Just In
- 52 min ago
ಫೋಕ್ಸ್ವ್ಯಾಗನ್ ಐಡಿ.4 ಜಿಟಿಎಕ್ಸ್ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಕಾರಿನ ಟೀಸರ್ ಬಿಡುಗಡೆ
- 53 min ago
ಕೇವಲ 48 ನಿಮಿಷಗಳಲ್ಲಿ ಸೋಲ್ಡ್ ಔಟ್ ಆದ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ಆರ್
- 2 hrs ago
ಹೆರ್ಮೆಸ್ 75 ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಕಬೀರಾ ಮೊಬಿಲಿಟಿ
- 3 hrs ago
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
Don't Miss!
- Movies
'ನೀವು ಬಸ್ ಡ್ರೈವರ್ ಮಗನೇ, ನಮ್ಮ ಮುಷ್ಕರ ಬೆಂಬಲಿಸಿ': ಯಶ್ಗೆ ಪತ್ರ ಬರೆದ ಸಾರಿಗೆ ನೌಕರರು?
- News
ಸರ್ಕಾರ v/s ಸಾರಿಗೆ ನೌಕರರು: 8ನೇ ದಿನಕ್ಕೆ ಕಾಲಿಟ್ಟ ಮುಷ್ಕರ
- Sports
ಸ್ವಿಗ್ಗಿಯಿಂದ ರೋಹಿತ್ ಶರ್ಮಾಗೆ ಅವಮಾನ ; ಕಿಡಿಕಾರಿದ ಫ್ಯಾನ್ಸ್
- Lifestyle
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೆ ಆಯುಸ್ಸು ಕಡಿಮೆಯಾಗುವುದು
- Education
NEET PG Admit Card 2021: ನೀಟ್ ಪಿಜಿ ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Finance
ಸುಮಾರು 5,550 ಕೋಟಿ ರು ಡಿವಿಡೆಂಡ್ ಘೋಷಿಸಿದ ಟಿಸಿಎಸ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದಿನೇ ದಿನೇ ಜನಪ್ರಿಯವಾಗುತ್ತಿರುವ ಆಂಡ್ರಾಯ್ಡ್ ಆಟೋದ ಬಗೆಗಿನ ವಿವರಗಳಿವು
ಈಗ ಮಾರಾಟವಾಗುತ್ತಿರುವ ಬಹುತೇಕ ಕಾರು ಹಾಗೂ ಕೆಲವು ಬೈಕ್‌ಗಳಲ್ಲಿ ಕನೆಕ್ಟೆಡ್ ಫೀಚರ್'ಗಳನ್ನು ನೀಡಲಾಗುತ್ತಿದೆ. ಈ ಕನೆಕ್ಟೆಡ್ ಫೀಚರ್'ಗಳಲ್ಲಿ ಪ್ರಮುಖವಾಗಿ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋಗಳು ಸೇರಿರುತ್ತವೆ.

ಈ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಎಂದರೇನು. ಅವುಗಳ ವಿಶೇಷತೆಗಳೇನು ಹಾಗೂ ಅವುಗಳಿಂದಾಗುವ ಪ್ರಯೋಜನಗಳೇನು ಎಂಬುದರ ಬಗ್ಗೆ ಹಲವರಿಗೆ ಕುತೂಹಲವಿರುತ್ತದೆ. ಅವುಗಳ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಈ ತಂತ್ರಜ್ಞಾನವು 2020ರ ಏಪ್ರಿಲ್ ವೇಳೆಗೆ ಭಾರತವೂ ಸೇರಿದಂತೆ ವಿಶ್ವದ 36 ದೇಶಗಳಲ್ಲಿ ಲಭ್ಯವಿತ್ತು. ಆಂಡ್ರಾಯ್ಡ್ ಆಟೋ ವಿಶಿಷ್ಟವಾದ ಫೀಚರ್ ಆಗಿದ್ದು, ಅದರಿಂದ ಹಲವಾರು ಪ್ರಯೋಜನಗಳಿವೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಆಂಡ್ರಾಯ್ಡ್ ಆಟೋ ಎಂದರೇನು?
ಆಂಡ್ರಾಯ್ಡ್ ಆಟೋ ಕಾರುಗಳ ಮನರಂಜನೆ ಹಾಗೂ ನ್ಯಾವಿಗೇಷನ್ ಹೆಡ್ ಯುನಿಟ್'ಗಳಲ್ಲಿ ಬಳಕೆಯಾಗುವ ಚಾಲನಾ ಸಹವರ್ತಿ ಆ್ಯಪ್ ಆಗಿದೆ. ಇದನ್ನು ಗೂಗಲ್ ಕಂಪನಿಯು ಅಭಿವೃದ್ಧಿಪಡಿಸಿದೆ.

