ಅರಬಿ ಕಡಲಿನಾಚೆ ದುಬೈ ಎಂಬ ಮಹಾನಗರಿಯಲ್ಲಿ ಒಂದು ರೌಂಡಪ್!

By Nagaraja

ಅರಬಿ ಕಡಲಿನಾಚೆ ದುಬೈ ಎಂಬ ಸುಂದರ ಮಹಾ ನಗರ. ಆ ಸುಂದರ ನಗರವನ್ನು ಆಶ್ರಯಿಸಿಕೊಂಡು ಲಕ್ಷತಾಂರ ಮಂದಿ ಭಾರತೀಯರು ತಮ್ಮ ಜೀವನವನ್ನು ಕಳೆಯುತ್ತಿದ್ದಾರೆ. ಭಾರತವನ್ನು ಹೋಲಿಸಿದರೆ ದುಬೈ ಎಲ್ಲ ಹಂತದಲ್ಲಿಯೂ ಅಭಿವೃದ್ದಿ ಹೊಂದಿದ ದೇಶ.

ಇವನ್ನೂ ಓದಿ: ಕಾರುಗಳ ಮೇಲೆ ಕಾಡು ಪ್ರಾಣಿಗಳ ದಾಳಿ

ಕಳೆದ 30 ವರ್ಷಗಳಲ್ಲಿ ವಿಶ್ವ ರಾಷ್ಟ್ರಗಳನ್ನೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ದುಬೈ ಶಿಪ್ರ ಗತಿಯಲ್ಲಿ ಅಭಿವೃದ್ಧಿಯನ್ನು ಸಾಧಿಸಿದೆ. ಬುರ್ಜ್ ಖಲೀಫಾದಂತಹ ಬೃಹತ್ ಕಟ್ಟಡಗಳು ದುಬೈ ಘನತೆಯನ್ನು ಎತ್ತಿ ಹಿಡಿದಿದೆ. ಅಂದ ಹಾಗೆ ದುಬೈನರು ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಕೇವಲ ಜೀವನ ಶೈಲಿಯ ವಿಚಾರದಲ್ಲಿ ಮಾತ್ರವಲ್ಲ ಅಲ್ಲಿನವರ ಕಾರು ಪ್ರೇಮದಲ್ಲೂ ಹಲವಾರು ಅಚ್ಚರಿಗೆ ಕಾರಣವಾಗಿದ್ದಾರೆ. ಈ ನಿಟ್ಟಿನಲ್ಲಿ ವಾಹನೋದ್ಯಮದಲ್ಲಿ ಬೆಳವಣಿಗೆ ಸಾಧಿಸುತ್ತಿರುವ ನಮ್ಮ ಪುಟ್ಟ ಭಾರತ ಹಾಗೂ ಯುನೈಟೆಡ್ ಅಬರ್ ಎಮಿರೇಟ್ಸ್ ನಗರಿಯನ್ನು ಹೋಲಿಸುವ ಚಿಕ್ಕದೊಂದು ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಈ ಸ್ವಾರಸ್ಯಕರ ಲೇಖನ ನಿಮಗೆ ಇಷ್ಟವಾಗಲಿದೆ ಎಂಬ ನಂಬಿಕೆ ನಮ್ಮದ್ದು.

ಅರಬಿ ಕಡಲಿನಾಚೆ ದುಬೈ ಎಂಬ ಮಹಾನಗರಿಯಲ್ಲಿ ಒಂದು ರೌಂಡಪ್!

ದುಬೈ ಬಗ್ಗೆ ಮಾತನಾಡುವ ಮೊದಲು ಅಲ್ಲಿನ ಬಂಗಾರ ಪ್ರೇಮದ ಪುಟ ತರೆಯಲೇ ಬೇಕಾಗುತ್ತದೆ. ವಿಶ್ವದ ಬಹುತೇಕರು ವಿಶೇಷವಾಗಿಯೂ ಚಿನ್ನಕ್ಕಾಗಿ ದುಬೈ ನಗರವನ್ನೇ ಹರಸುತ್ತಿದ್ದಾರೆ.

