'ಎಎ10' ನಂಬರ್ ಪ್ಲೇಟ್ ಗಾಗಿ 5 ಕೋಟಿ ತೆತ್ತ ದುಬೈ ಉದ್ಯಮಿ..!!

By Praveen

ಇತ್ತೀಚೆಗಿನ ದಿನಗಳಲ್ಲಿ ಫ್ಯಾನ್ಸಿ ನಂಬರ್ ಗಳಿಗೆ ತೀವ್ರ ಬೇಡಿಕೆ ಸೃಷ್ಟಿಯಾಗುತ್ತಿದೆ. ನಿರ್ದಿಷ್ಟ ಸಂಖ್ಯೆ ಬಯಸಿ ಹಲವರ ಮಧ್ಯೆ ಪೈಪೋಟಿಯು ಏರ್ಪಡುತ್ತದೆ. ತಮ್ಮ ಮೆಚ್ಚಿನ ನಂಬರ್ ಗಾಗಿ ಲಕ್ಷಗಟ್ಟಲೆ ರುಪಾಯಿಗಳನ್ನು ಖರ್ಚು ಮಾಡುವ ಶ್ರೀಮಂತರ ಕಥೆಯನ್ನು ನಾವು ಕೇಳಿರುತ್ತೇವೆ. ಆದ್ರೆ ಇಲ್ಲೊಬ್ಬ ದುಬೈ ಉದ್ಯಮಿ ಮಾತ್ರ ಫ್ಯಾನ್ಸಿ ನಂಬರ್‌ಗಾಗಿ ಬರೋಬ್ಬರಿ 5 ಕೋಟಿ ಪಾವತಿಸಿದ್ದಾನೆ.

'ಎಎ10' ನಂಬರ್ ಪ್ಲೇಟ್ ಗಾಗಿ 5 ಕೋಟಿ ತೆತ್ತ ದುಬೈ ಉದ್ಯಮಿ..!!

ತಮ್ಮ ಮೆಚ್ಚಿನ ಕಾರುಗಳಿಗೆ ಫ್ಯಾನ್ಸಿ ನಂಬರ್ ಗಿಟ್ಟಿಸಿಕೊಳ್ಳುವುದು ಪ್ರತಿಯೊಬ್ಬರ ಬಯಕೆಯಾಗಿರುತ್ತದೆ. ಅದರಲ್ಲೂ ಶ್ರೀಮಂತ ವ್ಯಕ್ತಿಗಳು ಇದಕ್ಕಾಗಿ ಲಕ್ಷಗಟ್ಟಲೆ ರುಪಾಯಿಗಳನ್ನು ಖರ್ಚು ಮಾಡಲು ಹಿಂಜರಿಯುವುದಿಲ್ಲ. ಇಂತಹ ಅನೇಕ ಸುದ್ದಿಗಳನ್ನು ದಿನನಿತ್ಯ ಕೇಳಿಸುವುದಾದರೂ ವಿಶೇಷವಾದ ಪ್ರಕರಣವೊಂದರಲ್ಲಿ ದುಬೈ ಉದ್ಯಮಿಯೊಬ್ಬರು 3.12 ಮಿಲಿಯನ್ ದಿರ್ಹಮ್(ಅಂದಾಜು 5.46 ಕೋಟಿ ರೂ.) ಖರ್ಚು ಮಾಡಿ ವಿಶಿಷ್ಟ ನಂಬರ್ ಪ್ಲೇಟ್ ತಮ್ಮದಾಗಿಸಿಕೊಂಡಿದ್ದಾರೆ.

'ಎಎ10' ನಂಬರ್ ಪ್ಲೇಟ್ ಗಾಗಿ 5 ಕೋಟಿ ತೆತ್ತ ದುಬೈ ಉದ್ಯಮಿ..!!

