ಜರ್ಮನಿಯಲ್ಲಿ ಉದ್ಘಾಟನೆಯಾಯಿತು ಎಲೆಕ್ಟ್ರಿಕ್ ಹೈವೇ

ಜರ್ಮನಿಯು ತನ್ನ ದೇಶದ ಹೆದ್ದಾರಿಯಲ್ಲಿ ಚಲಿಸುವ ಎಲೆಕ್ಟ್ರಿಕ್ ಟ್ರಕ್‍‍ಗಳಿಗಾಗಿ ಒವರ್‍‍ಹೆಡ್ ಎಲೆಕ್ಟ್ರಿಕ್ ಕೇಬಲ್‍‍ಗಳನ್ನು ಅಳವಡಿಸಿದೆ. ಈ ಕೇಬಲ್‍‍ಗಳಿಂದಾಗಿ ಟ್ರಕ್‍‍ಗಳು ಚಲಿಸುತ್ತಾ ಇರುವಾಗಲೇ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಈ ಯೋಜನೆಯನ್ನು 10 ಕಿ.ಮೀ ನ ಫ್ರ್ರಾಂಕ್‍‍ಫರ್ಟ್ ಏರ್‍‍ಪೋರ್ಟ್ ಮತ್ತು ಹತ್ತಿರದಲ್ಲಿರುವ ಇಂಡಸ್ಟ್ರಿಯಲ್ ಏರಿಯಾದ ಹೈವೇಯಲ್ಲಿ ಇತ್ತೀಚಿಗೆ ಉದ್ಘಾಟಿಸಲಾಯಿತು.

ಎಲೆಕ್ಟ್ರಿಕ್ ಟ್ರಕ್‍‍ಗಳು ತಮ್ಮ ಟಾಪ್‍‍ನ ಮೇಲಿರುವ ಪ್ಯಾಂಟೋಗ್ರಾಫ್ ಮೌಂಟ್ ಅನ್ನು ಎತ್ತರಿಸಿ, 90 ಕಿ.ಮೀ ವೇಗದಲ್ಲಿ ಸಾಗುತ್ತಿರುವಾಗಲೂ ತಮ್ಮ ಟ್ರಕ್‍‍ನ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಆಟೊಮೋಬೈಲ್ ಇಂಡಸ್ಟ್ರಿಯನ್ನು ಆಳಲಿದ್ದು, ಇದರಿಂದ ಟ್ರಕ್‍‍ಗಳು ಕೂಡ ಹೊರತಾಗಿಲ್ಲ. ಡೀಸೆಲ್ ಮತ್ತು ಸಿ‍ಎಸ್‍‍ಜಿ ಅಳವಡಿಸಿಕೊಂಡಿರುವ ಟ್ರಕ್‍‍ಗಳು ದೊಡ್ಡದಾದ ಎಂಜಿನ್‍‍ಗಳನ್ನು ಹೊಂದಿವೆ.

ಜರ್ಮನಿಯಲ್ಲಿ ಉದ್ಘಾಟನೆಯಾಯಿತು ಎಲೆಕ್ಟ್ರಿಕ್ ಹೈವೇ

ಒಂದು ಟ್ರಕ್ ಹಲವು ಕಾರುಗಳು ಉಂಟು ಮಾಡುವ ಮಾಲಿನ್ಯಕ್ಕಿಂತ ಹೆಚ್ಚು ಮಾಲಿನ್ಯವನ್ನುಂಟು ಮಾಡುತ್ತದೆ. ಇವುಗಳಿಗೆ ಪರಿಹಾರವೆಂದರೆ ಎಲೆಕ್ಟ್ರಿಕ್ ಟ್ರಕ್‍‍ಗಳು. ಆದರೆ ಬ್ಯಾಟರಿ ಫುಲ್ ಚಾರ್ಜ್ ಆದ ನಂತರ ಟ್ರಕ್‍‍ಗಳು ಎಷ್ಟು ದೂರದವರೆಗೆ ಕ್ರಮಿಸುತ್ತವೆ ಎಂಬ ಪ್ರಶ್ನೆ ಕಾಡುತ್ತದೆ.