ಚಿನ್ನ ಲೇಪಿತ ಬೆಂಝ್ ಕಾರು

ಚಿನ್ನ ಲೇಪಿತ ಬೆಂಝ್ ಕಾರು

ಇದು ಅಂತಿಥ ಕಾರಲ್ಲ. ಪರಿಪೂರ್ಣ 24 ಕ್ಯಾರೆಟ್ ಚಿನ್ನದಿಂದ ಲೇಪಿತ ಬೆಂಝ್ ಕಾರು. 156 ಸಣ್ಣ ವಜ್ರಗಳನ್ನು ಇದರಲ್ಲಿ ಲಗ್ಗತ್ತಿಸಲಾಗಿದ್ದು, 1.53 ಲಕ್ಷ ಡಾಲರ್‌ಗಳಷ್ಟು ದುಬಾರಿಯೆನಿಸಿದೆ.

ಫೇಮಸ್ ಕಾರು

ಫೇಮಸ್ ಕಾರು

ನಮ್ಮೂರಲ್ಲಿ ಬಿಳಿ ಹಾಗೂ ಬೆಳ್ಳಿ ಬಣ್ಣದ ಕಾರುಗಳು ಸ್ವಲ್ಪ ಹೆಚ್ಚು ಫೇಮಸ್ಸು. ದೇಶದಲ್ಲಿ ಶೇಕಡಾ 29ರಷ್ಟು ಶ್ವೇತ ವರ್ಣ ಹಾಗೂ ಶೇಕಡಾ 24ರಷ್ಟು ಸಿಲ್ವರ್ ಬಣ್ಣದ ಕಾರುಗಳು ಆಕ್ರಮಿಸಿಕೊಂಡಿದೆ. ಈ ಲೆಕ್ಕಚಾರವನ್ನು ಇಲ್ಲಿ ಏಕೆ ಹೇಳಲಾಗುತ್ತಿದೆ? ಮುಂದಕ್ಕೆ ಓದೋಣ ಬನ್ನಿ...

ಅರಬಿ ಕಡಲಿನಾಚೆ ದುಬೈ ಎಂಬ ಮಹಾನಗರಿಯಲ್ಲಿ ಒಂದು ರೌಂಡಪ್!

ದುಬೈನ ಕಾರು ಕ್ರೇಜ್ ಎಷ್ಟರ ಮಟ್ಟಿಗೆ ಇದೆಯೆಂದರೆ ಪ್ರತಿಯೊಬ್ಬರು ವಿಭಿನ್ನ, ವಿಶಿಷ್ಟ ಬಣ್ಣಗಳನ್ನು ಬಯಸುತ್ತಾರೆ. ಇದಕ್ಕೊಂದು ಉತ್ತಮ ಉದಾಹರಣೆ ಇಲ್ಲಿ ಕೊಡಲಾಗಿರುವ ಪಳಪಳನೆ ಹೊಳೆಯುತ್ತಿರುವ ಕೆಂಪು ವರ್ಣದ ಕಾರು. ದುಬಾರಿ ಕಾರುಗಳ ನಡುವೆ ತಮ್ಮ ಕಾರುಗಳು ವಿಶಿಷ್ಟವಾಗಿ ಗುರುತಿಸಬೇಕು ಎಂಬುದು ಅಲ್ಲಿನವರ ಬಯಕೆಯಾಗಿದೆ.

ಅರಬಿ ಕಡಲಿನಾಚೆ ದುಬೈ ಎಂಬ ಮಹಾನಗರಿಯಲ್ಲಿ ಒಂದು ರೌಂಡಪ್!

