ್ರವನ್ನು ಸಡಿಲಿಸಿದೆ. ಕರೋನಾ ವೈರಸ್ ಹಿನ್ನಲೆಯಲ್ಲಿ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್‌ಡೌನ್ ಹಿನ್ನಲೆಯಲ್ಲಿ ಆಟೋ ಕಂಪನಿಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.

ಬಿಎಸ್-4 ವಾಹನಗಳ ಮಾರಾಟ ಅವಧಿ ವಿಸ್ತರಣೆಯ ಜೊತೆ ಹಲವು ಷರತ್ತು ವಿಧಿಸಿದ ಸುಪ್ರೀಂ

ಮಾಲಿನ್ಯ ತಡೆಯುವ ಉದ್ದೇಶದಿಂದ ಕಳೆದ 2 ವರ್ಷಗಳ ಹಿಂದೆಯೇ ಬಿಎಸ್-6 ಎಮಿಷನ್ ನಿಯಮವನ್ನು 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿ ತರುವಂತೆ ಆದೇಶ ನೀಡಿದ್ದ ಸುಪ್ರೀಂಕೋರ್ಟ್ ಆಟೋ ಕಂಪನಿಗಳಿಗೆ ಖಡಕ್ ಸೂಚನೆ ನೀಡಿತ್ತು.

ಬಿಎಸ್-4 ವಾಹನಗಳ ಮಾರಾಟ ಅವಧಿ ವಿಸ್ತರಣೆಯ ಜೊತೆ ಹಲವು ಷರತ್ತು ವಿಧಿಸಿದ ಸುಪ್ರೀಂ

ಆದೇಶದಂತೆ ಏಪ್ರಿಲ್ 1ರಿಂದ ಜಾರಿಗೆ ಮಾಡಲು ಇನ್ನು 15 ದಿನಗಳು ಬಾಕಿ ಇರುವಾಗ ದೇಶದಲ್ಲಿ ಕರೋನಾ ವೈರಸ್ ಭೀತಿ ಹೆಚ್ಚಿದ್ದರಿಂದ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿ ಲಾಕ್ ಡೌನ್ ಹೇರಲಾಗಿತ್ತು. ಇದರಿಂದಾಗಿ ಕೊನೆಯ ಗಳಿಗೆಯಲ್ಲಿ ಮಾರಾಟವಾಗಬೇಕಿದ್ದ ಲಕ್ಷಾಂತರ ಬಿಎಸ್-4 ವಾಹನಗಳು ಮಾರಾಟವಾಗದೆ ಹಾಗೆಯೇ ಉಳಿದಿವೆ.

ಬಿಎಸ್-4 ವಾಹನಗಳ ಮಾರಾಟ ಅವಧಿ ವಿಸ್ತರಣೆಯ ಜೊತೆ ಹಲವು ಷರತ್ತು ವಿಧಿಸಿದ ಸುಪ್ರೀಂ

ಇದರಿಂದ ಕಂಗಾದ ವಾಹನ ಉತ್ಪಾದನಾ ಸಂಸ್ಥೆಗಳು ಬ್ಯಾನ್ ಅಸ್ತ್ರದಿಂದ ತಪ್ಪಿಸಿಕೊಳ್ಳಲು ಮತ್ತೆ ಸುಪ್ರೀಂಕೋರ್ಟ್ ತದತಟ್ಟುವ ಮೂಲಕ ವಿನಾಯ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆದರೆ ಮಾರಾಟ ಅವಧಿ ವಿಸ್ತರಣೆಗೆ ಹಲವು ಕಠಿಣ ಷರತ್ತುಗಳನ್ನು ವಿಧಿಸಿದೆ.

ಬಿಎಸ್-4 ವಾಹನಗಳ ಮಾರಾಟ ಅವಧಿ ವಿಸ್ತರಣೆಯ ಜೊತೆ ಹಲವು ಷರತ್ತು ವಿಧಿಸಿದ ಸುಪ್ರೀಂ

ಕರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿನಾಯ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದ ಇಂಡಿಯನ್ ಆಟೋ ಡೀಲರ್ಸ್ ಅಸೋಶಿಯೇಷನ್ ಸಂಸ್ಥೆಗೆ ಸುಪ್ರೀಂಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಅವಧಿ ವಿಸ್ತರಣೆ ಮಾಡಿತು.

ಬಿಎಸ್-4 ವಾಹನಗಳ ಮಾರಾಟ ಅವಧಿ ವಿಸ್ತರಣೆಯ ಜೊತೆ ಹಲವು ಷರತ್ತು ವಿಧಿಸಿದ ಸುಪ್ರೀಂ

ಏಪ್ರಿಲ್ 1ರಿಂದಲೇ ನಿಷೇಧಗೊಳ್ಳಬೇಕಿದ್ದ ಬಿಎಸ್-4 ಮಾರಾಟ ಪ್ರಕ್ರಿಯೆಯನ್ನು ಏಪ್ರಿಲ್ 24ರ ತನಕ ವಿಸ್ತರಣೆ ಮಾಡಲಾಗಿದ್ದು, ಪ್ರತಿ ಆಟೋ ಕಂಪನಿಗಳು ಸ್ಟಾಕ್ ಇರುವ ಶೇ.10 ರಷ್ಟು ಪ್ರಮಾಣದ ಬಿಎಸ್-4 ವಾಹನಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದಿದೆ.

