ಕುಡಿದು ಟ್ರಿಪಲ್ ರೈಡ್ ಮಾಡಿದವರಿಗೆ ಆಗಿದ್ದೇನು ಗೊತ್ತಾ?

ಭಾರತದಲ್ಲಿ ನಡೆಯುವ ಬಹುತೇಕ ಅಪಘಾತಗಳು ಕುಡಿದು ವಾಹನ ಚಲಾಯಿಸುವ ಕಾರಣಕ್ಕೆ ಸಂಭವಿಸುತ್ತವೆ. ಪೊಲೀಸರು ನಿಯಮಿತವಾಗಿ ತಪಾಸಣೆ ಮಾಡುವ ಮೂಲಕ ಕುಡಿದು ವಾಹನ ಚಲಾಯಿಸುವುದು ತಡೆಯಲು ಪ್ರಯತ್ನಿಸುತ್ತಲೇ ಇರುತ್ತಾರೆ.

ಕುಡಿದು ಟ್ರಿಪಲ್ ರೈಡ್ ಮಾಡಿದವರಿಗೆ ಆಗಿದ್ದೇನು ಗೊತ್ತಾ?

ಆದರೂ ಕೆಲವರು ಪೊಲೀಸರ ಕಣ್ಣು ತಪ್ಪಿಸಿ ಕುಡಿದು ವಾಹನ ಚಲಾಯಿಸುತ್ತಲೇ ಇರುತ್ತಾರೆ. ಇಂತಹುದೇ ಘಟನೆಯೊಂದರಲ್ಲಿ ಕುಡಿದು ವಾಹನ ಚಲಾಯಿಸಿದವರು ಅಪಘಾತಕ್ಕೆ ಒಳಗಾದ ಘಟನೆ ನಡೆದಿದೆ. ಈ ಘಟನೆಯನ್ನು ಬೈಕಿನ ಹಿಂದೆ ಇದ್ದ ಕಾರಿನಲ್ಲಿದ್ದವರು ವೀಡಿಯೊ ಮಾಡಿದ್ದಾರೆ.

ಕುಡಿದು ಟ್ರಿಪಲ್ ರೈಡ್ ಮಾಡಿದವರಿಗೆ ಆಗಿದ್ದೇನು ಗೊತ್ತಾ?

ಈ ವೀಡಿಯೊದಿಂದ ಕುಡಿದು ವಾಹನ ಚಲಾಯಿಸುವುದು ಎಷ್ಟು ಅಪಾಯಕಾರಿ ಎಂಬುದನ್ನು ಕಾಣಬಹುದು. ಅಂದ ಹಾಗೆ ಈ ಘಟನೆ ನಡೆದಿರುವುದು ಹರಿಯಾಣದಲ್ಲಿರುವ ಫರೀದಾಬಾದ್‍‍ನಲ್ಲಿ. ಬೈಕಿನ ಹಿಂಭಾಗದಲ್ಲಿ ವೀಡಿಯೊ ಮಾಡುತ್ತಿರುವವರು ಬೈಕ್ ಬೀಳಲಿದೆ ಎಂಬುದನ್ನು ಮೊದಲೇ ಹೇಳುತ್ತಿದ್ದಾರೆ.

ಕುಡಿದು ಟ್ರಿಪಲ್ ರೈಡ್ ಮಾಡಿದವರಿಗೆ ಆಗಿದ್ದೇನು ಗೊತ್ತಾ?

ಈ ವೀಡಿಯೊದಲ್ಲಿ ಅಷ್ಟೇನೂ ವಾಹನಗಳ ಓಡಾಟವಿಲ್ಲದ ಫ್ಲೈ ಓವರ್ ಮೇಲೆ ಬೈಕಿನ ಮೇಲೆ ಮೂವರು ಕುಳಿತುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಮೊದಲಿಗೆ ರಸ್ತೆಯ ಮಧ್ಯದಲ್ಲಿರುವ ಬೈಕ್ ಕೆಲ ಸೆಕೆಂಡುಗಳ ನಂತರ ರಸ್ತೆಯ ಬಲಭಾಗಕ್ಕೆ ಬರುತ್ತದೆ.