ನೀವು ಇದನ್ನೊಮ್ಮೆ ಗಮನಿಸಿ ನೋಡಿ. ಭಾರತದಲ್ಲಿ ಮಾರುತಿಯ ಆಲ್ಟೊ, ಹ್ಯುಂಡೈ, ಹೋಂಡಾ, ಟಾಟಾಗಳಂತಹ ಕಾರುಗಳು ಜನ ಸಾಮಾನ್ಯ ಕಾರುಗಳು ಅತಿ ಹೆಚ್ಚು ಕಾಣಸಿಗುತ್ತದೆ. ಆದರೆ ನೀವೊಮ್ಮೆ ದುಬೈ ನಗರಿಯನ್ನು ಕಣ್ಣೆತ್ತಿ ನೋಡಿದರೆ ಅಲ್ಲಿನ ಪಾರ್ಕಿಂಗ್ ಪ್ರದೇಶದಲ್ಲಿ ನಿಮ್ಮ ಕನಸಿನ ಕಾರುಗಳಾದ ಆಸ್ಟನ್ ಮಾರ್ಟಿನ್, ಫೆರಾರಿ, ಬುಗಾಟಿಗಳಂತಹ ಕಾರುಗಳು ರಾರಾಜಿಸುತ್ತಿರುವುದನ್ನು ನೋಡಬಹುದು.

ಅರಬಿ ಕಡಲಿನಾಚೆ ದುಬೈ ಎಂಬ ಮಹಾನಗರಿಯಲ್ಲಿ ಒಂದು ರೌಂಡಪ್!

ಭಾರತದಲ್ಲಿ ಕಾರು ರಾಲಿಗಳು ಕಾಣಸಿಗುವುದೇ ವಿರಳ. ಇನ್ನು ದುಬಾರಿ ಕಾರು ರಾಲಿ ಕನಸಿನ ಮಾತು ಅಲ್ಲವೇ? ಹೌದು, ದುಬೈನಂತಹ ಅಭಿವೃದ್ಧಿ ಹೊಂದಿದ ದೇಶದಲ್ಲಿ ಅತಿ ಶ್ರೀಮಂತರಾಗಿರುವ ಅಲ್ಲಿನ ಶೇಖ್ ದೊರೆಗಳೇ ದುಬಾರಿ ಕಾರುಗಳ ರೇಸ್‌ಗಳನ್ನು ಹಮ್ಮಿಕೊಳ್ಳುತ್ತಾರೆ.

ಬುಗಾಟಿ ವೈಭವ

ಬುಗಾಟಿ ವೈಭವ

ಭಾರತದ ಸಾಂಪ್ರದಾಯಕ ಕಾರು ಮಾಲಿಕರು ಒಮ್ಮೆ ಕಾರು ಖರೀದಿಸಿದರೆ ಬಳಿಕ ಅದರ ಬಣ್ಣವನ್ನು ಬದಲಾಯಿಸುವ ಗೋಜಿಗೇ ಹೋಗುವುದಿಲ್ಲ. ಇದು ಒಂದು ರೀತಿಯಲ್ಲಿ ಹೇಳುವುದಾದ್ದಲ್ಲಿ ಶಾಶ್ವತವಾಗಿರುತ್ತದೆ. ಆದರೆ ದುಬೈ ಇದಕ್ಕೆ ತದ್ವಿರುದ್ಧವಾಗಿದೆ.

ಚಿನ್ನ ಲೇಪಿತ ಬುಗಾಟಿ

ಚಿನ್ನ ಲೇಪಿತ ಬುಗಾಟಿ

ಅಲ್ಲಿನ ಜನರು ಪಳಪಳನೆ ಹೊಳೆಯುವ ಹೊಸ ಕಾರುಗಳನ್ನು ಇಷ್ಟಪಡುತ್ತಾರೆ. ಇದೇ ಕಾರಣಕ್ಕಾಗಿ ತಮಗೆ ಮನಬಂದಂತೆ ವಾಹನಗಳನ್ನು ಮಾರ್ಪಾಡುಗೊಳಿಸುತ್ತಾರೆ. ಇದರಿಂದಾಗಿ ಲಗ್ಷುರಿ ಕಾರುಗಳು ಪ್ರೀತಿಯ ರಾಷ್ಟ್ರವಾಗಿ ಹೊರಹೊಮ್ಮಿದೆ.

