ಟ್ರಾಫಿಕ್ ಉಲ್ಲಂಘನೆ ತಡೆಯಲು ದುಬೈನಲ್ಲಿ ಹೈಟೆಕ್ ಕ್ಯಾಮೆರಾ ವ್ಯವಸ್ಥೆ

By Nagaraja

ಟ್ರಾಫಿಕ್ ನಿಯಮ ಉಲ್ಲಂಘನೆಯನ್ನು ತಡೆಯಲು ನಿಯಮವನ್ನು ಕಟ್ಟು ನಿಟ್ಟುಗೊಳಿಸಿರುವ ದುಬೈ ಪೊಲೀಸ್, 'ಸೂಪರ್ ವೈಸರ್' ಎಂಬ ಅತ್ಯಾಧುನಿಕ ಕ್ಯಾಮೆರಾ ವ್ಯವಸ್ಥೆಯನ್ನು ಹೊರ ತಂದಿದೆ. ದುಬೈ ನಗರದ್ಯಾಂತ 70 ಪ್ರದೇಶಗಳಲ್ಲಿ ಇದನ್ನು ಆಳವಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೇನ್ ಮಾರ್ಗ ತಪ್ಪಿಸುವುದು, ರಸ್ತೆ ಛೇದಕ ನಿಯಮ ಉಲ್ಲಂಘನೆ, ಓವರ್ ಸ್ಪೀಡಿಂಗ್, ಅಮಿತವಾದ ವೇಗ ಇತ್ಯಾದಿ ಟ್ರಾಫಿಕ್ ನಿಯಮಗಳ ಉಲ್ಲಂಘನೆಯನ್ನು ಸೂಪರ್ ವೈಸರ್ ಕ್ಯಾಮೆರಾವು ತಡೆ ಹಿಡಿಯಲಿದೆ.

ಟ್ರಾಫಿಕ್ ಉಲ್ಲಂಘನೆ ತಡೆಯಲು ದುಬೈನಲ್ಲಿ ಹೈಟೆಕ್ ಕ್ಯಾಮೆರಾ ವ್ಯವಸ್ಥೆ

ಸೂಪರ್ ವೈಸರ್ ಕ್ಯಾಮೆರಾದ ವೈಶಿಷ್ಟ್ಯ ಏನೆಂದರೆ ಹಾಗೊಂದು ವೇಳೆ ಚಾಲಕ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಸ್ವಯಂಚಾಲಿತವಾಗಿ ಕ್ಯಾಮೆರಾಗಳು ಫೋಟೋವನ್ನು ಸೆರೆ ಹಿಡಿಯಲಿದೆ.

ಟ್ರಾಫಿಕ್ ಉಲ್ಲಂಘನೆ ತಡೆಯಲು ದುಬೈನಲ್ಲಿ ಹೈಟೆಕ್ ಕ್ಯಾಮೆರಾ ವ್ಯವಸ್ಥೆ

ಕಾರಿನ ಬಣ್ಣದಿಂದ ಹಿಡಿದು, ರಿಜಿಸ್ಟ್ರೇಷನ್ ನಂಬರ್ ಬಹಳ ಅಚ್ಚುಕಟ್ಟಾಗಿ ಸೆರೆ ಹಿಡಿಯಲಿದೆ. ಇದು ಪೊಲೀಸರಿಗೆ ತಕ್ಷಣವೇ ಕಾರ್ಯಾಚರಣೆಯನ್ನು ನಡೆಸಲು ನೆರವಾಗಲಿದೆ.

ಟ್ರಾಫಿಕ್ ಉಲ್ಲಂಘನೆ ತಡೆಯಲು ದುಬೈನಲ್ಲಿ ಹೈಟೆಕ್ ಕ್ಯಾಮೆರಾ ವ್ಯವಸ್ಥೆ

ಸಿಲಿಂಡರಾಕಾರದ ರೆಡಾರ್ ನಂತಿರುವ ಸೂಪರ್ ವೈಸರ್ ಕ್ಯಾಮೆರಾವು ಈ ಎಲ್ಲ ಕೆಲಸವನ್ನು ಮಾನವನ ನೆರವಿಲ್ಲದೆ ಮಾಡಲಿದೆ. ಇದು ತಪ್ಪಿತ್ತಸ್ಥರ ವಿರುದ್ಧ ಶೀಘ್ರದಲ್ಲೇ ಕ್ರಮ ಜಾರಿ ಮಾಡಲು ಸಹಕಾರಿಯಾಗಲಿದೆ.