ಜರ್ಮನಿಯಲ್ಲಿ ಉದ್ಘಾಟನೆಯಾಯಿತು ಎಲೆಕ್ಟ್ರಿಕ್ ಹೈವೇ

ಸಾಮಾನ್ಯವಾಗಿ ಟ್ರಕ್‍‍ಗಳು ಒಂದು ದಿನಕ್ಕೆ ನೂರಾರು ಕಿ.ಮೀ ದೂರ ಕ್ರಮಿಸುತ್ತವೆ, ಆದ ಕಾರಣ ಬಹಳ ಹೆಚ್ಚಿನ ದೂರದವರೆಗೆ ಬ್ಯಾಟರಿ ಚಾರ್ಜ್ ಆಗಿರುವುದು ಅವಶ್ಯಕವಾಗಿದೆ. ಟ್ರಕ್‍‍ಗಳನ್ನು ಚಲಿಸುತ್ತಿರುವಾಗಲೇ ಚಾರ್ಜ್ ಮಾಡುವುದರಿಂದ ಅನುಕೂಲವಾಗಲಿದೆ.

ಜರ್ಮನಿಯಲ್ಲಿ ಉದ್ಘಾಟನೆಯಾಯಿತು ಎಲೆಕ್ಟ್ರಿಕ್ ಹೈವೇ

ಟೆಸ್ಲಾ ಮತ್ತು ವೊಲ್ವೋ ಕಂಪನಿಗಳು ತಾವು ತಯಾರಿಸುತ್ತಿರುವ ಟ್ರಕ್‍‍ಗಳಲ್ಲಿ ಈ ಮಾದರಿಯನ್ನೇ ಅಳವಡಿಸುತ್ತಿವೆ. ಈ ಟ್ರಕ್‍‍ಗಳು ರಸ್ತೆಗಿಳಿದ ನಂತರ ಜರ್ಮನಿಯಲ್ಲಿ ಉತ್ತಮವಾದ ಚಾರ್ಜಿಂಗ್ ಆಯ್ಕೆಗಳಿರಲಿವೆ. ಒವರ್‍‍ಹೆಡ್‍‍ನಲ್ಲಿ ಎಲೆಕ್ಟ್ರಿಕ್ ಕೇಬಲ್‍‍ಗಳನ್ನು ಅಳವಡಿಸಿ ಚಲಿಸುತ್ತಿರುವ ವಾಹನವನ್ನು ಚಾರ್ಜ್ ಮಾಡುವುದು ಉತ್ತಮ ಯೋಜನೆಯಾಗಿದೆ. ಈ ವಿಧಾನದಲ್ಲಿ ಚಾರ್ಜ್ ಮಾಡಲು, ಟ್ರಕ್‍‍ಗಳ ಮೇಲೆ ಪ್ಯಾಂಟೊಗ್ರಾಫ್ ಅಳವಡಿಸಿರಬೇಕಾಗುತ್ತದೆ.

ಜರ್ಮನಿಯಲ್ಲಿ ಉದ್ಘಾಟನೆಯಾಯಿತು ಎಲೆಕ್ಟ್ರಿಕ್ ಹೈವೇ

ಹಿಸನ್ ವರದಿಗಳ ಪ್ರಕಾರ, ಜರ್ಮನಿಯ ಸರ್ಕಾರವು ಪ್ಯಾಂಟೊಗ್ರಾಫ್ ಹೊಂದಿರುವ ಟ್ರಕ್‍‍ಗಳ ಅಭಿವೃದ್ದಿಗಾಗಿ ಬಹಳಷ್ಟು ಹೂಡಿಕೆ ಮಾಡಿದೆ. ಈಗ ಹೈವೇನಲ್ಲಿ ಉದ್ಘಾಟಿಸಲಾಗಿರುವ ಎಲೆಕ್ಟ್ರಿಕ್ ಅನ್ನು ಜರ್ಮನಿಯ ದೈತ್ಯ ಟೆಕ್ ಕಂಪನಿಯಾದ ಸೀಮನ್ಸ್ ಎ‍‍ಜಿ ಅಭಿವೃದ್ದಿಪಡಿಸಿದೆ.