ಶ್ವಾನ ಬೇಕೇ? ಚಿರತೆ ಸಾಕೇ?

ಶ್ವಾನ ಬೇಕೇ? ಚಿರತೆ ಸಾಕೇ?

ಹೇಗೆ ಭಾರತೀಯರು ತಮ್ಮ ಕಾರುಗಳಲ್ಲಿ ಸಾಕು ನಾಯಿಗಳನ್ನು ಕರೆದೊಯ್ಯುತ್ತಾರೋ ಅದೇ ರೀತಿಯಲ್ಲಿ ಅರೆಬಿಯನ್ನರು ತಮ್ಮ ಕಾರುಗಳಲ್ಲಿ ಚಿರತೆಗಳನ್ನು ಕೊಂಡೊಯ್ಯಲು ಹಿಂಜರಿಯುವುದಿಲ್ಲ. ಚಿರತೆ ಏನು ಮಹಾ ಅಂತೀರಾ? ಮುಂದಕ್ಕೆ ಬನ್ನಿ...

ಸಿಂಹ ರಾಜನ ಗರ್ಜನೆ

ಸಿಂಹ ರಾಜನ ಗರ್ಜನೆ

ಹೌದು, ಚಿರತೆ ಏನು ಮಹಾ? ಇಲ್ಲಿದೆ ನೋಡಿ ಕಾಡಿನ ರಾಜ ಸಿಂಹದ ಗರ್ಜನೆ. ಅವರ ದುಬಾರಿ ದೈನಂದಿನ ಜೀವನದಲ್ಲಿ ಸಿಂಹ ರಾಜನ ಪಾತ್ರವೂ ಅಪಾರ ಅಂದರೆ ತಪ್ಪಾಗಲಾಗದು.

ನಾಯಿ ಅಥವಾ ಹುಲಿ ?

ನಾಯಿ ಅಥವಾ ಹುಲಿ ?

ಹ್ಹ..ಹ್ಹ..ಹ್ಹ... ಈ ಚಿತ್ರ ನಿಜಕ್ಕೂ ನಗು ಮೂಡಿಸುತ್ತದೆ. ಭಾರತದ ಕಾರುಗಳಲ್ಲಿ ನಾಯಿ ಮರಿಗಳು ಇದೇ ರೀತಿಯ ಫೋಸ್ ಕೊಡುತ್ತದೆ. ಇನ್ನೊಂದೆಡೆ ದುಬೈನಲ್ಲಿ ಹುಲಿ ಮರಿಗಳೇ ಮೋಜಿಗೆ ಕಾರಣವಾಗುತ್ತಿದೆ.

ಲಂಬೋರ್ಗಿನಿ ಕ್ರೇಜ್

ಲಂಬೋರ್ಗಿನಿ ಕ್ರೇಜ್

ದೇಶದ ವಾಹನ ಚರಿತ್ರೆ ಪುಟವನ್ನು ತೆರೆದು ನೋಡಿದರೆ ಅಂಬಾಸಿಡರ್, ಪ್ರೀಮಿಯರ್ ಪದ್ಮಿನಿಗಳಂತಹ ಕಾರುಗಳು ಅತಿ ಹೆಚ್ಚು ಜನಪ್ರಿಯತೆಯನ್ನು ಕಾಯ್ದುಕೊಂಡಿದೆ. ಇನ್ನೊಂದೆಡೆ ದುಬೈನಲ್ಲಿ ಲಂಬೋರ್ಗಿನಿಗಳಂತಹ ಐಷಾರಾಮಿ ಕಾರುಗಳನ್ನು ನೋಡಬಹುದು.

ಕಾರು ಜೈಲ್

ಕಾರು ಜೈಲ್

ದುಬೈನಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಕಾರುಗಳನ್ನು ಅಲ್ಲಿನ ಕಾರು ಜೈಲ್‌ನಲ್ಲಿ ಬಂಧಿಸಲಾಗುತ್ತದೆ. ಆದರೆ ಭಾರತದಲ್ಲಿ ಇಂತಹ ವ್ಯವಸ್ಥೆಯ ಕೊರತೆ ಕಾಡುತ್ತಿದೆ.

