ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯದ ಅಪರಾಧ ಕೃತ್ಯಗಳೇ ಇಲ್ಲ ಅಂದ್ರೆ ತಪ್ಪಾಗುವುದಿಲ್ಲ. ಅದರಲ್ಲೂ ವಾಹನಗಳ ಕಳ್ಳತನ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇದ್ದು, ಸ್ಮಾರ್ಟ್ ಆಗಿಯೇ ಕಳ್ಳತನ ಮಾಡುವ ಖರೀದಿಮರು ಸ್ಮಾರ್ಟ್ ಆಗಿಯೇ ಅಮಾಯಕರಿಗೆ ತಲೆ ಟೋಪಿ ಹಾಕಿ ದುಡ್ಡು ಮಾಡುತ್ತಿದ್ದಾರೆ. ಇಷ್ಟೇಲ್ಲಾ ಯಾಕೆ ಹೇಳ್ತಾ ಇದ್ದೀವಿ ಅಂದ್ರೆ ಕಳ್ಳತನವಾಗುತ್ತಿರುವ ವಾಹನಗಳಿಗೆ ಇನ್ಯಾರದ್ದೋ ವಾಹನದ ನಂಬರ್ ಬಳಕೆ ಮಾಡಿ ಮಾರಾಟ ಮಾಡುತ್ತಿರುವ ಜಾಲವೊಂದು ನಗರದಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ.

ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ಹೌದು, ಪ್ರತಿಯೊಬ್ಬರಿಗೆ ತಮ್ಮದೆಯಾದ ಒಂದು ಸ್ವಂತ ವಾಹನ ಖರೀದಿ ಮಾಡಬೇಕೆಂಬ ಮಹಾದಾಸೆ ಇದ್ದೆ ಇರುತ್ತೆ. ಆದ್ರೆ ಬಹುತೇಕರಿಗೆ ದುಬಾರಿ ಬೆಲೆ ತೆತ್ತು ಹೊಸ ವಾಹನ ಖರೀದಿ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಸೆಕೆಂಡ್ ಹ್ಯಾಂಡ್ ವಾಹನಗಳತ್ತ ಮುಖ ಮಾಡುವುದು ಕಾಮನ್. ಈ ವೇಳೆ ನೀವು ಸ್ವಲ್ಪವೇ ಎಚ್ಚರ ತಪ್ಪಿದ್ರು ಮೋಸಕ್ಕೆ ಒಳಗಾಗುವುದಲ್ಲದೇ ಮಾಡದ ತಪ್ಪಿಗೆ ಕಾನೂನು ಕ್ರಮ ಎದುರಿಸಬೇಕಾಗದ ಪರಿಸ್ಥಿತಿ ಬರಬಹುದು. ಇದಕ್ಕೆ ಕಾರಣ, ಬೆಂಗಳೂರಿನಲ್ಲಿ ಸದ್ದುಗದ್ದಲವಿಲ್ಲದೇ ನಡೆಯುತ್ತಿರುವ ನಕಲಿ ನಂಬರ್ ಪ್ಲೇಟ್ ಜಾಲವು ಮೂಲ ವಾಹನ ಮಾಲೀಕರನ್ನೇ ನಿದ್ದೆಗೆಡಿಸುವಂತೆ ಮಾಡಿದೆ.

ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ನಕಲಿ ನಂಬರ್ ಪ್ಲೇಟ್‌ಗಳನ್ನು ಸೃಷ್ಠಿಸಿ ಕದ್ದ ವಾಹನಗಳಿಗೆ ಅವುಗಳನ್ನು ಜೋಡಿಸುವ ಮೂಲಕ ಸೆಕೆಂಡ್ ಹ್ಯಾಂಡ್ ರೂಪದಲ್ಲಿ ಮಾರಾಟ ಮಾಡುವ ಜಾಲವೊಂದು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ನಕಲಿ ನಂಬರ್ ಪ್ಲೇಟ್ ವಾಹನ ಮಾಲೀಕ ಮಾಡುವ ತಪ್ಪಿಗೆ ಮೂಲ ವಾಹನ ಮಾಲೀಕರು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡುವಾಗ ಸರಿಯಾದ ದಾಖಲೆಗಳು ಇದೆಯೆ ಇಲ್ಲವೇ ಎಂದು ಪರಿಶೀಲಿಸಿದರೆ ಮಾತ್ರ ಸಾಲದು. ಅದರ ಜೊತೆಗೆ ನೀವು ಖರೀದಿ ಮಾಡುತ್ತಿರುವ ವಾಹನದ ನಂಬರ್ ಪ್ಲೇಟ್ ಬೇರೊಂದು ವಾಹನಕ್ಕೂ ನೀಡಲಾಗಿದೆಯೇ ಎನ್ನುವ ಮಾಹಿತಿಯನ್ನು ನೀವು ಕೂಲಂಕುಶವಾಗಿ ಪರಿಶೀಲನೆ ಮಾಡುವುದು ಒಳೀತು.

ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ಇಲ್ಲವಾದ್ರೆ, ಯಾರದ್ದೋ ನಂಬರ್ ಪ್ಲೇಟ್ ಅನ್ನು ನಿಮಗೆ ನೀಡಿ ಯಾಮಾರಿಸಬಹುದಾದ ಸಾಧ್ಯತೆಗಳಿದ್ದು, ಇದರಿಂದ ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನ ಮಾಲೀಕನು ಮಾಡುವ ತಪ್ಪಿಗೆ ಮೂಲ ವಾಹನ ಮಾಲೀಕನು ದಂಡ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಬಹುದು.

ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ಕೇವಲ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಪರವಾಗಿಲ್ಲ. ಅದರ ಬದಲಾಗಿ ಅಪರಾಧ ಕೃತ್ಯಗಳಿಗಾಗಿ ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನವನ್ನು ಬಳಕೆ ಮಾಡಿ ಸಿಕ್ಕಿಬಿದ್ದಲ್ಲಿ ಅದು ಮೂಲ ವಾಹನ ಮಾಲೀಕನ ತಲೆಗೆ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ಇಂತದ್ದೇ ಒಂದು ಪ್ರಕರಣವು ಕೆ.ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದ್ದು, ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ನೀಡಲಾಗಿರುವ ನೋಂದಣಿ ಸಂಖ್ಯೆಯನ್ನು ಬೇರೊಂದು ಬೈಕಿನಲ್ಲಿ ಬಳಕೆಯಾಗುತ್ತಿರುವ ಬಗ್ಗೆ ಪತ್ತೆಯಾಗಿದೆ. ಹತ್ತಾರು ಬಾರಿ ಸಾರಿಗೆ ನಿಯಮಳನ್ನು ಉಲ್ಲಂಘನೆ ಮಾಡಿ ಸಿಕ್ಕಿಬಿದ್ದಾಗಲೇ ಬೈಕ್ ನೋಂದಣಿಯ ಅಸಲಿತ್ತು ಬಯಲಾಗಿದ್ದು, ಪೊಲೀಸರ ಬಳಿ ನಕಲಿ ನಂಬರ್ ಪ್ಲೇಟ್ ಬೈಕ್ ಮಾಲೀಕ ಲಾಕ್ ಆಗಿದ್ದಾನೆ.

Image Source: BangaloreMirror

ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ಅಷ್ಟಕ್ಕೂ ನಕಲಿ ನಂಬರ್ ಪ್ಲೇಟ್ ಹೊಂದಿರುವ ಬೈಕ್ ಮಾಲೀಕನಿಗೂ ಕೂಡಾ ಇದು ನಕಲಿ ನಂಬರ್ ಪ್ಲೇಟ್ ಎಂಬುವುದು ಗೊತ್ತಿಲ್ಲ. ಯಾಕೆಂದ್ರೆ ಬೈಕ್ ಕಳ್ಳತನ ಮಾಡಿ ಖದೀಮರು ಬೇರೊಂದು ನಂಬರ್ ಜೋಡಣೆ ಮಾಡಿ ಅಗ್ಗದ ಬೆಲೆಗೆ ಮಾರಾಟ ಮಾಡಲಾದ ಬೈಕ್ ಇದಾಗಿದ್ದು, ಖರೀದಿಮ ಜಾಲವನ್ನು ಭೇದಿಸಲು ಪೊಲೀಸರು ಫೀಲ್ಡ್‌ಗೆ ಇಳಿದ್ದಾರೆ.

MOST READ: ನೋ ಪಾರ್ಕಿಂಗ್‌ನಲ್ಲಿದ್ದ ಹೋಂಡಾ ಡಿಯೋ ಸ್ಕೂಟರ್ ಪೀಸ್ ಪೀಸ್ ಮಾಡಿದ ಪೊಲೀಸ್..!

ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ಇದಲ್ಲದೇ ಕಳೆದ ಕೆಲ ದಿನಗಳ ಹಿಂದಷ್ಟೇ ಲಕ್ನೊದಲ್ಲಿ ಕದ್ದ ವಾಹನದ ಚಾಸಿಸ್ ಸಂಖ್ಯೆಯನ್ನು ಬದಲಾಯಿಸುವ ಮೂಲಕ ಇಲ್ಲಿ ಮಾರಾಟ ಮಾಡಲಾಗಿದ್ದು, ನಕಲಿ ನಂಬರ್ ಪ್ಲೆಟ್ ಮಾಫಿಯಾ ತಂಡವು ಕದ್ದ ವಾಹನಗಳನ್ನು ಎರಡು ವಿಧಗಳಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿತ್ತು.

ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ಕದ್ದಿರುವ ವಾಹನಗಳಿಗೆ ಈಗಿರುವ ಚಾಸಿಸ್ ಸಂಖ್ಯೆಯ ದಾಖಲೆಗಳನ್ನು ವಿರೂಪಗೊಳಿಸುವುದು ಒಂದು ವಿಧವಾದ್ರೆ, ಮತ್ತೊಂದಡೆ ಅವರ ಅಸ್ತಿತ್ವದಲ್ಲಿರುವ ಡಾಕ್ಯುಮೆಂಟ್‍ಗಳನ್ನು ಆಧರಿಸಿ ಚಾಸಿಸ್ ಸಂಖ್ಯೆಯನ್ನು ಬದಲಿಸಿ ಮಾರಾಟ ಮಾಡಿ ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ.

MOST READ: ಹೊಸ ಬೈಕ್‌ಗಳಿಗೆ ಇಂದಿನಿಂದ ಹೊಸ ರೂಲ್ಸ್- ಸಿಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಖರೀದಿ ಬೇಡವೇ ಬೇಡ..!

ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ಖದೀಮರು ಬಹುತೇಕ ಪ್ರಕರಣಗಳಲ್ಲಿ ಹಳೆಯ ವಾಹನಗಳ ಚಾಸಿಸ್ ಅನ್ನು ನವೀಕರಿಸಿ ನಂತರ ನಕಲಿ ಸಂಖ್ಯೆಯ ಫಲಕವನ್ನು ತಯಾರು ಮಾಡುತ್ತಿದ್ದು, ಅಪರಾಧಿಗಳು ಇತರರಿಗೆ ಮಾರಾಟ ಮಾಡುವ ಮೊದಲು ಡಾಕ್ಯುಮೆಂಟ್‍ಗಳು, ನಂಬರ್ ಪ್ಲೇಟ್‍, ಚಾಸಿಸ್ ಸಂಖ್ಯೆ ಮತ್ತು ಎಂಜಿನ್ ಸಂಖ್ಯೆಗಳನ್ನು ನಕಲು ಮಾಡುವುದು ವರದಿಯಾಗಿತ್ತು.

ವಾಹನ ಮಾಲೀಕರೇ ಹುಷಾರ್- ಬೆಂಗಳೂರಿನಲ್ಲಿ ಜೋರಾಗಿದೆ ನಕಲಿ ನಂಬರ್ ಪ್ಲೇಟ್ ಹಾವಳಿ

ಹೀಗಾಗಿ ಹೊಸ ವಾಹನಗಳ ಖರೀದಿಗೆ ಹೋಲಿಸಿದರೆ ಬಳಕೆಯಾದ ವಾಹನಗಳನ್ನು ಖರೀದಿಸುವುದು ತುಂಬಾನೇ ಕಷ್ಟಕರ. ಹೊಸ ವಾಹನ ಖರೀದಿಸುವಾಗ ನಮಗೆ ನೈಜ ಮಾಹಿತಿ ಗಿಟ್ಟಿಸಿಕೊಳ್ಳುವುದು ತುಂಬಾನೇ ಸುಲಭ. ಆದರೆ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವ ಮುನ್ನ ವಾಹನದ ಅಸಲಿಯತ್ತು ಕೂಲಂಕುಶವಾಗಿ ಪರಿಶೀಲನೆ ಮಾಡಿ ಮುಂದಿನ ವ್ಯವಹಾರ ಕೈಗೊಳ್ಳಿ.

Most Read Articles

Kannada
English summary
Is duplication of number plates the new hot crime? Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X