ಹಕ್ಕಿ ಗೂಡಿನ ಕಾರಣಕ್ಕೆ ಎಸ್‌ಯುವಿ ಬಳಕೆಯನ್ನು ನಿಲ್ಲಿಸಿದ ರಾಜಕುಮಾರ

ದುಬೈನ ರಾಜಕುಮಾರ ಹಾಗೂ ದುಬೈ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ರವರು ಔದಾರ್ಯಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ಅವರು ತಮ್ಮ ಮರ್ಸಿಡಿಸ್-ಎಎಂಜಿ ಜಿ 63 ಎಸ್‌ಯುವಿಯ ಚಾಲನೆಯನ್ನು ನಿಲ್ಲಿಸಿದ್ದಾರೆ.

ಹಕ್ಕಿ ಗೂಡಿನ ಕಾರಣಕ್ಕೆ ಎಸ್‌ಯುವಿ ಬಳಕೆಯನ್ನು ನಿಲ್ಲಿಸಿದ ರಾಜಕುಮಾರ

ಅವರು ತಮ್ಮ ಎಸ್‌ಯುವಿಯನ್ನು ಪಾರ್ಕಿಂಗ್ ಸ್ಥಳದಿಂದ ಹೊರ ತೆಗೆಯುತ್ತಿಲ್ಲ. ಅವರ ಮರ್ಸಿಡಿಸ್-ಎಎಂಜಿ ಜಿ 63 ಎಸ್‌ಯುವಿಯಲ್ಲಿ ಹಕ್ಕಿ ಗೂಡು ಕಟ್ಟಿರುವುದೇ ಇದಕ್ಕೆ ಕಾರಣ. ರಾಜಕುಮಾರ ತಮ್ಮ ಎಸ್‌ಯುವಿಯನ್ನು ತಮ್ಮ ನಿವಾಸದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವೇಳೆ ಹಕ್ಕಿಯೊಂದು ಗೂಡು ಕಟ್ಟಿದೆ.

ಹಕ್ಕಿ ಗೂಡಿನ ಕಾರಣಕ್ಕೆ ಎಸ್‌ಯುವಿ ಬಳಕೆಯನ್ನು ನಿಲ್ಲಿಸಿದ ರಾಜಕುಮಾರ

ಈ ಬಗ್ಗೆ ದುಬೈನ ರಾಜಕುಮಾರರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ವೀಡಿಯೊವೊಂದನ್ನು ಬಿಡುಗಡೆಗೊಳಿಸಿದ್ದಾರೆ. ಈ ವೀಡಿಯೊದಲ್ಲಿ ಹಕ್ಕಿ ಅವರ ಕಾರಿನ ಬಾನೆಟ್‌ನಲ್ಲಿ ಗೂಡು ಕಟ್ಟಿರುವುದನ್ನು ಕಾಣಬಹುದು. ಈ ಬಗ್ಗೆ ಕೆಲವು ವೀಡಿಯೊಗಳನ್ನು ಹಾಗೂ ಫೋಟೋಗಳನ್ನು ಶೇರ್ ಮಾಡಿದ್ದಾರೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹಕ್ಕಿ ಗೂಡಿನ ಕಾರಣಕ್ಕೆ ಎಸ್‌ಯುವಿ ಬಳಕೆಯನ್ನು ನಿಲ್ಲಿಸಿದ ರಾಜಕುಮಾರ

ಈ ಹಕ್ಕಿ ಕಾರಿನ ಮೇಲೆ ಗೂಡು ಕಟ್ಟುತ್ತಿರುವುದನ್ನು ವೀಡಿಯೊ ಹಾಗೂ ಫೋಟೋಗಳಲ್ಲಿ ಕಾಣಬಹುದು. ಹಕ್ಕಿ ಗೂಡು ಕಟ್ಟಿದ ನಂತರ ರಾಜಕುಮಾರ ಈ ಜಾಗವನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದು, ಯಾರಿಗೂ ಆ ಕಡೆ ಹೋಗಲು ಅವಕಾಶ ನೀಡುತ್ತಿಲ್ಲ.

ಹಕ್ಕಿ ಗೂಡಿನ ಕಾರಣಕ್ಕೆ ಎಸ್‌ಯುವಿ ಬಳಕೆಯನ್ನು ನಿಲ್ಲಿಸಿದ ರಾಜಕುಮಾರ

ರಾಜಕುಮಾರ ಈ ವೀಡಿಯೊವನ್ನು, ಹಕ್ಕಿಯು ಹೆದರಿಕೊಳ್ಳದಂತೆ ದೂರದಿಂದ ರೆಕಾರ್ಡ್ ಮಾಡಿದ್ದಾರೆ. ಮರ್ಸಿಡಿಸ್-ಎಎಂಜಿ ಜಿ 63 ಎಸ್‌ಯುವಿಯನ್ನು ಭಾರತದಲ್ಲಿಯೂ ಬಿಡುಗಡೆಗೊಳಿಸಲಾಗಿತ್ತು. ಆದರೆ ಈಗ ಈ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಈ ಎಸ್‌ಯುವಿಯಲ್ಲಿ 5.5-ಲೀಟರಿನ ಬೈಟರ್ಬೊ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 544 ಬಿಹೆಚ್‌ಪಿ ಪವರ್ ಹಾಗೂ 760 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 7-ಸ್ಪೀಡಿನ ಜಿ-ಟ್ರಾನಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ.

ಹಕ್ಕಿ ಗೂಡಿನ ಕಾರಣಕ್ಕೆ ಎಸ್‌ಯುವಿ ಬಳಕೆಯನ್ನು ನಿಲ್ಲಿಸಿದ ರಾಜಕುಮಾರ

ಈ ಎಸ್‌ಯುವಿಯ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 210 ಕಿ.ಮೀಗಳಾಗಿದೆ. ಈ ಎಸ್‌ಯುವಿ ಕೇವಲ 5.4 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಮರ್ಸಿಡಿಸ್ ಬೆಂಝ್ ಕಂಪನಿಯು ಈ ಎಸ್‌ಯುವಿಯ ಇಂಟಿರಿಯರ್ ಹಾಗೂ ಎಕ್ಸ್ ಟಿರಿಯರ್ ಗಳಲ್ಲಿ ಹಲವಾರು ಫೀಚರ್ ಗಳನ್ನು ನೀಡಿದೆ.

Most Read Articles

Kannada
English summary
Dubai prince stops his Mercedes AMG G63 suv in parking. Read in Kannada.
Story first published: Thursday, August 6, 2020, 17:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X