ಟ್ರಾಫಿಕ್ ಉಲ್ಲಂಘನೆ ತಡೆಯಲು ದುಬೈನಲ್ಲಿ ಹೈಟೆಕ್ ಕ್ಯಾಮೆರಾ ವ್ಯವಸ್ಥೆ

ಪ್ರಸ್ತುತ ಸೂಪರ್ ವೈಸರ್ ಕ್ಯಾಮೆರಾ ವ್ಯವಸ್ಥೆಯು ಅತ್ಯಂತ ನಿಖರವಾಗಿದ್ದು, ದಂಡನೆಗೊಳಗಾದವರು ತಪ್ಪಿಸಲು ಸಾಧ್ಯವೇ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಾಫಿಕ್ ಉಲ್ಲಂಘನೆ ತಡೆಯಲು ದುಬೈನಲ್ಲಿ ಹೈಟೆಕ್ ಕ್ಯಾಮೆರಾ ವ್ಯವಸ್ಥೆ

ಸೂಪರ್ ವೈಸರ್ ಕ್ಯಾಮೆರಾಗಳು ಹತ್ತಿರದಲ್ಲಿ ಪೆಟ್ರೋಲಿಂಗ್ ನಡೆಸುತ್ತಿರುವ ಪೊಲೀಸ್ ಕಾರುಗಳಿಗೆ ಮಾಹಿತಿಯನ್ನು ರವಾನಿಸಲಿದೆ. ಇದರಿಂದ ತಕ್ಷಣವೇ ಕಾರನ್ನು ಮುಟ್ಟುಗೋಲು ಮಾಡಲು ಸಾಧ್ಯವಾಗಲಿದೆ.

ಟ್ರಾಫಿಕ್ ಉಲ್ಲಂಘನೆ ತಡೆಯಲು ದುಬೈನಲ್ಲಿ ಹೈಟೆಕ್ ಕ್ಯಾಮೆರಾ ವ್ಯವಸ್ಥೆ

ದುಬೈ ಪೊಲೀಸರು ಅವಿಷ್ಕರಿಸಿರುವ ಈ ದೀರ್ಘಾವಧಿಯ ಯೋಜನೆಯು ನಿಯಮ ಉಲ್ಲಂಘನೆಯನ್ನು ಗಣನೀಯವಾಗಿ ಕಡಿಮೆ ಮಾಡುವ ನಂಬಿಕೆಯನ್ನು ವ್ಯಕ್ತಪಡಿಸಿದೆ.

ಟ್ರಾಫಿಕ್ ಉಲ್ಲಂಘನೆ ತಡೆಯಲು ದುಬೈನಲ್ಲಿ ಹೈಟೆಕ್ ಕ್ಯಾಮೆರಾ ವ್ಯವಸ್ಥೆ

ಇತ್ತ ಭಾರತದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಜಾಸ್ತಿಯಾಗಿದ್ದು, ದಿನಂಪ್ರತಿ ನಡೆಯುತ್ತಿರುವ ಅಪಘಾತ ಪ್ರಕರಣಗಳಲ್ಲಿ ಅನೇಕ ಮಂದಿ ಸಾವಿಗೀಡಾಗುತ್ತಿದ್ದಾರೆ. ಹಾಗಿರುವಾಗ ಇಂತಹದೊಂದು ವ್ಯವಸ್ಥೆಯು ನಮ್ಮ ದೇಶದಲ್ಲೂ ಆಳವಡಿಯಾಗಬೇಕಾಗಿರುವುದು ಅತ್ಯಗತ್ಯವಾಗಿದ್ದು, ಈ ಸಂಬಂಧ ನಿಮ್ಮ ಅಭಿಪ್ರಾಯಗಳನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಿರಿ.

Most Read Articles

Kannada
English summary
Dubai Police Leave It To The 'Supervisor' To Take care Of Violations
Story first published: Monday, August 22, 2016, 17:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X