ಕುಡಿದು ಟ್ರಿಪಲ್ ರೈಡ್ ಮಾಡಿದವರಿಗೆ ಆಗಿದ್ದೇನು ಗೊತ್ತಾ?

ಹಲವು ವಾಹನಗಳು ಈ ಬೈಕ್ ಅನ್ನು ಓವರ್‍‍ಟೇಕ್ ಮಾಡಿದ ನಂತರ ಬೈಕಿನ ಸವಾರನು ಮತ್ತೆ ಬೈಕ್ ಅನ್ನು ರಸ್ತೆಯ ಮಧ್ಯಕ್ಕೆ ತರುತ್ತಾನೆ. ಬೈಕ್ ಸವಾರನು ಬೈಕಿನ ನಿಯಂತ್ರಣವನ್ನು ಕಳೆದುಕೊಂಡಂತೆ ಕಾಣುತ್ತದೆ.

ಕುಡಿದು ಟ್ರಿಪಲ್ ರೈಡ್ ಮಾಡಿದವರಿಗೆ ಆಗಿದ್ದೇನು ಗೊತ್ತಾ?

ಕೆಲವೇ ಸೆಕೆಂಡುಗಳಲ್ಲಿ ಬೈಕ್ ಫ್ಲೈ ಓವರ್‍‍ನ ಎಡಭಾಗಕ್ಕೆ ಚಲಿಸುತ್ತದೆ. ಬೈಕ್ ಫ್ಲೈ ಓವರ್‍‍ನ ಗೋಡೆಗೆ ಗುದಿಯುವುದನ್ನು ಅರಿತ ಬೈಕ್ ಸವಾರನು ಬೈಕ್ ಅನ್ನು ಬಲಭಾಗಕ್ಕೆ ತಿರುಗಿಸುತ್ತಾನೆ. ಆದರೆ ಸವಾರನ ನಿಯಂತ್ರಣ ತಪ್ಪಿ ಬೈಕ್ ಡಿವೈಡರ್‍‍ಗೆ ಡಿಕ್ಕಿ ಹೊಡೆಯುತ್ತದೆ.

ಕುಡಿದು ಟ್ರಿಪಲ್ ರೈಡ್ ಮಾಡಿದವರಿಗೆ ಆಗಿದ್ದೇನು ಗೊತ್ತಾ?

ಇದರಿಂದಾಗಿ ಬೈಕಿನಲ್ಲಿದ್ದ ಮೂರೂ ಜನ ಡಿವೈಡರ್‍‍ನಿಂದ ಕೆಳಗೆ ಬಿದ್ದು, ಎದುರುಗಡೆಯಿರುವ ರಸ್ತೆಗೆ ಬೀಳುತ್ತಾರೆ. ಡಿವೈಡರ್‍‍ಗೆ ಗುದ್ದಿದ್ದ ನಂತರ ಬೈಕ್ ಎಡಗಡೆಗೆ ಬಂದು ಫ್ಲೈ ಓವರ್‍‍ಗೆ ಗುದ್ದಿದ ನಂತರ ನಿಂತು ಕೊಳ್ಳುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

ಕುಡಿದು ಟ್ರಿಪಲ್ ರೈಡ್ ಮಾಡಿದವರಿಗೆ ಆಗಿದ್ದೇನು ಗೊತ್ತಾ?

ಈ ಘಟನೆ ನಡೆದಿರುವ ಎಕ್ಸ್ ಪ್ರೆಸ್‍ವೇನಲ್ಲಿ ದ್ವಿ ಚಕ್ರ ವಾಹನಗಳು ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ. ಈ ಘಟನೆ ನಡೆದಿರುವ ಖಚಿತ ಸಮಯದ ಬಗ್ಗೆ ತಿಳಿದು ಬಂದಿಲ್ಲವಾದರೂ, ಈ ಘಟನೆಯು ರಾತ್ರಿ ವೇಳೆಯಲ್ಲಿ ನಡೆದಿದೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಕುಡಿದು ಟ್ರಿಪಲ್ ರೈಡ್ ಮಾಡಿದವರಿಗೆ ಆಗಿದ್ದೇನು ಗೊತ್ತಾ?