ಕಾರು ಸಂಗ್ರಹಗಾರರು

ಕಾರು ಸಂಗ್ರಹಗಾರರು

ಕಾರು ಸಂಗ್ರಹಗಾರರು ಹೋಗ್ಲಿ ಬಿಡಿ ಕನಿಷ್ಠ ಒಂದು ಕಾರನ್ನು ಹೊಂದಿದ ಸಂಖ್ಯೆಯಲ್ಲೂ ಭಾರತೀಯರು ವಿರಳ. ಇಡೀ ಜಗತ್ತಿನಲ್ಲೇ ದುಬೈನಲ್ಲೇ ಅತಿ ಹೆಚ್ಚು ಕಾರು ಸಂಗ್ರಹಗಾರರಿದ್ದಾರೆ. ಅವೆರೆಲ್ಲರು ಐಷಾರಾಮಿ ವಾಹನಗಳ ಮೇಲೆ ಅಪ್ಪಟ್ಟ ಪ್ರೀತಿಯನ್ನು ಹೊಂದಿರುತ್ತಾರೆ.

ಪೊಲೀಸ್ ಕಾರು

ಪೊಲೀಸ್ ಕಾರು

ಭಾರತದಲ್ಲಿ ಕರ್ತವ್ಯ ಪಾಲನೆಗಾಗಿ ಮಹೀಂದ್ರ ಜೀಪ್‌ಗಳನ್ನು ಬಳಕೆ ಮಾಡಲಾಗುತ್ತಿತ್ತು. ಈಗಲೂ ಅನೇಕ ರಾಜ್ಯಗಳಲ್ಲಿ ಮಹೀಂದ್ರ ಜೀಪ್‌ಗಳನ್ನೇ ಬಳಕೆ ಮಾಡಲಾಗುತ್ತದೆ.

ಅರಬಿ ಕಡಲಿನಾಚೆ ದುಬೈ ಎಂಬ ಮಹಾನಗರಿಯಲ್ಲಿ ಒಂದು ರೌಂಡಪ್!

ಆದರೆ ದುಬೈನಲ್ಲಿ ಗಸ್ತು ಪಡೆಗಾಗಿ ಈಗಷ್ಟೇ ಮಾರುಕಟ್ಟೆಗಿಳಿದ ಫೆರಾರಿ, ಆಸ್ಟನ್ ಮಾರ್ಟಿನ್, ಬುಗಾಟಿ, ಲಂಬೋರ್ಗಿಯಂತಹ ದುಬಾರಿ ಕಾರುಗಳನ್ನು ಬಳಕೆ ಮಾಡಲಾಗುತ್ತದೆ. ದುಬೈನಲ್ಲಿ ಕಳ್ಳತನ ತಲೆನೋವಾಗಿ ಪರಿಣಮಿಸಿದ್ದರಿಂದ ಅಲ್ಲಿನ ಪೊಲೀಸರು ಸಹ ಸೂಪರ್ ಕಾರುಗಳಿಗೆ ಅಪ್‌ಗ್ರೇಡ್ ಹೊಂದಿದ್ದಾರೆ.

ಅರಬಿ ಕಡಲಿನಾಚೆ ದುಬೈ ಎಂಬ ಮಹಾನಗರಿಯಲ್ಲಿ ಒಂದು ರೌಂಡಪ್!

ಇನ್ನು ಭಾರತದಲ್ಲಿ ಆಟೋ, ಸಣ್ಣ ಕಾರುಗಳನ್ನು ಟ್ಯಾಕ್ಸಿ ವಾಹನಗಳಾಗಿ ಬಳಕೆ ಮಾಡಲಾಗುತ್ತದೆ. ಆದರೆ ದುಬೈನಲ್ಲಿ ಸೂಪರ್ ಕಾರುಗಳನ್ನೇ ಟ್ಯಾಕ್ಸಿ ರೂಪದಲ್ಲಿ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಉಚಿತ ಚಾಲನೆಯನ್ನು ನೀಡಲಾಗುತ್ತದೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ?

