ಶೋಚನೀಯ ಸ್ಥಿತಿಯಲ್ಲಿ ಕಂಡುಬಂದ ರಾಷ್ಟ್ರಪತಿಗಳ ಆಂಬ್ಯುಲೆನ್ಸ್

ಅತ್ಯಾಧುನಿಕ ಆಂಬುಲೆನ್ಸ್‌ಗಳನ್ನು ಭಾರತದ ರಾಷ್ಟ್ರಪತಿಗಳ ಸೇವೆಗಾಗಿ ಬಳಸಲಾಗುತ್ತದೆ. ಈ ಆಂಬ್ಯುಲೆನ್ಸ್ ಗಳು ನಿರಂತರವಾಗಿ ಸೇವೆಯಲ್ಲಿರುತ್ತವೆ. ಈ ಆಧುನಿಕ ಆಂಬುಲೆನ್ಸ್‌ಗಳಿಗೂ ಮುನ್ನ 1990ರ ದಶಕದಲ್ಲಿ ಮರ್ಸಿಡಿಸ್ ಡಬ್ಲ್ಯು 124ಗಳನ್ನು ರಾಷ್ಟ್ರಪತಿಗಳ ಸೇವೆಗಾಗಿ ಬಳಸಲಾಗುತ್ತಿತ್ತು.

ಶೋಚನೀಯ ಸ್ಥಿತಿಯಲ್ಲಿ ಕಂಡುಬಂದ ರಾಷ್ಟ್ರಪತಿಗಳ ಆಂಬ್ಯುಲೆನ್ಸ್

ಸುಮಾರು ಎರಡು ದಶಕಗಳ ಕಾಲ ರಾಷ್ಟ್ರಪತಿ ಭವನದಲ್ಲಿದ್ದ ಮರ್ಸಿಡಿಸ್ ಡಬ್ಲ್ಯು 124 ಆಂಬ್ಯುಲೆನ್ಸ್ ಇತ್ತೀಚೆಗೆ ಕೇರಳದಲ್ಲಿ ಶೋಚನೀಯ ಸ್ಥಿತಿಯಲ್ಲಿ ಕಂಡುಬಂದಿದೆ. ಈಗ ಈ ಕಾರ್ ಅನ್ನು ದುರಸ್ತಿ ಪಡಿಸಲಾಗುತ್ತಿದ್ದು, ಹಿಂದಿನ ಸ್ಥಿತಿಗೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಮೂಲಗಳ ಪ್ರಕಾರ, 1988ರ ಮರ್ಸಿಡಿಸ್ ಡಬ್ಲ್ಯು 124 ಕ್ರ್ಯಾಂಕೆನ್‌ವಾಗನ್ ಭಾರತದಲ್ಲಿದ್ದ ಏಕೈಕ ಕಾರ್ ಆಗಿತ್ತು.

ಶೋಚನೀಯ ಸ್ಥಿತಿಯಲ್ಲಿ ಕಂಡುಬಂದ ರಾಷ್ಟ್ರಪತಿಗಳ ಆಂಬ್ಯುಲೆನ್ಸ್

ಇದನ್ನು 1990ರ ದಶಕದಲ್ಲಿ ರಾಷ್ಟ್ರಪತಿಗಳ ಬೆಂಗಾವಲು ಪಡೆಯಲ್ಲಿ ವೈದ್ಯಕೀಯ ಕಾರನ್ನಾಗಿ ಬಳಸಲಾಗುತ್ತಿತ್ತು. ಎರಡು ದಶಕಗಳ ನಂತರ ಇದರ ಬಳಕೆಯನ್ನು ತೆಗೆದುಹಾಕಲಾಯಿತು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಶೋಚನೀಯ ಸ್ಥಿತಿಯಲ್ಲಿ ಕಂಡುಬಂದ ರಾಷ್ಟ್ರಪತಿಗಳ ಆಂಬ್ಯುಲೆನ್ಸ್

ಮರ್ಸಿಡಿಸ್ ಡಬ್ಲ್ಯು 124 ಆಂಬ್ಯುಲೆನ್ಸ್, 1995ರಲ್ಲಿ ಪಿ.ವಿ.ನರಸಿಂಹ ರಾವ್ ರವರು ಪ್ರಧಾನ ಮಂತ್ರಿಗಳಾಗಿದ್ದಾಗ ಗಣರಾಜ್ಯೋತ್ಸವದ ಪೆರೇಡ್ ನಲ್ಲಿ ಕಾಣಿಸಿಕೊಂಡಿತ್ತು. ಅವರ ಅಧಿಕಾರಾವಧಿಯಲ್ಲಿ ಈ ವಾಹನವನ್ನು ಹೆಚ್ಚಾಗಿ ಕಾರನ್ನಾಗಿ ಬಳಸಲಾಗುತ್ತಿತ್ತು.

