ಕಡಿಮೆ ಇಂಧನದೊಂದಿಗೆ ಚಲಿಸುವ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ನಮ್ಮಲ್ಲಿ ಹಲವರಿಗೆ ಕಡಿಮೆ ಇಂಧನದಿಂದ ವಾಹನ ಚಾಲನೆ ಮಾಡುವ ಅಭ್ಯಾಸವಿದೆ. ಇದಕ್ಕೆ ನಾನಾ ಕಾರಣಗಳಿವೆ. ಮೊದಲ ಕಾರಣವೆಂದರೆ ಪೆಟ್ರೋಲ್, ಡೀಸೆಲ್ ಬೆಲೆಗಳು ಗಗನಕ್ಕೇರಿರುವುದು. ಬೆಲೆ ಹೆಚ್ಚಿರುವುದರಿಂದ ಎಷ್ಟು ಹಣವಿದೆಯೋ ಅಷ್ಟು ಹಣಕ್ಕೆ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ತುಂಬಿಸಲಾಗುತ್ತದೆ.

ಕಡಿಮೆ ಇಂಧನದೊಂದಿಗೆ ಚಲಿಸುವ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಕೆಲವೊಮ್ಮೆ ವಾಹನ ಸವಾರರು ಸಮಯದ ಕೊರತೆಯಿಂದಾಗಿ ಪೆಟ್ರೋಲ್, ಡೀಸೆಲ್ ತುಂಬಲು ಮರೆತು ಕಡಿಮೆ ಇಂಧನದೊಂದಿಗೆ ಪ್ರಯಾಣವನ್ನು ಮುಂದುವರಿಸುತ್ತಾರೆ. ಆದರೆ ಕಡಿಮೆ ಇಂಧನ ಹೊಂದಿರುವ ಕಾರ್ ಅನ್ನು ಚಾಲನೆ ಮಾಡಬಾರದು ಎಂಬುದು ಸತ್ಯ. ನಿರಂತರವಾಗಿ ಕಡಿಮೆ ಇಂಧನದೊಂದಿಗೆ ಕಾರ್ ಅನ್ನು ಚಾಲನೆ ಮಾಡುತ್ತಿದ್ದರೆ ಕಾರಿನ ವಿವಿಧ ಭಾಗಗಳು ಹಾನಿಗೊಳಗಾಗುವ ಸಾಧ್ಯತೆಗಳಿರುತ್ತವೆ.

ಕಡಿಮೆ ಇಂಧನದೊಂದಿಗೆ ಚಲಿಸುವ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಈ ಹಾನಿಯನ್ನು ಸರಿ ಪಡಿಸಲು ದುಬಾರಿ ಮೊತ್ತವನ್ನು ವ್ಯಯಿಸ ಬೇಕಾಗುತ್ತದೆ. ಈ ಅಂಶಗಳನ್ನು ಗಮನಿಸಿರುವ ಸರ್ಕಾರವು ಕಡಿಮೆ ಇಂಧನವಿದ್ದರೆ ಕಾರ್ ಅನ್ನುಚಲಾಯಿಸದಂತೆ ಆದೇಶಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಹೊಸ ಕಾನೂನನ್ನು ಜಾರಿಗೆ ತರಲಾಗುವುದು. ಈ ಕಾನೂನನ್ನು ಉಲ್ಲಂಘಿಸಿದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.

ಕಡಿಮೆ ಇಂಧನದೊಂದಿಗೆ ಚಲಿಸುವ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲಿ ವಾಹನಗಳಿಗೆ ಹೆಚ್ಚು ಇಂಧನ ತುಂಬಿಸುವುದು ಹೇಗೆ ಎಂಬ ಪ್ರಶ್ನೆ ವಾಹನ ಸವಾರರನ್ನು ಕಾಡಬಹುದು. ಅಂದ ಹಾಗೆ ಈ ಕಾನೂನು ಜಾರಿಗೆ ಬರುತ್ತಿರುವುದು ಭಾರತದಲ್ಲಲ್ಲ. ಬದಲಿಗೆ ಇಂಗ್ಲೆಂಡಿನಲ್ಲಿ. ಇಂಗ್ಲೆಂಡ್ ಸರ್ಕಾರವು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುತ್ತಿದೆ. ಕಾರುಗಳಲ್ಲಿ ಇಂಧನ ಕಡಿಮೆಯಾದರೆ ಡ್ಯಾಶ್‌ಬೋರ್ಡ್‌ನಲ್ಲಿರುವ ಅಲರ್ಟ್ ಲೈಟ್ ಆನ್ ಆಗುತ್ತದೆ.