ಈ ಆ್ಯಪ್ ಅನ್ನು ಆಂಡ್ರಾಯ್ಡ್ ಓಎಸ್ ಹೊಂದಿರುವ ಸ್ಮಾರ್ಟ್‌ಫೋನ್‌ನೊಂದಿಗೆ ಬಳಸಬಹುದು. ಈ ಫೀಚರ್ ಚಾಲಕನಿಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಿ, ಚಾಲಕನ ಚಾಲನಾ ತೊಂದರೆಯನ್ನು ಇಲ್ಲವಾಗಿಸುತ್ತದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ತಂತ್ರಜ್ಞಾನದಲ್ಲಿ ಫೋನ್‌ನಿಂದ ಸಂಗೀತ ಕೇಳಬಹುದು, ಕರೆಗಳನ್ನು ಮಾಡಬಹುದು, ಮೆಸೇಜ್'ಗಳನ್ನು ಕಳುಹಿಸಬಹುದು. ಜೊತೆಗೆ ಕಾರಿನ ಆಡಿಯೊ ಸಿಸ್ಟಂ ಅನ್ನು ಕಂಟ್ರೋಲ್ ಮಾಡಬಹುದು.

ಮುಂಬರುವ ದಿನಗಳಲ್ಲಿ ಈ ತಂತ್ರಜ್ಞಾನದಿಂದ ಸೆನ್ಸಾರ್ ಇನ್ ಪುಟ್, ಔಟ್ ಪುಟ್, ಫ್ಯೂಯಲ್ ಲೆವೆಲ್, ವ್ಹೀಲ್ ಸ್ಪೀಡ್, ಗುಣಮಟ್ಟದ ಕಾರು ಜಿಪಿಎಸ್ ಆಂಟೆನಾ, ಡೈರೆಕ್ಷನಲ್ ಸ್ಪೀಕರ್ ಸೇರಿದಂತೆ ವಾಹನದ ಡೇಟಾಗೆ ಸಂಬಂಧಿಸಿದ ಮಾಹಿತಿಗಳನ್ನು ನಿರೀಕ್ಷಿಸಬಹುದು.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಆಂಡ್ರಾಯ್ಡ್ ಆಟೋ ಹೇಗೆ ಕಾರ್ಯನಿರ್ವಹಿಸುತ್ತದೆ ?
ಆಂಡ್ರಾಯ್ಡ್ ಆಟೋ ಫೋನ್‌ನಿಂದ ಬಿತ್ತರಿಸುವ ಫಂಕ್ಷನ್ ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ ಫೋನ್‌ನ ಸಂಪೂರ್ಣ ಸ್ಕ್ರೀನ್ ಅನ್ನು ಅದರಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅದನ್ನು ಸ್ಕ್ರೀನ್ ಮಿರರಿಂಗ್ ಸಾಫ್ಟ್‌ವೇರ್ ಅಥವಾ ಹೆಚ್‌ಡಿಎಂಐ ಸ್ಕ್ರೀನ್ ಕನೆಕ್ಷನ್'ನಿಂದ ಮಾತ್ರ ಮಾಡಬಹುದು.