ದುಬೈ ಉದ್ಯಮಿಯಾದ ಮಜೀದ್ ಮುಸ್ತಾಫಾ ಎಎ10 ನಂಬರ್ ಪ್ಲೇಟ್ ಮಾಲೀಕರಾಗಿದ್ದಾರೆ. ಶನಿವಾರದಂದು ನಡೆದ ರೋಡ್ಸ್ ಅಂಡ್ ಟ್ರಾನ್ಸ್ ಪೋರ್ಟ್ ಅಥಾರಿಟಿಯ 97ನೇ ಹರಾಜಿನಲ್ಲಿ ಎಎ ಕೋಡ್ ಇರೋ 12, 50, 100, 333, 786, 1000, 11111 ಹಾಗೂ 55555 ಎಂಬ ವಿಶೇಷ ನಂಬರ್ ಪ್ಲೇಟ್‍ ಗಳನ್ನು ಹರಾಜು ಹಾಕಲಾಗಿತ್ತು.

'ಎಎ10' ನಂಬರ್ ಪ್ಲೇಟ್ ಗಾಗಿ 5 ಕೋಟಿ ತೆತ್ತ ದುಬೈ ಉದ್ಯಮಿ..!!

ಉದ್ಯಮಿ ಮುಸ್ತಾಫಾ ನಂತರ ಎರಡನೇ ದುಬಾರಿ ನಂಬರ್ ಪ್ಲೇಟ್ 2212 ಎಸ್ಸಾ ಅನ್ನು ಅಲ್ ಹಬೈ ಎಂಬವರು 2.72 ಮಿಲಿಯನ್ ದಿರ್ಹಮ್ (ಅಂದಾಜು 4.7 ಕೋಟಿ ರೂ.) ಪಾವತಿಸಿದರೆ ಇದೇ ಕಾರ್ಯಕ್ರಮದಲ್ಲಿ ಎಎ50 ನಂಬರ್ ಪ್ಲೇಟ್‌ಗಾಗಿ ಮತ್ತೊಬ್ಬ ಉದ್ಯಮಿ ಸುಮಾರು 1.84 ಮಿಲಿಯನ್ ದಿರ್ಹಮ್ (ಅಂದಾಜು 3.2 ಕೋಟಿ ರೂ.) ನೀಡಿದ್ದಾರೆ.

Recommended Video - Watch Now!
TVS Apache RR 310 Launched In India | Specs | Top Speed | Mileage | Price
'ಎಎ10' ನಂಬರ್ ಪ್ಲೇಟ್ ಗಾಗಿ 5 ಕೋಟಿ ತೆತ್ತ ದುಬೈ ಉದ್ಯಮಿ..!!

ಈ ಕುರಿತು ಮಾತನಾಡಿದ ಪುಸ್ತಾಫಾ, ತಾನು ಈ ನಂಬರ್ ಪ್ಲೇಟನ್ನ ನನ್ನ ಕಾರೊಂದಕ್ಕೆ ಹಾಕಿಸುತ್ತೇನೆ ಎಂದು ಹೇಳಿದ್ದಾರೆ. 2002ರಿಂದಲೂ ಆರ್ ಟಿಐ ಹರಾಜಿನಲ್ಲಿ ಭಾಗಿಯಾಗುತ್ತಿದ್ದ ಮುಸ್ತಾಫಾ ಈವರೆಗೆ ಇಂತಹ 5 ಸಾವಿರ ವಿಶಿಷ್ಟ ನಂಬರ್ ಪ್ಲೇಟ್ ಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ಇವುಗಳಲ್ಲಿ ಐ10 ನಂಬರ್ ಪ್ಲೇಟ್ ಅತ್ಯಂತ ದುಬಾರಿಯಾಗಿದೆ. ಇದಕ್ಕೆ ಅವರು ಹರಾಜು ಪ್ರಕ್ರಿಯೆಯಲ್ಲಿ 6 ಮಿಲಿಯನ್ ದಿರ್ಹಮ್ (ಅಂದಾಜು 10.5 ಕೋಟಿ ರೂ.) ನೀಡಿದ್ದಾರೆ.

'ಎಎ10' ನಂಬರ್ ಪ್ಲೇಟ್ ಗಾಗಿ 5 ಕೋಟಿ ತೆತ್ತ ದುಬೈ ಉದ್ಯಮಿ..!!