ರಸ್ತೆಯಲ್ಲಿ ಬೇರೆ ಯಾವುದೇ ವಾಹನಗಳ ಓಡಾಟಗಳಿಲ್ಲದ ಕಾರಣಕ್ಕೆ ದೊಡ್ಡ ಪ್ರಮಾಣದ ಅಪಘಾತವಾಗಿಲ್ಲ. ಆದರೆ ಕುಡಿದು ಬೈಕ್ ಸವಾರಿ ಮಾಡುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ವೀಡಿಯೊದಲ್ಲಿ ಕಾಣಬಹುದು.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಕುಡಿದು ಟ್ರಿಪಲ್ ರೈಡ್ ಮಾಡಿದವರಿಗೆ ಆಗಿದ್ದೇನು ಗೊತ್ತಾ?

ಕುಡಿದ ಮತ್ತಿನಲ್ಲಿ ಬೈಕ್ ಚಾಲನೆ ಮಾಡುವುದರಿಂದ ನಿದ್ದೆ ಮಂಪರು ಇರುವುದರ ಜೊತೆಗೆ ಬೈಕ್ ಅನ್ನು ಹೇಗೆ ಚಾಲನೆ ಮಾಡಬೇಕೆಂಬುದು ಸಹ ಮರೆತು ಹೋಗಬಹುದು. ಜೊತೆಗೆ ಬೈಕಿನ ಮೇಲೆ ನಿಯಂತ್ರಣವೂ ಇರುವುದಿಲ್ಲ.

ಕುಡಿದು ಟ್ರಿಪಲ್ ರೈಡ್ ಮಾಡಿದವರಿಗೆ ಆಗಿದ್ದೇನು ಗೊತ್ತಾ?

ಬೈಕ್ ಚಾಲಕನೇ ಆಗಲಿ, ಹಿಂಬದಿಯ ಸವಾರನೇ ಆಗಲಿ ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ ಮಾಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಇದರಿಂದ ಕೆಳಗೆ ಬಿದ್ದಾಗ ತಲೆಗೆ ಗಂಭೀರವಾದ ಗಾಯಗಳಾಗುವುದು ಖಚಿತ.

ಈ ವೀಡಿಯೊ ಮಾಡುತ್ತಿದ್ದವರು ಬೈಕಿನಲ್ಲಿದ್ದವರು ಕೆಳಗೆ ಬಿದ್ದ ತಕ್ಷಣ ಆಂಬ್ಯುಲೆನ್ಸ್ ಗೆ ಕರೆ ಮಾಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದಾರೆ. ಕುಡಿದು ವಾಹನ ಚಲಾಯಿಸುವುದರಿಂದ ವಾಹನ ಚಲಾಯಿಸುವವರಿಗೆ ಮಾತ್ರವಲ್ಲದೇ ರಸ್ತೆಯಲ್ಲಿ ಬರುವವರ ಜೀವಕ್ಕೂ ತೊಂದರೆಯಾಗುವ ಸಾಧ್ಯತೆಗಳಿವೆ.

ಕುಡಿದು ಟ್ರಿಪಲ್ ರೈಡ್ ಮಾಡಿದವರಿಗೆ ಆಗಿದ್ದೇನು ಗೊತ್ತಾ?

ಈ ಕಾರಣಕ್ಕಾಗಿ ಹೊಸ ಮೋಟಾರು ವಾಹನ ಕಾಯ್ದೆಯನ್ವಯ ಕುಡಿದು ವಾಹನ ಚಲಾಯಿಸುವವರಿಗೆ ರೂ.10,000 ದಂಡ ವಿಧಿಸಲಾಗುತ್ತದೆ. ಈ ದಂಡವನ್ನು ಸ್ಥಳದಲ್ಲಿ ಪಾವತಿಸುವಂತಿಲ್ಲ. ಬದಲಿಗೆ ಕೋರ್ಟಿಗೆ ಹೋಗಿ ಪಾವತಿಸಬೇಕಾಗುತ್ತದೆ.

Most Read Articles

Kannada
English summary
Drunk triple riding bikers met accident near faridabad - Read in Kannada
Story first published: Tuesday, December 10, 2019, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X