ಕಡಿಮೆ ಇಂಧನದೊಂದಿಗೆ ಚಲಿಸುವ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಬಹುತೇಕ ಕಾರುಗಳು ಈ ಫೀಚರ್ ಅನ್ನು ಹೊಂದಿವೆ. ಈ ಲೈಟ್ ಆನ್ ಆದ ನಂತರ 30 ಕಿ.ಮೀಗಳಷ್ಟು ದೂರ ಪ್ರಯಾಣಿಸಬಹುದು. ಆದರೆ ಕಾರುಗಳ ಆಧಾರದ ಮೇಲೆ ಕಿ.ಮೀಗಳ ಸಂಖ್ಯೆ ಹೆಚ್ಚು ಕಡಿಮೆಯಾಗುತ್ತದೆ. ಈ ಅಲರ್ಟ್ ಲೈಟ್ ಆನ್ ಆಗಿದ್ದರೂ ಸಹ, ಕೆಲವರು ಅದನ್ನು ಲೆಕ್ಕಿಸದೆ ಪ್ರಯಾಣ ಮುಂದುವರಿಸುತ್ತಾರೆ. ಇದರಿಂದ ಕೆಲವೊಮ್ಮೆ ಕಾರು ಮಧ್ಯ ದಾರಿಯಲ್ಲಿ ನಿಲ್ಲುತ್ತದೆ.

ಕಡಿಮೆ ಇಂಧನದೊಂದಿಗೆ ಚಲಿಸುವ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಇದು ಕಾರಿನಲ್ಲಿ ಪ್ರಯಾಣಿಸುವವರ ಸಮಯವನ್ನು ವ್ಯರ್ಥ ಮಾಡುವುದರ ಜೊತೆಗೆ ಅನಗತ್ಯ ಕಿರಿ ಕಿರಿಯನ್ನುಂಟು ಮಾಡುತ್ತದೆ. ಇದರ ಜೊತೆಗೆ ಕಾರು ರಸ್ತೆ ಮಧ್ಯದಲ್ಲಿ ನಿಲ್ಲುವುದರಿಂದ ಆ ಪ್ರದೇಶದಲ್ಲಿ ಅನಗತ್ಯ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ಇತರ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆಗಳು ಉಂಟಾಗುತ್ತವೆ. ಕೆಲವೊಮ್ಮೆ ಕಾರಿನಲ್ಲಿ ಇಂಧನ ಖಾಲಿಯಾದ ನಂತರ ಅಪಘಾತವಾಗುವ ಸಾಧ್ಯತೆಗಳೂ ಇರುತ್ತವೆ.

ಕಡಿಮೆ ಇಂಧನದೊಂದಿಗೆ ಚಲಿಸುವ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಈ ಅಪಘಾತಗಳಿಂದ ಗಂಭೀರವಾದ ಗಾಯಗಳು ಉಂಟಾಗಬಹುದು ಅಥವಾ ಪ್ರಾಣ ಹಾನಿಯೂ ಸಂಭವಿಸ ಬಹುದು. ಇವುಗಳನ್ನು ಗಮನದಲ್ಲಿಟ್ಟುಕೊಂಡು ಇಂಗ್ಲೆಂಡ್ ಸರ್ಕಾರವು ಹೊಸ ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ. ವರದಿಗಳ ಪ್ರಕಾರ, ಈ ಹೊಸ ಕಾನೂನು ಶೀಘ್ರದಲ್ಲಿಯೇ ಜಾರಿಗೆ ಬರಲಿದೆ. ಈ ಕಾನೂನು ಜಾರಿಗೆ ಬಂದ ನಂತರ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುವುದು.