ಬಿಎಸ್-4 ವಾಹನಗಳ ಮಾರಾಟ ಅವಧಿ ವಿಸ್ತರಣೆಯ ಜೊತೆ ಹಲವು ಷರತ್ತು ವಿಧಿಸಿದ ಸುಪ್ರೀಂ

ಜೊತೆಗೆ ಬಿಎಸ್-4 ವಾಹನ ಮಾರಾಟ ಅವಧಿ ವಿಸ್ತರಣೆಯ ವಿನಾಯ್ತಿಯು ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಿಗೆ ಅನ್ವಯಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ಮಾಲಿನ್ಯ ತಡೆಯಲು ಹಳೆಯ ವಾಹನಗಳಿಗೆ ಕಡಿವಾಣ ಹಾಕುವುದೇ ಮುಖ್ಯ ಎಂದಿದೆ.

ಬಿಎಸ್-4 ವಾಹನಗಳ ಮಾರಾಟ ಅವಧಿ ವಿಸ್ತರಣೆಯ ಜೊತೆ ಹಲವು ಷರತ್ತು ವಿಧಿಸಿದ ಸುಪ್ರೀಂ

ಈ ಹಿಂದೆಯೂ ಎರಡು ಬಾರಿ ಆಟೋ ಕಂಪನಿಗಳು ಬಿಎಸ್-4 ವಾಹನಗಳ ಮಾರಾಟಕ್ಕೆ ಅವಧಿಯ ವಿಸ್ತರಣೆಯ ಮನವಿಯನ್ನು ತಳ್ಳಿಹಾಕಿರುವ ಸುಪ್ರೀಂಕೋರ್ಟ್ ಕಡ್ಡಾಯವಾಗಿ ಎಪ್ರಿಲ್ 1ರಿಂದ ಬಿಎಸ್-6 ಆದೇಶವನ್ನು ಪಾಲಿಸುವಂತೆ ಖಡಕ್ ಆದೇಶ ನೀಡಿತ್ತು.

ಬಿಎಸ್-4 ವಾಹನಗಳ ಮಾರಾಟ ಅವಧಿ ವಿಸ್ತರಣೆಯ ಜೊತೆ ಹಲವು ಷರತ್ತು ವಿಧಿಸಿದ ಸುಪ್ರೀಂ

ಆದರೆ ಇದೀಗ ಕರೋನಾ ವೈರಸ್‌ನಿಂದ ವಾಹನ ಮಾರಾಟ ಬಂದ್ ಆಗಿರುವುದರಿಂದ ಆಟೋ ಕಂಪನಿಗಳ ಹೊಸ ಮರುಪರಿಶೀಲನಾ ಅರ್ಜಿಯನ್ನು ಮಾನ್ಯ ಮಾಡಿ ಷರತ್ತುಗಳೊಂದಿಗೆ ಮತ್ತೊಂದು ಅವಕಾಶವನ್ನು ನೀಡಿದೆ.

ಬಿಎಸ್-4 ವಾಹನಗಳ ಮಾರಾಟ ಅವಧಿ ವಿಸ್ತರಣೆಯ ಜೊತೆ ಹಲವು ಷರತ್ತು ವಿಧಿಸಿದ ಸುಪ್ರೀಂ

ಮಾಹಿತಿಗಳ ಪ್ರಕಾರ, ವಿವಿಧ ಆಟೋ ಕಂಪನಿಗಳ ಬಳಿ ಇನ್ನು ಸುಮಾರು 7 ಲಕ್ಷ ರೂಪಾಯಿ ಮೌಲ್ಯದ ಬಿಎಸ್-4 ಎಂಜಿನ್ ಪ್ರೇರಿತ ವಾಹನಗಳ ಸ್ಟಾಕ್ ಇದ್ದು, ಇದು ರೂ.6,400 ಕೋಟಿ ಮೌಲ್ಯವನ್ನು ಹೊಂದಿದೆ.

ಬಿಎಸ್-4 ವಾಹನಗಳ ಮಾರಾಟ ಅವಧಿ ವಿಸ್ತರಣೆಯ ಜೊತೆ ಹಲವು ಷರತ್ತು ವಿಧಿಸಿದ ಸುಪ್ರೀಂ

ಹೀಗಾಗಿ ಬಿಎಸ್-4 ವಾಹನ ಮಾರಾಟವನ್ನು ಮಾಡಲೇಬೇಕಾದ ಅನಿವಾರ್ಯತೆಯಲ್ಲಿರುವ ಆಟೋ ಕಂಪನಿಗಳು ಕರೋನಾ ವೈರಸ್ ನೆಪವೊಡ್ಡಿ ಮತ್ತೊಂದು ಅವಕಾಶವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಏಪ್ರಿಲ್ 24ರ ನಂತರ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿ ಕೊನೆಗೊಳ್ಳುತ್ತದೆ.

Most Read Articles

Kannada
English summary
Driving license and vehicle registration permit extended till June 30. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X