2,500Nm ಟಾರ್ಕ್ ಉತ್ಪಾದನಾ ಸಾಮರ್ಥ್ಯದ EKA E9 ಎಲೆಕ್ಟ್ರಿಕ್ ಬಸ್ ಅನಾವರಣ

ಹೆಚ್ಚಾಗುತ್ತಿರುವ ಇಂಧನ ಬೆಲೆಗಳಿಂದಾಗಿ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ವಿಶ್ವದ ಎಲ್ಲಾ ದೇಶಗಳ ಸರ್ಕಾರಗಳು ಕೂಡ ಪ್ರೋತ್ಸಾಹಿಸುತ್ತಿವೆ. ಈ ನಡುವೆ ಪುಣೆ ಮೂಲದ ವಾಣಿಜ್ಯ ವಿದ್ಯುತ್ ವಾಹನ ತಯಾರಕ EKA, ಪುಣೆ ಆಲ್ಟರ್ನೇಟ್ ಕಾನ್ಕ್ಲೇವ್‌ನಲ್ಲಿ E9 ಎಲೆಕ್ಟ್ರಿಕ್ ಬಸ್ ಅನ್ನು ಬಹಿರಂಗಪಡಿಸಿದೆ.

2,500Nm ಟಾರ್ಕ್ ಉತ್ಪಾದನಾ ಸಾಮರ್ಥ್ಯದ EKA E9 ಎಲೆಕ್ಟ್ರಿಕ್ ಬಸ್ ಅನಾವರಣ

9 ಮೀಟರ್ ಉದ್ದದ EKA E9 ಎಲೆಕ್ಟ್ರಿಕ್ ಬಸ್ ಅನ್ನು ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ, ಪರಿಸರ ಮತ್ತು ಪ್ರೋಟೋಕಾಲ್ ಸಚಿವ ಆದಿತ್ಯ ಠಾಕ್ರೆ ಹಾಗೂ ಇಕೆಎ ಆ್ಯಂಡ್ ಪಿನಾಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಡಾ.ಸುಧೀರ್ ಮೆಹ್ತಾ ಅವರು ಬಹಿರಂಗಪಡಿಸಿದರು.

2,500Nm ಟಾರ್ಕ್ ಉತ್ಪಾದನಾ ಸಾಮರ್ಥ್ಯದ EKA E9 ಎಲೆಕ್ಟ್ರಿಕ್ ಬಸ್ ಅನಾವರಣ

EKA E9 ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಇಕೆಎ ಮತ್ತು ಪಿನಾಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಸುಧೀರ್ ಮೆಹ್ತಾ, "ವಾಣಿಜ್ಯ ವಾಹನಗಳ ವಿದ್ಯುದ್ದೀಕರಣ, ಸಾರ್ವಜನಿಕ ಸಾರಿಗೆ, ವಿಶೇಷವಾಗಿ ಬಸ್ ವಲಯವು ಭಾರತದ ಡಿಕಾರ್ಬೊನೈಸೇಶನ್ ತಂತ್ರಕ್ಕೆ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಇಂದು ನಾವು ಪ್ರಾರಂಭಿಸಲು ಉತ್ಸುಕರಾಗಿದ್ದೇವೆ. ನಮ್ಮ ಮೊದಲ ಎಲೆಕ್ಟ್ರಿಕ್ ಬಸ್ EKA E9, ಶೂನ್ಯ-ಹೊರಸೂಸುವಿಕೆಯ ಗುರಿಗಳನ್ನು ಸಾಧಿಸಲು ನಗರಗಳನ್ನು ಸಶಕ್ತಗೊಳಿಸಲು ನಮ್ಮ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದರು.

2,500Nm ಟಾರ್ಕ್ ಉತ್ಪಾದನಾ ಸಾಮರ್ಥ್ಯದ EKA E9 ಎಲೆಕ್ಟ್ರಿಕ್ ಬಸ್ ಅನಾವರಣ

ಅತ್ಯುತ್ತಮವಾದ ಸವಾರಿ ಅನುಭವ, ಮಾಲಿನ್ಯ ಮುಕ್ತ ಪರಿಸರ ಮತ್ತು ಗ್ರಾಹಕರಿಗೆ ಉತ್ತಮ ಆದಾಯವನ್ನು ಒದಗಿಸಲು ಈ ಬಸ್‌ ಅನ್ನು ಆಪ್ಟಿಮೈಸ್ ಮಾಡಲಾಗಿದೆ. ಎಲೆಕ್ಟ್ರೋಮೊಬಿಲಿಟಿಗೆ ಬದಲಾಗಲು ಸಿದ್ಧವಾಗಿರುವ ಪ್ರಮುಖ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಶುದ್ಧ, ಪರಿಣಾಮಕಾರಿ ಮತ್ತು ಲಾಭದಾಯಕ ಸಾರ್ವಜನಿಕ ಸಾರಿಗೆಗಾಗಿ ಜಾಗತಿಕ ವೇದಿಕೆಗೆ ಹೊಸ EKA E9 ನೊಂದಿಗೆ ಬರುತ್ತಿದ್ದೇವೆ ಎಂದರು.

