ಐಷಾರಾಮಿ ಮನೆ ಮಾರಾಟಕ್ಕೆ ಮುಂದಾದ ಟೆಸ್ಲಾ ಕಂಪನಿ ಸಿಇಒ

ವಿಶ್ವದ ಅತಿ ದೊಡ್ಡ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಟೆಸ್ಲಾ ಕಂಪನಿಯ ಸಂಸ್ಥಾಪಕ ಎಲಾನ್ ಮಸ್ಕ್ ತಾವು ವಾಸವಿದ್ದ ಕೊನೆಯ ಮನೆಯನ್ನು ಮಾರಾಟ ಮಾಡುತ್ತಿದ್ದಾರೆ. ಎಲಾನ್ ಮಸ್ಕ್'ರವರು ಅಮೆರಿಕಾದಲ್ಲಿ ಹಲವು ಐಷಾರಾಮಿ ಬಂಗಲೆಗಳನ್ನು ಹೊಂದಿದ್ದಾರೆ.

ಐಷಾರಾಮಿ ಮನೆ ಮಾರಾಟಕ್ಕೆ ಮುಂದಾದ ಟೆಸ್ಲಾ ಕಂಪನಿ ಸಿಇಒ

ಈ ಮನೆಯ ಅಂದಾಜು ಮೌಲ್ಯ 37.5 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ.275 ಕೋಟಿಗಳಾಗುತ್ತದೆ. ಎಲಾನ್ ಮಸ್ಕ್ ತಮ್ಮ ಎಲ್ಲಾ ವಸ್ತುಗಳನ್ನು ಮಾರಾಟ ಮಾಡುವುದಾಗಿ ಕಳೆದ ವರ್ಷ ಟ್ವಿಟರ್ 'ನಲ್ಲಿ ಪೋಸ್ಟ್ ಮಾಡಿದ್ದರು.

ಐಷಾರಾಮಿ ಮನೆ ಮಾರಾಟಕ್ಕೆ ಮುಂದಾದ ಟೆಸ್ಲಾ ಕಂಪನಿ ಸಿಇಒ

ಅದರಂತೆ ಟೆಸ್ಲಾ ಸಿಇಒ ತಮ್ಮ ಎಲ್ಲಾ ಐಷಾರಾಮಿ ಮನೆಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಈಗ ಎಲಾನ್ ಮಸ್ಕ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ 47 ಎಕರೆಯಲ್ಲಿರುವ 16,000 ಚದರ ಅಡಿ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

ಐಷಾರಾಮಿ ಮನೆ ಮಾರಾಟಕ್ಕೆ ಮುಂದಾದ ಟೆಸ್ಲಾ ಕಂಪನಿ ಸಿಇಒ

10 ರೂಂ, 10 ಬಾತ್ ರೂಂಗಳನ್ನು ಹೊಂದಿರುವ ಈ ಐಷಾರಾಮಿ ಮನೆಯಲ್ಲಿ ಬಾಲ್ ರೂಂ, ಡೈನಿಂಗ್ ಹಾಲ್, ಈಜುಕೊಳ ಹಾಗೂ ವಾಹನ ನಿಲುಗಡೆಗಾಗಿ ಗ್ಯಾರೇಜ್'ಗಳಿವೆ. ಎಲಾನ್ ಮಸ್ಕ್ ಈ ಮನೆಯನ್ನು 2017ರಲ್ಲಿ 23.3 ಮಿಲಿಯನ್ ಡಾಲರ್ ನೀಡಿ ಖರೀದಿಸಿದ್ದರು.

ಐಷಾರಾಮಿ ಮನೆ ಮಾರಾಟಕ್ಕೆ ಮುಂದಾದ ಟೆಸ್ಲಾ ಕಂಪನಿ ಸಿಇಒ

ಎಲಾನ್ ಮಸ್ಕ್ ತಮ್ಮ ಸ್ವಂತ ಬಳಕೆಗಿಂತ ಹೊರಾಂಗಣ ಬಳಕೆಗಾಗಿ ಈ ಮನೆಯನ್ನು ಖರೀದಿಸಿದ್ದರು. ಈ ಐಷಾರಾಮಿ ಮನೆಯನ್ನು ಮಾರಾಟ ಮಾಡುವ ಬಗ್ಗೆ ಟ್ವಿಟರ್ ಪೋಸ್ಟ್ ಮೂಲಕ ಮಾಹಿತಿ ನೀಡಿರುವ ಎಲಾನ್ ಮಸ್ಕ್ ಈ ದೊಡ್ಡ ಜಾಗವನ್ನು ದೊಡ್ಡ ಕುಟುಂಬ ಖರೀದಿಸಿ ನೆಲೆಸಿದರೆ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ.

ಐಷಾರಾಮಿ ಮನೆ ಮಾರಾಟಕ್ಕೆ ಮುಂದಾದ ಟೆಸ್ಲಾ ಕಂಪನಿ ಸಿಇಒ

ಈಗ ಎಲಾನ್ ಮಸ್ಕ್ ಟೆಕ್ಸಾಸ್‌ನ ತನ್ನ ಬಾಹ್ಯಾಕಾಶ ಪರಿಶೋಧನಾ ಕಾರ್ಯಾಗಾರದ ಬಳಿ ವಾಸಿಸುತ್ತಿದ್ದಾರೆ. ಅವರು ಕಳೆದ ವರ್ಷದಿಂದ ರಾಕೆಟ್ ಕಾರ್ಖಾನೆಗೆ 50,000 ಡಾಲರ್ ಬಾಡಿಗೆ ನೀಡುತ್ತಿದ್ದಾರೆ.

ಐಷಾರಾಮಿ ಮನೆ ಮಾರಾಟಕ್ಕೆ ಮುಂದಾದ ಟೆಸ್ಲಾ ಕಂಪನಿ ಸಿಇಒ

ಎಲಾನ್ ಮಸ್ಕ್ 2020ರಿಂದ ತಮ್ಮ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಎಲಾನ್ ಮಸ್ಕ್ ಲಾಸ್ ಏಂಜಲೀಸ್'ನಲ್ಲಿದ್ದ 62.5 ಮಿಲಿಯನ್ ಡಾಲರ್ ಮೌಲ್ಯದ ನಾಲ್ಕು ಆಸ್ತಿಗಳನ್ನು ಮಾರಾಟ ಮಾಡಿದ್ದಾರೆ.

ಐಷಾರಾಮಿ ಮನೆ ಮಾರಾಟಕ್ಕೆ ಮುಂದಾದ ಟೆಸ್ಲಾ ಕಂಪನಿ ಸಿಇಒ

ಈ ಮನೆಗಳಲ್ಲಿ ಒಂದನ್ನು ಹಾಲಿವುಡ್ ನಟ ಜೀನ್ ವೈಲ್ಡರ್ ಖರೀದಿಸಿದ್ದಾರೆ. ಈ ಮನೆಯನ್ನು 1971ರ ಅಮೆರಿಕನ್ ಸಿನಿಮಾದಲ್ಲಿ ತೋರಿಸಲಾಗಿತ್ತು. ಬ್ರಿಟನ್ ಮಾಧ್ಯಮಗಳ ಪ್ರಕಾರ, ಮಸ್ಕ್ ತಮ್ಮ ಸಂಪತ್ತಿನ ಕುರಿತು ಎದುರಾಗಿರುವ ಟೀಕೆಗಳನ್ನು ಕಡಿಮೆ ಮಾಡಲು ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

Most Read Articles

Kannada
English summary
Elon Musk to sell his last luxury house. Read in Kannada.
Story first published: Wednesday, June 16, 2021, 13:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X