ಕಡಿಮೆ ಇಂಧನದೊಂದಿಗೆ ಚಲಿಸುವ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ವರದಿಗಳ ಪ್ರಕಾರ, ಭಾರತೀಯ ಕರೆನ್ಸಿ ಮೌಲ್ಯದಲ್ಲಿ ಸುಮಾರು 10 ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸುವ ಸಾಧ್ಯತೆಗಳಿವೆ. ಜೊತೆಗೆ ನಿಯಮಗಳನ್ನು ಉಲ್ಲಂಘಿಸುವ ವ್ಯಕ್ತಿಯ ಚಾಲನಾ ಪರವಾನಗಿಯಲ್ಲಿ ಅನರ್ಹತೆ ಅಂಕಗಳನ್ನು ಸೇರಿಸಲಾಗುವುದು. ಕಾರಿನ ಇಂಧನ ಖಾಲಿಯಾದ ಕಾರಣಕ್ಕೆ ರಸ್ತೆ ಅಪಘಾತ ಸಂಭವಿಸಿದಲ್ಲಿ ದಂಡದ ಪ್ರಮಾಣವು ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಕಡಿಮೆ ಇಂಧನದೊಂದಿಗೆ ಚಲಿಸುವ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಹೊಸ ಕಾನೂನು ಜಾರಿಗೆ ಬಂದ ನಂತರ ರಸ್ತೆ ಮಧ್ಯದಲ್ಲಿ ಇಂಧನ ಖಾಲಿಯಾದ ಕಾರಣಕ್ಕೆ ವಾಹನಗಳು ನಿಲ್ಲುವುದಿಲ್ಲವೆಂದು ಆಶಿಸಲಾಗಿದೆ. ಇಂಗ್ಲೆಂಡ್ ಸರ್ಕಾರವುಜಾರಿಗೆ ತರಲು ನಿರ್ಧರಿಸಿರುವ ಈ ಹೊಸ ಕಾನೂನು ಎಲ್ಲರ ಗಮನ ಸೆಳೆಯುತ್ತಿದೆ. ಕಾನೂನು ಜಾರಿಗೆ ಬಂದ ನಂತರ ಅದರ ಸಾಧಕ ಭಾದಕಗಳ ಬಗ್ಗೆ ತಿಳಿಯಲಿದೆ. ಈ ಕಾನೂನು ಜಾರಿಗೆ ಬಂದ ಅನಗತ್ಯ ಟ್ರಾಫಿಕ್ ಜಾಮ್‌ ಉಂಟಾಗುವುದನ್ನು ತಪ್ಪಲಿದೆ.

ಕಡಿಮೆ ಇಂಧನದೊಂದಿಗೆ ಚಲಿಸುವ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ದೆಹಲಿ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ದೆಹಲಿ ಸಂಚಾರ ಪೊಲೀಸರು ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುವ 100 ಕೆಟ್ಟ ಚಾಲಕರ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ. ದೆಹಲಿಯ ವಿಶೇಷ ಸಂಚಾರ ಆಯುಕ್ತ ಮುಕ್ತೇಶ್ ಚಂದ್ರರವರ ಪ್ರಕಾರ ಸಾರ್ವಜನಿಕ ರಸ್ತೆಯಲ್ಲಿ ತಪ್ಪು ಚಾಲನೆ ಮಾಡುವ 100 ಜನರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಪೊಲೀಸರು ಈ ರೀತಿಯ ಪಟ್ಟಿ ಸಿದ್ಧಪಡಿಸುತ್ತಿರುವುದು ಇದೇ ಮೊದಲು.

ಕಡಿಮೆ ಇಂಧನದೊಂದಿಗೆ ಚಲಿಸುವ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಸಿಗ್ನಲ್ ಜಂಪ್, ಅತಿ ವೇಗದ ಚಾಲನೆ, ಕುಡಿದು ವಾಹನ ಚಾಲನೆ ಮಾಡುವುದು, ಅಪಾಯಕಾರಿ ಚಾಲನೆ ಮಾಡುವುದು ಸೇರಿದಂತೆ ವಿವಿಧ ರೀತಿಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುವುದು. ವಾಹನ ಸವಾರರಿಗೆ ಅವರ ಚಾಲನಾ ಕೌಶಲ್ಯವು ತುಂಬಾ ಕಳಪೆಯಾಗಿದ್ದು, ಸುಧಾರಿಸಿ ಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸುವುದು ಈ ಪಟ್ಟಿಯನ್ನು ತಯಾರಿಸುವುದರ ಹಿಂದಿನ ಉದ್ದೇಶವಾಗಿದೆ.

ಕಡಿಮೆ ಇಂಧನದೊಂದಿಗೆ ಚಲಿಸುವ ವಾಹನಗಳಿಗೆ ಬೀಳಲಿದೆ ಭಾರೀ ಪ್ರಮಾಣದ ದಂಡ

ಈ ಬಗ್ಗೆ ಮಾತನಾಡಿರುವ ಮುಕ್ತೇಶ್ ಚಂದ್ರರವರು, ಕೆಟ್ಟ ಚಾಲನೆಯನ್ನು ವಾಹನ ಸವಾರರಿಗೆ ತೋರಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ವಾಹನ ಸವಾರರು ಪದೇ ಪದೇ ನಿಯಮಗಳನ್ನು ಉಲ್ಲಂಘಿಸುವುದರಿಂದ ತಮ್ಮನ್ನು, ತಮ್ಮ ಕುಟುಂಬದವರನ್ನು ಅಪಾಯಕ್ಕೆ ಸಂಕಷ್ಟಕ್ಕೆ ದೂಡುವುದರ ಜೊತೆಗೆ ರಸ್ತೆಯಲ್ಲಿ ಸಂಚರಿಸುವ ಇತರರಿಗೂ ಅಪಾಯಕಾರಿಯಾಗುತ್ತಾರೆ ಎಂದು ಹೇಳಿದರು.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
England government to make law against driving on low fuel details
Story first published: Monday, September 27, 2021, 19:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X