ಲಾಕ್‌ಡೌನ್‌ ಎಫೆಕ್ಟ್: ಕಾರು ಮಾರಾಟ ಮಾಡಲು ಮುಂದಾದ ಅಥ್ಲೀಟ್

ಲಾಕ್‌ಡೌನ್‌ನಿಂದಾಗಿ ಭಾರತದ ಆಟಗಾರರು ಸೇರಿದಂತೆ ಹಲವಾರು ಜನರು ಬಾಧಿತರಾಗಿದ್ದಾರೆ. ಭಾರತದ ಖ್ಯಾತ ಓಟಗಾರ್ತಿ ದ್ಯುತಿ ಚಂದ್ ಕೂಡ ಲಾಕ್‌ಡೌನ್ ಕಾರಣದಿಂದಾಗಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಹಣದ ಕೊರತೆಯಿಂದಾಗಿ ಅವರಿಗೆ ತರಬೇತಿ ಪಡೆಯಲು ಸಹ ಸಾಧ್ಯವಾಗುತ್ತಿಲ್ಲ.

ಲಾಕ್‌ಡೌನ್‌ ಎಫೆಕ್ಟ್: ಕಾರು ಮಾರಾಟ ಮಾಡಲು ಮುಂದಾದ ಅಥ್ಲೀಟ್

ದ್ಯುತಿ ಚಂದ್ ಮುಂಬರುವ 2021ರ ಟೋಕಿಯೊ ಒಲಿಂಪಿಕ್ಸ್‌ಗಾಗಿ ಸಿದ್ದತೆ ನಡೆಸುತ್ತಿದ್ದಾರೆ. ಆದರೆ ಅವರ ಬಳಿ ಹಣವಿಲ್ಲದ ಕಾರಣಕ್ಕೆ ಅವರು 2018ರಲ್ಲಿ ಖರೀದಿಸಿದ್ದ ಬಿಎಂಡಬ್ಲ್ಯು 3 ಸೀರೀಸ್ ಕಾರ್ ಅನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ದ್ಯುತಿ ಚಂದ್ ರೂ.30 ಲಕ್ಷ ನೀಡಿ ಈ ಕಾರ್ ಅನ್ನು ಖರೀದಿಸಿದ್ದರು.

ಲಾಕ್‌ಡೌನ್‌ ಎಫೆಕ್ಟ್: ಕಾರು ಮಾರಾಟ ಮಾಡಲು ಮುಂದಾದ ಅಥ್ಲೀಟ್

ಮಾಧ್ಯಮಗಳ ವರದಿಯ ಪ್ರಕಾರಈ ಬಗ್ಗೆ ಮಾತನಾಡಿರುವ ಅವರು ರೂ.30 ಲಕ್ಷ ನೀಡಿ ಖರೀದಿಸಿದ ಈ ಕಾರಿನ ನಿರ್ವಹಣೆ ಸಮಸ್ಯೆ ಆಗಿರುವುದರಿಂದ ಹಾಗೂ ಈಗಾಗಲೇ ಬೇರೆ ಕಾರುಗಳಿದ್ದು, ಈ ಕಾರನ್ನು ನಿಲ್ಲಿಸಲು ಜಾಗವಿಲ್ಲದಿರುವ ಕಾರಣಕ್ಕೆ ಕಾರನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ತರಬೇತಿಗೆ ಬಳಸಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಲಾಕ್‌ಡೌನ್‌ ಎಫೆಕ್ಟ್: ಕಾರು ಮಾರಾಟ ಮಾಡಲು ಮುಂದಾದ ಅಥ್ಲೀಟ್

ದ್ಯುತಿ ಚಂದ್ ರವರು 2018ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಟೋಕಿಯೊ ಒಲಿಂಪಿಕ್ಸ್ ಈ ವರ್ಷದ ಜುಲೈ ತಿಂಗಳಿನಲ್ಲಿ ನಡೆಯಬೇಕಿತ್ತು. ಕರೋನಾ ವೈರಸ್ ಕಾರಣಕ್ಕೆ ಈ ಒಲಂಪಿಕ್ಸ್ ಸ್ಪರ್ಧೆಯನ್ನು 2021ಕ್ಕೆ ಮುಂದೂಡಲಾಗಿದೆ.

ಲಾಕ್‌ಡೌನ್‌ ಎಫೆಕ್ಟ್: ಕಾರು ಮಾರಾಟ ಮಾಡಲು ಮುಂದಾದ ಅಥ್ಲೀಟ್

ಕರೋನಾ ವೈರಸ್ ಕಾರಣದಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಯಾವುದೇ ಕ್ರೀಡೆಗಳು ನಡೆಯುತ್ತಿಲ್ಲ. ಇದರಿಂದಾಗಿ ಯಾವುದೇ ಸ್ಪರ್ಧೆ ಹಾಗೂ ಪ್ರಾಯೋಜಕತ್ವರಿಲ್ಲದೇ ಅಥ್ಲೀಟ್ ಗಳು ಯಾವುದೇ ಆದಾಯವಿಲ್ಲದೇ ಪರದಾಡುವಂತಾಗಿದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಲಾಕ್‌ಡೌನ್‌ ಎಫೆಕ್ಟ್: ಕಾರು ಮಾರಾಟ ಮಾಡಲು ಮುಂದಾದ ಅಥ್ಲೀಟ್

