ಆಟೋ ಸ್ಪೋಟಗೊಂಡು ದುರಂತ ಅಂತ್ಯಕಂಡ ರಿಕ್ಷಾ ಚಾಲಕ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿರವರು ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದಾಗಿ ವಾಯುಮಾಲಿನ್ಯವು ಕಡಿಮೆಯಾಗುವುದರ ಜೊತೆಗೆ ಕಚ್ಚಾ ತೈಲ ಆಮದು ಕೂಡ ಕಡಿಮೆಯಾಗಲಿದೆ.

ಆಟೋ ಸ್ಪೋಟಗೊಂಡು ದುರಂತ ಅಂತ್ಯಕಂಡ ರಿಕ್ಷಾ ಚಾಲಕ

ಇದರಿಂದ ಭಾರತದ ಆರ್ಥಿಕತೆಗೂ ಹೆಚ್ಚಿನ ಪ್ರಯೋಜನವಾಗಲಿದೆ. ಈ ಎಲ್ಲಾ ಕಾರಣಗಳಿಗಾಗಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಆದರೆ ಪೆಟ್ರೋಲ್ ಹಾಗೂ ಡೀಸೆಲ್ ಬಂಕ್ ಗಳು ಎಲ್ಲೆಡೆ ಇರುವಂತೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಕೇಂದ್ರಗಳು ಇಲ್ಲದಿರುವ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಆಟೋ ಸ್ಪೋಟಗೊಂಡು ದುರಂತ ಅಂತ್ಯಕಂಡ ರಿಕ್ಷಾ ಚಾಲಕ

ಎಲೆಕ್ಟ್ರಿಕ್ ವಾಹನಗಳ ಬಗ್ಗೆ ಜನರಿಗೆ ಇರುವ ಮತ್ತೊಂದು ಸಮಸ್ಯೆ ಎಂದರೆ ಅವುಗಳ ಸುರಕ್ಷತೆ. ಎಲೆಕ್ಟ್ರಿಕ್ ವಾಹನಗಳು ಕೆಲವೊಮ್ಮೆ ಸುಟ್ಟುಹೋಗುತ್ತವೆ. ಈ ಬಗ್ಗೆ ಆಗಾಗ್ಗೆ ಸುದ್ದಿಗಳು ಪ್ರಕಟವಾಗುತ್ತಿರುತ್ತವೆ. ಇದರಿಂದಾಗಿ ಜನರು ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಆಟೋ ಸ್ಪೋಟಗೊಂಡು ದುರಂತ ಅಂತ್ಯಕಂಡ ರಿಕ್ಷಾ ಚಾಲಕ

ಪಶ್ಚಿಮ ಬಂಗಾಳದಲ್ಲಿ ದುರಂತವೊಂದು ಸಂಭವಿಸಿದೆ. ಈ ಘಟನೆಯಲ್ಲಿ ಎಲೆಕ್ಟ್ರಿಕ್ ರಿಕ್ಷಾ ಸ್ಫೋಟಗೊಂಡು ಅದರ ಚಾಲಕ ಮೃತಪಟ್ಟಿದ್ದಾನೆ. ಈ ಘಟನೆ ಪಶ್ಚಿಮ ಬಂಗಾಳದ ಮಾಲ್ಟಾ ಜಿಲ್ಲೆಯಲ್ಲಿ ನಡೆದಿದೆ. ಮೃತ ಎಲೆಕ್ಟ್ರಿಕ್ ರಿಕ್ಷಾ ಚಾಲಕನ ವಯಸ್ಸು ಕೇವಲ 26 ವರ್ಷ.

ಆಟೋ ಸ್ಪೋಟಗೊಂಡು ದುರಂತ ಅಂತ್ಯಕಂಡ ರಿಕ್ಷಾ ಚಾಲಕ

ಮಾಲ್ಟಾದ ಇಂಗ್ಲಿಷ್ ಬಜಾರ್‌ನ ಕೊರಪ್ಪಿರ್-ಕೃಷ್ಣಪ್ಪಳ್ಳಿ ರಸ್ತೆಯಲ್ಲಿ ಸಂಚರಿಸುವ ವೇಳೆ ಎಲೆಕ್ಟ್ರಿಕ್ ರಿಕ್ಷಾ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಈ ಘಟನೆ ಜುಲೈ 1ರಂದು ನಡೆದಿದೆ. ಎಲೆಕ್ಟ್ರಿಕ್ ರಿಕ್ಷಾದ ಚಾಲಕ ಮೊಹಮ್ಮದ್ ಇಲಿಯಾಸ್ ಈ ಭೀಕರ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾನೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಆಟೋ ಸ್ಪೋಟಗೊಂಡು ದುರಂತ ಅಂತ್ಯಕಂಡ ರಿಕ್ಷಾ ಚಾಲಕ

ಘಟನೆಯ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳು ವಿದ್ಯುತ್ ರಿಕ್ಷಾದ 4 ಬ್ಯಾಟರಿಗಳಲ್ಲಿ 2 ಬ್ಯಾಟರಿಗಳು ಸ್ಫೋಟಗೊಂಡಿರುವುದಾಗಿ ತಿಳಿಸಿದ್ದಾರೆ. ಎಲೆಕ್ಟ್ರಿಕ್ ರಿಕ್ಷಾ ಸ್ಫೋಟಗೊಂಡ ನಂತರ ಜನರು ಹೊರಗೆ ಓಡಿಬಂದಿದ್ದು, ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಆಟೋ ಸ್ಪೋಟಗೊಂಡು ದುರಂತ ಅಂತ್ಯಕಂಡ ರಿಕ್ಷಾ ಚಾಲಕ

ಎಲೆಕ್ಟ್ರಿಕ್ ವಾಹನಗಳು ಸ್ಫೋಟಗೊಂಡು ಸಿಡಿಯುತ್ತಿರುವುದು ಇದೇ ಮೊದಲಲ್ಲ. ವಿಶ್ವದ ಅನೇಕ ಭಾಗಗಳಲ್ಲಿ ಎಲೆಕ್ಟ್ರಿಕ್ ಕಾರುಗಳು ಹಾಗೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಇದೇ ರೀತಿ ಸ್ಫೋಟಗೊಂಡಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಆಟೋ ಸ್ಪೋಟಗೊಂಡು ದುರಂತ ಅಂತ್ಯಕಂಡ ರಿಕ್ಷಾ ಚಾಲಕ

ಈ ಘಟನೆಯ ಹಿಂದೆ ಪಿತೂರಿ ನಡೆದಿದೆ ಎಂಬ ಅನುಮಾನಗಳಿದ್ದು, ಉತ್ತರ ಮಾಲ್ಟಾದ ಬಿಜೆಪಿ ಸಂಸದ ಕಾಗನ್ ಮುರ್ಮು ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಎನ್‌ಐಎಯನ್ನು ಒತ್ತಾಯಿಸಿದ್ದಾರೆ. ವರದಿಗಳ ಪ್ರಕಾರ, ಎನ್ಐಎ ಅಧಿಕಾರಿಗಳು ತನಿಖೆಯನ್ನು ಆರಂಭಿಸಿದ್ದಾರೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Electric rickshaw driver dies in blast in West Bengal. Read in Kannada.
Story first published: Saturday, July 4, 2020, 18:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X