ಶೋಚನೀಯ ಸ್ಥಿತಿಯಲ್ಲಿ ಕಂಡುಬಂದ ರಾಷ್ಟ್ರಪತಿಗಳ ಆಂಬ್ಯುಲೆನ್ಸ್

ಮರ್ಸಿಡಿಸ್ ಡಬ್ಲ್ಯು 124, ಮರ್ಸಿಡಿಸ್ ಕಂಪನಿಯ ಹೆಚ್ಚು ಎಂಜಿನಿಯರಿಂಗ್, ಸುಲಭವಾದ ಮೆಕಾನಿಕಲ್ ಹಾಗೂ ಸರಳ ಎಲೆಕ್ಟ್ರಾನಿಕ್ ಗಳನ್ನು ಹೊಂದಿರುವ ಕಾರ್ ಆಗಿದೆ. ಈ ಕಾರ್ ಅನ್ನು 1985ರಲ್ಲಿ ಬಿಡುಗಡೆಗೊಳಿಸಲಾಯಿತು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಶೋಚನೀಯ ಸ್ಥಿತಿಯಲ್ಲಿ ಕಂಡುಬಂದ ರಾಷ್ಟ್ರಪತಿಗಳ ಆಂಬ್ಯುಲೆನ್ಸ್

ಭಾರತದಲ್ಲಿ ಈ ಕಾರ್ ಅನ್ನು ಮರ್ಸಿಡಿಸ್-ಟಾಟಾ ಕಂಪನಿಗಳು ಜಂಟಿ ಸಹಭಾಗಿತ್ವದಲ್ಲಿ ತಯಾರಿಸಿದ್ದವು. ಈ ಕಾರು ಇಂದಿಗೂ ಕಾರು ಪ್ರಿಯ ನೆಚ್ಚಿನ ಕಾರ್ ಆಗಿದೆ. ರಾಷ್ಟ್ರಪತಿಗಳ ಆಂಬ್ಯುಲೆನ್ಸ್ ಜೊತೆಗೆ ಅವರ ಅಧಿಕೃತ ಕಾರ್ ಅನ್ನು ಸಹ ಅಪ್ ಗ್ರೇಡ್ ಮಾಡಲಾಗಿದೆ.

ಶೋಚನೀಯ ಸ್ಥಿತಿಯಲ್ಲಿ ಕಂಡುಬಂದ ರಾಷ್ಟ್ರಪತಿಗಳ ಆಂಬ್ಯುಲೆನ್ಸ್

ಭಾರತದ ರಾಷ್ಟ್ರಪತಿಗಳು ಸದ್ಯಕ್ಕೆ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಎಸ್ 600 ಪುಲ್ಮನ್ ಕಾರ್ ಅನ್ನು ಬಳಸುತ್ತಿದ್ದಾರೆ. ಕರೋನಾ ವೈರಸ್ ಕಾರಣದಿಂದಾಗಿ ಈ ವರ್ಷ ಖರೀದಿಸಬೇಕೆಂದಿದ್ದು ಕೊಂಡಿದ್ದ ಹೊಸ ಕಾರು ಯೋಜನೆಯನ್ನು ಮುಂದೂಡಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಶೋಚನೀಯ ಸ್ಥಿತಿಯಲ್ಲಿ ಕಂಡುಬಂದ ರಾಷ್ಟ್ರಪತಿಗಳ ಆಂಬ್ಯುಲೆನ್ಸ್

2021ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳು ಹೊಸ ಕಾರಿನೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಸದ್ಯ ರಾಷ್ಟ್ರಪತಿಗಳ ಬಳಿಯಿರುವ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಎಸ್ 600 ಕಾರ್ ಅನ್ನು 2018ರಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು. ಭಾರತದಲ್ಲಿ ಈ ಕಾರಿನ ಬೆಲೆ ರೂ.15 ಕೋಟಿಗಳಾಗಿದೆ.

ಮೂಲ: ಟೀಂ ಬಿಹೆಚ್ ಪಿ

Most Read Articles

Kannada
English summary
Ex Presidents Mercedes Benz Ambulance found in unclaimed condition in Kerala. Read in Kannada.
Story first published: Wednesday, July 1, 2020, 16:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X