2,500Nm ಟಾರ್ಕ್ ಉತ್ಪಾದನಾ ಸಾಮರ್ಥ್ಯದ EKA E9 ಎಲೆಕ್ಟ್ರಿಕ್ ಬಸ್ ಅನಾವರಣ

EKA ಪಿನಾಕಲ್ ಇಂಡಸ್ಟ್ರೀಸ್‌ನ ಎಲೆಕ್ಟ್ರಾನಿಕ್ ವಾಹನ ತಯಾರಿಕೆ ಮತ್ತು ತಂತ್ರಜ್ಞಾನದ ಅಂಗಸಂಸ್ಥೆಯಾಗಿದೆ. EKA ಭಾರತ ಸರ್ಕಾರದ ಆಟೋ ಪಿಎಲ್‌ಐ ನೀತಿಯ ಚಾಂಪಿಯನ್ ಒಇಎಮ್‌ ಸ್ಕೀಮ್ ಮತ್ತು ಇವಿ ಕಾಂಪೊನೆಂಟ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್ ಅಡಿಯಲ್ಲಿ ಅನುಮೋದಿಸಲಾದ ಏಕೈಕ ವಾಣಿಜ್ಯ ವಾಹನ ತಯಾರಕರಲ್ಲಿ ಒಂದಾಗಿದೆ.

2,500Nm ಟಾರ್ಕ್ ಉತ್ಪಾದನಾ ಸಾಮರ್ಥ್ಯದ EKA E9 ಎಲೆಕ್ಟ್ರಿಕ್ ಬಸ್ ಅನಾವರಣ

EKA E9, 9-ಮೀಟರ್ ಉದ್ದದ ಎಲೆಕ್ಟ್ರಿಕ್ ಬಸ್ ಆಗಿದ್ದು, ಇದು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲಾದ ಮೊನೊಕಾಕ್ ಚಾಸಿಸ್ ಅನ್ನು ಒಳಗೊಂಡಿದೆ. E9 ಎಲೆಕ್ಟ್ರಿಕ್ ಬಸ್ ಹೊಸ ವಾಹನ ವಿನ್ಯಾಸವನ್ನು ಹೊಂದಿದೆ ಮತ್ತು ಸಂಯೋಜಿತ ರಚನೆ ಹಾಗೂ ದೊಡ್ಡ ಗಾಜಿನ ವಿನ್ಯಾಸವನ್ನು ಒಳಗೊಂಡಿದೆ.

2,500Nm ಟಾರ್ಕ್ ಉತ್ಪಾದನಾ ಸಾಮರ್ಥ್ಯದ EKA E9 ಎಲೆಕ್ಟ್ರಿಕ್ ಬಸ್ ಅನಾವರಣ

EKA E9 ಒಂದೇ ಎಲೆಕ್ಟ್ರಿಕ್ ಮೋಟಾರ್‌ನಿಂದ ಚಾಲಿತವಾಗಿದ್ದು, ಕಂಪನಿಯು 268 ಬಿಹೆಚ್‌ಪಿ (200kW) ಮತ್ತು 2,500 ಎನ್‌ಎಮ್‌ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಆಂತರಿಕ ವಿನ್ಯಾಸದ ವಾಹನ ನಿಯಂತ್ರಣ ಘಟಕ ಸಾಫ್ಟ್‌ವೇರ್ ಅನ್ನು ಒಳಗೊಂಡಿದೆ. EKA E9 ನಲ್ಲಿನ ಇತರ ವೈಶಿಷ್ಟ್ಯಗಳೆಂದರೆ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು, ಏರ್ ಸಸ್ಪೆನ್ಷನ್ ಮತ್ತು 4 ಕ್ಯಾಮೆರಾಗಳು, ತುರ್ತು ನಿಲುಗಡೆ ಬಟನ್, ಅಗ್ನಿಶಾಮಕ ಮತ್ತು ಸ್ವಯಂಚಾಲಿತ ಚಾಲಕ ಸಹಾಯ ವ್ಯವಸ್ಥೆ (ADAS) ಸೇರಿದಂತೆ ಹಲವಾರು ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