ಪರಿಸರ ಪ್ರೀತಿ

ಪರಿಸರ ಪ್ರೀತಿ

ಅಭಿವೃದ್ಧಿ ಮಂತ್ರ ಪಠಿಸುತ್ತಿರುವ ಭಾರತದಲ್ಲಿ ರಸ್ತೆ ವಿಸ್ತರಿಸುವ ಹೆಸರಲ್ಲೇ ಹಸಿರು ತೋರಣವಾಗಿರುವ ಮರಗಳನ್ನೇ ಕಡಿದು ನೆಲಕ್ಕುರುಳಿಸುತ್ತಾರೆ. ಇನ್ನೊಂದೆಡೆ ಮರಳು ನಾಡಿನಲ್ಲಿ ಆಕರ್ಷಕ ರಸ್ತೆ ಕಟ್ಟಿದ ಬಳಿಕ ರಸ್ತೆಯ ಎರಡು ಬದಿಗಳಲ್ಲಿ ಗಿಡ ಮರಗಳನ್ನು ನೆಡಲಾಗುತ್ತದೆ.

ಸೂಪರ್ ಕಾರು ಪ್ರೇಮ

ಸೂಪರ್ ಕಾರು ಪ್ರೇಮ

ದುಬಾರಿ ವಾಹನ ತಯಾರಕ ಸಂಸ್ಥೆಗಳಿಗೂ ದುಬೈ ಎಂದರೆ ತುಂಬಾನೇ ಪ್ರೀತಿ. ಅಲ್ಲಿನ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಸೂಪರ್ ಕಾರುಗಳು ಹೊಸ ಹೊಸ ಸೌಲಭ್ಯಗಳನ್ನು ನೀಡುತ್ತದೆ.

ಫೆರಾರಿ ಥೀಮ್ ಪಾರ್ಕ್

ಫೆರಾರಿ ಥೀಮ್ ಪಾರ್ಕ್

ದುಬೈ ಸಾಮರ್ಥ್ಯವನ್ನು ಮನಗಂಡಿರುವ ಇಟಲಿಯ ಐಕಾನಿಕ್ ಸೂಪರ್ ಕಾರು ತಯಾರಕ ಸಂಸ್ಥೆಯಾಗಿರುವ ಫೆರಾರಿ, ವಿಶ್ವದಲ್ಲೇ ಅತಿ ದೊಡ್ಡ ದೀಮ್ ಪಾರ್ಕ್ ನಿರ್ಮಿಸಿದೆ. ಈ ಮೂಲಕ ತಮ್ಮ ಬ್ರಾಂಡ್ ಅನ್ನು ವೃದ್ಧಿಸಿಕೊಂಡಿದೆ.

ಎಂದು ಕಾಣುವನು ಪೂರ್ಣ ಚಂದಿರ

ಎಂದು ಕಾಣುವನು ಪೂರ್ಣ ಚಂದಿರ

ಹೌದು, ಇದು ಸಂಯುಕ್ತ ಅರಬ್ ರಾಷ್ಟ್ರದಲ್ಲಿ ಸ್ಥಿತಗೊಂಡಿರುವ ಪೂರ್ಣ ಚಂದ್ರನ ರೂಪದಲ್ಲಿ ಮನ ಸೆಳೆಯುತ್ತಿರುವ ರೋಲ್ಸ್ ರಾಯ್ಸ್ ಸಂಸ್ಥೆಯ ಮುಖ್ಯ ಕಚೇರಿ.

ಈಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
English summary
Taking a walk down the street, encountering a Ferrari made of gold, a man taking his pet cheetah for a ride in his car or just get a glimpse of the scrap yard, where Ferrari's are junked, one could feel a bit stressed. No worries, just call the ambulance service and you would get greeted by the first response team on a sports car! We are talking about the average everyday life in Dubai.... 
Story first published: Tuesday, December 2, 2014, 17:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X