32 ವರ್ಷದ ಜನರ್ ಖಮಿಸ್ ಎಂಬ ಮತ್ತೋರ್ವ ಉದ್ಯಮಿ ಈ ಹರಾಜು ಪ್ರಕ್ರಿಯೆಯಲ್ಲಿ ಎರಡನೇ ಬಾರಿ ಭಾಗವಹಿಸಿದ್ದು, ಅವರು 700,000 ದಿರ್ಹಮ್ (ಅಂದಾಜು 1.2 ಕೋಟಿ ರೂ.) ನೀಡಿ ಎಎ333 ಸಂಖ್ಯೆಯ ನಂಬರ್ ಪ್ಲೇಟ್ ತನ್ನದಾಗಿಸಿಕೊಂಡಿದ್ದಾರೆ.

'ಎಎ10' ನಂಬರ್ ಪ್ಲೇಟ್ ಗಾಗಿ 5 ಕೋಟಿ ತೆತ್ತ ದುಬೈ ಉದ್ಯಮಿ..!!

ಈ ಮೊದಲು ಭಾಗವಹಿಸಿದ್ದ ಹರಾಜು ಕಾರ್ಯಕ್ರಮದಲ್ಲಿ ಅವರು 5000,000 (ಅಂದಾಜು 87 ಲಕ್ಷ ರೂ.) ದಿರ್ಹಮ್ ನೀಡಿ ವಿಶಿಷ್ಟ ನಂಬರ್ ಪ್ಲೇಟ್ ಪಡೆದುಕೊಂಡಿದ್ದು, ಅದರಲ್ಲಿ ಎರಡೇ ತಿಂಗಳಲ್ಲಿ ಅವರಿಗೆ 200,000 ದಿರ್ಹಮ್(ಅಂದಾಜು 35 ಲಕ್ಷ ರೂ.) ಲಾಭವಾಗಿತ್ತು ಎನ್ನಲಾಗಿದೆ.

'ಎಎ10' ನಂಬರ್ ಪ್ಲೇಟ್ ಗಾಗಿ 5 ಕೋಟಿ ತೆತ್ತ ದುಬೈ ಉದ್ಯಮಿ..!!

ಎಎ333 ಸಂಖ್ಯೆಯ ನಂಬರ್ ಪ್ಲೇಟ್ ನಿಜಕ್ಕೂ ವಿಶೇಷವಾಗಿದ್ದು, ಈ ನಂಬರ್ ಪ್ಲೇಟನ್ನ ಲಂಬೋರ್ಗಿನಿ ಕಾರಿಗೆ ಹಾಕಿಸಲು ಇಚ್ಛಿಸುತ್ತೇನೆ. ಅಲ್ಲದೇ ಒಳ್ಳೆಯ ಬೆಲೆ ಸಿಕ್ಕರೆ ಅದನ್ನು ಮಾರಾಟ ಮಾಡುತ್ತೇನೆ ಅಂತ ಮುಸ್ತಾಫಾ ಹೇಳಿದ್ದಾರೆ.

'ಎಎ10' ನಂಬರ್ ಪ್ಲೇಟ್ ಗಾಗಿ 5 ಕೋಟಿ ತೆತ್ತ ದುಬೈ ಉದ್ಯಮಿ..!!

ಇದಷ್ಟೇ ಅಲ್ಲದೇ ಈ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಉದ್ಯಮಿಯಾಗಿರುವ ಅರಿಫ್ ಅಹ್ಮದ್ ಅಲ್ ಝರೌನಿ ಎಂಬುವವರು '1' ಫ್ಯಾನ್ಸಿ ನಂಬರ್ ಪ್ಲೇಟ್ ಗಾಗಿ ಬರೋಬ್ಬರಿ 33 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

ತಪ್ಪದೇ ಓದಿ-ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

Most Read Articles

Kannada
English summary
Emirati owner of 5,000 special number plates buys one more for Dh3.1m at Dubai auction.
Story first published: Tuesday, December 12, 2017, 18:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more