ಗೂಗಲ್ ನೌ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್ ಲೋಡ್ ಮಾಡಿಕೊಂಡು ಫೋನ್‌ನಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ನಂತರ ಯುಎಸ್‌ಬಿ ಕೇಬಲ್ ಮೂಲಕ ಫೋನ್ ಅನ್ನು ಕಾರಿನ ಸಿಸ್ಟಂ ಹೆಡ್‌ಗೆ ಕನೆಕ್ಟ್ ಮಾಡಬೇಕು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ನಂತರ ಡ್ಯಾಶ್ ಪರದೆಯಿಂದ ಆಂಡ್ರಾಯ್ಡ್ ಆಟೋ ಐಕಾನ್ ಬಟನ್ ಕ್ಲಿಕ್ ಮಾಡಬೇಕು. ನಂತರ ಕಾರಿನ ಡ್ಯಾಶ್‌ನಲ್ಲಿರುವ ಆಂಡ್ರಾಯ್ಡ್ ಆಟೋ ಸ್ಕ್ರೀನ್ ಒಪನ್ ಆಗುತ್ತದೆ. ಈ ಆ್ಯಪ್ ಟಚ್ ಪ್ಯಾನಲ್ ಹಾಗೂ ಕೀ (ಬಟನ್) ಆಧಾರಿತ ಹೆಡ್ ಯುನಿಟ್ ಸಿಸ್ಟಂ ಎರಡನ್ನೂ ಬೆಂಬಲಿಸುತ್ತದೆ.

ಆಂಡ್ರಾಯ್ಡ್ ಆಟೋದ ಫೀಚರ್ ಹಾಗೂ ಪ್ರಯೋಜನಗಳು
ಆಂಡ್ರಾಯ್ಡ್ ಆಟೋ, ಸ್ಮಾರ್ಟ್ ಫೋನ್ ಅನ್ನು ಕಾರಿನ ಇನ್-ಡ್ಯಾಶ್ ಎಂಟರ್'ಟೇನ್'ಮೆಂಟ್ ಸಿಸ್ಟಂಗೆ ಕನೆಕ್ಟ್ ಮಾಡುತ್ತದೆ. ಇದರಿಂದ ಗೂಗಲ್ ಮ್ಯಾಪ್, ಗೂಗಲ್ ಪ್ಲೇ ಮ್ಯೂಸಿಕ್, ಸ್ಪಾಟಿಫೈ ಮುಂತಾದ ಆಂಡ್ರಾಯ್ಡ್ ಆಟೋ ಸಂಬಂಧಿತ ಅಪ್ಲಿಕೇಶನ್‌ಗಳನ್ನು ಬಳಸಬಹುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಇದರ ಜೊತೆಗೆ ಕಾರು ಚಾಲನೆ ಮಾಡುವಾಗ ಡ್ಯಾಶ್‌ನಿಂದಲೇ ನೇರವಾಗಿ ಫೋನ್ ಕಾಲ್ ಹಾಗೂ ಮೆಸೇಜ್'ಗಳನ್ನು ಮಾಡಬಹುದು. ಇದನ್ನು ಚಾಲಕನ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ.

ಈ ಫೀಚರ್'ನ ಪ್ರಮುಖ ಲಕ್ಷಣವೆಂದರೆ ಕಾರಿನ ಸ್ಟೀಯರಿಂಗ್ ಕಂಟ್ರೋಲ್ ಬಟನ್ ಸಹಾಯದಿಂದ ಗೂಗಲ್ ಅಸಿಸ್ಟ್ ಬಳಸಬಹುದು. ಗೂಗಲ್ ಅಸಿಸ್ಟ್ ಆಕ್ಟಿವೇಟ್ ಮಾಡಿಕೊಂಡು ವಾಯ್ಸ್ ಕಮ್ಯಾಂಡ್ ನೀಡಬಹುದು.