ಈ ಬಗ್ಗೆ ಮಾತನಾಡಿರುವ ದ್ಯುತಿ ಚಂದ್ ರವರು ನಾನು ಡಯಟ್ ಗಾಗಿ ಒಂದು ಲಕ್ಷ ಖರ್ಚು ಮಾಡಿದ್ದೇನೆ. ಇದರ ಜೊತೆಗೆ ನನ್ನ ತರಬೇತುದಾರ ಹಾಗೂ ಫಿಸಿಯೋರವರಿಗೂ ಸಂಬಳ ನೀಡಬೇಕಾಗಿದೆ. ಓಡಿಶಾ ಸರ್ಕಾರ ನೀಡಿದ್ದ ನಗದು ಬಹುಮಾನವನ್ನು ಸಹ ಖರ್ಚು ಮಾಡಿದ್ದೇನೆ. ಒಲಿಂಪಿಕ್ಸ್ ಮುಂದೂಡಿಕೆಯಾದ ನಂತರ ನನ್ನ ತರಬೇತಿಗೆ ಹಣಹೊಂದಿಸುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ.

ಲಾಕ್‌ಡೌನ್‌ ಎಫೆಕ್ಟ್: ಕಾರು ಮಾರಾಟ ಮಾಡಲು ಮುಂದಾದ ಅಥ್ಲೀಟ್

ಒರಿಸ್ಸಾ ಮೈನಿಂಗ್ ಕಾರ್ಪೊರೇಶನ್‌ನಲ್ಲಿ ನೌಕರಿಯಲ್ಲಿರುವ ಅವರು ತಿಂಗಳಿಗೆ ರೂ.60,000 ಸಂಬಳ ಪಡೆಯುತ್ತಿದ್ದಾರೆ. ಆದರೆ ಈ ಬಿಕ್ಕಟ್ಟಿನ ಸಮಯದಲ್ಲಿ ಈ ಹಣವೂ ಸಹ ಸಾಕಾಗುತ್ತಿಲ್ಲ. ಅವರು ಫೆಡರೇಶನ್ ಆಫ್ ಇಂಡಿಯಾದಲ್ಲಿ ತರಬೇತಿ ಪಡೆಯದ ಕಾರಣಕ್ಕೆ ಫೆಡರೇಶನ್‌ನಿಂದ ಯಾವುದೇ ಸಹಾಯವನ್ನು ಪಡೆಯುತ್ತಿಲ್ಲ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಲಾಕ್‌ಡೌನ್‌ ಎಫೆಕ್ಟ್: ಕಾರು ಮಾರಾಟ ಮಾಡಲು ಮುಂದಾದ ಅಥ್ಲೀಟ್

ಕರೋನಾ ವೈರಸ್ ಕಾರಣಕ್ಕೆ ಅವರ ಯೋಜನೆಗಳೆಲ್ಲಾ ಹಳಿ ತಪ್ಪಿವೆ. ಈಗ ಅವರಿಗೆ ಕಾರನ್ನು ಮಾರಾಟ ಮಾಡುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಹಲವಾರು ಬಾರಿ ಈ ಬಗ್ಗೆ ಚಿಂತನೆ ನಡೆಸಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ದ್ಯುತಿ ಚಂದ್ ಹೇಳಿದ್ದಾರೆ. ಬಿಎಂಡಬ್ಲ್ಯು 3 ಸೀರೀಸ್ ದ್ಯುತಿ ಚಂದ್ ಅವರ ಮೊದಲ ಐಷಾರಾಮಿ ಕಾರಾಗಿದೆ.ಈ ಕಾರನ್ನು ಮಾರಾಟ ಮಾಡುತ್ತಿರುವ ಬಗ್ಗೆ ಅವರು ನಿರಾಶಾರಾಗಿಲ್ಲ.

ಲಾಕ್‌ಡೌನ್‌ ಎಫೆಕ್ಟ್: ಕಾರು ಮಾರಾಟ ಮಾಡಲು ಮುಂದಾದ ಅಥ್ಲೀಟ್

ಒಲಂಪಿಕ್ಸ್ ನಲ್ಲಿ ಗೆದ್ದು ಹಣ ಸಂಪಾದಿಸಿದ ನಂತರ ಮತ್ತೆ ಐಷಾರಾಮಿ ಕಾರು ಖರೀದಿಸುವುದಾಗಿ ಹೇಳಿದ್ದಾರೆ. ಸದ್ಯಕ್ಕೆ ಅವರ ಗಮನವೆಲ್ಲಾ ಒಲಿಂಪಿಕ್ಸ್‌ನತ್ತ ನೆಟ್ಟಿದೆ. ಸಾಮಾನ್ಯವಾಗಿ ಐಷಾರಾಮಿ ಕಾರುಗಳ ರಿ-ಸೇಲ್ ಬೆಲೆ ಕಡಿಮೆ ಇರುತ್ತದೆ. ದ್ಯುತಿ ಚಂದ್ ಅವರ ಕಾರು ಇನ್ನೂ ವಾರಂಟಿ ಅವಧಿಯನ್ನು ಹೊಂದಿದೆ. ಸಂಕಷ್ಟದಲ್ಲಿರುವ ಈ ಓಟಗಾರ್ತಿಯ ನೆರವಿಗೆ ಸರ್ಕಾರಗಳು ಮುಂದೆ ಬರುತ್ತವೆಯೇ ಎಂಬುದನ್ನೂ ಕಾದು ನೋಡಬೇಕಿದೆ.

Most Read Articles

Kannada
English summary
Dutee Chand selling her BMW 3 series car. Read in Kannada.
Story first published: Tuesday, July 14, 2020, 16:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X