ಜರ್ಮನಿಯಲ್ಲಿ ಉದ್ಘಾಟನೆಯಾಯಿತು ಎಲೆಕ್ಟ್ರಿಕ್ ಹೈವೇ

ಈ ಪ್ಯಾಂಟೊಗ್ರಾಫ್ ವ್ಯವಸ್ಥೆಯು ಭಾರತದಲ್ಲಿರುವ ಲೊಕೊಮೊಟಿವ್‍‍ಗಳ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಎಲೆಕ್ಟ್ರಿಕ್ ಟ್ರಕ್‍‍ಗಳ ವಿಷಯದಲ್ಲಿ ಪೂರ್ತಿಯಾಗಿ ಎಲೆಕ್ಟ್ರಿಕ್ ಮೋಟಾರ್ ಅನ್ನು ಚಾರ್ಜ್ ಮಾಡುವ ಬದಲು ಬ್ಯಾಟರಿಯನ್ನು ಮಾತ್ರವೇ ಚಾರ್ಜ್ ಮಾಡುತ್ತದೆ.

MOST READ: ಭಾರತಕ್ಕೂ ಕಾಲಿಟ್ಟ ಮಿನಿ ಜಾನ್ ಕೂಪರ್ ಕಾರು

ಜರ್ಮನಿಯಲ್ಲಿ ಉದ್ಘಾಟನೆಯಾಯಿತು ಎಲೆಕ್ಟ್ರಿಕ್ ಹೈವೇ

ಫ್ರಾಂಕ್‍‍ಫರ್ಟ್‍‍ನಲ್ಲಿರುವ ಅಳವಡಿಸಲಾಗಿರುವ ಸಿಸ್ಟಮ್ ಈ ರೀತಿಯಲ್ಲಿರುವ ಮೊದಲ ಯೋಜನೆಯಾಗಿದೆ. ಜರ್ಮನಿಯು ಮುಂಬರುವ ದಿನಗಳಲ್ಲಿ ಇನ್ನೂ ಎರಡು ಹೈವೇಗಳಲ್ಲಿ ಈ ರೀತಿಯ ಎಲೆಕ್ಟ್ರಿಕ್ ಕೇಬಲ್‍‍ಗಳನ್ನು ಅಳವಡಿಸುವ ಯೋಜನೆಯಲ್ಲಿದೆ. ಈಗ ಉದ್ಘಾಟಿಸಲಾಗಿರುವ ಕೇಬಲ್‍‍‍ಗೆ ಸಿಗುವ ಪ್ರತಿಕ್ರಿಯೆಯನ್ನು ನೋಡಿ, ಮತ್ತಷ್ಟು ಕೇಬಲ್‍‍ಗಳನ್ನು ಹೈವೇಗಳಲ್ಲಿ ಅಳವಡಿಸುವ ನಿರೀಕ್ಷೆಯಿದೆ.

ಜರ್ಮನಿಯಲ್ಲಿ ಉದ್ಘಾಟನೆಯಾಯಿತು ಎಲೆಕ್ಟ್ರಿಕ್ ಹೈವೇ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಈ ರೀತಿಯ ಟೆಕ್ನಾಲಜಿಯು ಉತ್ತಮವಾದ ಯೋಜನೆಯಾಗಿದ್ದು, ಬಹುತೇಕ ಭಾರತೀಯರು ಸಹ ಈ ರೀತಿಯ ಯೋಜನೆಯನ್ನು ಇಲ್ಲಿಯೂ ಸಹ ಅಳವಡಿಸುವಂತೆ ಭಾರತ ಸರ್ಕಾರವನ್ನು ಒತ್ತಾಯಿಸುವ ಸಾಧ್ಯತೆಗಳಿವೆ. ಆದರೆ ಈ ರೀತಿಯ ಮಾದರಿಯು ಭಾರತಕ್ಕೆ ಬಂದಲ್ಲಿ ಬಹುಬಗೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಎಲೆಕ್ಟ್ರಿಕ್ ಟ್ರಕ್‍‍ಗಳು ಭಾರತೀಯ ರಸ್ತೆಗಳಲ್ಲಿ ತಲುಪಲು ತುಂಬಾ ಸಮಯ ತಗುಲುತ್ತದೆ.

Most Read Articles

Kannada
English summary
Germany Opens Electrified Highways To Charge e-Trucks On The Move! - Read in kannada
Story first published: Friday, May 10, 2019, 9:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X