2,500Nm ಟಾರ್ಕ್ ಉತ್ಪಾದನಾ ಸಾಮರ್ಥ್ಯದ EKA E9 ಎಲೆಕ್ಟ್ರಿಕ್ ಬಸ್ ಅನಾವರಣ

EKA E9ನ 2,500mm ಅಗಲವು ಪ್ರಯಾಣಿಕರಿಗೆ ಸಾಕಷ್ಟು ಆಸನ ಮತ್ತು ನಿಂತುಕೊಳ್ಳಲು ಸ್ಥಳವನ್ನು ನೀಡುತ್ತದೆ. ಅಂಗವಿಕಲ ಪ್ರಯಾಣಿಕರಿಗೆ ಉತ್ತಮ ಪ್ರವೇಶವನ್ನು ನೀಡಲು EKA E9 ಗಾಲಿಕುರ್ಚಿ ಇಳಿಜಾರುಗಳನ್ನು ನೀಡುವ ವ್ಯವಸ್ಥೆಯನ್ನು ಒಳಗೊಂಡಿದೆ. EKA E9 ನೆಲದಿಂದ ಕೇವಲ 650 ಮಿಮೀ ಎತ್ತರದಲ್ಲಿರುವ ಡೌನ್ ಫ್ಲೋರ್‌ ಅನ್ನು ಸಹ ಹೊಂದಿದೆ.

2,500Nm ಟಾರ್ಕ್ ಉತ್ಪಾದನಾ ಸಾಮರ್ಥ್ಯದ EKA E9 ಎಲೆಕ್ಟ್ರಿಕ್ ಬಸ್ ಅನಾವರಣ

ಈ ಬಸ್‌ ಡ್ರೈವರ್‌ಗಾಗಿ ಹಲವಾರು ವೈಶಿಷ್ಟ್ಯಗಳನ್ನು ಸಹ ಒದಗಿಸುತ್ತದೆ. ಈ ವೈಶಿಷ್ಟ್ಯಗಳಲ್ಲಿ ಟಿಲ್ಟ್ ಮತ್ತು ಟೆಲಿಸ್ಕೋಪಿಕ್ ಹೊಂದಾಣಿಕೆಯೊಂದಿಗೆ ಪವರ್ ಅಸಿಸ್ಟೆಡ್ ಸ್ಟೀರಿಂಗ್, ಆಲ್ ಇನ್ ಒನ್ ಸೆಂಟ್ರಲ್ ಕನ್ಸೋಲ್ ಮತ್ತು ಡ್ರೈವರ್ ಅಸಿಸ್ಟೆಂಟ್ ಸಿಸ್ಟಂಗಳು ಸೇರಿವೆ. E9 ಕೇವಲ EKA ಪ್ರಾರಂಭದ ಯೋಜನೆಯಾಗಿದೆ. ಕಂಪನಿಯು ಮುಂದಿನ ದಿನಗಳಲ್ಲಿ ಸಂಪೂರ್ಣ ಶ್ರೇಣಿಯ ಎಲೆಕ್ಟ್ರಿಕ್ ವಾಹನಗಳು, ಇಂಧನ ಕೋಶ ಎಲೆಕ್ಟ್ರಿಕ್ ವಾಹನಗಳು ಮತ್ತು ಪರ್ಯಾಯ ಇಂಧನ ವಾಹನಗಳನ್ನು ವಿನ್ಯಾಸಗೊಳಿಸಲು, ತಯಾರಿಸಲು ಮತ್ತು ಪೂರೈಸಲು ಯೋಜಿಸಿದೆ.

2,500Nm ಟಾರ್ಕ್ ಉತ್ಪಾದನಾ ಸಾಮರ್ಥ್ಯದ EKA E9 ಎಲೆಕ್ಟ್ರಿಕ್ ಬಸ್ ಅನಾವರಣ

ಬ್ರ್ಯಾಂಡ್ ಘಟಕಗಳ ಜೋಡಣೆ ಮತ್ತು ಉತ್ಪಾದನೆ, EV ಟ್ರಾಂಕ್ಷನ್ ವ್ಯವಸ್ಥೆಗಳು, EV ಶಕ್ತಿ ಸಂಗ್ರಹ ವ್ಯವಸ್ಥೆಗಳು ಇತ್ಯಾದಿಗಳನ್ನು ಸಹ ಮಾಡಲು ಯೋಜನೆ ರೂಪಿಸಿಕೊಂಡಿದೆ. EKA E9 ಕಂಪನಿಯು ವಾಣಿಜ್ಯ ವಿದ್ಯುತ್ ವಾಹನಗಳ ಜಗತ್ತಿಗೆ ಪ್ರವೇಶಿಸುವ ತವಕದಲ್ಲಿದೆ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಸಾಮಾನ್ಯ ಬಸ್‌ಗಳಂತೆ ಸಂಚರಿಸುವಂತೆ ಮಾಡಲು EKA ಸಾಕಷ್ಟು ಆಸಕ್ತಿಯನ್ನು ತೋರುತ್ತಿದೆ.

Most Read Articles

Kannada
English summary
Eka e9 electric bus revealed specs features
Story first published: Saturday, April 2, 2022, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X