ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್ ಎಸ್‍ಯುವಿ

ಪ್ರಸ್ತುತ ತಲೆಮಾರಿನ ಮಹೀಂದ್ರಾ ಥಾರ್ ಎಸ್‍ಯುವಿಯನ್ನು 2020ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಈ ಮಹೀಂದ್ರಾ ಥಾರ್ ಎಸ್‍ಯುವಿಯು ಕಡಿಮೆ ಅವಧಿಯಲ್ಲಿ ಹೆಚ್ಚಿನ ಜನರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ. ಈ ಜನಪ್ರಿಯ ಥಾರ್ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.

ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್

ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಥಾರ್ ಎಸ್‍ಯುವಿಯು ಬಿಡುಗಡೆಗಡೆಯಾದ ದಿನದಿಂದ ಅದೇ ರೀತಿಯ ಪ್ರಬಲ ಬೇಡಿಕೆಯನ್ನು ಹೊಂದಿದೆ. ಈ ಮಹೀಂದ್ರಾ ಥಾರ್ ಎಸ್‍ಯುವಿಯು ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಅತ್ಯುತ್ತಮ ಎಸ್‍ಯುವಿಯಾಗಿದೆ. ಅದಕ್ಕಾಗಿಯೇ ವಾಹನ ಉತ್ಸಾಹಿಗಳು ಒಂದನ್ನು ಖರೀದಿಸಲು ನಿರಂತರವಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಇದು ಕೆಲವು ಪ್ರಭಾವಶಾಲಿ ಸ್ಪೆಕ್ಸ್‌ಗಳನ್ನು ಹೊಂದಿರುವ ಆಫ್-ರೋಡರ್ ಮಾದರಿಯಾಗಿದೆ.

ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್

ಮಹೀಂದ್ರಾ ಥಾರ್ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಅತ್ಯಂತ ಕೈಗೆಟುಕುವ ಲ್ಯಾಡರ್-ಆನ್-ಫ್ರೇಮ್ 4X4 ಎಸ್‍ಯುವಿಯಾಗಿದೆ. ಅತ್ಯುನ್ನತ ಆಫ್-ರೋಡಿಂಗ್ ಸಾಮರ್ಥ್ಯಗಳು, ಪವರ್ ಫುಲ್ ಎಂಜಿನ್ ಆಯ್ಕೆಗಳು ಮತ್ತು ಪ್ರಾಯೋಗಿಕ ಕ್ಯಾಬಿನ್‌ಗೆ ಹೆಚ್ಚು ಜನಪ್ರಿಯವಾಗಿದೆ.

ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್

ಮಹೀಂದ್ರಾ ಥಾರ್ ದೇಶದ ಅತ್ಯಂತ ಜನಪ್ರಿಯ ಲೈಫ್ ಸ್ಟೈಲ್ ವಾಹನಗಳಲ್ಲಿ ಒಂದಾಗಿದೆ ಮತ್ತು ಕೆಲವು ಗ್ರಾಹಕರು ಈ ಎಸ್‍ಯುವಿಯನ್ನು ಮಾಡಿಫೈ ಮಾಡಲು ಆಯ್ಕೆ ಮಾಡಿಕೊಳ್ಳುತ್ತಾರೆ. ಗುರುಗ್ರಾಮ್ ಮೂಲದ ಬಿಂಬ್ರಾ 4X4 ಮಹೀಂದ್ರಾ ಥಾರ್ ಅನ್ನು ಮಾಡಿಫೈಗೊಳಿಸಿದ್ದಾರೆ.

ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್

ಆರಂಭಿಕರಿಗಾಗಿ, ಈ ಮಾಡಿಫೈ ಮಹೀಂದ್ರಾ ಥಾರ್ ಸಾಫ್ಟ್-ಟಾಪ್ ಮತ್ತು ಕೆಲವು ಇತರ ವಿಭಾಗದಲ್ಲಿ ಹಲವಾರು ಬದಲಾವಣೆಗಳನ್ನು ಹೊಂದಿದೆ. ಈ ಎಸ್‍ಯುವಿಯ ಮುಂಭಾಗದಲ್ಲಿ ಹೊಸ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಹೊಸ ಆಫ್-ರೋಡ್ ಬಂಪರ್ ಹಾಗೂ ಹೊಸ ಏಳು-ಸ್ಲ್ಯಾಟ್ ಗ್ರಿಲ್ ಅನ್ನು ಹೊಂದಿದೆ.

ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್

ಹೊಸ ಎಲ್ಇಡಿ ಹೆಡ್‌ಲೈಟ್‌ಗಳು ಸಂಯೋಜಿತ ಡ್ಯುಯಲ್-ಫಂಕ್ಷನ್ ಎಲ್ಇಡಿ DRL ಗಳನ್ನು ಸಹ ಪಡೆಯುತ್ತವೆ. ಬಿಂಬ್ರಾ 4X4 ಈ ಥಾರ್ ಅನ್ನು ಸರ್ಜ್ ಗ್ರೀನ್ ಶೇಡ್‌ನ ಫಿನಿಶಿಂಗ್ ಹೊಂದಿದೆ. ಇದು ದೃಶ್ಯ ಆಕರ್ಷಣೆಯನ್ನು ಇನ್ನಷ್ಟು ಸುಧಾರಿಸಲು ಸಹಾಯವಾಗಿದೆ,

ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್

ಹೆಚ್ಚುವರಿಯಾಗಿ, ಈ ಎಸ್‍ಯುವಿ ಹೊಸ ಎಲ್ಇಡಿ ಫಾಗ್ ಲ್ಯಾಂಪ್ ಗಳು ಮತ್ತು ಹೊಸ ಎಲ್ಇಡಿ ಫೆಂಡರ್ ಲ್ಯಾಂಪ್ ಗಳನ್ನು ಸಹ ಪಡೆಯುತ್ತದೆ. ಎಸ್‍ಯುವಿಯ ಬದಿಗಳಲ್ಲಿ ಈಗ 20-ಇಂಚಿನ ಅಲಾಯ್ ವ್ಹೀಲ್ ಗಳನ್ನು ಪಡೆಯುತ್ತದೆ. ಅಲಾಯ್ ವ್ಹೀಲ್ ಗಳೊಂದಿಗೆ ಆಫ್-ರೋಡ್ ಸ್ಪೆಕ್ ಟೈರ್‌ಗಳನ್ನು ಹೊಂದಿವೆ. ಇನ್ನು ಈ ಎಸ್‍ಯುವಿ ಆಫ್ಟರ್ ಮಾರ್ಕೆಟ್ LED ಟೈಲ್ ಲ್ಯಾಂಪ್‌ಗಳನ್ನು ಹೊಂದಿದೆ.

ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್

ಹಿಂಭಾಗದ ಬಂಪರ್ ಸ್ಟಾಕ್ ಆಗಿಯೇ ಉಳಿದಿದೆ. ಇನ್ನು ಮಾಡಿಫೈಗಳು ಹೊರಭಾಗಕ್ಕೆ ಸೀಮಿತವಾಗಿಲ್ಲ ಆದರೆ ನೀವು ನವೀಕರಣಗಳ ದೀರ್ಘ ಪಟ್ಟಿಯೊಂದಿಗೆ ಹೊಸ ಕ್ಯಾಬಿನ್ ಅನ್ನು ಸಹ ಪಡೆಯುತ್ತೀರಿ. ಅದರೊಂದಿಗೆ ಪ್ರಾರಂಭಿಸಲು, ಇದು ಈಗ ಹೊರಭಾಗದ ಬಣ್ಣಕ್ಕೆ ಹೊಂದಿಕೆಯಾಗುವ ಹೊಸ ಸೀಟ್ ಕವರ್‌ಗಳನ್ನು ಪಡೆಯುತ್ತದೆ.

ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್

ಮಾಡಿಫೈ ಮಹೀಂದ್ರಾ ಥಾರ್ ಎಸ್‍ಯುವಿಯಲ್ಲಿ ಇತರ ಸೇರ್ಪಡೆಗಳಲ್ಲಿ ಹೊಸ ಎಸಿ ವೆಂಟ್‌ಗಳು, ಹೊಸ ಮುಂಭಾಗದ ಆರ್ಮ್‌ರೆಸ್ಟ್ ಮತ್ತು ಹೊಸ ಲೆದರ್ ಹೊದಿಕೆ ಸೇರಿವೆ. ಕಾರಿನ ಮೆಕ್ಯಾನಿಕಲ್‌ಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ ಮತ್ತು ಈ ಮಾರ್ಪಡಿಸಿದ ಥಾರ್ ಸ್ಟಾಕ್ ಸೆಟಪ್ ಮತ್ತು ಅದೇ ಪವರ್ ಅಂಕಿಅಂಶಗಳನ್ನು ಹೊಂದಿದೆ.

ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್

ಮಹೀಂದ್ರಾ ಥಾರ್ ಎಸ್‍ಯುವಿಯು ಎರಡು ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿದೆ. ಇದರಲ್ಲಿ ಮೊದಲೈಗೆ 2.0 ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಆಗಿದೆ. ಈ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 2.2 ಲೀಟರ್ ಟರ್ಬೊ-ಡೀಸೆಲ್ ಎಂಜಿನ್ 130 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಎಂಜಿನ್ ಗಳೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್

ಗ್ಲೊಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 4 ಸ್ಟಾರ್ ಸೇಫ್ಚಿ ರೇಟಿಂಗ್ ಪಡೆದುಕೊಳ್ಳುವ ಮೂಲಕ ಸುರಕ್ಷಿತ ಕಾರು ಮಾದರಿಯಾಗಿ ಗುರುತಿಸಿಕೊಂಡ ನಂತರ ಹೊಸ ಥಾರ್ ಕಾರಿಗೆ ಮತ್ತಷ್ಟು ಬೇಡಿಕೆ ಪಡೆದುಕೊಂಡಿದೆ. ಈ ಎಸ್‍ಯುವಿಯ ವೈಟಿಂಗ್ ಪಿರೇಡ್ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ನಿರ್ಧಾರವಾಗಲಿದೆ. ಈ ಹೊಸ ಮಹೀಂದ್ರಾ ಥಾರ್ ಎಸ್‍ಯುವಿಯ ಒಳಭಾಗದಲ್ಲಿ ಆ್ಯಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯನ್ನು ಹೊಂದಿರುವ 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ,ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್ ಅನ್ನು ಒಳಗೊಂಡಿದೆ. ಥಾರ್ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಹಲವಾರು ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್

ಎರಡು ಎಂಜಿನ್ ಆಯ್ಕೆಗಳಲ್ಲೂ 4x4 ಡ್ರೈವ್ ಸಿಸ್ಟಂ, ಕ್ರೂಸ್ ಕಂಟ್ರೋಲ್, 255/65 18-ಇಂಚಿನ ಆಲ್ ಟೆರೆನ್ ಟೈರ್ಸ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಹಿಲ್ ಸ್ಟಾರ್ಟ್ ಅಸಿಸ್ಟ್, ರೋಲ್ ಓವರ್ ಮಿಟಿಗೆಷನ್, ತ್ರೀ ಪಾಯಿಂಟ್ ಸಿಲ್ಟ್ ಬೆಲ್ಟ್ ಮತ್ತು ರಿಯರ್ ವ್ಯೂ ಕ್ಯಾಮೆರಾವನ್ನು ಕೂಡ ಹೊಂದಿದೆ.

ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್

ಈ ಥಾರ್ ಎಸ್‍ಯುವಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

ರಗಡ್ ಲುಕ್‍ನಲ್ಲಿ ಮಾಡಿಫೈಗೊಂಡು ಮಿಂಚುತ್ತಿದೆ ಮಹೀಂದ್ರಾ ಥಾರ್

ಒಟ್ಟಾರೆಯಾಗಿ ಮಹೀಂದ್ರಾ ಥಾರ್ ಭಾರತೀಯ ಮಾರುಕಟ್ಟೆಯಲ್ಲಿ ಬಹುದೀರ್ಘ ಕಾಲದಿಂದ ಮಾರಾಟವಾಗುತ್ತಿರುವ ಜನಪ್ರಿಯ ಆಫ್-ರೋಡ್ ಎಸ್‍ಯುವಿ ಮಾದರಿಯಾಗಿದೆ. ಆಫ್-ರೋಡ್ ವಾಹನ ಎಂದಾಗ ಭಾರತೀಯರಿಗೆ ಮೊದಲಿಗೆ ಥಾರ್ ಎಸ್‍ಯುವಿಯು ಮನಸ್ಸಿಗೆ ಬರುತ್ತದೆ. ಅಷ್ಟು ಜನಪ್ರಿಯತೆಯನ್ನು ಹೊಂದಿರುವ ಆಫ್-ರೋಡರ್ ಕಿಂಗ್ ಆಗಿದೆ.

Most Read Articles

Kannada
English summary
Extensively modified mahindra thar soft top convertible suv details
Story first published: Saturday, September 10, 2022, 13:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X